ಸ್ಮಾರ್ಟ್‌ಸಿಟಿ ನಗರಕ್ಕೆಖಾಲಿ ನಿವೇಶನಗಳೇ ಕಂಟಕ
ಖಾಲಿ ನಿವೇಶನಗಳಲ್ಲಿ ಗಿಡ-ಗಂಟಿಗಳು,ವಿಷಪೂರಿತ ಹಾವು,ಕಸದ ಸಮಸ್ಯೆ !ಸೂಕ್ತ ಕ್ರಮ ಕೈಗೊಳ್ಳಲು ಪಾಲಿಕೆಗೆ ನಾಗರಿಕರ ಒತ್ತಾಯ
Team Udayavani, Jul 13, 2021, 3:23 PM IST
ಚಿ.ನಿ.ಪುರುಷೋತ್ತಮ್
ತುಮಕೂರು: ಸಾವಿರಾರು ಖಾಲಿ ನಿವೇಶನ. ಈ ನಿವೇಶನದಲ್ಲಿ ಬೆಳೆದ ಗಿಡ ಗಂಟಿಗಳಲ್ಲಿ ವಿಷಪೂರಿತ ಹಾವುಗಳು. ಜನವಸತಿ ಪ್ರದೇಶದ ಖಾಲಿ ನಿವೇಶನ ಗಳಲ್ಲಿಯೂ ತುಂಬಿ ಹೋಗಿರುವ ಕಸ, ಕಡ್ಡಿ ಕೋಳಿ ತ್ಯಾಜ್ಯ. ದುರ್ನಾತದ ಜತೆಯಲ್ಲೇ ಜನತೆಯ ನಿತ್ಯ ಜೀವನ… ಈ ಸಮಸ್ಯೆಗಳೆಲ್ಲಾ ಇರುವುದು ಬೇರೆಲ್ಲೂ ಅಲ್ಲ, ಶೈಕ್ಷಣಿಕ ನಗರ ಹಾಗೂ ಸ್ಮಾರ್ಟ್‌ಸಿಟಿ ನಗರಗಳ ಪಟ್ಟಿಗೆ ಸೇರ್ಪಡೆಯಾಗಿರುವ ತುಮಕೂರು ನಗರದಲ್ಲಿ.
ಕಿರಿಕಿರಿ:ರಾಜಧಾನಿ ಬೆಂಗಳೂರಿಗೆ ಹೆಬ್ಬಾಗಿಲಾಗಿರುವ ತುಮಕೂರು ನಗರ ಸ್ವತ್ಛತೆಯಲ್ಲಿ ರಾಜ್ಯದಲ್ಲಿ 2ನೇ ಸ್ಥಾನದಲ್ಲಿದೆ. ಈಗ ಮೊದಲನೇ ಸ್ಥಾನದ ಪ್ರಯತ್ನದಲ್ಲಿ ಇರುವ ಸ್ಮಾರ್ಟ್ ಸಿಟಿ ನಗರದಲ್ಲಿನ ಖಾಲಿ ನಿವೇಶನ ಗಳು ಜನ ಸಾಮಾನ್ಯರಿಗೆ ಕಿರಿಕಿರಿಯನ್ನುಂಟು ಮಾಡಿವೆ. ನಗರ ಹೊರವಲಯದ ಜನವಸತಿ ಪ್ರದೇಶದ ಜನ ನಿತ್ಯವೂ ಸುಟ್ಟ ಕೆಟ್ಟ ವಾಸನೆ, ನಿವೇಶನಗಳಲ್ಲಿ ವಾಸವಾಗಿರುವ ಹಾವುಗಳು, ದುರ್ವಾಸನೆ ಒಂದಲ್ಲ, ಎರಡಲ್ಲ ಹತ್ತಾರು ಸಮಸ್ಯೆ ನಿತ್ಯಕಾಡುತ್ತಿದೆ. ಗಿಡ-ಗಂಟಿ:ಹಣವಂತರು ತಮ್ಮ ಹಣವನ್ನು ದ್ವಿಗುಣಗೊಳಿಸಲು ನಗರದ ವಿವಿಧ ಬಡಾವಣೆಗಳಲ್ಲಿ ನಿವೇಶನ ಖರೀದಿಸಿ ದ್ದಾರೆ.
ಇನ್ನು ಬೆಂಗಳೂರು ಸೇರಿ ವಿವಿಧ ಭಾಗಗಳ ನಿವಾಸಿಗಳು ನಗರದಲ್ಲಿ ನಿವೇಶನ ಖರೀದಿಸಿದ್ದಾರೆ. ಆದರೆ, ನಿವೇಶನ ಖರೀದಿಸುವಾಗ ಬಂದವರು, ಮತ್ತೆ ಅತ್ತ ತಲೆ ಹಾಕುತ್ತಿಲ್ಲ. ಹೀಗಾಗಿ ಮನೆಗಳ ಪಕ್ಕದಲ್ಲಿರುವ ಈ ನಿವೇಶನಗಳು ಅಲ್ಲಿಯ ನಿವಾಸಿಗಳಿಗೆ ಕಂಟಕ ಪ್ರಾಯವಾಗಿವೆ. ಇತ್ತ ಗಿಡ ಗಂಟಿಗಳು ಬೆಳೆದು ಪೊದೆಗಳು ನಿರ್ಮಾಣವಾಗಿವೆ. ನಗರದ ಸದಾಶಿವನಗರ, ಸರಸ್ವತಿಪುರಂ, ಸರಸ್ವತಿ ಪುರಂ 2ನೇ ಹಂತ ನೀಲಗಿರಿ ತೋಪಿನ ಪ್ರದೇಶ, ವಿದ್ಯಾ ನಿಕೇತನ ಶಾಲೆಯ ಸಮೀಪ, ಸಪ್ತಗಿರಿ ಬಡಾವಣೆ, ಜಯನಗರ, ಬಡ್ಡಿಹಳ್ಳಿ, ಕ್ಯಾತ್ಸಂದ್ರ, ಶ್ರೀನಗರ, ಬಂಡೇಪಾಳ್ಯ, ಶಿರಾ ಗೇಟ್, ಅರಳೀ ಮರದಪಾಳ್ಯ, ಭೀಮ್ ಸಂದ್ರ, ಗಂಗ ಸಂದ್ರ, ರಾಜೀವ್ ಗಾಂಧಿ ನಗರ, ಕುರಿ ಪಾಳ್ಯ, ಇಸ್ಮಾಯಲ್ ನಗರ, ಮರಳೂರು ದಿಣ್ಣೆ, ಶೆಟ್ಟಿಹಳ್ಳಿ ಸೇರಿದಂತೆ ನಗರದ ಹೊರವಲಯ ವಲ್ಲದೇ ನಗರದ ಪ್ರಮುಖ ಬಡಾವಣೆಯಲ್ಲಿಯೇ ನಿವೇಶನಗಳು ಖಾಲಿ ಇದ್ದು ಜನರಿಗೆ ತೊಂದರೆ ನೀಡುತ್ತಿವೆ.
ಸರಸ್ವತಿ ಪುರಂ 2ನೇ ಹಂತದಲ್ಲಿ ನೀಲಗಿರಿ ಮರಗಳು ಬೆಳೆದು ನಿಂತಿದ್ದು ಅನೈತಿಕ ಚಟುವಟಿಕೆ ತಾಣವಾಗಿದೆ. ಜತೆಗೆ ಮದ್ಯವ್ಯಸನಿಗಳ ಜಾಗವೂ ಇದಾಗಿದೆ. ಅಲ್ಲದೇ, ಸತ್ತ ನಾಯಿ ಹಂದಿ, ದನ ಕಸ ತಂದು ಹಾಕುತ್ತಿದ್ದು ದುರ್ನಾತ ಬೀರುತ್ತಿದೆ ಎಂದು ಇಲ್ಲಿನ ನಿವಾಸಿಗಳು ಆರೋಪಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.