ಕ್ಷೇತ್ರ ಪುನರ್ ವಿಂಗಡಣೆ: 7 ಹೆಚ್ಚುವರಿ ಜಿಪಂ ಕ್ಷೇತ್ರ
Team Udayavani, Feb 16, 2021, 3:30 PM IST
ತುಮಕೂರು: ಜಿಪಂ ಮತ್ತು ತಾಪಂ ಚುನಾವಣೆ ಹತ್ತಿರ ಬರುತ್ತಿರುವಂತೆಯೇ ಜಿಪಂ ಮತ್ತು ತಾಪಂಕ್ಷೇತ್ರಗಳ ಪುನರ್ ವಿಂಗಡಣೆಗೆ ರಾಜ್ಯ ಚುನಾವಣಾ ಆಯೋಗ ಸೂಚಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕ್ಷೇತ್ರ ಪುನರ್ ರಚನೆಗೆ ಸಿದ್ಧತೆ ನಡೆದಿದೆ. ಅದರ ಪ್ರಕಾರತುಮಕೂರು ಜಿಲ್ಲೆಯಲ್ಲಿ 7 ಜಿಪಂ ಕ್ಷೇತ್ರಗಳು ಹೊಸದಾಗಿ ಸೇರ್ಪಡೆಯಾಗಲಿದ್ದು 41 ತಾಪಂ ಕ್ಷೇತ್ರಗಳು ರದ್ದಾಗಲಿವೆ.
ಜಿಲ್ಲೆಯಲ್ಲಿ ಪ್ರಸ್ತುತ 56 ಜಿಪಂ ಕ್ಷೇತ್ರಗಳು ಇದ್ದು ಈಗ ಜನಸಂಖ್ಯೆ ಆಧಾರದ ಮೇಲೆ ಕ್ಷೇತ್ರಗಳ ವಿಂಗಡಣೆ ಮಾಡಲಿದ್ದು 12,500 ಜನ ಸಂಖ್ಯೆಯಿಂದ15 000 ಸಾವಿರದವರಗೆ ತಾಪಂ ಕ್ಷೇತ್ರ ಹಾಗೂ 35ರಿಂದ 45 ಸಾವಿರ ಜನಸಂಖ್ಯೆವರೆಗೆ ಜಿಪಂ ಕ್ಷೇತ್ರ ಎಂದು ಚುನಾವಣಾ ಆಯೋಗ ಸೂಚನೆ ಮಾಡಿರುವುದರಿಂದ ಜಿಲ್ಲೆಯಲ್ಲಿ 7 ಜಿಪಂ ಕ್ಷೇತ್ರಗಳುಹೆಚ್ಚುವರಿ ಆಗಲಿದ್ದು 56 ಜಿಪಂ ಕ್ಷೇತ್ರ ಮುಂದೆ 64ಕ್ಕೆಹೆಚ್ಚಿಗೆ ಆಗಲಿವೆ. ಜಿಲ್ಲೆಯಲ್ಲಿ 214 ಇದ್ದ ತಾಪಂಕ್ಷೇತ್ರದಲ್ಲಿ ಮತದಾರರ ಸಂಖ್ಯೆ ಹೆಚ್ಚಳ ಮಾಡಿರುವ ಹಿನ್ನೆಲೆ 173ಕ್ಕೆ ಕುಸಿಯಲಿವೆ.
ಒಂದೊಂದು ಕ್ಷೇತ್ರ ಹೆಚ್ಚುವರಿ: ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಹುಳಿಯಾರು ಪಟ್ಟಣ ಪಂಚಾಯತ್ ಆಗಿರುವ ಹಿನ್ನೆಲೆಯಲಿ ಹುಳಿಯಾರು ಜಿಪಂ ಮತ್ತು ತಾಪಂ ಕ್ಷೇತ್ರ ರದ್ದು ಮಾಡಲಾಗಿದೆ. ಆದರೂ ಅಲ್ಲಿ ಬೇರೆ ಜಿಪಂ ಕ್ಷೇತ್ರನೀಡಬೇಕಾಗಿರುವುದರಿಂದ ಅಲ್ಲಿ ಹಾಗೆಯೇ 5 ಜಿಪಂ ಕ್ಷೇತ್ರ, ಹಾಗೆಯೇ ಉಳಿದಿವೆ. ಇನ್ನು ಗುಬ್ಬಿ ತಾಲೂಕಿನ7 ಜಿಪಂ ಮತು ತಿಪಟೂರು 5 ಜಿಪಂ ಕ್ಷೇತ್ರಹೊರತುಪಡಿಸಿ ಉಳಿದ 7 ತಾಲೂಕು ವ್ಯಾಪ್ತಿಯಲ್ಲಿತಲಾ ಒಂದೊಂದು ಜಿಪಂ ಕ್ಷೇತ್ರಗಳು ಹೊಸದಾಗಿ ಸೃಷ್ಟಿಯಾಗಲಿವೆ.
ಜಿಲ್ಲೆಯ ತುಮಕೂರು, ಪಾವಗಡ, ಶಿರಾ, ಕೊರಟಗೆರೆ, ಮಧುಗಿರಿ, ಕುಣಿಗಲ್,ತುರುವೇಕೆರೆ ತಾಲೂಕುಗಳಲ್ಲಿ ತಲಾ ಒಂದೊಂದು ಕ್ಷೇತ್ರಗಳು ಹೆಚ್ಚಾಗಿವೆ. ತಾಪಂ ಕ್ಷೇತ್ರ ವ್ಯಾಪ್ತಿಯಲ್ಲಿ ಇಲ್ಲಿಯವರೆಗೆ 8 ಸಾವಿರ ಮತದಾರರಿಗೆ ಒಂದು ತಾಪಂ ಕ್ಷೇತ್ರ ಇತ್ತು. ಹೀಗಾಗಿ ಜಿಲ್ಲೆಯಲ್ಲಿ 214 ತಾಪಂಕ್ಷೇತ್ರಗಳು ಇದ್ದವು. ಈಗ ಚುನಾವಣಾ ಆಯೋಗ 12,500 ಮತದಾರರಿಗೆ ಒಂದು ತಾಲೂಕು ಪಂಚಾಯ್ತಿ ಕ್ಷೇತ್ರ ಮಾಡಲು ತಿಳಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಚುನಾವಣಾ ಅಧಿಕಾರಿಗಳು ಅದರಂತೆ ಕ್ಷೇತ್ರಗಳನ್ನು ಸಿದ್ಧಪಡಿಸಿದ್ದು ಇದರಿಂದ ಪ್ರತಿ ತಾಲೂಕಿನಲ್ಲಿಯೂ ತಾಲೂಕು ಪಂಚಾಯ್ತಿ ಕ್ಷೇತ್ರಗಳು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ 214 ಇದ್ದ ತಾಪಂ ಕ್ಷೇತ್ರ 173ಕ್ಕೆ ಕುಸಿಯಲಿದೆ.
ರಾಜ್ಯ ಚುನಾವಣಾ ಆಯೋಗದ ಸೂಚನೆಯಂತೆ ಜನ ಸಂಖ್ಯೆ ಆಧಾರದ ಮೇಲೆ ಜಿಪಂ, ತಾಪಂ ಕ್ಷೇತ್ರಗಳ ಪುನರ್ ವಿಂಗಡಣೆ ಮಾಡಲಾಗಿದೆ. ಈ ವರದಿಯನ್ನು ಫೆ.20 ರಂದು ನಮೂನೆ ಮಾಹಿತಿ ನಕ್ಷೆಯೊಂದಿಗೆ ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗುವುದು. – ಪಾಟೀಲ್ ಯಲ್ಲಾಗಾಡಿ ಶಿವನಗೌಡ, ನೂತನ ಜಿಲ್ಲಾಧಿಕಾರಿ
ಕ್ಷೇತ್ರಗಳನ್ನು ಜನಸಂಖ್ಯೆ ಆಧಾರದಲ್ಲಿ ಪುನರ್ ವಿಂಗಡಣೆ ಮಾಡಲು ಸೂಚಿಸಿದೆ. ಇದು ಹೆಚ್ಚು ಸಹಕಾರಿಯಾಗಲಿದೆ. ತಾಪಂಗಳಿಗೆ ಅನುದಾನ ಕಡಿಮೆ ಜಿಪಂ, ತಾಪಂಗಳಿಗೆ ಬಿಡುಗಡೆಯಾಗುವ ಅನುದಾನಗಳು ಹೆಚ್ಚಬೇಕು. – ರಾಮಾಂಜಿನಪ್ಪ, ಜಿಪಂ ಸದಸ್ಯರು ಹಾಗಲವಾಡಿ ಕ್ಷೇತ್ರ
ತಾಪಂ ಕ್ಷೇತ್ರಗಳನ್ನು ಜನಸಂಖ್ಯೆ ಆಧಾರದಲ್ಲಿ ಕಡಿಮೆ ಮಾಡಿರುವುದು ಒಳ್ಳೆಯದು. ತಾಪಂ ಕ್ಷೇತ್ರಗಳಿಗೆ ಅನುದಾನವೇ ಬರುತ್ತಿಲ್ಲ, ಬರುವಅನುದಾನದಲ್ಲಿ ಕೆಲಸ ಮಾಡಿಸಲು ಸಹಕಾರಿಯಾಗುತ್ತದೆ. ಮುಂದೆಯಾದರೂ ಸರ್ಕಾರ ತಾಪಂಗಳಿಗೆ ವಿಶೇಷ ಅನುದಾನ ಬಿಡುಗಡೆ ಮಾಡಲಿ. – ರಂಗಸ್ವಾಮಯ್ಯ, ತಾಪಂ ಸದಸ್ಯ ಸಿರಿವರ
ಚಿಕ್ಕನಾಯಕನಹಳ್ಳಿ ಹುಳಿಯಾರು ಪಪಂ ಆಗಿರುವ ಹಿನ್ನೆಲೆ ಜಿಪಂ, ತಾಪಂ ಕ್ಷೇತ್ರ ರದ್ದಾಗಿದೆ. ಆದರೆ, ಈ ಭಾಗದಲ್ಲಿ ಮತ್ತೂಂದು ಕ್ಷೇತ್ರ ಸೃಷ್ಟಿಯಾಗಲಿದೆ. ಯಾವುದು ಎಂದು ತಿಳಿದಿಲ್ಲ. ಜಿಪಂ ಕ್ಷೇತ್ರ ಹೆಚ್ಚು ಮಾಡಿರುವುದು ಒಳ್ಳೆಯದು. – ವೈ.ಸಿ.ಸಿದ್ಧರಾಮಯ್ಯ, ಜಿಪಂ ಸದಸ್ಯರು ಹುಳಿಯಾರು ಕ್ಷೇತ
20ರಂದು ಆಯೋಗಕ್ಕೆ ವರದಿ : ಜಿಪಂ ಮತ್ತು ತಾಪಂ ಚುನಾವಣೆ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಜನಸಂಖ್ಯೆ ಆಧಾರದಲ್ಲಿ ಜಿಪಂ, ತಾಪಂ ಕ್ಷೇತ್ರಗಳ ರಚನೆಗೆ ಸೂಚಿಸಿದ್ದು ಅದರಂತೆ ಜಿಲ್ಲೆಯ ಪ್ರತಿ ತಾಲೂಕಿನ ಚುನಾವಣಾ ತಹಶೀಲ್ದಾರ್, ಕ್ಷೇತ್ರಗಳ ರಚನೆ ಮಾಡಿದ್ದು ಫೆ.20 ರಂದು ಆಯೋಗಕ್ಕೆ ವರದಿ ನೀಡಲಿದ್ದಾರೆ.
– ಚಿ.ನಿ.ಪುರುಷೋತ್ತಮ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.