ಅರ್ಹ ಫಲಾನುಭವಿಗೆ ಆಶ್ರಯ ಮನೆ ಸಿಗಲಿ
Team Udayavani, Jun 19, 2021, 7:09 PM IST
ತುಮಕೂರು: ನಗರದಲ್ಲಿ ವಾಸಿಸಲು ಮನೆ ಇಲ್ಲದಅರ್ಹಫಲಾನುಭವಿಗಳಿಗೆಆಶ್ರಯ ಸಮಿತಿಯಿಂದಮನೆ ಸಿಗುವಂತಾಗಬೇಕು ಎಂದು ಶಾಸಕಜಿ.ಬಿ.ಜ್ಯೋತಿಗಣೇಶ್ ತಿಳಿಸಿದರು.ನಗರದ ಶಾಸಕರ ಕಚೇರಿಯಲ್ಲಿ ನಡೆದ ಆಶ್ರಯಸಮಿತಿ ಸಭೆಯಲ್ಲಿ ಮಾತನಾಡಿದ ಅವರು,ನಗರದಲ್ಲಿ ಮನೆ ಇಲ್ಲದವರು ಆಶ್ರಯ ಮನೆಯೋಜನೆಯಡಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲುಈ ಹಿಂದೆ ಅವಕಾಶ ಕಲ್ಪಿಸಲಾಗಿತ್ತು.
ಇದರಲ್ಲಿ 22ಸಾವಿರಕ್ಕೂ ಹೆಚ್ಚು ಆನ್‌ಲೈನ್ ಅರ್ಜಿಯನ್ನುಸಲ್ಲಿಸಲಾಗಿದೆ. 22 ಸಾವಿರ ಅರ್ಜಿಗಳಲ್ಲಿ 4 ಸಾವಿರಅರ್ಜಿಗಳು ಮಾತ್ರ ಅರ್ಹವಾಗಿರುತ್ತದೆ.ಮತ್ತೂಂದೆಡೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವಬಗ್ಗೆ ನಮಗೆ ಮಾಹಿತಿಯಿಲ್ಲ. ನಮಗೂ ಅರ್ಜಿಸಲ್ಲಿಸಲು ಅವಕಾಶ ಕೊಡಿ, ನಾವು ಅರ್ಹರುಎಂದು ನೂರಾರು ಸಾರ್ವಜನಿಕರು ನನ್ನ ಬಳಿಬಂದು ಅಳಲು ತೋಡಿಕೊಂಡಿದ್ದಾರೆ. ಈಕಾರಣದಿಂದ ಈ ಸಭೆಯ ನಿರ್ಣಯದಂತೆಮತ್ತೂಮ್ಮೆ ಅರ್ಹ ಫಲಾನುಭವಿಗಳಿಗೆ ಆಶ್ರಯಮನೆ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶಮಾಡಿಕೊಡಲು ವಸತಿ ಸಚಿವರಿಗೆ ಮನವಿಸಲ್ಲಿಸಲಾಗುವುದು ಎಂದು ತಿಳಿಸಿದರು.
ಸೈಟ್ ಹಂಚಿಕೆ ಮಾಡಲು ಸಾಧ್ಯವಿಲ್ಲ: ನಗರದಲ್ಲಿ ಸೈಟ್ ಹಂಚಿಕೆ ಮಾಡಲು ಸಾಧ್ಯವಿಲ್ಲ.Ó ರ್ಕಾರಿ ಜಮೀನುಗ Ù ಬಗೆ Y ಮಾಹಿತಿಪಡೆದುಕೊಳ್ಳುತ್ತಿದ್ದು, ಜಿ+2 ಮನೆಗಳನ್ನುನಿರ್ಮಾಣ ಮಾಡಲಾಗುವುದು. ಈಗಾಗಲೇ 4ಕಡೆ ಸರ್ಕಾರಿ ಜಮೀನುಗಳನ್ನು ಗುರುತಿಸಲಾಗಿದ್ದು,ಸರ್ಕಾರಿ ಜಮೀನುಗಳಿಗೆ ಜಿ.ಪಿ.ಎಸ್‌ಕೋ-ಆರ್ಡಿನೇಟರ್ ಸರ್ವೆ ನಡೆಸಿ ಎಂದುಸೂಚಿಸಿದರು. ತುಮಕೂರು ಪಾಲಿಕೆಯಮಹಾಪೌರ ಬಿ.ಜಿ.ಕೃಷ್ಣಪ್ಪ, ಆಯುಕ್ತೆ ರೇಣುಕಾ,ಸ್ಮಾರ್ಟ್‌ಸಿಟಿ ಎಂ.ಡಿ ರಂಗಸ್ವಾಮಿ, ತಹಶೀಲ್ದಾರ್‌ಮೋಹನ್, ಸರೋಜಗೌಡ, ಎನ್.ಡಿ. ವಿಜಯ್‌ಪ್ರಕಾಶ್, ಸಿದ್ದಗಂಗಯ್ಯ, ಸ್ಲಂ ಬೋರ್ಡ್‌ನ ಎಇಇಲೋಕೇಶ್ವರಪ್ಪ ಹಾಗೂ ಪಾಲಿಕೆ ಅಧಿಕಾರಿಗಳುಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
Tumkur: ತುಮಕೂರಲ್ಲಿ ದಲಿತ ಮಹಿಳೆ ಹ*ತ್ಯೆ: 21 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
Road Mishap: ಚಲಿಸುತ್ತಿದ್ದ ಲಾರಿಗೆ ಕಾರು ಢಿಕ್ಕಿ: ತಂದೆ-ಮಗು ಸ್ಥಳದಲ್ಲೇ ಸಾವು
Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್: ಸಚಿವ ಡಾ| ಜಿ. ಪರಮೇಶ್ವರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.