ಜನ ಮೆಚ್ಚಿದ ಸರ್ಕಾರಿ ಹೈಟೆಕ್ ಸ್ಕೂಲ್
ಶತಮಾನ ಕಂಡ ತುರುವೇಕೆರೆ ತಾಲೂಕಿನ ಸರ್ಕಾರಿ ಶಾಲೆಯಲ್ಲಿ ಹೆಚ್ಚುತ್ತಿದೆ ಮಕ್ಕಳ ಸಂಖ್ಯೆ
Team Udayavani, Sep 5, 2020, 3:33 PM IST
ತುಮಕೂರು: ಖಾಸಗಿ ಶಾಲೆಗಳ ಅಬ್ಬರದ ನಡುವೆ ನಗರ, ಪಟ್ಟಣ ಪ್ರದೇಶಗಳಲ್ಲಿ ಸರ್ಕಾರಿ ಶಾಲೆಗಳು ಮುಚ್ಚಿ ಹೋಗುತ್ತಿರುವ ವೇಳೆಯಲ್ಲಿ ಶತಮಾನ ಕಂಡಿರುವ ಸರ್ಕಾರಿ ಶಾಲೆ ಖಾಸಗಿ ಶಾಲೆಯನ್ನು ಮೀರಿಸುವ ರೀತಿಯಲ್ಲಿದ್ದು ನಿರೀಕ್ಷೆಗೂ ಮೀರಿದ ಮಕ್ಕಳ ದಾಖಲಾತಿ ಆಗುತ್ತಿರುವುದು ಎಲ್ಲರನ್ನು ಬೆರಗು ಗೊಳಿಸಿದೆ.
ಜಿಲ್ಲೆಯ ತುರುವೇಕೆರೆ ಪಟ್ಟಣದಲ್ಲಿರುವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯು ದಿನದಿಂದ ದಿನಕ್ಕೆ ಅಭಿವೃದ್ಧಿ ಪಥದತ್ತ ಸಾಗುತ್ತಿದ್ದು ಇಲ್ಲಿಯ ಸಾರ್ವಜನಿಕರ ಮತ್ತು ಪೋಷಕರ ಮೆಚ್ಚುಗೆಗೆ ಪಾತ್ರವಾಗಿದೆ.
ಮಾದರಿ ಶಾಲೆ: ಸ್ವಾತಂತ್ರ್ಯ ಪೂರ್ವದಲ್ಲಿ ಪ್ರಾರಂಭವಾಗಿ ಶತಮಾನ ಕಂಡಿರುವ ಈ ಶಾಲೆ ಈಗ ಇಡೀ ರಾಜ್ಯಕ್ಕೆ ಮಾದರಿ ಶಾಲೆಯಾಗಿದೆ. ಸರ್ಕಾರಿ ಶಾಲೆಗಳಲ್ಲಿ ಒಂದು ಇದ್ದರೆ ಒಂದು ಇರುವುದಿಲ್ಲ ಎಂದು ಪೋಷಕರು ಹೈಟೆಕ್ ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಾರೆ, ಇಂತಹ ವೇಳೆಯಲ್ಲಿ ಖಾಸಗಿ ಶಾಲೆಗಳಲ್ಲಿ ಏನೆಲ್ಲ ದೊರೆಯುತ್ತದೆ ಅದನ್ನು ಇಲ್ಲಿಯ ಮುಖ್ಯ ಶಿಕ್ಷಕ ಸಿ.ಸತೀಶ್ ಕುಮಾರ್ ದಾನಿಗಳ ಸಹಕಾರ ಪಡೆದು ಸರ್ಕಾರಿ ಶಾಲೆಯನ್ನೂ ಮಾದರಿ ಶಾಲೆ ಮಾಡಬಹುದು ಎನ್ನುವುದನ್ನು ತೋರಿಸಿದಾರೆ.
ಬದುಕಿಗೆ ದಾರಿ: ಕಳೆದ ಮೂರು ನಾಲ್ಕು ವರ್ಷಗಳ ಹಿಂದೆ ಏನೂ ಆಗಿರದ ಈ ಸರ್ಕಾರಿ ಶಾಲೆ ಶಿಥಿಲವಾಗಿತ್ತು. ಸುಮಾರು 120 ವರ್ಷಗಳ ಹಳೆಯದಾಗಿರುವ ಈ ಶಾಲೆ ಸಾವಿರಾರು ಜನರಿಗೆ ಶಿಕ್ಷಣ ನೀಡಿ ಅವರ ಬದುಕಿಗೆ ದಾರಿಯಾಗಿದೆ. ಇಲ್ಲಿ ಶಿಕ್ಷಣ ಕಲಿತ ಅನೇಕರು ಉನ್ನತ ಅಧಿಕಾರಿಗಳಾಗಿ, ಸೇವೆ ಸಲ್ಲಿಸುತ್ತಿದ್ದಾರೆ ಇಂತಹ ಅನೇಕರಿಗೆ ಜ್ಞಾನ ನೀಡಿರುವ ಈ ಶಾಲೆಯಲ್ಲಿ ಕೇವಲ 150 ಮಕ್ಕಳಿದ್ದರು ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಲು ಪೋಷಕರು ಹಿಂಜರಿಯುತ್ತಿದ್ದರು. ಇಂಥ ಸಂದರ್ಭದಲ್ಲಿ ಈ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸಿ.ಸತೀಶ್ ಕುಮಾರ್ ಮುಖ್ಯ ಶಿಕ್ಷಕರಾಗಿ ಬರುತ್ತಲೇ ಈ ಶಾಲೆಯ ವಾತಾವರಣವೇ ಬದಲಾಗಿ ಹೋಗಿತು.
ಜಿಲ್ಲೆಗೆ ಮಾದರಿ ಶಾಲೆ: ಶಾಲಾಭಿವೃದ್ಧಿ ಸಮಿತಿ ಹಾಗೂ ಇದೇ ಶಾಲೆಯ ಎಲ್ಲಾ ಶಿಕ್ಷಕರ ಸಹಕಾರ ಪಡೆದು ತುರುವೇಕೆರೆ ಪಟ್ಟಣದ ಕೆಲವು ದಾನಿಗಳು ಹಾಗೂ ಈ ಹಿಂದಿನ ಮತ್ತು ಈಗಿನ ಶಾಸಕರ ಮತ್ತು ಜನಪ್ರತಿನಿಧಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರ ಪಡೆದು ತಾವೂ ಶಾಲೆಗಾಗಿ ಹೆಚ್ಚು ಶ್ರಮ ಹಾಕಿ ಸಿ.ಸತೀಶ್ ಕುಮಾರ್ ಇಂದು ಜನರನ್ನು ಬೆರಗುಗೊಳಿಸುವಂತೆ ಇಡೀ ಜಿಲ್ಲೆಗೇ ಮಾದರಿ ಶಾಲೆಯನ್ನಾಗಿ ಮಾಡಿದ್ದಾರೆ.
ಹೆಚ್ಚಿನ ಸೌಲಭ್ಯ: ಈ ಶಾಲೆಯಲ್ಲಿ ಈಗ ಎಲ್.ಕೆ.ಜಿ ಯಿಂದ ಹಿಡಿದು 8ನೇ ತರಗತಿ ವರೆಗೆ 550ಕ್ಕೂ ಹೆಚ್ಚು ಮಕ್ಕಳು ಇಲ್ಲಿ ಶಿಕ್ಷಣ ಕಲಿಯುತ್ತಿದ್ದಾರೆ, ಈ ಶಾಲೆಯಲ್ಲಿ ಕನ್ನಡ ಮಾಧ್ಯಮದ ಜೊತೆಗೆ ಆಂಗ್ಲಮಾಧ್ಯಮದಲ್ಲಿ ಶಿಕ್ಷಣ ನಡೆಯುತ್ತಿದೆ, ಈ ಶಾಲೆಯಲ್ಲಿ ಖಾಸಗಿ ಶಾಲೆಯಲ್ಲಿಯೂ ಇರದ ರೀತಿಯಲ್ಲಿ ಸ್ಮಾರ್ಟ್ ಕ್ಲಾಸ್ ರೂಮ್, ಆನ್‌ಲೈನ್ ಸ್ಕೂಲ್, ಶುದ್ಧಕುಡಿಯುವ ನೀರಿನ ಸೌಲಭ್ಯ, ಹೈಟೆಕ್ ಶೌಚಾಲಯಗಳು, ವಿಶಾಲವಾದ ಆಟದ ಮೈದಾನಗಳು, ನುರಿತ ಅನುಭವಿ ಶಿಕ್ಷಕರಿಂದಬೋಧನೆ, ಕಂಪ್ಯೂಟರ್ ಶಿಕ್ಷಣ, ಯೋಗ ಶಿಕ್ಷಣ, ಸಂಗೀತ ಶಿಕ್ಷಣ, ವಿಜ್ಞಾನ ಪ್ರಯೋಗಾಲಯ, ಭಾಷಾ ಪ್ರಯೋಗಾಲಯ, ಸಮಾಜ ವಿಜ್ಞಾನ ಪ್ರಯೋಗಾಲಯ, ಅತ್ಯಾಧುನಿಕ ಗ್ರಂಥಾಲಯ ನೀಡುತ್ತಿರುವುದರ ಜೊತೆಗೆ ಸಿ.ಸಿ. ಟಿವಿ, ಬಯೋ ಮೆಟ್ರಿಕ್ ಸೇರಿದಂತೆ ಖಾಸಗಿ ಶಾಲೆಗಳಲ್ಲಿ ಏನೆಲ್ಲಾ ಸೌಲಭ್ಯಗಳು ದೊರೆಯುತ್ತದೆ ಅದಕ್ಕಿಂತಲೂ ಹೆಚ್ಚಿನ ಸೌಲಭ್ಯವನ್ನು ನೀಡಲು ಇಲ್ಲಿಯ ಶಿಕ್ಷಕರು ಮುಂದಾಗಿದ್ದಾರೆ.
ಮಕ್ಕಳಲ್ಲಿ ಹುರುಪು: ಶತಮಾನ ಕಂಡಿರುವ ಈ ಶಾಲೆಯ ಪಾರಂಪರಿಕ ಕಟ್ಟಡವನ್ನು ಹಾಗೇ ಉಳಿಸಿಇಡೀ ಕಟ್ಟಡಕ್ಕೆ ಸುಣ್ಣ, ಬಣ್ಣ ಬಳಿಸಿದ್ದಾರೆ, ಈ ಶಾಲಾ ಕಟ್ಟಡ ಈಗ ಕಂಗೊಳಿಸುತ್ತಿದೆ, ಮಕ್ಕಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆ, ಶೈಕ್ಷಣಿಕ ಪ್ರವಾಸ ಕೈಗೊಂಡು ಮಕ್ಕಳಲ್ಲಿ ಹುರುಪು ತುಂಬಿದ್ದಾರೆ.
ಜಿಲ್ಲೆಯ ಉತ್ತಮ ಶಿಕ್ಷಕ ಸತೀಶ್: ತುರುವೇಕೆರೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಸಿ.ಸತೀಶ್ ಕುಮಾರ್ ಅವರ ಕಾರ್ಯ ಸಾಧನೆಯನ್ನು ಮೆಚ್ಚಿ ಸಾರ್ವಜನಿಕ ಶಿಕ್ಷಣ ಇಲಾಖೆ ಇವರನ್ನು ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ತುರುವೇಕೆರೆ ಪಟ್ಟಣದಲ್ಲಿರುವ ಸರ್ಕಾರಿ ಶಾಲೆ ಇಡೀ ಜಿಲ್ಲೆಗೆ ನಂಬರ್ ಒನ್ ಮಾದರಿ ಶಾಲೆ. ಆ ಶಾಲೆಯಲ್ಲಿ 70-80 ಮಕ್ಕಳು ಇದ್ದರು ಈಗ 600 ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಖಾಸಗಿ ಶಾಲೆಯನ್ನೂ ಈ ಸರ್ಕಾರಿ ಶಾಲೆ ಮೀರಿಸುತ್ತಿದೆ. ಅಲ್ಲಿಯ ಮುಖ್ಯ ಶಿಕ್ಷಕ ಸತೀಶ್ ಮಕ್ಕಳಿಗಾಗಿ ತ್ಯಾಗ ಮಾಡುತ್ತಿದ್ದಾರೆ. ಇವರು ಇತರರಿಗೆ ಮಾದರಿ. – ಷಣ್ಮುಖಪ್ಪ, ಜಿಲ್ಲಾ ಅಧ್ಯಕ್ಷ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ
ತುರುವೇಕೆರೆ ಸರ್ಕಾರಿ ಶಾಲೆ ಬೌದ್ಧಿಕ ಸೌಲಭ್ಯ, ಪಾರಂಪರಿಕ ಕಟ್ಟಡ ಉಳಿಸಿದ್ದಾರೆ, ಶತ ಮಾನದ ಈ ಶಾಲೆಗೆ ಸುಣ್ಣ ಬಣ್ಣ ಬಳಿಸಿ ರಕ್ಷಿಸಿದ್ದಾರೆ, ತಾಂತ್ರಿಕತೆ ಬಳಸಿ ಮಕ್ಕಳಿಗೆ ನಮ್ಮ ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ನೀಡುತ್ತಿದ್ದಾರೆ. ಎಲ್ಲಾ ರೀತಿಯ ಸೌಲಭ್ಯ ಸರ್ಕಾರಿ ಶಾಲೆಯಲ್ಲಿ ಇದ್ದು ಇದು ಜಿಲ್ಲೆಗೇ ಒಂದು ಮಾದರಿ ಶಾಲೆ. – ಸಿ.ರಂಗಧಾಮಪ್ಪ, ಡಿವೈಪಿಸಿ, ಸಾರ್ವಜನಿಕ ಶಿಕ್ಷಣ ಇಲಾಖೆ
– ಚಿ.ನಿ.ಪುರುಷೋತ್ತಮ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Drone Prathap: ನೀರಿಗೆ ಸ್ಫೋಟಕ ಎಸೆದ ಪ್ರಕರಣ; ಪ್ರತಾಪ್‌ಗೆ 10 ದಿನ ನ್ಯಾಯಾಂಗ ಬಂಧನ
Huliyar; ಕೆಮ್ಮಿನ ಔಷಧವೆಂದು ಭಾವಿಸಿ ಕೀಟನಾಶಕ ಸೇವಿಸಿದ ರೈತ ಸಾ*ವು
ಕೃಷಿ ಹೊಂಡದಲ್ಲಿ ಅದೇನೋ ಮಾಡಲು ಹೋಗಿ ಅರೆಸ್ಟ್ ಅದ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್
Pavagada: ಟ್ರ್ಯಾಕ್ಟರ್ ಗೆ ಕ್ರೇನ್ ಡಿಕ್ಕಿಯಾಗಿ ಓರ್ವ ಸ್ಥಳದಲ್ಲೇ ಸಾವು
Pavagada: ರಸ್ತೆ ಅಪಘಾತದಲ್ಲಿ ಮಂಡ್ಯ ಮೂಲದ ಬೊಲೆರೋ ಚಾಲಕ ಸ್ಥಳದಲ್ಲೇ ಸಾವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.