ಅಂಗವಿಕಲರಿಗೆ ಉಚಿತ ಕೌಶ್ಯಲಾಭಿವೃದ್ಧಿ ತರಬೇತಿ
Team Udayavani, Jan 2, 2022, 2:54 PM IST
ತುಮಕೂರು: ಬೆಂಗಳೂರಿನ ದಿ ಅಸೋಸಿಯೇಷನ್ ಅಫ್ ಪೀಪಲ್ ವಿತ್ ಡಿಸೆಬಿಲಿಟಿ ಸಂಸ್ಥೆಯಿಂದ ಜ.4 ರಂದು ಕೊರಟಗೆರೆ ಮತ್ತು 5ರಂದು ಪಾವಗಡ ತಾಲೂಕಿನಲ್ಲಿ ಅಂಗವಿಕಲರಿಗಾಗಿ ಉದ್ಯೋಗಾಧಾರಿತ ತರಬೇತಿ ಮತ್ತು ಪ್ಲೇಸ್ ಮೆಂಟ್ ಶಿಬಿರ ಹಮ್ಮಿ ಕೊಳ್ಳಲಾಗಿದೆ ಎಂದು ಎಪಿಡಿ ಸಂಸ್ಥೆ ತರಬೇತಿ ಮತ್ತು ಉದ್ಯೋಗ ವಿಭಾಗದ ವ್ಯವ ಸ್ಥಾಪಕರಾದ ಜೆ.ಲೇಖಾ ತಿಳಿಸಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 1959ರಲ್ಲಿ ಅಂಗ ವಿಕಲರಾದ ಹೇಮಾ ಎಂಬುವವರಿಂದ ಆರಂಭಗೊಂಡ ಎಪಿಡಿ ಸಂಸ್ಥೆ ಅಂದಿ ನಿಂದಲೂ ಬೆಂಗಳೂರು ನಗರವನ್ನು ಕೇಂದ್ರವಾಗಿಟ್ಟುಕೊಂಡು ಅಂಗವಿಕಲರ ಸಬಲೀ ಕರಣಕ್ಕೆ ಶ್ರಮಿಸುತ್ತಿದೆ. ಅಜೀಮ್ ಪ್ರೇಮಜಿ ಸಹಕಾರದೊಂದಿಗೆ ಹಲ ವಾರು ಜನಪರ ಕಾರ್ಯಕ್ರಮಗಳನ್ನು ಆಂಗವಿಕಲರಿಗಾಗಿ ಕೈಗೊಳ್ಳಲಾಗಿದೆ ಎಂದರು.
ಸಾರ್ವಜನಿಕರ ಸಹಾಯ ಅಗತ್ಯ: ಅಂಗವಿಕಲರಿಗೆ ಸಾರ್ವಜನಿಕರಿಂದ ಅಗತ್ಯವಿರುದ್ದ ಕರುಣೆಯಲ್ಲ. ಸಹಾಯ. ಈ ನಿಟ್ಟಿನಲ್ಲಿ ದೈಹಿಕ ಸಾಮರ್ಥಕ್ಕೆ ಅನುಗುಣವಾಗಿ ವಿವಿಧ ಕಂಪನಿಗಳ ಜೊತೆಗೆ ಒಪ್ಪಂದ ಮಾಡಿಕೊಂಡು ಅಂಗವಿಕಲರಿಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಸಂಸ್ಥೆಬೆಂಗಳೂರು ನಗರದ ಹೊರಗು ಕೆಲಸ ಮಾಡುತ್ತಿದ್ದು, ಪ್ರಸ್ತುತ ತುಮಕೂರು ಜಿಲ್ಲೆಯ ಕೊರಟಗೆರೆ ಮತ್ತು ಪಾವಗಡ ತಾಲೂಕಿನ ಅಂಗವಿಕಲರಿಗೆ ತರಬೇತಿ ನೀಡಿ, ಉದ್ಯೋಗ ಒದಗಿಸಿಕೊಡುವ ನಿಟ್ಟಿನಲ್ಲಿ ಜನವರಿ 04 ಮತ್ತು 05 ರಂದು ತರಬೇತಿ ಹಮ್ಮಿಕೊಳ್ಳಲಾಗಿದೆ.ಜಿಲ್ಲಾ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಹಯೋಗದಲ್ಲಿ ಈ ತರಬೇತಿ ಆಯೋಜಿಸಲಾಗಿದೆ ಎಂದರು.
ತರಬೇತಿಯಿಂದ ಸ್ವಾಭಿಮಾನದ ಬದಕು: ಪಾವಗಡ ತಾಲೂಕು ಅತ್ಯಂತ ಹಿಂದುಳಿದ ತಾಲೂಕುಗಳಲ್ಲಿ ಒಂದು. ಜೊತೆಗೆ ಜಿಲ್ಲೆಯಲ್ಲಿಯೇ ಹೆಚ್ಚು ಅಂಗವಿಕಲರನ್ನು ಹೊಂದಿರುವ ತಾಲೂಕಾಗಿದೆ. ಅಲ್ಲದೆ, ತುಮಕೂರು ಜಿಲ್ಲೆ ಕೈಗಾರಿಕಾ ಹಬ್‌ಆಗಿ ಗುರುತಿಸಿಕೊಳ್ಳುತ್ತಿದ್ದು, ಅಂಗವಿಕಲರಿಗೆ ಸೂಕ್ತ ತರಬೇತಿ ದೊರೆತರೆ, ಅವರು ಸಹ ಸ್ವಾಭಿಮಾನಿಯಾಗಿ ಬದಕಲು ಸಾಧ್ಯ ಎಂಬುದನ್ನು ಮನಗಂಡ ಈ ತರಬೇತಿ ಆಯೋಜಿಸಲಾಗಿದೆ. ಸಂಸ್ಥೆಯಿಂದ ಪ್ರತಿವರ್ಷ ಎರಡು ಸಾವಿರ ಜನರಿಗೆ ತರಬೇತಿ ನೀಡುತ್ತಿದ್ದು, ಶೇ.80ರಷ್ಟು ಜನರು ಉದ್ಯೋಗ ಪಡೆಯುತ್ತಿದ್ದಾರೆ. ರಿಲೆಯನ್ಸ್, ವಿಶಾಲ್, ಮೇಗಾ ಮಾರ್ಟ್, ಸ್ಟಾರ್ ಬಜಾರ್, ಅದಿತ್ಯ ಬಿರ್ಲಾ ಗ್ರೂಪ್, ವಿಂದ್ಯಾ ಇನ್ಫೋ ಮಿಡಿಯಾ, ವಾಸುದೇವ ಅಡಿಗಾಸ್, ಮಿಟ್ಟಿಕೆಫೆ ಸೇರಿದಂತೆ ಹಲವಾರು ಕಂಪನಿ ಗಳು ನಮ್ಮೊಂದಿಗೆ ಸಂಪರ್ಕದಲ್ಲಿದ್ದು, ಅಂಗವಿಕ ಲರ ಕೌಶಲ್ಯ ಮತ್ತು ದೈಹಿಕ ಸಾಮರ್ಥ್ಯವನ್ನು ಆಧರಿಸಿ, ಉದ್ಯೋಗ ನೀಡಿದ್ದಾರೆ ಎಂದು ತಿಳಿಸಿದರು.
ತರಬೇತಿ ಸಂಪೂರ್ಣ ಉಚಿತ: ಜ.4 ಮತ್ತು 5ರಂದು ನಡೆಯುವ ತರಬೇತಿ ಉಚಿತವಾಗಿದ್ದು, ಶಿಬಿರಕ್ಕೆ ಬರುವ ಅಭ್ಯರ್ಥಿಗಳಿಗೆ ಊಟ ಮತ್ತು ವಸತಿ ವ್ಯವಸ್ಥೆ ಮಾಡಲಾಗುವುದು. ಆಸಕ್ತರು ಇದರ ಸದುಪಯೋಗ ಪಡೆದುಕೊಳ್ಳು ವಂತೆ ಮನವಿ ಮಾಡಿದ ಅವರು, ಮಾಹಿತಿಗೆ ಮಂಜುನಾಥ್ -7795485585ಮತ್ತು ರಾಮಾಂಜ ನೇಯ 9901055092ಗೆ ಸಂಪರ್ಕಿಸುವಂತೆ ತಿಳಿ ಸಿದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಮಂಜುನಾಥ್, ರಾಮಾಂಜನೇಯ, ಜಗದೀಶ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Koratagere: ಗೃಹ ಸಚಿವರ ಸ್ವ ಕ್ಷೇತ್ರದಲ್ಲೇ ಮಲ ಹೊತ್ತ 10 ವರ್ಷದ ಬಾಲಕ!
Kunigal: ಬೈಕ್, ಕ್ಯಾಂಟರ್ ಮುಖಾಮುಖಿ ಢಿಕ್ಕಿ; ಇಬ್ಬರು ಸ್ಥಳದಲ್ಲೇ ಮೃತ್ಯು
Gubbi: ಮೀಟರ್ ಬಡ್ಡಿ ದಂಧೆಕೋರರ ಕಿರುಕುಳಕ್ಕೆ ಬೇಸತ್ತು ಪೌರ ಕಾರ್ಮಿಕ ಆತ್ಮಹತ್ಯೆ
Koratagere: ವೃದ್ದೆ ಮೇಲೆ ಕೆಎಸ್ಆರ್ಟಿಸಿ ಬಸ್ ಹರಿದು ಸಾವು
Hunasur: ವರದಕ್ಷಿಣೆ ಕಿರುಕುಳಕ್ಕೆ ಬಲಿಯಾದ ತಿಪಟೂರಿನ ಮಹಿಳೆ!
MUST WATCH
ಹೊಸ ಸೇರ್ಪಡೆ
By Election: ಶಿಗ್ಗಾಂವಿ ಸವಿ ಬೊಮ್ಮಾಯಿ ಪುತ್ರನಿಗೋ, ಯಾಸಿರ್ ಪಠಾಣಗೋ?
King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!
Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’
By Election: ಚನ್ನಪಟ್ಟಣದಲ್ಲಿ ಎಚ್.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್ ಮೇಕೆದಾಟು ಜಟಾಪಟಿ
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.