![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
Team Udayavani, Feb 16, 2022, 2:52 PM IST
ತುಮಕೂರು: ಪ್ರಸ್ತುತ ದಿನಗಳಲ್ಲಿ ಶುದ್ಧ ಗಾಳಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಎಲ್ಲೆಡೆಮರ ಗಿಡ ಬೆಳೆಸುವಂತೆ ಜಾಗೃತಿ ಅಭಿಯಾನಗಳನ್ನುನಡೆಸಲಾಗುತ್ತಿದೆ. ಆದರೆ, ಇಲ್ಲೊಂದು ಶಾಲೆಯಆವರಣದಲ್ಲಿ ಬೆಳೆದಿರುವ ಮರಗಳನ್ನು ಇಲ್ಲಸಲ್ಲದನೆಪವೊಡ್ಡಿ ಮಾರಣ ಹೋಮ ನಡೆಸಲು ಹುನ್ನಾರ ನಡೆದಿದೆ.
ಇಲ್ಲಿನ ಶ್ರೀರಾಮ ನಗರದ ಪಿ.ಪಿ.ಎಸ್ (ಡಯಟ್) ಪ್ರಾಯೋಗಿಕ ಹಿರಿಯ ಪ್ರಾಥಮಿಕ ಪಾಠ ಶಾಲೆಯಆವರಣದಲ್ಲಿ ಕಳೆದ 15 ವರ್ಷಗಳಿಂದ ಬೆಳೆಸಿರುವಮರಗಳಿದ್ದು, ಈ ಮರಗಳು ಶಾಲಾ ಆವರಣದಲ್ಲಿ ನೆರಳು, ಉತ್ತಮ ಗಾಳಿ ಹಾಗೂ ಉತ್ತಮ ಪರಿಸರಕ್ಕೆಕಾರಣವಾಗಿವೆ. ಅಲ್ಲದೆ, ಮಕ್ಕಳ ಆರೋಗ್ಯಕಾಪಾಡುವಲ್ಲೂ ಪ್ರಮುಖ ಪಾತ್ರ ವಹಿಸಿವೆ ಎಂಬುದುಈ ಶಾಲೆಯ ಹಳೇ ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಜನರ ಅಭಿಪ್ರಾಯವಾಗಿದೆ.
ಇಲ್ಲಸಲ್ಲದ ನೆಪವೊಡ್ಡಿ ಕಡಿಯಲು ಹುನ್ನಾರ: ಆದರೆಸದರಿ ಶಾಲೆಯ ಆವರಣದಲ್ಲಿ ಬೆಳೆದಿರುವ 15 ವರ್ಷದ ಮರಗಳನ್ನು ಇಲ್ಲಸಲ್ಲದ ನೆಪವೊಡ್ಡಿ ಕಡಿಯಲು ಹುನ್ನಾರ ನಡೆದಿದೆ ಎಂಬ ಆರೋಪಗಳು ಸ್ಥಳೀಯ ಜನರಿಂದ ಕೇಳಿ ಬರುತ್ತಿವೆ.ಈ ಮರಗಳಿಂದ ಶಾಲೆಯ ಮೇಲ್ಛಾವಣಿ ಮೇಲೆ ಎಲೆಗಳು ಉದುರುತ್ತವೆ. ಮೇಲ್ಛಾವಣಿಗೆ ಧಕ್ಕೆ ಉಂಟಾಗುತ್ತದೆ ಎಂಬ ನೆಪವೊಡ್ಡಿ ಮರಗಳನ್ನು ಕಡಿಯಲು ಶಾಲೆಗೆ ಹೊಸದಾಗಿ ಬಂದಿರುವ ಮುಖ್ಯ ಶಿಕ್ಷಕರು ಹಾಗೂ ಎಸ್‌ಡಿಎಂಸಿಯ ಹೊಸ ಅಧ್ಯಕ್ಷರು ಮುಂದಾಗಿದ್ದಾರೆ ಎಂದು ದೂರಿರುವ ಹಳೆಯ ವಿದ್ಯಾರ್ಥಿಗಳು ಮತ್ತು ಮಕ್ಕಳ ಪೋಷಕರು, ಈಮರಗಳು ಶಾಲೆಗೆ ಒಂದು ಭೂಷಣ ಇದ್ದಂತಿವೆ.
ಮಕ್ಕಳಿಗೆ ಉತ್ತರ ಪರಿಸರ ಸಹ ಈ ಮರಗಳಿಂದ ನಿರ್ಮಾಣವಾಗಿದೆ. ಮರಗಳೇನು ತೀರಾ ಹಳೆಯದಾಗಿಲ್ಲ. ಹಾಗೊಂದು ವೇಳೆ ಮೇಲ್ಛಾವಣಿ ಮೇಲೆ ಎಲೆಗಳು ಉದುರುತ್ತಿದ್ದರೆ ಮೇಲ್ಛಾವಣಿ ಕಡೆಗೆಬಾಗಿರುವ ಮರದ ರಂಬೆ-ಕೊಂಬೆಯನ್ನು ಮಾತ್ರ ಕಡಿಯಲಿ. ಅದನ್ನು ಬಿಟ್ಟು ಇಡೀ ಮರಗಳನ್ನೇ ಮಾರಣ ಹೋಮ ಮಾಡಲು ಮುಂದಾಗಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ಗಿಡಮರ ಬೆಳೆಸಲು ಮುಂದಾಗಿ: ಪ್ರಸ್ತುತ ದಿನ ಗಳಲ್ಲಿ ಉತ್ತಮ ಗಾಳಿ, ಪರಿಸರಕ್ಕಾಗಿ ಗಿಡ-ಮರಗಳ ಕೊರತೆ ಎದುರಾಗಿದೆ. ಸಮಾಜದಲ್ಲಿ ಹೆಚ್ಚುಹೆಚ್ಚು ಗಿಡ-ಮರಗಳನ್ನು ಬೆಳೆಸುವಂತೆ ಅಭಿಯಾನ ಗಳು ನಡೆಯುತ್ತಿವೆ. ಆದರೆ, ಈ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಮುಖ್ಯ ಶಿಕ್ಷಕರು ಏಕೆ ಈ ರೀತಿ ಮರಗಳನ್ನು ಕಡಿಯುವ ಯೋಚನೆಮಾಡಿದ್ದಾರೆ. ಮೊದಲು ಈ ಕೆಟ್ಟ ಯೋಚನೆಯಿಂದ ಹೊರ ಬಂದು ಮತ್ತಷ್ಟು ಗಿಡಮರಗಳನ್ನುಬೆಳೆಸಲು ಮುಂದಾಗಲಿ ಎಂಬುದು ಪೋಷಕರ ಸಲಹೆಯಾಗಿದೆ.
ಶಾಲಾ ಕಟ್ಟಡಕ್ಕೆ ತೊಂದರೆಯಾಗಿಲ್ಲ: ಈ ಮರಗಳಿಂದ ಶಾಲಾ ಕಟ್ಟಡಕ್ಕೆ ಯಾವುದೇ ರೀತಿಯತೊಂದರೆಯಾಗಿಲ್ಲ. ಆದ್ದರಿಂದ ಯಾವುದೇಕಾರಣಕ್ಕೂ ಮರಗಳನ್ನು ಬೇರು ಸಮೇತ ಕಡಿಯಲುಅವಕಾಶ ನೀಡಬಾರದು ಎಂದು ಹಳೇವಿದ್ಯಾರ್ಥಿಗಳು ಮತ್ತು ಪೋಷಕರು ಈಗಾಗಲೇಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿಒತ್ತಾಯಿಸಿದ್ದಾರೆ.
ಸೂಕ್ತ ಕ್ರಮ ಕೈಗೊಳ್ಳಲು ಆಗ್ರಹ: ಈ ಮರಗಳನ್ನು ಕಡಿದರೆ ಶಾಲೆ ಬಳಿ ಮಕ್ಕಳಿಗೆ ನೆರಳು ಇರುವುದಿಲ್ಲಮತ್ತು ಉತ್ತಮ ಪರಿಸರವೂ ಇರುವುದಿಲ್ಲ. ಆದ್ದರಿಂದ ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಮರಗಳನ್ನು ಕಡಿಸಲುಮುಂದಾಗಿರುವ ಮುಖ್ಯ ಶಿಕ್ಷಕರು, ಎಸ್‌ಡಿಎಂಸಿಅಧ್ಯಕ್ಷರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದುಪರಿಸರ ಪ್ರೇಮಿಗಳು ಹಾಗೂ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಮಕ್ಕಳ ಆರೋಗ್ಯದ ಹಿತದೃಷ್ಠಿಯಿಂದ ಈ ಮರಗಳನ್ನು ಉಳಿಸಬೇಕು. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸಹ ಗಮನ ಹರಿಸಬೇಕು ಎಂಬುದು ಪ್ರಜ್ಞಾವಂತ ನಾಗರಿಕರು ಆಗ್ರಹವಾಗಿದೆ.
ಮಕ್ಕಳಿಗೆ ಉತ್ತಮ ಪರಿಸರ ಕಲ್ಪಿಸಿ: ಈಗಾಗಲೇ ನಗರದ ಬಿ.ಎಚ್.ರಸ್ತೆಯಲ್ಲಿ ಜಾಹೀರಾತು ನಾಮಫಲಕ ಹಾಕುವ ನೆಪವೊಡಿª ಗುತ್ತಿಗೆದಾರರೊಬ್ಬರು11 ವರ್ಷಗಳಿಂದ ಬೆಳೆದಿದ್ದ ಬೇವಿನ ಮರಗಳನ್ನುರಾತ್ರೋರಾತ್ರಿ ಮಾರಣ ಹೋಮ ನಡೆಸಿ ನಗರದಪರಿಸರ ಪ್ರೇಮಿಗಳು, ನಾಗರಿಕರ ಕೆಂಗಣ್ಣಿಗೆಗುರಿಯಾಗಿರುವ ಘಟನೆ ಇನ್ನು ಹಚ್ಚಹಸಿರಾಗಿರುವಾಗಲೇ ಶಾಲಾ ಆವರಣದ ಮರಗಳನ್ನು ಕಡಿಯಲು ಹುನ್ನಾರ ನಡೆದಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.
ಈಗಲಾದರೂ ಶ್ರೀರಾಮನಗರ ಶಾಲಾ ಆವರಣದಲ್ಲಿ ಬೆಳೆದಿರುವ ಮರಗಳನ್ನು ಉಳಿಸಿಮಕ್ಕಳಿಗೆ ಉತ್ತಮ ಪರಿಸರ ಕಲ್ಪಿಸುವ ನಿಟ್ಟಿನಲ್ಲಿಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರುಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕಾರ್ಯೋನ್ಮುಖ ರಾಗುವರೇ ಎಂಬುದನ್ನು ಕಾದು ನೋಡೋಣ.
ಶ್ರೀರಾಮನಗರ ಶಾಲೆಯಲ್ಲಿ ಮರ ಗಳಿಂದ ಕಟ್ಟಡಕ್ಕೆ ತೊಂದರೆಯಾಗುತ್ತದೆ ಎಂದು ಅವುಗಳನ್ನು ತೆರವು ಮಾಡಲುಮನವಿ ನೀಡಿದ್ದರು. ಅದಕ್ಕೆ ತೆರವುಮಾಡಲು ಟೆಂಡರ್ ಕರೆಯಲಾಗಿತ್ತು. ಈಗ ಮತ್ತೆ ಮರ ತೆರವು ಮಾಡಬಾರದು ಎಂದುಕೆಲವರು ಮನವಿ ನೀಡಿದ್ದಾರೆ. ಈಗ ಮರತೆರವು ಮಾಡದಂತೆ ಸಂಬಂಧಿಸಿದವರಿಗೆ ತಿಳಿಸಲಾಗಿದೆ. –ನಟರಾಜ್, ಆರ್.ಎಫ್.ಒ
Congress: ಹೈಕಮಾಂಡ್ ಒಪ್ಪಿಗೆ ಮೇರೆಗೆ ಶೋಷಿತರ ಸಮಾವೇಶ: ಕೆ.ಎನ್.ರಾಜಣ್ಣ
Madhugiri: 90 ಲಕ್ಷದ ಬೆಳೆ ವಿಮೆ ಹಣ ಅಕ್ರಮ ತನಿಖೆಗೆ ಆಗ್ರಹ
Tumkur: ಪರಂ, ರಾಜಣ್ಣ ವರ್ಚಸ್ಸು ಕುಂದಿಸಲು ಸುರೇಶ್‌ಗೌಡ ಟೀಕೆ: ಗೌರಿಶಂಕರ್
Koratagere: ಗುಡಿಸಲಿಗೆ ಆಕಸ್ಮಿಕ ಬೆಂ*ಕಿ; 4 ಮೇಕೆಗಳು ಸಜೀವ ದಹನ; ಇಬ್ಬರಿಗೆ ಗಾಯ
Koratagere: ಅಕ್ರಮವಾಗಿ ಗ್ಯಾಸ್ ಸಿಲಿಂಡರ್ ಫಿಲ್ಲಿಂಗ್; ಓರ್ವ ಆರೋಪಿ ಬಂಧನ
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
You seem to have an Ad Blocker on.
To continue reading, please turn it off or whitelist Udayavani.