ಗರಡಿ ಮನೆ ಉಳಿವಿಗೆ ಬೇಕು ಮೂಲಸೌಕರ್ಯ
Team Udayavani, Oct 19, 2021, 4:59 PM IST
ಚಿಕ್ಕನಾಯಕನಹಳ್ಳಿ: ಒಂದು ಕಾಲದಲ್ಲಿ ಯುವಕರ ಅಚ್ಚುಮೆಚ್ಚಿನ ಅಭ್ಯಾಸತಾಣಗಳಾಗಿದ್ದ ಗರಡಿ ಮನೆ, ಆಧುನಿಕತೆ ಅಬ್ಬರಕ್ಕೆ ಸಿಲುಕಿ ಮೂಲಸೌಕರ್ಯವಿಲ್ಲದೆ ಕಾಲಗರ್ಭ ಸೇರುವ ಸ್ಥಿತಿಗೆ ಬಂದಿವೆ.
ಸರ್ಕಾರ ವಿಶೇಷಅನುದಾನ ನೀಡಿ ಗರಡಿ ಮನೆಗಳನ್ನು ಪುನಶ್ಚೇತನ ಮಾಡಬೇಕೆಂಬುದು ಹಿರಿಯ ಪೈಲ್ವಾನರ ಆಗ್ರಹವಾಗಿದೆ.ಚಿಕ್ಕನಾಯಕನಹಳ್ಳಿಯ ಪಟ್ಟಣದಲ್ಲಿ 1942ರಲ್ಲಿ ಮೊದಲ ಬಾರಿಗೆಪ್ರಾರಂಭವಾದ ಗರಡಿ ಮನೆ, 21 ಸದಸ್ಯರೊಂದಿಗೆ ಅಧಿಕೃತವಾಗಿ ರಿಜಿಸ್ಟರ್‌ಆಗಿದೆ. ಸಾವಿರಾರು ಯುವಕರು ಈ ಗರಡಿ ಮನೆಯಲ್ಲಿ ವ್ಯಾಯಾಮಮಾಡಿಕೊಂಡು ದೇಹವನ್ನು ಸದೃಢಗೊಳಿಸಿಕೊಂಡಿ ದ್ದಾರೆ.
ಗರಡಿ ಮನೆಯಿಂದವರ್ಷಕೊಮ್ಮೆ ಏಕಾದಶಿ ಹಳೇಯೂರು ಆಂಜನೇಯಸ್ವಾಮಿ ಜಾತ್ರೆಯಂದುರಾಜ್ಯಮಟ್ಟದ ಕುಸ್ತಿ ಪಂದ್ಯಾ ವಳಿ ಆಯೋಜಿಸಿ ಬೆಳ್ಳಿ ಗದೆ ಹಾಗೂ ನಗದುಬಹುಮಾನವನ್ನು ಕೊಡುವ ಸಂಪ್ರದಾಯವನ್ನು ನಡೆಸಿಕೊಂಡು ಬರಲಾಗಿದೆ.ಹಿಂದೆ ಕುಸ್ತಿ ಆಡುವುದು ಒಂದು ರೀತಿಯ ಪ್ರತಿಷ್ಠೆಯ ವಿಷಯವಾಗಿತ್ತಲ್ಲದೆ, ದೇಹ ದಂಡನೆ ಮೂಲಕ ಆರೋಗ್ಯ ಕಾಪಾಡಿಕೊಳ್ಳುಲು ಗರಡಿಮನೆಯಗಳು ಪೂರಕವಾಗಿದ್ದವು.
ಆದರೆ, ಇಂದು ಗರಡಿ ಮನೆಗಳಿಗೆಮೂಲಸೌಕರ್ಯ ಹಾಗೂ ಸರಿಯಾದ ಜಾಗದ ವ್ಯವಸ್ಥೆ ಇಲ್ಲದೆ ಗರಡಿಮನೆಯ ಕಡೆ ಯುವಕರು ಹೋಗದಂತಾಗಿದ್ದಾರೆ.ಮನವಿಗೆ ಸ್ಪಂದನೆ ಇಲ್ಲ: ತಾಲೂಕಿನಲ್ಲಿ ಏಕೈಕ ಪಟ್ಟಣದಲ್ಲಿ 79 ವರ್ಷಹಳೇಯದಾಗಿರುವ ಗರಡಿ ಮನೆ ಬೀಳುವ ಸ್ಥಿತಿ ತಲುಪು ತ್ತಿದೆ. ಗೋಡೆಗಳುಶಿಥಿಲಗೊಂಡಿದ್ದು, ಯುವಕರ ಅಭ್ಯಾಸಕ್ಕೆ ಸಲ ಕರಣಿಗಳು ಇಲ್ಲವಾಗಿದೆ.
ಶಿಥಿಲಗೊಂಡ ಮನೆಯಲ್ಲಿ ಉತ್ತಮ ವಾತಾವರಣವಿಲ್ಲವಾಗಿದ್ದು, ಯುವಕರುಇಲ್ಲಿ ಅಭ್ಯಾಸ ನಡೆಸಲು ಕಷ್ಟವಾಗಿದೆ. ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆಹಾಗೂ ಜನ ಪ್ರತಿನಿಧಿಗಳಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಪ್ರಯೋ ಜನವಾಗಿಲ್ಲ ಎಂದು ಇಲ್ಲಿನ ಪೈಲ್ವಾನ್‌ಗಳು ತಿಳಿಸುತ್ತಾರೆ.
ಅಗತ್ಯ ಸೌಲಭ್ಯ ನೀಡಿ: ತಾಲೂಕಿನಲ್ಲಿ ಏಕೈಕ ಗರಡಿ ಮನೆಯನ್ನು ಉಳಿಸಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ದಾನಿ ಗಳ ಸಹಾಯದಿಂದ ವರ್ಷಕ್ಕೆ ಒಂದು ಬಾರಿ ಕುಸ್ತಿ ಪಂದ್ಯಾವಳಿ ನಡೆಸುವುದು ಬಿಟ್ಟರೆ,ಬೇರೆ ಚಟುವಟಿಕೆಗಳು ಇಲ್ಲವಾಗಿದೆ. ಗರಡಿ ಮನೆಗೆ ಸೂಕ್ತವಾಗುವ ಜಾಗಹಾಗೂ ಕಟ್ಟಡವನ್ನು ತಾಲೂಕು ಆಡಳಿತ ನೀಡಬೇಕು. ಯುವಕರಿಗೆವ್ಯಾಯಾಮ ಮಾಡಲು ಸಲ ಕರಣೆ ಸರ್ಕಾರ ನೀಡಬೇಕು.
ಗರಡಿಮನೆಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಯೋಜನೆಯನ್ನು ರೂಪಿಸಬೇಕುಎಂಬುವುದು ಪೈಲ್ವಾನ್‌ಗಳ ಆಗ್ರಹವಾಗಿದೆ.
ಚೇತನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಧುಗಿರಿ: ಕಚೇರಿಯಲ್ಲೇ DYSP ರಾಸಲೀಲೆ!!: ವಿಡಿಯೋ ಸೆರೆ
Minister ಸೋಮಣ್ಣ, ಸಿ.ಎಸ್. ಹೆಸರಲ್ಲಿ ನಕಲಿ ಸಹಿ, ಲೆಟರ್‌ಹೆಡ್: ಬಂಧನ
Koratagere: ರಸ್ತೆಯಲ್ಲಿ ಚರಂಡಿ ನೀರು; ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಗ್ರಾಮಸ್ಥರು
Kunigal: ಮರಕ್ಕೆ ಕಾರು ಡಿಕ್ಕಿಯಾಗಿ ಪಲ್ಟಿ: ಬೆಸ್ಕಾಂ ನೌಕರರ ಸ್ಥಳದಲ್ಲೇ ಸಾವು
Kunigal: ನಾಮಫಲಕಕ್ಕೆ ಬಸ್ ಡಿಕ್ಕಿ, ಪಲ್ಟಿ; ಮಂಗಳೂರು ಮೂಲದ ಚಾಲಕ ಸಾವು; 8 ಮಂದಿಗೆ ಗಾಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ನಾನು ಶೀಶಮಹಲ್ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್
Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Governor: ಮಣಿಪುರದ 19 ನೇ ರಾಜ್ಯಪಾಲರಾಗಿ ಅಜಯ್ ಭಲ್ಲಾ ಪ್ರಮಾಣ ವಚನ ಸ್ವೀಕಾರ
Bidar; ಗುತ್ತಿಗೆದಾರ ಸಚಿನ್ ಕೇಸ್; ತನಿಖೆ ಆರಂಭಿಸಿದ ಸಿಐಡಿ ತಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.