ಅಭ್ಯರ್ಥಿಗಳ ಪರ ಬೆಟ್ಟಿಂಗ್‌ ಭರಾಟೆ


Team Udayavani, Apr 20, 2019, 12:13 PM IST

13

ತುಮಕೂರು: ಜಿಲ್ಲೆಯಲ್ಲಿ ಸುಡು ಬಿಸಲಿನ ಝಳದ ನಡುವೆ ನಡೆದ ಲೋಕ‌ಸಭಾ ಚುನಾವಣೆಯ ಕಾವು ಮುಗಿದಿರುವುಂತೆಯೇ ಈಗ ಜಿಲ್ಲೆಯಾಧ್ಯಂತ ಸಾದಾರಣ ಮಳೆ ಬರುತ್ತಿದ್ದು ತಂಪು ವಾತಾವರಣ ಇರುವಾಗ ಅಭ್ಯರ್ಥಿಗಳ ಅದೃಷ್ಟ ಪರೀಕ್ಷೆಯ ಬಿಸಿ ಬಿಸಿ ಚರ್ಚೆಗಳು ಎಲ್ಲಾ ಕಡೆಯೂ ಕೇಳಲಾರಂಭಿಸಿದ್ದು, ಅಭ್ಯರ್ಥಿಗಳು ಮಾತ್ರ ಗೆಲುವು ನಮ್ಮದೇ ಎಂದು ಆತ್ಮವಿಶ್ವಾದಿಂದ ಇರುವುದು ಕಂಡು ಬಂದಿದೆ.

ಏ.18 ರಂದು ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದ ಚುನಾವಣೆಯಲ್ಲಿ ಕ್ಷೇತ್ರದಾಧ್ಯಂತ ಶೇ.77.3ರಷ್ಟು ಮತದಾನ ನಡೆದಿದ್ದು, ಜಿಲ್ಲೆಯ ಘಟಾನುಘಟಿ ರಾಜಕಾರಣಿಗಳಲ್ಲಿ ನಡುಕ ಉಂಟಾಗಿದೆ. ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಲೆಕ್ಕಾಚಾರಗಳನ್ನು ತಲೆಕೆಳಗೆ ಮಾಡುವಂತೆ ಮತದಾನದ ಕ್ರಿಯೆ ನಡೆದಿದ್ದು, ನಗರ ಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶದಲ್ಲಿ ಮತದಾನ ಬಿರುಸಿನಿಂದ ನಡೆದಿರುವುದು ಅಭ್ಯರ್ಥಿಗಳ ನಿದ್ದೆ ಗೆಡಿಸಿದೆ.

ಕ್ಷೇತ್ರದಲ್ಲಿ ಚುನಾವಣಾ ಪ್ರಕ್ರಿಯೆ ಆರಂಭವಾದಾಗಿನಿಂದಲೂ ಟಿಕೆಟ್ ಹಂಚಿಕೆಯ ಗೊಂದಲಗಳ ನಡುವೆಯೇ ಕಾರ್ಯಕರ್ತರ ಪಕ್ಷಾಂತರ ಹಾಗೂ ಗೊಂದಲಗಳು ನಡದೇ ಇತ್ತು. ಕಳೆದ ಬಾರಿಗಿಂತ ಈ ಬಾರಿ ಮತದಾರರು ಉತ್ಸುಕತೆಯಿಂದಲೇ ಮತದಾನ ಮಾಡಿದ್ದಾರೆ.

ಜಿಲ್ಲೆಯಲ್ಲಿ ಹಲವಾರು ಸಮಸ್ಯೆಗಳಾದ ಕುಡಿಯುವ ನೀರು, ರಸ್ತೆಗಳ ಅಭಿವೃದ್ಧಿ, ಹೀಗೆ ಹಲವು ಸಮಸ್ಯೆಗಳಿದ್ದರೂ, ಈ ಭಾರಿಯ ಚುನಾವಣೆಯಲ್ಲಿ ಇಂತಹ ಸಮಸ್ಯೆಗಳ ನಿವಾರಣೆಗೆ ಜಿಲ್ಲೆಯ ಪ್ರಗತಿಗೆ ಶ್ರಮಿಸುವ ಅಭ್ಯರ್ಥಿಗಳನ್ನು ಗೆಲ್ಲಿಸುವತ್ತ ಮತದಾರ ಪ್ರಭು ಮನಸ್ಸು ಮಾಡಿದ್ದಾನೆಯೇ ಎನ್ನುವ ಕುತೂಹಲ ಮೂಡಿದೆ.

ಮತದಾನದ ಚರ್ಚೆ: ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳಾದ ಚಿ.ನಾ.ಹಳ್ಳಿ, ತಿಪಟೂರು, ತುರುವೇಕೆರೆ, ತುಮಕೂರು ನಗರ, ತುಮಕೂರು ಗ್ರಾಮಾಂತರ, ಕೊರಟಗೆರೆ, ಗುಬ್ಬಿ, ಕೊರಟಗೆರೆ, ಮಧುಗಿರಿ ಈ ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದ ಮತದಾನದ ವಿವರ ಗಮನಿಸಿದರೆ ಕ್ಷೇತ್ರದಲ್ಲಿಯೇ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಶೇ.81.87ರಷ್ಟು ಅತಿ ಹೆಚ್ಚು ಮತದಾನವಾಗಿರುವುದು ಕಂಡು ಬಂದಿದೆ.

ಹಾಗೆಯೇ ತುಮಕೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ಶೇ.65.42 ರಷ್ಟು ಮತದಾನವಾಗಿದ್ದು, ಅತಿ ಕಡಿಮೆ ಮತದಾನ ನಡೆದಿದೆ. ಲೋಕಸಭಾ ಕ್ಷೇತ್ರದ ಫ‌ಲಿತಾಂಶದ ಬಗ್ಗೆ ಇಡೀ ಜಿಲ್ಲೆಯಲ್ಲಿ ಬಿರುಸಿನ ಚರ್ಚೆ ನಡೆಯುತ್ತಿದೆ. ಯಾವ ಅಭ್ಯರ್ಥಿ ಎಷ್ಟು ಮತ ಅಂತರದಲ್ಲಿ ಗೆಲ್ಲುತ್ತಾರೆ ಎನ್ನುವ ಚರ್ಚೆಗಳು ನಡೆಯುತ್ತಿವೆ.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮೈತ್ರಿ ಅಭ್ಯರ್ಥಿಯಾಗಿ ಅದೃಷ್ಟ ಪರೀಕ್ಷಿಸಿಕೊಳ್ಳುತ್ತಿದ್ದಾರೆ. ಮಾಜಿ ಸಂಸದ ಜಿ.ಎಸ್‌.ಬಸವರಾಜು ಕೂಡ ಬಿಜೆಪಿ ಅಭ್ಯರ್ಥಿಯಾಗಿ ಹಣೆಬರಹ ಓರೆಗಲ್ಲಿಗಿಟ್ಟಿದ್ದಾರೆ.

ವಿವಿಧೆಡೆ ಚರ್ಚೆ: ಕ್ಷೇತ್ರದ ಯಾವುದೇ ಟೀ ಅಂಗಡಿ, ಹೋಟೆಲ್, ಅರಳೀಕಟ್ಟೆ ಹತ್ತಿರ ಹೋದರೆ ಅಲ್ಲಿ ಎಲ್ಲವೂ ಚರ್ಚೆಆಗುತ್ತಿರುವುದೇ ಚುನಾವಣೆಯ ಗೆಲುವಿನ ಲೆಕ್ಕಾಚಾರ, ಗುಂಪು ಗುಂಪು ಸೇರಿಕೊಂಡು ಪಕ್ಷಗಳ ಅಭ್ಯರ್ಥಿಗಳ ಬಗ್ಗೆಯೇ ಚರ್ಚೆ ನಡೆಸುತ್ತಿ ದ್ದಾರೆ. ಮೈತ್ರಿ ಪಕ್ಷಗಳ ಕಾರ್ಯಕರ್ತರು ನಮ್ಮ ಪಕ್ಷದ ಅಭ್ಯರ್ಥಿ ಗೆಲ್ಲುತ್ತಾರೆ ಎಂದರೆ, ಬಿಜೆಪಿ ಪಕ್ಷದ ಕಾರ್ಯಕರ್ತರು ನಮ್ಮ ಅಭ್ಯರ್ಥಿ ಗೆಲ್ಲುತ್ತಾರೆ ಎನ್ನುವ ಚರ್ಚೆಗಳು ನಡೆಯುತ್ತಿವೆ.

ಬೆಟ್ಟಿಂಗ್‌ ಮನಸ್ಸು: ನಮ್ಮ ಪಕ್ಷದ ಅಭ್ಯರ್ಥಿ ಗೆದ್ದೇ ಗೆಲ್ಲುತ್ತಾರೆ ಎನ್ನುವ ಹಲವಾರು ಮಂದಿ ಬೆಟ್ಟಿಂಗ್‌ ಕಟ್ಟುತ್ತಿರುವುದು ಕಂಡು ಬಂದಿದೆ. ಬೆಟ್ಟಿಂಗ್‌ಗಾಗಿ ಸಾವಿರಾರು ರೂ ಕಟ್ಟುತ್ತಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ. ಅಭ್ಯರ್ಥಿಗಳು ಮಾತ್ರ ಗೆಲುವು ನಮ್ಮದೆ ಎನ್ನುವ ಆತ್ಮವಿಶ್ವಾಸ ಕಂಡು ಬಂದಿದೆ. ಮತದಾರ ಪ್ರಭು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಸಂಸದ ಜಿ.ಎಸ್‌.ಬಸವರಾಜು ಸೇರಿದಂತೆ 15 ಅಭ್ಯರ್ಥಿಗಳ ಹಣೆ ಬರಹವನ್ನು ಮತದಾರರು ಮತಯಂತ್ರದಲ್ಲಿ ಗುಂಡಿ ಒತ್ತುವ ಮೂಲಕ ಬರೆದಿದ್ದಾನೆ.ಒಟ್ಟಾರೆಯಾಗಿ ತುಮಕೂರು ಲೋಕÓ‌ಭಾ ಕ್ಷೇತ್ರದಲ್ಲಿ ಚುನಾವಣಾ ಕಾರ್ಯ ಮುಗಿದಿದ್ದು, ಇನ್ನು ತಮ್ಮ ತಮ್ಮ ನಾಯಕರ ಅದೃಷ್ಟ ಫ‌ಲಿತಾಂಶ ಮೇ.23 ರಂದು ಪ್ರಕಟವಾಗಲಿದ್ದು, ಒಂದು ತಿಂಗಳಲ್ಲಿ ಎಲ್ಲ ಅಭ್ಯರ್ಥಿಗಳ ಹಣೆ ಬರಹ ಗೊತ್ತಾಗಲಿದೆ. ಈ ಸಂಬಂಧವಾಗಿ ಅಭ್ಯರ್ಥಿ ಬೆಂಬಲಿಗರು ದೇವರಲ್ಲಿ ಬೇಡಿಕೊಳ್ಳುವುದು, ಹರಕೆ, ಪೂಜೆಯಲ್ಲಿ ತೊಡಗಿದ್ದಾರೆ.

ಪ್ರಚಾರದ ಬಳಿಕ ರಿಲ್ಯಾಕ್ಸ್‌ ಮೂಡಲ್ಲಿ ಅಭ್ಯರ್ಥಿಗಳು
ತುಮಕೂರು: ಕಳೆದ ಒಂದು ತಿಂಗಳಿನಿಂದ ಕ್ಷೇತ್ರದಲ್ಲಿ ಸುಡು ಬಿಸಿಲ ಬೇಗೆಯಲ್ಲಿ ಬೆಂದು ಬೆವರಿಳಿಸಿ ಬಸವಳಿದು ಮತದಾರರ ಮನಗೆಲ್ಲಲು ಕಸರತ್ತು ನಡೆಸಿದ್ದ ವಿವಿಧ ಪಕ್ಷಗಳ ಅಭ್ಯರ್ಥಿಗಳು ಚುನಾವಣಾ ಸಮರದಲ್ಲಿ ಗೆಲ್ಲುವ ವಿಶ್ವಾಸದೊಂದಿಗೆ ಕಾರ್ಯಕರ್ತರಿಂದ ದೂರವಿದ್ದು, ರಿಲ್ಯಾಕ್ಸ್‌ ಮೂಡಿನಲ್ಲಿ ಇರುವುದು ಕಂಡು ಬಂದಿದೆ. ಕಲ್ಪತರು ನಾಡಿನಲ್ಲಿ ಕಳೆದ ಒಂದು ತಿಂಗಳಿನಿಂದ ಚುನಾವಣಾ ರಣರಂಗದ ಕಾವು ತಾರಕಕ್ಕೇರಿ ಮೇ.23 ರಂದು ಅಭ್ಯರ್ಥಿಗಳ ನಡುವೆ ಅದೃಷ್ಟ ಪರೀಕ್ಷೆಯ ಚುನಾವಣಾ ಸಮರ ಮುಗಿದಿದ್ದು, ಈ ಸಮರದಲ್ಲಿ ಗೆಲುವು ಸಾಧಿಸಲು ಕಳೆದ ಒಂದು ತಿಂಗಳಿನಿಂದ ನಿರಂತರ ಹೋರಾಟ ನಡೆಸಿದ್ದ ಅಭ್ಯರ್ಥಿಗಳು ಚುನಾವಣೆ ಮುಗಿದ ಮಾರನೆಯ ದಿನ ತಮ್ಮ ಕುಟುಂಬದೊಂದಿಗೆ ತಮಗಾಗಿ ಶ್ರಮಿಸಿದ ಕಾರ್ಯಕರ್ತರೊಂದಿಗೆ ಆರಾಮವಾಗಿ ಕಾಲ ಕಳೆಯುತ್ತಿದ್ದುದು ಕಂಡು ಬಂದಿತು. ಕೂಲ್ ಕೂಲ್: ಈ ಭಾರಿಯ ಲೋಕಸಭಾ ಚುನಾವಣೆಯಲ್ಲಿ ಬೇರೆ ಅಭ್ಯರ್ಥಿಗಳಿಗಿಂತ ಹೆಚ್ಚು ಮತಗಳನ್ನು ಗಳಿಸಿ ಚುನಾವಣಾ ಸಮರದಲ್ಲಿ ಎದುರಾಳಿಗಳನ್ನು ಮಣಿಸಿ ಗೆಲುವು ಸಾಧಿಸಬೇಕೆಂದು ಹಗಲಿರುಳು ಕಾರ್ಯಕರ್ತರ ಪಡೆಯೊಂದಿಗೆ ಹೋರಾಟ ನಡೆಸಿದ್ದು, ಈ ಹೋರಾಟದ ಫ‌ಲವಾಗಿ ಮತದಾರ ಪ್ರಭು ಯಾರ ಶಕ್ತಿ ಎಷ್ಟಿದೆ ಎನ್ನುವುದನ್ನು ಮತಯಂತ್ರದಲ್ಲಿ ಬರೆದಿದ್ದಾರೆ. ಇದರ ಫ‌ಲಿತಾಂಶ ಮೇ.23 ರಂದು ಪ್ರಕಟವಾಗಿ ವಿಜಯಮಾಲೆ ಯಾರ ಕೊರಳಿಗೆ ಬೀಳುತ್ತದೆ ಎನ್ನುವ ಕೌತುಕದಲ್ಲಿರುವಾಗ ಕಳೆದೊಂದು ತಿಂಗಳಿನಿಂದ ಮನೆ, ಮಠ, ಬಂಧು, ಬಳಗ ಬಿಟ್ಟು ಚುನಾವಣೆಯ ಗುಂಗಿನಲ್ಲಿದ್ದ ಅಭ್ಯರ್ಥಿಗಳು ಇಂದು ಕೂಲ್ ಕೂಲ್ ಆಗಿ ಕುಟುಂಬದೊಂದಿಗೆ ಸಂತಸ ಹಂಚಿಕೊಂಡರು. ಪರಿವಾರದೊಂದಿಗೆ ಜಿಎಸ್‌ಬಿ: ಗಾಂಧಿನಗರದಲ್ಲಿರುವ ಮಾಜಿ ಸಂಸದ ಜಿ.ಎಸ್‌. ಬಸವರಾಜ್‌ ತುಮಕೂರು ಲೋಕ‌ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕಳೆದೊಂದೂವರೆ ತಿಂಗಳಿನಿಂದ ಮತದಾರ ಪ್ರಭುವಿನ ಮನೆ ಬಾಗಿಲು ತಟ್ಟಿ ಕಾರ್ಯಕರ್ತರೊಂದಿಗೆ ಬೆರೆತು ಪ್ರತಿನಿತ್ಯ ಬೆಳಗ್ಗೆ 5.30 ಕ್ಕೆ ಎದ್ದು ವಾಯು ವಿಹಾರಕ್ಕೆ ತೆರಳುವ ಮತದಾರ ಬಂದುಗಳನ್ನು ಭೇಟಿ ಮಾಡುವುದರಿಂದ ತಮ್ಮ ಚುನಾವಣಾ ಪ್ರಚಾರ ಆರಂಭಿಸಿ ರಾತ್ರಿ 1.30 ರವರೆಗೆ ಚುನಾವಣೆಯಲ್ಲಿಯೇ ಬ್ಯುಸಿಯಾಗಿರುತ್ತಿದ್ದರು. ಈಗ ಚುನಾವಣೆ ಮುಗಿದ ಹಿನ್ನಲೆಯಲ್ಲಿ ತಮ್ಮ ಕುಟುಂಬದೊಂದಿಗೆ ಬಸವರಾಜು ಶುಕ್ರವಾರ ಸಂತಸದ ಕ್ಷಣಗಳನ್ನು ಹಂಚಿಕೊಂಡು ಜೊತೆಯಲ್ಲಿದ್ದರು. ಚುನಾವಣೆ ಬಗ್ಗೆ ಪ್ರತಿಕ್ರಿಯಿಸಿ ಕಳೆದ ಒಂದೂವರೆ ತಿಂಗಳಿನಿಂದ ದಿನಪತ್ರಿಕೆಗಳನ್ನು ಓದಲು ಸಾಧ್ಯವೇ ಆಗುತ್ತಿರಲಿಲ್ಲ. ಇಂದು ಸ್ವಲ್ಪ ಆರಾಮವಾಗಿದೆ. ಕಾರ್ಯಕರ್ತರಿಗೆ, ಮತದಾರರಿಗೆ ಅಭಿನಂದಿಸುವ ಕೆಲಸ ಮಾಡುತ್ತಾ ಮನೆಯವರೊಂದಿಗೆ ಬೆರೆತು ಹೋಗಿದ್ದೇನೆ ಎಂದರು. ಎಚ್‌ಡಿಡಿ ಸಂತಸದ ಕ್ಷಣ: ಕಳೆದ ಒಂದು ತಿಂಗಳಿನಿಂದಲೂ ಚುನಾವಣಾ ಪ್ರಚಾರದಲ್ಲಿ ಧುಮುಕಿ ಗೆಲುವಿಗೆ ಸಮರ ನಡೆಸಿದ್ದ ಮೈತ್ರಿ ಅಭ್ಯರ್ಥಿ ಎಚ್.ಡಿ.ದೇವೇಗೌಡರು ಕಾರ್ಯಕರ್ತರೊಂದಿಗೆ ಮತ ಎಣಿಕೆ ಕುರಿತು ಸ್ವಲ್ಪ ಚರ್ಚೆ ನಡೆಸಿ ನಂತರ ತಮ್ಮ ಪತ್ನಿಯೊಂದಿಗೆ ಸಂತಸದಿಂದ ಕಾಲ ಕಳೆದರು. ಇಷ್ಟು ದಿನ ಚುನಾವಣೆಯ ಗುಂಗಿನಲ್ಲಿದ್ದು, ಇಂದು ಸ್ವಲ್ಪ ರಿಲ್ಯಾಕ್ಸ್‌ ಆಗಿದೆ ಎನ್ನುವ ದೇವೇಗೌಡರು, ಚುನಾವಣೆ ನನಗೆ ಖುಷಿ ತರಲಿದೆ. ನಗರದ ಮತದಾರರು ನನ್ನ ಕೈಹಿಡಿದಿದ್ದಾರೆ. ಎನ್ನುವ ಆಶಾಭಾವನೆ ಹೊಂದಿದ್ದಾರೆ. ವಿಶ್ರಾಂತಿ ಪಡೆಯದೇ ಎರ ಡನೇ ಹಂತದ ಚುನಾವಣಾ ಪ್ರಚಾರಕ್ಕೆ ತೆರಳಿದ್ದಾರೆ. ಅದೇ ರೀತಿಯಲ್ಲಿ ಜಿಲ್ಲೆಯ ವಿವಿಧ ರಾಜಕಾರಣಿಗಳು ಚುನಾವಣೆಯಲ್ಲಿ ಈವರೆಗೂ ಬ್ಯುಸಿಯಾಗಿ ಶುಕ್ರವಾರ ಆರಾಮಾಗಿ ಕಾರ್ಯಕರ್ತರೊಂದಿಗೆ ಚುನಾವಣೆ ನಡೆದಿರುವ ಬಗ್ಗೆ ಯಾವ ಮತಗಟ್ಟೆಯಲ್ಲಿ ಎಷ್ಟು ಮತ ಗಳು ಬರಬಹುದೆಂಬ ಲೆಕ್ಕಾಚಾರ ಹಾಕುತ್ತಿದ್ದಾರೆ.

ಚಿ.ನಿ. ಪುರುಷೋತ್ತಮ್‌

ಟಾಪ್ ನ್ಯೂಸ್

1—amanatulla-khan

Waqf; ಅಮಾನತುಲ್ಲಾ ಖಾನ್ ಗೆ ಜಾಮೀನು: ಮೋದಿಯ ಸುಳ್ಳು ಪ್ರಕರಣ ಬಹಿರಂಗ ಎಂದ ಆಪ್

marriage 2

Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ

Vimana 2

Kochi airport; ಶಬರಿಮಲೆ ಭಕ್ತರಿಗೆ ಅನುಕೂಲವಾಗುವಂತೆ ವಿಶೇಷ ವ್ಯವಸ್ಥೆಗಳು

Mika Singh: ಮಿಕಾ ಹಾಡಿಗೆ ಫಿದಾ..‌ಪಾಕ್‌ ಅಭಿಮಾನಿಯಿಂದ 3 ಕೋಟಿ ರೂ. ವಾಚ್‌, ಚಿನ್ನ ಗಿಫ್ಟ್

Mika Singh: ಮಿಕಾ ಹಾಡಿಗೆ ಫಿದಾ..‌ಪಾಕ್‌ ಅಭಿಮಾನಿಯಿಂದ 3 ಕೋಟಿ ರೂ. ವಾಚ್‌, ಚಿನ್ನ ಗಿಫ್ಟ್

1-kanna

Maharashtra Election; ಫಡ್ನವಿಸ್ ಪತ್ನಿಯ ವಿರುದ್ಧ ಕನ್ಹಯ್ಯಾ ಕುಮಾರ್ ಹೇಳಿಕೆ

1-raga

Modiji ಸಂವಿಧಾನವನ್ನು ಓದಲೇ ಇಲ್ಲ, ಹಾಗಾಗಿ…: ರಾಹುಲ್ ಗಾಂಧಿ

ಎಸ್‌ಡಿಎ ರುದ್ರಣ್ಣ ಕೇಸ್:‌ ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು

Belagavi: ಎಸ್‌ಡಿಎ ರುದ್ರಣ್ಣ ಕೇಸ್:‌ ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-kunigal

Kunigal: ಕೆಂಪನಹಳ್ಳಿ ಗ್ರಾಮದಲ್ಲಿ ಸರಣಿ ಕಳ್ಳತನ

14-kunigal

Kunigal: ಟೈರ್ ಸ್ಪೋಟಗೊಂಡು ಕಾರು ಪಲ್ಟಿ: ಐಟಿ ಉದ್ಯೋಗಿ ದುರ್ಮರಣ

K. N. Rajanna: “ಸರ್ಕಾರ ತೆಗಿತೀನಿ ಅನ್ನೋದು ಪ್ರಜಾಪ್ರಭುತ್ವಕ್ಕೆ ಅವಮಾನ’

K. N. Rajanna: “ಸರ್ಕಾರ ತೆಗಿತೀನಿ ಅನ್ನೋದು ಪ್ರಜಾಪ್ರಭುತ್ವಕ್ಕೆ ಅವಮಾನ’

koratagere

Koratagere: ಗೃಹ ಸಚಿವರ ಸ್ವ ಕ್ಷೇತ್ರದಲ್ಲೇ ಮಲ ಹೊತ್ತ 10 ವರ್ಷದ ಬಾಲಕ!

Accident-logo

Kunigal: ಬೈಕ್, ಕ್ಯಾಂಟರ್ ಮುಖಾಮುಖಿ ಢಿಕ್ಕಿ; ಇಬ್ಬರು ಸ್ಥಳದಲ್ಲೇ ಮೃತ್ಯು 

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

POLICE-5

Malpe: ಜುಗಾರಿ ಅಡ್ಡೆಗೆ ದಾಳಿ, ವಶಕ್ಕೆ

POlice

Malpe: ಜೂಜಾಟ; 12 ಮಂದಿ ಅಂದರ್‌; ಪ್ರಕರಣ ದಾಖಲು

1—amanatulla-khan

Waqf; ಅಮಾನತುಲ್ಲಾ ಖಾನ್ ಗೆ ಜಾಮೀನು: ಮೋದಿಯ ಸುಳ್ಳು ಪ್ರಕರಣ ಬಹಿರಂಗ ಎಂದ ಆಪ್

marriage 2

Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ

Vimana 2

Kochi airport; ಶಬರಿಮಲೆ ಭಕ್ತರಿಗೆ ಅನುಕೂಲವಾಗುವಂತೆ ವಿಶೇಷ ವ್ಯವಸ್ಥೆಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.