ತುಮಕೂರು ವಿವಿ ಸ್ನಾತಕೋತರ ವಿಭಾಗ ಸ್ಥಳಾಂತರ
Team Udayavani, Dec 23, 2021, 1:57 PM IST
ತುಮಕೂರು: ತುಮಕೂರು ವಿಶ್ವವಿದ್ಯಾನಿಲಯದ ಮೂರು ಸ್ನಾತಕೋತ್ತರ ವಿಭಾಗಗಳನ್ನು ಹೊಸ ವರ್ಷಾ ರಂಭ ಜನವರಿಯಿಂದ ಬಿದರಕಟ್ಟೆಯ ಹೊಸ ಕ್ಯಾಂಪಸ್‌ಗೆ ಸ್ಥಳಾಂತರ ಮಾಡಿಕೊಳ್ಳಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ತುಮಕೂರು ವಿವಿ ಕುಲಪತಿ ಕರ್ನಲ್ ಪೊ›. ವೈ. ಎಸ್. ಸಿದ್ದೇಗೌಡ ತಿಳಿಸಿದರು.
ಸ್ಥಳಾಂತರಿಸಲು ಎಲ್ಲ ಸಿದ್ಧತೆ: ನಗರದ ತುಮಕೂರು ವಿವಿ ಕಾರ್ಯಾಲಯದಲ್ಲಿ ಪತ್ರಕರ್ತರೊಂದಿಗೆ ಮಾತ ನಾಡಿದ ಅವರು, ಹೊಸ ಕ್ಯಾಂಪಸ್‌ಗೆ 2022ರಲ್ಲಿ ಪ್ರವೇಶಿಸಲೇಬೇಕೆಂದು ದೃಢ ಸಂಕಲ್ಪ ಮಾಡಿ ಬಯೋ ಟೆಕ್ನಾಲಜಿ, ಎಂ.ಕಾಂ(ಐಎಸ್), ಆರ್ಗಾನಿಕ್ ಕೆಮಿಸ್ಟ್ರಿ ವಿಭಾಗವನ್ನು ಹೊಸ ಕ್ಯಾಂಪಸ್‌ಗೆ ಸ್ಥಳಾಂತರಿಸಲು ಎಲ್ಲಾ ಸಿದ್ಧತೆ ನಡೆಸಲಾಗಿದೆ. ಕ್ಯಾಂಪಸ್ ಪೂರ್ಣ ಗೊಂಡ ಮೇಲೆ ಹಂತ ಹಂತವಾಗಿ ಉಳಿದ ವಿಭಾಗಗ ಳನ್ನು ಅಲ್ಲಿಗೆ ಸ್ಥಳಾಂತರಿಸಲಾಗುವುದು ಎಂದರು.
ಇದನ್ನೂ ಓದಿ: ನರೇಗಾದಡಿ ನಿತ್ಯ 299 ರೂ. ಕೂಲಿ
ಜಿಲ್ಲಾ ಕೇಂದ್ರದಿಂದ 16 ಕಿ.ಮೀ. ದೂರವಿರುವ ಕ್ಯಾಂಪಸ್‌ಗೆ ಹೋಗಿ ಬರಲು ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರಿಗೆ ತೊಂದರೆಯಾಗಬಾರದೆಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಕರೊಂದಿಗೆ ಪತ್ರ ಬರೆದು ಬಸ್ ವ್ಯವಸ್ಥೆ ಕಲ್ಪಿಸುವಂತೆ ಚರ್ಚಿಸಿದ್ದು, ಬೆಳಗ್ಗೆಯಿಂದ ಸಂಜೆಯವರೆಗೆ ತುಮಕೂರಿಂದ- ಬಿದರಕಟ್ಟೆ ಪ್ರತಿಗಂಟೆಗೊಮ್ಮೆ ಬಸ್ ಸಂಚಾರ ನಡೆಸಲು ಒಪ್ಪಿದ್ದಾರೆ ಎಂದರು.
ಶೀಘ್ರ ಅನುದಾನ ಬಿಡುಗಡೆ: ಅತಿಥಿ ಉಪನ್ಯಾಸಕರು ಹಾಗೂ ಪ್ರಾಧ್ಯಾಪಕರನ್ನು ಕ್ಯಾಂಪಸ್‌ಗೆ ತೆರಳಿ ಪಾಠ ಮಾಡಬೇಕೆಂದು ಸೂಚಿಸಿದ್ದು, 120 ವಿದ್ಯಾರ್ಥಿಗಳು ಹೊಸ ಕ್ಯಾಂಪಸ್‌ನಲ್ಲಿ ಸ್ನಾತಕೋತ್ತರ ಅಧ್ಯಯನ ಮಾಡಲಿದ್ದಾರೆ. ಅದಕ್ಕಾಗಿ ಎಲ್ಲ ರೀತಿಯ ತಯಾರಿ ಮಾಡಿರುವುದಾಗಿ ತಿಳಿಸಿದ ಅವರು, 2016ರಲ್ಲಿ ತುಮಕೂರು ವಿವಿ ನೂತನ ಕ್ಯಾಂಪಸ್‌ಗೆ ಮಂಜೂರಾ ಗಿದ್ದ 40 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಲು ಸರ್ಕಾರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಅವರ ಮೂಲಕ ಕೋರಿಕೆ ಸಲ್ಲಿಸಲಾ ಗಿದ್ದು, ಕಡತ ಸಿಎಂ ಮುಂದಿದೆ.
ಶೀಘ್ರ ಅನುದಾನ ಬಿಡುಗಡೆಯಾಗುವ ನಿರೀಕ್ಷೆ ಇದೆ. 2022 ಜನವರಿ ಅಂತ್ಯಕ್ಕೆ ಮುಖ್ಯಮಂತ್ರಿಯವರೂ ಸಹ ನೂತನ ಕ್ಯಾಂಪಸ್‌ಗೆ ಭೇಟಿ ಕೊಡಲಿದ್ದಾರೆ ಎಂದರು.
ಎನ್‌ಇಪಿ ಅನುಷ್ಠಾನದಲ್ಲೂ ವಿವಿ ಮುಂಚೂಣಿ: ತುಮಕೂರು ವಿಶ್ವವಿದ್ಯಾನಿಲಯ ಸರ್ಕಾರ ಜಾರಿಗೆ ತಂದಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಷ್ಠಾನ ಗೊಳಿಸುವಲ್ಲಿ ತುಮಕೂರು ವಿಶ್ವವಿದ್ಯಾ ನಿಲಯ ಮುಂಚೂಣಿಯಲ್ಲಿದೆ. ಸರ್ಕಾರ ಹಾಕಿಕೊಟ್ಟ ವೇಳಾಪಟ್ಟಿಯನುಸಾರವೇ ನೂತನ ರಾಷ್ಟ್ರೀಯ ನೀತಿಯನ್ನು ಅನುಷ್ಠಾನಗೊಳಿಸುತ್ತಿರುವ ಮೊದಲ ವಿವಿಯೆನಿಸಿದೆ. ನೂತನ ನೀತಿಯನುಸಾರ ಸಮಾಜ ವಿಜ್ಞಾನ, ಮಾನವಿಕ ವಿಜ್ಞಾನ, ವಿಜ್ಞಾನ ಹಾಗೂ ವಾಣಿಜ್ಯ ಹೀಗೆ ಎಲ್ಲ ಪ್ರಾಯೋಗಿಕ ಕಲಿಕೆಗೆ ಒತ್ತು ನೀಡಲಾಗಿದ್ದು, ತಂತ್ರಜ್ಞಾನ ಆಧಾರಿತ, ವೃತ್ತಿಗೆ ಪೂರಕ ಕಲಿಕೆಗೆ ಒತ್ತು ನೀಡಲಾಗಿದೆ. ವಿದ್ಯಾರ್ಥಿಗಳಿಗೂ ಇದು ವರದಾನವೆನಿಸಿದೆ ಎಂದು ತಿಳಿಸಿದರು.
“ತುಮಕೂರು ವಿಶ್ವವಿದ್ಯಾನಿಲಯದ ಹೊಸ ಕ್ಯಾಪಂಸ್‌ನಲ್ಲಿ ಆರ್ಗಾನಿಕ್ ಕೆಮಿಸ್ಟ್ರಿ ವಿಭಾಗವನ್ನು ಆರಂಭಿಸಲು ಎಲ್ಲ ಸಿದ್ಧತೆ ನಡೆಸಲಾಗಿದೆ. ಕ್ಯಾಂಪಸ್ ಪೂರ್ಣಗೊಂಡ ಮೇಲೆ ಹಂತ ಹಂತವಾಗಿ ಉಳಿದ ವಿಭಾಗಗಳನ್ನು ಅಲ್ಲಿಗೆ ಸ್ಥಳಾಂತರಿಸಲಾಗುವುದು. ಕ್ಯಾಂಪಸ್‌ಗೆ ಹೋಗಿ ಬರಲು ವಿದ್ಯಾರ್ಥಿ ಹಾಗೂ ಅಧ್ಯಾಪಕರಿಗೆ ತೊಂದರೆಯಾಗ ಬಾರದೆಂದು ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆ ಮಾಡಲಾಗಿದೆ.” ● ಕರ್ನಲ್ ಪ್ರೊ. ವೈ. ಎಸ್. ಸಿದ್ದೇಗೌಡ, ತುಮಕೂರು ವಿವಿ ಕುಲಪತಿ
ವಿದ್ಯಾರ್ಥಿಗಳ ಸಂಖ್ಯೆ 3 ಸಾವಿರಕ್ಕೆ ಏರಿಕೆ: ಸಿದ್ದೇಗೌಡ
ಕಳೆದ ಮೂರು ವರ್ಷಗಳಲ್ಲಿ ವಿವಿಯನ್ನು ಶೈಕ್ಷಣಿಕವಾಗಿ ಬೆಳೆಸಲು ಹೆಚ್ಚಿನ ಒತ್ತು ಕೊಟ್ಟಿದ್ದು, 17 ಹೊಸ ಕೋರ್ಸ್ ಆರಂಭಿಸಲಾಗಿದೆ. 540 ಇದ್ದ ವಿದ್ಯಾರ್ಥಿಗಳ ಸಂಖ್ಯೆ 3 ಸಾವಿರಕ್ಕೆ ಏರಿಕೆಯಾಗಿದೆ. ಉನ್ನತ ಶಿಕ್ಷಣ ಎಲ್ಲರಿಗೂ ಸಿಗಬೇಕೆಂಬ ಸರ್ಕಾರದ ಆಶಯವನ್ನು ಈಡೇರಿಸಲು ತುಮಕೂರು ವಿವಿ ಇತರೆ ವಿವಿಗಳಿಗಿಂತ ಒಂದು ಹೆಜ್ಜೆ ಮುಂದಡಿಯಿಟ್ಟಿದೆ. ಆಡಳಿತದಲ್ಲೂ ಪಾರದರ್ಶಕತೆ ತರಲಾಗಿದ್ದು, ಜಿಇಪಿ ವ್ಯವಸ್ಥೆಯಡಿ ಮೂಲಸೌಕರ್ಯದ ವಸ್ತುಗಳನ್ನು ಸ್ಪರ್ಧಾತ್ಮಕ ದರದಲ್ಲಿ ಖರೀದಿಸಲಾಗುತ್ತಿದೆ ಎಂದು ತುಮಕೂರು ವಿವಿ ಕುಲಪತಿ ಕರ್ನಲ್ ಪ್ರೊ. ವೈ. ಎಸ್. ಸಿದ್ದೇಗೌಡ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Koratagere: ವಿದ್ಯೆಯ ಸಾಧನೆಗೆ ಸಾಧಿಸುವ ಗುರಿ ಒಂದೇ ಮುಖ್ಯ
ಜಟ್ಟಿ ಅಗ್ರಹಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಗಂಗಾದೇವಿ ಅಧ್ಯಕ್ಷೆ
Koratagere: ಮದ್ಯಪಾನದಿಂದ ಕುಟುಂಬದಲ್ಲಿ ದಿನ ಅಶಾಂತಿ ಉಂಟಾಗಿ ನೆಮ್ಮದಿ ಇಲ್ಲದಂತಾಗಿದೆ
Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್ ಪ್ರತಾಪ್ ಜಾಮೀನು ಮಂಜೂರು
Pavagada: ವಿಷ ಸೇವಿಸಿ ಗಂಡ-ಹೆಂಡತಿ ಆತ್ಮಹತ್ಯೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.