ಅತಿ ವೇಗ ಮತ್ತು ಅವೈಜ್ಞಾನಿಕ ಚಾಲನೆ: ಕ್ರಷರ್ ಲಾರಿ ತಡೆದು ಸಾರಿಗೆ ಇಲಾಖೆ ವಿರುದ್ದ ಆಕ್ರೋಶ.


Team Udayavani, Oct 6, 2021, 5:55 PM IST

thumakuru news

ಕೊರಟಗೆರೆ: ಕಲ್ಲು ಗಣಿಗಾರಿಕೆ ಮತ್ತು ಜಲ್ಲಿ ಕ್ರಷರ್ ನ ಅವೈಜ್ಞಾನಿಕ ವಾಹನ ಚಾಲನೆಯಿಂದ ರೈತಾಪಿ ವರ್ಗ ಹಾಗೂ ಸಾರ್ವಜನಿಕರಿಗೆ ರಸ್ತೆಯಲ್ಲಿ ಚಲಿಸಲು ಭಯ ಪಡುವಂತ ಪರಿಸ್ಥಿತಿ ಎದುರಾಗಿದೆ  ಎಂದು ಆರೋಪಿಸಿ ಸ್ಥಳೀಯ ರೈತರು ಲಾರಿಗಳನ್ನು ತಡೆದು ಪ್ರತಿಭಟಿಸಿದ ಘಟನೆ ನಡೆದಿದೆ.

ತಾಲ್ಲೂಕಿನ ಚನ್ನರಾಯನ ದುರ್ಗ ಹೋಬಳಿಯ ಕುರಂಕೋಟೆ ಗ್ರಾಪಂ ವ್ಯಾಪ್ತಿಯ ಶಾರದ ಮಠದ ಸಮೀಪ ತೋವಿನಕೆರೆ ರಸ್ತೆಯಲ್ಲಿ 30 ಕ್ಕೂ ಹೆಚ್ಚು ಕ ಜಲ್ಲಿ ತುಂಬಿದ ಲಾರಿಗಳನ್ನು ತಡೆದು ಗಣಿ ಮತ್ತು ಭೂವಿಜ್ಞಾನ ಇಲಾಖೆ, ಸಾರಿಗೆ ಮತ್ತು ಪಿಡಬ್ಲ್ಯೂಡಿ ಇಲಖೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜುಂಜರಾಮನಹಳ್ಳಿ ಸ್ಥಳೀಯ ನಿವಾಸಿ ವಿರಣ್ಣ ಗೌಡ ಮಾತನಾಡಿ ಬಿಕ್ಕೆಗುಟ್ಟೆ ಕಲ್ಲ ಗಣಿಗಾರಿಕೆ ಪ್ರದೇಶದಿಂದ ತೋವಿನಕೆರೆ ಮಾರ್ಗವಾಗಿ  ಪ್ರತಿನಿತ್ಯ ನೂರಾರು ಲಾರಿಗಳು ಚಲಿಸುತ್ತೀವೆ. ಬಾರದ ಮೀತಿ ಹೆಚ್ಚಾಗಿ ರಸ್ತೆ ಮತ್ತು ಸೇತುವೆ ಬಿರುಕು ಬಿಟ್ಟಿವೆ. ಜಲ್ಲಿ ಲಾರಿ ಮತ್ತು ಚಾಲಕರಿಗೆ ಪರವಾನಗಿ ಇಲ್ಲದೇ ವಾಹನ ಚಲಾಯಿಸುತ್ತಾರೆ. ಕಂದಾಯ ಮತ್ತು ಸಾರಿಗೆ ಇಲಾಖೆ ಮೌನಕ್ಕೆ ಹಲವು ಅನುಮಾನ ಮೂಡುತ್ತೀವೆ ಎಂದು ಆರೋಪಿಸಿದರು.

ಕುರಂಕೋಟೆಯ ಸ್ಥಳೀಯ ಮನೋಹರ್ ಮಾತನಾಡಿ ಬಿಕ್ಕೆಗುಟ್ಟೆ ಕಲ್ಲು ಗಣಿಗಾರಿಕೆ ಬ್ಲಾಸ್ಟಿಂಗ್ ಶಬ್ದಕ್ಕೆ ಮನೆಗಳೆಲ್ಲಾ  ಬಿರುಕು ಬಿಟ್ಟಿವೆ. ಜಲ್ಲಿ ವಾಹನದ ಮೇಲೆ ಟಾರ್ಪಲ್ ಮತ್ತು ನೀರು ಹಾಕದಿರುವ ಪರಿಣಾಮ ಹಿಂಬದಿ ಪ್ರಯಾಣಿಸುವ ದ್ವಿಚಕ್ರ ವಾಹನ ಸವಾರರ ಕಣ್ಣಿಗೆ ಕಲ್ಲಿನ ಚೂರುಗಳು ಹಾರಿ ಬಂದು ಬಿದ್ದಿವೆ. ಬಲಿಷ್ಟ ರಾಜ ಕಾರಣಿ ಹಾಗೂ ಸರ್ಕಾರದ ಶಕ್ತಿಯನ್ನು ಬಳಸಿಕೊಂಡು ಅಧಿಕಾರಿಗಳ ಮೂಲಕ ಜನ ಸಾಮಾನ್ಯರ ಮೇಲೆ ದಬ್ಬಾಳಿಕೆಯ ಪ್ರಯತ್ನ ನಡೆಯುತ್ತೀದೆ. ರೈತರ ಕೃಷಿ  ಜಮೀನು ಮತ್ತು ಜಾನುವಾರುಗಳಿಗೆ ಸಂಕಷ್ಟ ಎದುರಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಧುಗಿರಿ ಸಾರಿಗೆ ಇಲಾಖೆಯ ಎಆರ್ ಟಿಒ ಸುಧಾ ಮಾತನಾಡಿ ಓವರ್ ಲೋಡ್ ತುಂಬಿಕೊಂಡು ಸಾಗಣೆ ಮಾಡುತ್ತೀದ್ದ 6 ಲಾರಿಗಳಿಗೆ ಪೈನ್  ಹಾಕಲಾಗಿದೆ. ಲಾರಿಗಳ ದಾಖಲೆ ಮತ್ತು  ಚಾಲಕನ ಪರವಾನಗಿ ಇಲ್ಲದವರ ಮೇಲೆ ಪ್ರಕರಣ ದಾಖಲು ಮಾಡುತ್ತೇವೆ. ಮಧುಗಿರಿ ಕಛೇರಿ ಅವರಣದಲ್ಲಿ ಜಾಗದ ಸಮಸ್ಯೆ ಇರುವುದರಿಂದ ದಂಡ ಹಾಕಿ ಬಿಡಲಾಗಿದೆ. ಖಾಲಿ ವಾಹನಗಳ ದಾಖಲೆ ಪರೀಶೀಲನೆ ನಡೆಸಿ ಬಿಡುತ್ತೇವೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ:ಮೋದಿ ಆಡಳಿತದಿಂದ ದೇಶಕ್ಕೆ ಹೊಸ ಶಕ್ತಿ: ರಾಘವೇಂದ್ರ

ಸ್ಥಳೀಯರು ಪ್ರತಿಭಟನೆ ನಡೆಸಿದಾಗ ನೆಪ ಮಾತ್ರಕ್ಕೆ ಸ್ಥಳಕ್ಕೆ ಬರುತ್ತೀರಾ. ರಾಜಕಾರಣಿಗಳ ಪರವಾಗಿ ಕೆಲಸ ಮಾಡುತ್ತೀರಾ. ಜನ ಸಾಮಾನ್ಯರು ತಪ್ಪು ಮಾಡಿದರೇ ನೀವು ಬೀಡ್ತಿರಾ. ನೀವು ಹೇಗೆ ಲಾರಿಗಳನ್ನು ಪರಿಶೀಲನೆ ನಡೆಸದೇ ಬೀಡ್ತಿರಾ. ಸಾರಿಗೆ ಇಲಾಖೆ ನಿಯಮವೇನು? ಬಡವರಿಗೆ ಒಂದು ನ್ಯಾಯನಾ ಶ್ರೀಮಂತರಿಗೆ ಒಂದು ನ್ಯಾಯನಾ. ಎಂದು ಶಾರದ ಮಠದ ತೋವಿನಕೆರೆ ರಸ್ತೆಯಲ್ಲಿ ಲಾರಿಗಳನ್ನು ತಡೆದು ಪ್ರತಿಭಟನೆ ನಡೆಸುತ್ತೀದ್ದ ವೇಳೆ ಸಾರಿಗೆ ಇಲಾಖೆ ಸಿಬ್ಬಂದಿಗಳ ವಿರುದ್ದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.

ಪ್ರತಿಭಟನೆಯಲ್ಲಿ ಸ್ಥಳೀಯರಾದ ಮಂಜುನಾಥ್,ಶಿವಕುಮಾರ್, ದೊಡ್ಡಯ್ಯ,ಸಿದ್ದರಾಜು ,ನಟರಾಜು,ರಂಗರಾಜು, ಹನುಮಂತರಾಯಪ್ಪ,ಗೀರೀಶ್, ರಾಮಯ್ಯ, ಅನಂತರಾಜು,ಮೋಹನ್ ಕುಮಾರ್, ಕಾಂತರಾಜು, ರಾಜೇಶ್ ಸೇರಿದಂತೆ ಇತರರು ಇದ್ದರು.

ಟಾಪ್ ನ್ಯೂಸ್

ನಾನು ಶೀಶಮಹಲ್‌ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್

ನಾನು ಶೀಶಮಹಲ್‌ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್

11-venur

Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ

9

Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ

governer

Governor: ಮಣಿಪುರದ 19 ನೇ ರಾಜ್ಯಪಾಲರಾಗಿ ಅಜಯ್ ಭಲ್ಲಾ ಪ್ರಮಾಣ ವಚನ ಸ್ವೀಕಾರ

Bidar; ಗುತ್ತಿಗೆದಾರ ಸಚಿನ್‌ ಕೇಸ್;‌ ತನಿಖೆ ಆರಂಭಿಸಿದ ಸಿಐಡಿ ತಂಡ

Bidar; ಗುತ್ತಿಗೆದಾರ ಸಚಿನ್‌ ಕೇಸ್;‌ ತನಿಖೆ ಆರಂಭಿಸಿದ ಸಿಐಡಿ ತಂಡ

Explainer: HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ಅಂತ್ಯಕ್ರಿಯೆಗೆ ತಯಾರಿ ನಡೆಸಿದ್ದರು

Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್… ರಸ್ತೆಯಲ್ಲೇ ನಡೆಯಿತು ಪವಾಡ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-DYSP

ಮಧುಗಿರಿ: ಕಚೇರಿಯಲ್ಲೇ DYSP ರಾಸಲೀಲೆ!!: ವಿಡಿಯೋ ಸೆರೆ

Minister ಸೋಮಣ್ಣ, ಸಿ.ಎಸ್‌. ಹೆಸರಲ್ಲಿ ನಕಲಿ ಸಹಿ, ಲೆಟರ್‌ಹೆಡ್‌: ಬಂಧನ

Minister ಸೋಮಣ್ಣ, ಸಿ.ಎಸ್‌. ಹೆಸರಲ್ಲಿ ನಕಲಿ ಸಹಿ, ಲೆಟರ್‌ಹೆಡ್‌: ಬಂಧನ

10-koratagere

Koratagere: ರಸ್ತೆಯಲ್ಲಿ ಚರಂಡಿ ನೀರು; ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಗ್ರಾಮಸ್ಥರು

3-kunigal

Kunigal: ಮರಕ್ಕೆ ಕಾರು ಡಿಕ್ಕಿಯಾಗಿ ಪಲ್ಟಿ: ಬೆಸ್ಕಾಂ ನೌಕರರ ಸ್ಥಳದಲ್ಲೇ‌ ಸಾವು

2-kunigal

Kunigal: ನಾಮಫಲಕಕ್ಕೆ ಬಸ್ ಡಿಕ್ಕಿ, ಪಲ್ಟಿ; ಮಂಗಳೂರು ಮೂಲದ ಚಾಲಕ ಸಾವು; 8 ಮಂದಿಗೆ ಗಾಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ನಾನು ಶೀಶಮಹಲ್‌ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್

ನಾನು ಶೀಶಮಹಲ್‌ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್

11-venur

Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ

9

Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ

governer

Governor: ಮಣಿಪುರದ 19 ನೇ ರಾಜ್ಯಪಾಲರಾಗಿ ಅಜಯ್ ಭಲ್ಲಾ ಪ್ರಮಾಣ ವಚನ ಸ್ವೀಕಾರ

Bidar; ಗುತ್ತಿಗೆದಾರ ಸಚಿನ್‌ ಕೇಸ್;‌ ತನಿಖೆ ಆರಂಭಿಸಿದ ಸಿಐಡಿ ತಂಡ

Bidar; ಗುತ್ತಿಗೆದಾರ ಸಚಿನ್‌ ಕೇಸ್;‌ ತನಿಖೆ ಆರಂಭಿಸಿದ ಸಿಐಡಿ ತಂಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.