ತುಮಕೂರು: ಸೋಂಕಿತರ ಸಂಖ್ಯೆ 16ಕ್ಕೆ ಏರಿಕೆ
Team Udayavani, May 22, 2020, 6:20 AM IST
ತುಮಕೂರು: ಕಲ್ಪತರು ನಾಡಿನಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಗುರುವಾರ ಮತ್ತೂಂದು ಪ್ರಕರಣ ಬೆಳಕಿಗೆ ಬಂದಿದ್ದು ಈಗ ಸೋಂಕಿತರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ. ಹೊರ ರಾಜ್ಯ, ಹೊರ ಜಿಲ್ಲೆಯಿಂದ ಬರುವವರ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು ಜಿಲ್ಲೆಯ ಗಡಿಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಹೊರಗಡೆಯಿಂದಲೇ ಸೋಂಕು: ಈವರೆಗೆ ಜಿಲ್ಲೆಯಲ್ಲಿ ಕೋವಿಡ್ 19 ಸೋಂಕು ಕಾಣಿಸಿ ಕೊಂಡಿರುವುದು ರೋಗ ಹರಡುತ್ತಿರುವುದು ಬೇರೆ ಭಾಗದಿಂದ ಜಿಲ್ಲೆಗೆ ಬಂದಿರುವವ ರಿಂದಲೇ ಆಗಿದ್ದು, ಇಲ್ಲಿಯ ಮೂಲ ನಿವಾಸಿಗಳಿಗೆ ಸೋಂಕು ಕಾಣಿಸಿ ಕೊಂಡಿಲ್ಲ ಆದರೆ ಸೋಂಕಿನ ಸಂಪರ್ಕದಲ್ಲಿ ಇದ್ದವರಿಗೆ ಕೋವಿಡ್ 19 ತನ್ನ ಕದಂಬ ಬಾಹು ಚಾಚಿದೆ. ಸೋಂಕು ಪ್ರಕರಣಗಳು ಕಡಿಮೆ ಇದ್ದ ಜಿಲ್ಲೆಯಲ್ಲಿ ಈಗ ದಿಢೀರನೆ ಪ್ರತಿದಿನ ಹೊರ ರಾಜ್ಯಗಳಿಂದ ಜಿಲ್ಲೆಗೆ ಬಂದವರಿಗೆ ಸೋಂಕು ಕಾಣಿಸಿ ಕೊಳ್ಳುತ್ತಿರುವುದು ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದೆ.
ಮುಂಬೈ ನಂಜು: ಮುಂಬೈನಿಂದ ಬಂದಿದ್ದ ಪಿ-1401, 28 ವರ್ಷದ ಮಹಿಳೆ, 1402, 30 ವರ್ಷದ ಮಹಿಳೆ, ಪಿ-1402, 10 ವರ್ಷದ ಹುಡುಗ, ಪಿ-1404, 12 ವರ್ಷದ ಹುಡುಗಿ ಗೆ ಕಾಣಿಸಿ ಕೊಂಡಿತ್ತು ಇವರೆಲ್ಲರೂ ಮುಂಬೈ ನಿಂದ ಬಂದವರೇ, ಬುಧವಾರ ಸೋಂಕಿತರ ಸಂಖ್ಯೆ 15 ಇತ್ತು ಆದರೆ ಗುರುವಾರ ಮತ್ತೂಂದು ಕಾಣಿಸಿ ಕೊಂಡಿದೆ. ಈಗ ಕಾಣಿಸಿ ಕೊಂಡಿರುವ 16ನೇ ಸೋಂಕಿತ ತುಮಕೂರಿನ ಖಾದರ್ ನಗರ ನಿವಾಸಿ ಲಾರಿ ಚಾಲಕ ಪಿ.1561 ಎಂದು ಗುರುತಿಸ ಲಾಗಿದೆ. ಈಗ ಬರುತ್ತಿರುವ ಪ್ರಕರಣಗಳಲ್ಲಿ ಮುಂಬೈ ನಂಜೇ ಹೆಚ್ಚಾಗಿದೆ.
9 ಜನರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ…: ಜಿಲ್ಲೆಗೆ ಹೊರ ರಾಜ್ಯ, ಜಿಲ್ಲೆಯಿಂದ ಬರುವವರ ಸಂಖ್ಯೆ ಹೆಚ್ಚುತ್ತಿದೆ. ಹೊರ ರಾಜ್ಯದಿಂದಲೇ ಈವರೆಗೆ 439 ಮಂದಿ ಬಂದಿದ್ದಾರೆ ಅವರನ್ನು ತಕ್ಷಣ ಕ್ವಾರೆಂಟೈನ್ ಮಾಡಲಾಗಿದೆ ಬೇರೆ ಕಡೆ ಯಿಂದ ಜಿಲ್ಲೆಗೆ ಬಂದಿರುವ 1014 ಜನರ ಲ್ಯಾಬ್ ವರದಿ ಬರಬೇಕಾಗಿದೆ. ಈ ವರೆಗೆ 8,077 ಜನರ ಗಂಟಲು ದ್ರವ ಪರೀಕ್ಷೆ ನಡೆದಿದೆ, ಅದರಲ್ಲಿ 7099 ಜನರ ವರದಿ ನೆಗೆಟಿವ್ ಬಂದಿದೆ. ಈಗ 2,019 ಜನರನ್ನು ಹೋಂ ಕ್ವಾರೈಂಟೈನ್ ಮಾಡಲಾಗಿದ್ದು, 863 ಜನ ಐಸೋಲೇಷನ್ ನಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ. ಈ ವರೆಗೆ ಜಿಲ್ಲೆಯಲ್ಲಿ 16 ಜನರಲ್ಲಿ ಕೋವಿಡ್ 19 ಮಹಾಮಾರಿ ಕಾಣಿಸಿ ಕೊಂಡು ಐವರು ಗುಣ ಮುಖರಾಗಿದ್ದಾರೆ, ಇಬ್ಬರು ಮೃತಪಟ್ಟಿದ್ದಾರೆ. ಇನ್ನೂ ಒಂಬತ್ತು ಜನರಿಗೆ ಕೋವಿಡ್ -19 ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ.
ತುಮಕೂರಿನ ಖಾದರ್ ನಗರದ ವಾಸಿ 58 ವರ್ಷದ ಲಾರಿ ಚಾಲಕ ಪಿ.1561 ಎನ್ನುವ ವ್ಯಕ್ತಿಗೆ ಸೋಂಕು ಇರುವುದು ದೃಢಪಟ್ಟಿದೆ. ಈತ ಮುಂಬೈಗೆ ಹೋಗಿ ಬಂದು ಮನೆಯಲ್ಲಿದ್ದ ಜಿಲ್ಲಾಡಳಿತದಿಂದಲೇ ಈತನನ್ನು ಪತ್ತೆ ಹಚ್ಚಿ ಕ್ವಾರೈಂಟೈನ್ ಮಾಡಲಾಗಿ ಆತನ ಗಂಟಲು ದ್ರವ ಪರೀಕ್ಷೆ ಮಾಡಿಸಿದಾಗ ಆತನಲ್ಲಿ ಕೋವಿಡ್ 19 ಸೋಂಕು ಇರುವುದು ತಿಳಿದು ಬಂದಿದೆ, ಖಾದರ್ ನಗರ ವನ್ನು ಕಂಟೈನ್ಮೆಂಟ್ ವಲಯ ಎಂದು ಪರಿಗಣಿಸಿ ಸೀಲ್‌ಡೌನ್ ಮಾಡಲಾಗಿದೆ. ಆತನ ಸಂಪರ್ಕದಲ್ಲಿರುವ ಹೆಂಡತಿ ಮತ್ತು ಮಗುವನ್ನು ಕ್ವಾರೈಂಟೈನ್ ಮಾಡಲಾಗಿದೆ.
-ಡಾ.ಕೆ.ರಾಕೇಶ್ ಕುಮಾರ್, ಜಿಲ್ಲಾಧಿಕಾರಿ
* ಚಿ.ನಿ.ಪುರುಷೊತ್ತಮ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pavagada: ವಿಷ ಸೇವಿಸಿ ಗಂಡ-ಹೆಂಡತಿ ಆತ್ಮಹತ್ಯೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Drone Prathap: ನೀರಿಗೆ ಸ್ಫೋಟಕ ಎಸೆದ ಪ್ರಕರಣ; ಪ್ರತಾಪ್‌ಗೆ 10 ದಿನ ನ್ಯಾಯಾಂಗ ಬಂಧನ
Huliyar; ಕೆಮ್ಮಿನ ಔಷಧವೆಂದು ಭಾವಿಸಿ ಕೀಟನಾಶಕ ಸೇವಿಸಿದ ರೈತ ಸಾ*ವು
ಕೃಷಿ ಹೊಂಡದಲ್ಲಿ ಅದೇನೋ ಮಾಡಲು ಹೋಗಿ ಅರೆಸ್ಟ್ ಅದ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.