ಸಮಸ್ಯೆಗಳ ಸರಮಾಲೆ ಬಿಚ್ಚಿಟ್ಟ ಸದಸ್ಯರು


Team Udayavani, Jun 18, 2022, 3:25 PM IST

ಸಮಸ್ಯೆಗಳ ಸರಮಾಲೆ ಬಿಚ್ಚಿಟ್ಟ ಸದಸ್ಯರು

ತಿಪಟೂರು: ನಗರಸಭಾ ಬೇಜವಾಬ್ದಾರಿ ಆಡಳಿತದ ಪರಿಣಾಮ ನಗರದಾದ್ಯಂತ ಸ್ವತ್ಛತೆ, ನೈರ್ಮಲ್ಯ, ಬೀದಿ ದೀಪ ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಗಳೆಲ್ಲ ಹದಗೆಟ್ಟು ಅವ್ಯವಸ್ಥೆಗಳಿಂದ ಕೂಡಿದ್ದು, ಸದಸ್ಯರುಗಳನ್ನು ನಗರದ ನಾಗರಿಕರು ಸಿಕ್ಕಸಿಕ್ಕಲ್ಲಿ ತರಾಟೆ ತೆಗೆದುಕೊಳ್ಳುತ್ತಿದ್ದು, ಸಮಾಧಾನಪಡಿಸಲು ಸಾಧ್ಯವಾ ಗುತ್ತಿಲ್ಲ ಎಂದು ಬಹುತೇಕ ಸದಸ್ಯರು ಒಕ್ಕೊರಲಿನಿಂದ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಗರಸಭೆಯ ಸಾಮಾನ್ಯ ಸಭೆಯಲ್ಲಿ ನಡೆಯಿತು.

ಹಲವು ಸಮಸ್ಯೆಗಳು: ನಗರಸಭೆಯ ಸಭಾಂಗಣದಲ್ಲಿ ಅಧ್ಯಕ್ಷ ರಾಮ್‌ಮೋಹನ್‌ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಆಡಳಿತ ಹಾಗೂ ಪ್ರತಿಪಕ್ಷದ ಬಹುತೇಕ ಸದಸ್ಯರು ಸಮಸ್ಯೆಗಳ ಸರಮಾಲೆಯನ್ನೇ ಬಿಚ್ಚಿಡುತ್ತಾ, ನಗರಸಭೆ ವ್ಯಾಪ್ತಿಯಲ್ಲಿ ಮೂಲ ಸೌಕರ್ಯಗಳ ಕೊರತೆಯಿದ್ದು, ನಗರವಾಸಿಗಳು ಅನೇಕ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಮನೆ ಕಸ ತೆಗೆದುಕೊಳ್ಳುವ ವಾಹನದವರು ಸರಿ ಯಾಗಿ ಬರುತ್ತಿಲ್ಲವಾದ್ದರಿಂದ ಮನೆಕಸ ವಿಲೇವಾರಿ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಬೀದಿ ಬೀದಿಗಳಲ್ಲಿ ಕಸ ಎಸೆಯುವಂತಾಗಿದೆ. ಕಸ ಹಾಕಲು ಮನೆಗಳವರು ನಿತ್ಯ ಕಾಯುವಂತಾಗಿದ್ದು, 2 ದಿನಗಳಾದರೂ ವಾಹನ ಗಳು ಬರುತ್ತಿಲ್ಲ ಎಂದು ಸದಸ್ಯರು ತಿಳಿಸಿದರು.

ಕುಡಿವ ನೀರು ಕಲುಷಿತ: ನಗರಕ್ಕೆ ಪೂರೈಕೆಯಾಗುತ್ತಿ ರುವ ಕುಡಿಯುವ ನೀರು ಕುಲುಷಿತವಾಗಿದ್ದು, ಡೆಂಗ್ಯು, ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳು ಹೆಚ್ಚುತ್ತಿದ್ದು ಜನರಲ್ಲಿ ಭೀತಿ ಉಂಟಾಗಿದೆ ಎಂದು ಸದಸ್ಯರು ಕಲುಷಿತವಾಗಿರುವ ನೀರನ್ನು ಬಾಟಲಿಗಳಲ್ಲಿ ತುಂಬಿಕೊಂಡು ಬಂದು ಸಭೆಯಲ್ಲಿ ಪ್ರದರ್ಶಿಸಿ ಪೌರಾಯುಕ್ತರು, ಅಧಿಕಾರಿಗಳು ಹಾಗೂ ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡರು.

ಚರ್ಮದ ತುರಿಕೆ: ನಗರಸಭೆಯವರು ಬಿಡುತ್ತಿರುವ ನೀರು ಶುದ್ಧೀಕರಣವಾಗದೆ ದುರ್ವಾಸನೆ ಬೀರುತ್ತಿದೆ. ಶೌಚಾಲಯಕ್ಕೂ ಬಳಸಲೂ ಸಾಧ್ಯವಾಗುತ್ತಿಲ್ಲ. ವಿಧಿಯಿಲ್ಲದೇ ಬಳಸಿರುವ ಕೆಲವರಿಗೆ ಚರ್ಮದ ತುರಿಕೆ, ಗಂದೆ ಉಂಟಾಗುತ್ತಿದ್ದು, ಕೂದಲು ಸಹ ಉದುರುತ್ತಿವೆ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಕರೆ ಸ್ವೀಕರಿಸುತ್ತಿಲ್ಲ: ಸಮಸ್ಯೆಗಳು ಹೇಳಿ ಸ್ಪಂದಿಸಲು ಸೂಚಿಸಲು ದೂರವಾಣಿ ಮಾಡಿದರೆ ಆರೋಗ್ಯಾಧಿ ಕಾರಿಗಳು, ಇಂಜಿನಿಯರುಗಳು ಸೇರಿದಂತೆ ಬಹುತೇಕ ಅಧಿಕಾರಿಗಳು ಸದಸ್ಯರ ಕರೆ ಸ್ವೀಕರಿಸುತ್ತಿಲ್ಲ. ಸ್ವೀಕರಿಸಿ ದರೂ ಕೆಲಸ ಮಾಡದೆ ಉಡಾಫೆಯಾಗಿ ನಡೆದುಕೊ ಳ್ಳುತ್ತಿದ್ದಾರೆ. ಆಡಳಿತಪಕ್ಷದ ಹಾಗೂ ಬೇಕಾದ ಸದಸ್ಯ ರುಗಳ ಕೆಲಸ ಕಾರ್ಯಗಳನ್ನು ಮಾತ್ರ ಮಾಡಿ ಕೊಡು ತ್ತಿದ್ದು, ಸದಸ್ಯರುಗಳಲ್ಲೇ ತಾರತಮ್ಯ ಉಂಟುಮಾಡ ಲಾಗುತ್ತಿದೆ ಎಂದು ಆರೋಪಿಸಿದರು.

ನಗರದ ಅನೇಕ ರಸ್ತೆಗಳನ್ನು ನಾನಾ ಕಾರಣಗಳಿಗೆ ಅಗೆದು ಸರಿ ಮಾಡದೇ ಬಿಟ್ಟಿದ್ದು, ಇದರಿಂದ ಅಮಾ ಯಕ ಜನರು ಅಪಘಾತಕ್ಕೀಡಾಗುತ್ತಿದ್ದಾರೆ. ನಗರದ ಸಂಪೂರ್ಣ ಫ‌ುಟ್‌ಪಾತ್‌ ಅನ್ನು ವ್ಯಾಪಾರಿಗಳೇ ಆವ ರಿಸಿ ಕೊಂಡಿದ್ದು ಪಾದಚಾರಿಗಳ ಹಿದೃಷ್ಟಿಯಿಂದ ಕೂಡಲೇ ತೆರವುಗೊಳಿಸಬೇಕೆಂದು ಬಹುತೇಕ ಸದಸ್ಯರು ಒತ್ತಾಯಿಸಿದರು.

ಸಾಮಾನ್ಯ ಸಭೆಯ ಚರ್ಚೆಯಲ್ಲಿ ನಗರಸಭೆ ಉಪಾ ಧ್ಯಕ್ಷ ಸೊಪ್ಪುಗಣೇಶ್‌, ಸ್ಥಾಯಿ ಸಮಿತಿ ಅಧ್ಯಕ್ಷ ಶಶಿ ಕಿರಣ್‌, ಪೌರಾಯುಕ್ತ ಉಮಾಕಾಂತ್‌, ಸದಸ್ಯರುಗಳಾದ ಕೋಟೆ ಪ್ರಭು, ನಗರಸಭಾ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಪ್ರಕಾಶ್‌, ಸದಸ್ಯರುಗಳಾದ ಯಮುನಾ ಧರಣೀಶ್‌, ಲತಾ ಲೋಕೇಶ್‌, ಜಯಲಕ್ಷ್ಮೀ, ಗುರು ರಾಜ್‌, ಯೋಗೇಶ್‌, ಗಂಗಾ ಆರ್‌.ಡಿ.ಬಾಬು, ಹೂರ್‌ಬಾನು, ಆಸೀಫಾಬಾನು, ಯೋಗೀಶ್‌, ಸಂಗ ಮೇಶ್‌ ಮುಂತಾದವರು ಭಾಗವಹಿಸಿದ್ದರು.

ನಗರಸಭೆ ಆರೋಗ್ಯಾಧಿಕಾರಿಗಳು ನಿರ್ಲಕ್ಷ್ಯ: ನಕಲಿ ಜೆಂಕ್‌ಫ‌ುಡ್‌ ಹಾವಳಿ ಜಾಸ್ತಿಯಾಗಿದ್ದು, ಕೆಲ ಕೂಲ್‌ಡ್ರಿಂಕ್ಸ್‌, ಕುರ್‌ಕುರೆಯಂತಹ ಚಿಪ್ಸ್‌, ಡೂಪ್ಲಿಕೇಟ್‌ ಚಾಕೋಲೆಟ್ಸ್‌, ಕಾರಗಳನ್ನು ವಿವಿಧ ನಕಲಿ ಬ್ರಾಂಡಿನ ಆಹಾರೋತ್ಪನ್ನ ಮಾರಾಟವಾಗುತ್ತಿದ್ದು, ನಕಲಿ, ಕಳಪೆ ಜೆಂಕ್‌ಫ‌ುಡ್‌ ತಿಂದ ಮಕ್ಕಳು ತೀವ್ರವಾದ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಹೆಚ್ಚಿನ ಬಣ್ಣ ಹಾಗೂ ಕೆಮಿಕಲ್‌ ಮಿಶ್ರಿತ ಆಹಾರ ಸೇವಿಸಿದ ಮಕ್ಕಳು ಬಾಲ್ಯದಲ್ಲಿಯೇ ಬಿಪಿ, ಶುಗರ್‌, ಚರ್ಮ, ತಲೆನೋವು, ಹೊಟ್ಟೆ ನೋವಿನಂತಹ ಅನೇಕ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಆದರೆ ನಕಲಿ ಉತ್ಪನ್ನಗಳು ಹಾಗೂ ಕಳಪೆ ಉತ್ಪನ್ನಗಳ ಬಗ್ಗೆ ನಗರಸಭೆ ಆರೋಗ್ಯಾಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳದೇ ನಿರ್ಲಕ್ಷಿಸಿದ್ದಾರೆಂದು ಆರೋಪಿಸಿದ ಸದಸ್ಯರು ಈ ಬಗ್ಗೆ ನಗರಸಭೆ ತುರ್ತು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ರಿಪೇರಿಯಾಗಿ ಸದ್ಯದಲ್ಲೇ ಬರಲಿದೆ ಜೆಸಿಬಿ : ನಗರಸಭೆಗೆ ಸೇರಿರುವ ಜೆಸಿಬಿಯೊಂದು 2 ವರ್ಷಗಳಿಂದ ರಿಪೇರಿ ಹೆಸರಿನಲ್ಲಿ ಅನಾಮ ದೇಯ ಮೆಕ್ಯಾನಿಕ್‌ ಶಾಪ್‌ಗೆ ಹೋಗಿದ್ದು, ಈ ವರೆಗೂ ರಿಪೇರಿಯಾಗಿ ಬಂದಿಲ್ಲ ಎಂಬ ಚರ್ಚೆಗೆ ಉತ್ತರಿಸಿದ ಅಧ್ಯಕ್ಷರು ಹಾಗೂ ಪರಿಸರ ಇಂಜಿನಿ ಯರ್‌ ಅದು ಇದೆ. ಸದ್ಯದಲ್ಲಿಯೇ ರಿಪೇರಿ ಯಾಗಿ ಬರಲಿದೆ ಎಂಬ ಉತ್ತರಕ್ಕೆ ಆಕ್ರೋಶ ಗೊಂಡ ಸದಸ್ಯರು, 2 ವರ್ಷ ಅದರ ಬಗ್ಗೆ ಗಮನ ಹರಿಸದೆ ಈಗ ಬರಲಿದೆ ಎಂಬ ಬೇಜವಾಬ್ದಾರಿ ಉತ್ತರ ನೀಡುತ್ತಿದ್ದು, ಜನರ ತೆರಿಗೆ ಹಣದಲ್ಲಿ ಖರೀದಿಸಿರುವ ಜೆಸಿಬಿ ಜನರ ಕೆಲಸಕ್ಕೆ ಲಭ್ಯವಾಗ ದಂತೆ ಮಾಡಿರುವ ನಿಮಗೆ ಜನರು ತಕ್ಕ ಪಾಠ ಕಲಿಸಿಲಿದ್ದಾರೆ ಎಂದು ಸದಸ್ಯರು ಹೇಳಿದರು.

ಟಾಪ್ ನ್ಯೂಸ್

9

BJP: ಜನವರಿಯಲ್ಲಿ ರಾಜ್ಯಾಧ್ಯಕ್ಷರ ಬದಲು; ಕುಮಾರ ಬಂಗಾರಪ್ಪ

Atul-Suside-Case

Atul Subash Case: ಪಿಜಿ, ಹೊಟೇಲ್‌ನಲ್ಲಿ ಅಡಗಿದ್ದ ಅತುಲ್‌ ಪತ್ನಿ, ಅತ್ತೆಯ ಬಂಧನ

Horoscope

Horoscope: ಹೇಗಿದೆ ನೋಡಿ ಇಂದಿನ ನಿಮ್ಮ ರಾಶಿಫಲ

Arogyapath

Corridor project: ಮಣಿಪಾಲ-ಕೊಣಾಜೆ ಜ್ಞಾನ, ಆರೋಗ್ಯಪಥಕ್ಕೆ ಗ್ರಹಣ

KOLKATA-MURDER

Kolktha: ಅಕ್ರಮ ಸಂಬಂಧ ಒಪ್ಪದ್ದಕ್ಕೆ ಅತ್ತಿಗೆಯ 3 ಪೀಸ್‌ ಮಾಡಿದ!

10

‌Election: ಒಕ್ಕಲಿಗ ಸಂಘದ ಚುನಾವಣೆ; ಡಿ.ಕೆ.ಶಿವಕುಮಾರ್ ಬಣ ಮೇಲುಗೈ

Hanuma-mala

SriRangapattana: ಹನುಮ ಮಾಲಾಧಾರಿಗಳಿಂದ ಮಸೀದಿ ಪ್ರವೇಶ ಯತ್ನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

suicide (2)

Huliyar; ಕೆಮ್ಮಿನ ಔಷಧವೆಂದು ಭಾವಿಸಿ ಕೀಟನಾಶಕ ಸೇವಿಸಿದ ರೈತ ಸಾ*ವು

ಕೃಷಿ ಹೊಂಡದಲ್ಲಿ ಅದೇನೋ ಮಾಡಲು ಹೋಗಿ ಅರೆಸ್ಟ್ ಅದ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್

ಕೃಷಿ ಹೊಂಡದಲ್ಲಿ ಅದೇನೋ ಮಾಡಲು ಹೋಗಿ ಅರೆಸ್ಟ್ ಅದ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್

4-pavagada

Pavagada: ಟ್ರ್ಯಾಕ್ಟರ್ ಗೆ ಕ್ರೇನ್ ಡಿಕ್ಕಿಯಾಗಿ ಓರ್ವ ಸ್ಥಳದಲ್ಲೇ ಸಾವು

1-pavagada

Pavagada: ರಸ್ತೆ ಅಪಘಾತದಲ್ಲಿ ಮಂಡ್ಯ ಮೂಲದ ಬೊಲೆರೋ ಚಾಲಕ ಸ್ಥಳದಲ್ಲೇ ಸಾವು

1-koraga

Koratagere; ರೈತರಿಂದ 26ರೂ.ಗೆ ಹಾಲು ಖರೀದಿಸಿ ಗ್ರಾಹಕರಿಗೆ 44ರೂ.ಗೆ ಮಾರಾಟ!

MUST WATCH

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

ಹೊಸ ಸೇರ್ಪಡೆ

6

Udupi: ಬಚ್ಚಿಟ್ಟ ಮದುವೆ; ಗಂಡನ ಗುಟ್ಟು-ರಟ್ಟು; ಪತಿ ಸಹಿತ 6ಮಂದಿ ವಿರುದ್ಧ ಪ್ರಕರಣ ದಾಖಲು

9

BJP: ಜನವರಿಯಲ್ಲಿ ರಾಜ್ಯಾಧ್ಯಕ್ಷರ ಬದಲು; ಕುಮಾರ ಬಂಗಾರಪ್ಪ

Atul-Suside-Case

Atul Subash Case: ಪಿಜಿ, ಹೊಟೇಲ್‌ನಲ್ಲಿ ಅಡಗಿದ್ದ ಅತುಲ್‌ ಪತ್ನಿ, ಅತ್ತೆಯ ಬಂಧನ

Horoscope

Horoscope: ಹೇಗಿದೆ ನೋಡಿ ಇಂದಿನ ನಿಮ್ಮ ರಾಶಿಫಲ

15

Padubidri:15 ಲಕ್ಷ ರೂ. ಪಡೆದು ಮರಳಿಸದೆ ಜೀವಬೆದರಿಕೆ; ಪ್ರಕರಣ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.