ಕಲ್ಪತರು ನಾಡಿನ 104 ಶಾಲಾ ಕಟ್ಟಡಕ್ಕೆ ಮಳೆ ಹೊಡೆತ!
Team Udayavani, Aug 5, 2023, 3:03 PM IST
ತುಮಕೂರು: ಸರ್ಕಾರಿ ಶಾಲೆಗಳ ಉನ್ನತಿಗೆ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರೂ ಪ್ರಯೋಜನಕ್ಕೆ ಬರುತ್ತಿಲ್ಲ ಎಂಬುದು ಜಿಲ್ಲೆಯಲ್ಲಿನ ಸರ್ಕಾರಿ ಶಾಲೆಗಳ ದುಸ್ಥಿತಿಯನ್ನು ನೋಡಿದರೆ ಅರ್ಥವಾಗುತ್ತದೆ. ಜಿಲ್ಲೆಯಲ್ಲಿ ಇರುವ 2681 ಸರ್ಕಾರಿ ಪ್ರಾಥಮಿ, ಕಿರಿಯ, ಪ್ರೌಢಶಾಲೆಗಳ ಪೈಕಿ ಕೆಲವು ಶಾಲೆಗಳಲ್ಲಿ ಮಕ್ಕಳು ಕುಳಿತುಕೊಳ್ಳಲು ಆಗದ ಸ್ಥಿತಿಯಿದೆ.
ಬಡಮಕ್ಕಳೇ ವಿದ್ಯಾಭ್ಯಾಸ ಮಾಡು ತ್ತಿರುವ ಸರ್ಕಾರಿ ಶಾಲೆಗಳು ಇಂದಿಗೂ ಅಗತ್ಯ ಮೂಲ ಭೂತ ಸೌಲಭ್ಯದಿಂದ ವಂಚಿತವಾಗಿವೆ. ಹಾಗೆಯೇ ಮಳೆ ಬಂದರೆ ಪಾಠ ಕೇಳಲೂ ಆಗದ ಸ್ಥಿತಿಯಲ್ಲಿ ಮಕ್ಕಳಿದ್ದಾರೆ.
ಕಳೆದ ಜೂನ್, ಜುಲೈನಲ್ಲಿ ಬಂದ ಭಾರೀ ಮಳೆಗೆ ಹಲವು ಶಾಲಾ ಕಟ್ಟಡ ಗಳು ಶಿಥಿಲವಾಗಿವೆ. ಜಿಲ್ಲೆಯಲ್ಲಿ 2022- 23ನೇ ಸಾಲಿನಲ್ಲಿ 104 ಶಾಲೆಗಳಿಗೆ ಹಾನಿಯಾಗಿದೆ. ಕಳೆದ ಮೇ, ಜೂನ್ ನಲ್ಲಿ ಸುರಿದ ಮಳೆಯಿಂದಲೂ ಕೆಲವು ಕಡೆ ತೀವ್ರ ಮಳೆಗೆ ಶಾಲಾ ಕಟ್ಟಡಗಳು ಕುಸಿದಿವೆ. ಈ ಕುಸಿದಿರುವ ಶಾಲಾ ಕಟ್ಟಡಗಳ ದುರಸ್ಥಿ ಸೇರಿದಂತೆ ಶಿಥಿಲಗೊಂಡ 11 ಶಾಲೆಗಳ ಕಾಮಗಾರಿ ಇನ್ನೂ ಆರಂಭವೇ ಆಗಿಲ್ಲ.
6 ಶಾಲೆ ಕಾಮಗಾರಿ ಪ್ರಗತಿ: ಇಲ್ಲಿಯವರೆಗೆ ಸಾರ್ವಜನಿಕ ಶಿಕ್ಷಣ ಇಲಾಖೆಗೆ ದೊರೆತಿರುವ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ 2022-23ನೇ ಸಾಲಿನಲ್ಲಿ 104 ಶಾಲೆ ಮಳೆಯಿಂದ ಹಾನಿಯಾಗಿವೆ. ಅದರಲ್ಲಿ ಚಿಕ್ಕನಾಯಕನಹಳ್ಳಿ 21, ಗುಬ್ಬಿ 15, ಕುಣಿಗಲ್ 21, ತಿಪಟೂರು 13, ತುಮಕೂರು 14, ತುರುವೇಕೆರೆ 20 ಶಾಲೆ ಮಳೆಯಿಂದ ಹಾನಿಗೆ ಒಳಗಾಗಿವೆ. ಹಾನಿ ಗೊಂಡ ಶಾಲೆಗಳ ಕಟ್ಟಡ ನಿರ್ಮಾಣಕ್ಕೆ ಇಲಾಖೆಯ ವಿವಿಧ ಮೂಲಗಳ ಅನುದಾನವನ್ನು ಬಳಸಿ ಅಭಿವೃದ್ಧಿಗೆ ಒತ್ತು ನೀಡಿದೆ. ಇನ್ನು ಹಾನಿಗೆ ಒಳಗಾದ ಶಾಲೆ ಪೈಕಿ 87ಶಾಲೆಯ ಅಭಿವೃದ್ಧಿ ಕಾಮಗಾರಿ ಮುಕ್ತಾಯ ಗೊಂಡಿದೆ. 6 ಶಾಲೆಯ ಕಾಮಗಾರಿ ಪ್ರಗತಿಯಲ್ಲಿದ್ದು ಇನ್ನೂ 11 ಶಾಲೆಗಳ ಕಾಮಗಾರಿ ಪ್ರಾರಂಭವಾಗಿಲ್ಲ.
ಆರಂಭಿಸಬೇಕಿದೆ: ತುಮಕೂರು ಶೈಕ್ಷಣಿಕ ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ 31 ಕೊಠಡಿ, ಗುಬ್ಬಿಯಲ್ಲಿ 29 ಶಾಲೆಗಳ 38 ಕೊಠಡಿ, ಕುಣಿಗಲ್‌ನ 18 ಶಾಲೆಗಳ 20 ಕೊಠಡಿ, ತಿಪಟೂರಿನ 42 ಶಾಲೆಯ 62 ಕೊಠಡಿ, ತುಮಕೂರು ನಗರದ 16 ಶಾಲೆಯ 34 ಕೊಠಡಿ, ತುಮಕೂರು ಗ್ರಾಮಾಂತರ ಕ್ಷೇತ್ರದ 21 ಶಾಲೆಗಳ 27 ಕೊಠಡಿ, ತುರುವೇಕೆರೆ 32 ಶಾಲೆಗಳ 32 ಕೊಠಡಿ ಸೇರಿ 188 ಶಾಲೆಗಳ 224 ಶಾಲಾ ಕೊಠಡಿ ನಿರ್ಮಾಣಕ್ಕೆ ಕಾರ್ಯಾದೇಶ ನೀಡಿದ್ದು 24 ಕಟ್ಟಡಗಳ ಕಾಮಗಾರಿ ಮುಗಿದಿದೆ. ಅದರಲ್ಲಿ 160 ಕಾಮಗಾರಿ ಪ್ರಗತಿಯಲ್ಲಿದ್ದು ಇನ್ನೂ 60 ಶಾಲಾ ಕಟ್ಟಡ ಕಾಮಗಾರಿ ಪ್ರಾರಂಭಿಸಬೇಕಿದೆ.
ಇದಲ್ಲದೇ ಶಿಥಿಲಗೊಂಡಿರುವ ಕಟ್ಟಡಗಳ ದುರಸ್ಥಿ ಗಾಗಿ 2.10 ಕೋಟಿ ಬಿಡುಗಡೆಯಾಗಿದ್ದು ಅದರಲ್ಲಿ ಚಿಕ್ಕನಾಯಕನಹಳ್ಳಿ ತಾಲೂಕಿನ 11 ಶಾಲೆಗಳ 12 ಕೊಠಡಿ, ಗುಬ್ಬಿಯ 10 ಶಾಲೆಯ 11 ಕೊಠಡಿ, ಕುಣಿಗಲ್ ನ 15 ಶಾಲೆ 25 ಕೊಠಡಿ, ತಿಪಟೂರು 9ಶಾಲೆ 14 ಕೊಠಡಿ, ತುಮಕೂರು ನಗರ 8 ಶಾಲೆಗಳ 18 ಕೊಠಡಿ, ತುಮಕೂರು ಗ್ರಾಮಾಂತರ 20 ಶಾಲೆಗಳ 47 ಕೊಠಡಿ, ತುರುವೇಕೆರೆ 10 ಶಾಲೆಗಳ 10 ಕೊಠಡಿ ಸೇರಿ 83 ಶಾಲೆಗಳ 137 ಕೊಠಡಿಗಳಲ್ಲಿ 65 ಕಾಮಗಾರಿ ಮುಗಿದಿದೆ. ಇನ್ನೂ 7 ಪ್ರಗತಿಯಲ್ಲಿದ್ದು 11 ಶಾಲಾ ಕಟ್ಟಡಗಳ ಕಾಮಗಾರಿ ನಡೆಯುತ್ತಿದೆ.
ಪ್ರಸಕ್ತ ಸಾಲಿನಲ್ಲಿ ಮಳೆಯಿಂದ ಹಾನಿಯಾಗಿರುವ ಜತೆಗೆ ಹಳೆಯ ಶಾಲಾ ಕಟ್ಟಡ ತೆರವು ಮಾಡಿ ಹೊಸ ಶಾಲಾ ಕಟ್ಟಡಕಟ್ಟಲು ನರೇಗಾ ಯೋಜನೆಯಲ್ಲಿ ಕಾಮಗಾರಿ ಆರಂಭಿಸಲು ಚಿಕ್ಕನಾಯಕನಹಳ್ಳಿ 44, ಗುಬ್ಬಿ 74, ಕುಣಿಗಲ್ 62, ತಿಪಟೂರು 49, ತುಮ ಕೂರು 79, ತುರುವೇಕೆರೆ 50 ಸೇರಿ ಒಟ್ಟು 358 ಶಾಲಾ ಕಟ್ಟಡಗಳ ಕಾಮಗಾರಿಗೆ ಯೋಜನೆ ಪ್ರಗತಿಯಲ್ಲಿದೆ.
ಮೇ, ಜೂನ್‌ನ ಮಾಹಿತಿ ಸಂಗ್ರಹ ಆಗಬೇಕಿದೆ:
ಕಳೆದ ಮೇ, ಜೂನ್ ತಿಂಗಳಿನಲ್ಲಿ ಸುರಿದ ಮಳೆಯಿಂದಲೂ ಕೆಲವು ಕಡೆ ಶಾಲಾ ಕಟ್ಟಡಗಳಿಗೆ ಹಾನಿಯಾಗಿದ್ದು ಅದರ ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಜತೆಗೆ ಹಳೆಯ ಶಾಲಾ ಕಟ್ಟಡಗಳ ನವೀಕರಣ ಹಾಗೂ ಮಳೆಹಾನಿಯಿಂದ ತೊಂದರೆಗೆ ಒಳಗಾಗಿರುವ 188 ಶಾಲೆಗಳಲ್ಲಿ 2022-23 ನೇ ಸಾಲಿನಲ್ಲಿ ವಿವೇಕ ಯೋಜನೆಯಲ್ಲಿ ಶಾಲಾ ಕೊಠಡಿಗಳ ನಿರ್ಮಾಣ ಕಾರ್ಯವೂ ಪ್ರಗತಿಯಲ್ಲಿ ಇದೆ. ಅದರಲ್ಲಿ 188 ಶಾಲೆಗಳ 244 ಕೊಠಡಿ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ತುಮಕೂರು ಶೈಕ್ಷಣಿಕ ಜಿಲ್ಲೆಯಲ್ಲಿ ಮಳೆಯಿಂದ ಹಾನಿಯಾಗಿರುವ ಸರ್ಕಾರಿ ಶಾಲಾ ಕಟ್ಟಡಗಳ ಮಾಹಿತಿ ಪಡೆಯಲಾಗುತ್ತಿದೆ. ಕಳೆದ ವರ್ಷ ಮಳೆ ಯಿಂದ ಹಾನಿಯಾದ ಕಟ್ಟಡಗಳ ದುರಸ್ತಿ ಪ್ರಗತಿಯಲ್ಲಿದೆ. ಜತೆಗೆ ಹಳೆಯ ಕಟ್ಟಡಗಳ ಕಾಮಗಾರಿಯೂ ನಡೆಯುತ್ತಿದ್ದು ವಿದ್ಯಾರ್ಥಿ ಗಳ ಶಿಕ್ಷಣಕ್ಕೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. -ಸಿ.ರಂಗಧಾಮಯ್ಯ, ಉಪನಿರ್ದೇಶ ಕರು, ಸಾರ್ವಜನಿಕ ಶಿಕ್ಷಣ ಇಲಾಖೆ
– ಚಿ.ನಿ.ಪುರುಷೋತ್ತಮ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್
Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
Kantara Chapter 1: ರಿಷಬ್ ಶೆಟ್ಟಿ ʼಕಾಂತಾರ ಚಾಪ್ಟರ್ -1ʼ ರಿಲೀಸ್ ಗೆ ಡೇಟ್ ಫಿಕ್ಸ್
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
Kinnal raj; ʼಸಿಂಹರೂಪಿಣಿʼಗೆ 25ರ ಸಂಭ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.