ಕಸ ಸುರಿದರೆ ವಾಹನ ಪರವಾನಗಿ ರದ್ದು
ಗಾರೆ ನರಸಯ್ಯನಕಟ್ಟೆ-ಅಕ್ಕತಂಗಿಯರ ಕೆರೆಯಂಗಳದಲ್ಲಿ 2 ಆಟೋಗಳ ಜಪ್ತಿ ಮಾಡಿ 2 ಸಾವಿರ ರೂ. ದಂಡ: ಆಯುಕ್ತ
Team Udayavani, Jul 31, 2019, 2:39 PM IST
ತುಮಕೂರು: ಸಾರ್ವಜನಿಕ ಸ್ಥಳಗಳಲ್ಲಿ ಇನ್ನು ಮುಂದೆ ಕಸ ಸುರಿಯಲು ಯತ್ನಿಸಿದರೆ ಅಂತಹ ವಾಹನಗಳ ಪರವಾನಗಿ ರದ್ದುಪಡಿಸಲಾಗುವುದು ಎಂದು ಪಾಲಿಕೆ ಆಯುಕ್ತ ಟಿ.ಭೂಬಾಲನ್ ಎಚ್ಚರಿಕೆ ನೀಡಿದರು.
ನಗರದ ಹೊರವಲಯದ ಗಾರೆ ನರಸಯ್ಯನಕಟ್ಟೆ ಹಾಗೂ ಅಕ್ಕತಂಗಿಯರ ಕೆರೆಯಂಗಳದಲ್ಲಿ ಕಸ ಸುರಿಯಲು ಯತ್ನಿಸುತ್ತಿದ್ದ 2 ಲಗೇಜ್ ಆಟೋಗಳನ್ನು ಪಾಲಿಕೆ ಅಧಿಕಾರಿಗಳು ವಶಕ್ಕೆ ಪಡೆದು 2 ಸಾವಿರ ರೂ.ದಂಡ ವಿಧಿಸಿದ್ದಾರೆಂದರು.
2 ಆಟೋ ವಶಕ್ಕೆ: ಇದೇ ರೀತಿ ಗಾರೆ ನರಸಯ್ಯನಕಟ್ಟೆ ಬಳಿ ಖಾಸಗಿ ಬ್ಯಾಂಕ್‌ವೊಂದರ ಸಿಬ್ಬಂದಿ ಲಗೇಜ್ ಆಟೋದಲ್ಲಿ ಪೇಪರ್ ಸೇರಿದಂತೆ ಇತರೆ ಕಸ ತುಂಬಿ ಕೊಂಡು ಬಂದು ಕಸ ಹಾಕಲು ಮುಂದಾ ಗಿದ್ದರು. ಈ ಬಗ್ಗೆ ಮಾಹಿತಿ ಅರಿತ ಪಾಲಿಕೆ ಅಧಿಕಾರಿಗಳು, ದಾಳಿ ನಡೆಸಿ ಆಟೋ ವಶಪಡಿಸಿಕೊಂಡು ಎರಡೂ ಆಟೋಗಳನ್ನು ಪಾಲಿಕೆ ಕಚೇರಿಗೆ ಕರೆ ತಂದು ಆಯುಕ್ತರ ಮುಂದೆ ಹಾಜರು ಪಡಿಸಿದ್ದಾರೆ.
ಸ್ವಚ್ಛತೆ ಕಾಪಾಡಲು ಮುಂದಾಗಿ: ಎರಡೂ ಕಡೆ ಆಟೋಗಳಲ್ಲಿ ಕಸ ಸುರಿಯಲು ಬಂದಿದ್ದವರಿಗೆ ನಗರದಲ್ಲಿ ಸ್ವಚ್ಛತೆ ಕಾಪಾಡುವ ಬಗ್ಗೆ ಅರಿವು ಮೂಡಿಸಿದ ಆಯುಕ್ತ ಟಿ.ಭೂಬಾಲನ್, ತುಮಕೂರು ನಗರವನ್ನು ಮಹಾನಗರ ಪಾಲಿಕೆ ವತಿಯಿಂದ ಸ್ವಚ್ಛ ತುಮಕೂರನ್ನಾಗಿ ಮಾ ಡಲು ಶ್ರಮಿಸಲಾಗುತ್ತಿದೆ. ಕಸವನ್ನು ಎಲ್ಲೆಂ ದರಲ್ಲಿ ಸ್ಥಳಗಳಲ್ಲಿ ಎಸೆಯಬಾರದು. ಸಾರ್ವ ಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡದೆ ಅನೈರ್ಮಲ್ಯ ಸೃಷ್ಟಿಸುವ ರೀತಿಯಲ್ಲಿ ಕಸವನ್ನು ಎಸೆದರೆ ಅಂತಹವರಿಗೆ ದಂಡ ಹಾಕಲಾಗುವುದು ಎಂದರು.
ಜಿಲ್ಲಾಧಿಕಾರಿಗೆ ಶಿಫಾರಸು ಮಾಡುವೆ: ರಸ್ತೆ, ಕೆರೆಯಂಗಳ, ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕಬಾರದು. ಒಂದು ವೇಳೆ ಪಾಲಿಕೆ ಆದೇಶ ಉಲ್ಲಂಘಿಸಿ ಕಸ ಹಾಕಿದರೆ ಅಂತಹ ವಾಹನ ಗಳಿಗೆ ಹೆಚ್ಚಿನ ಮೊತ್ತದಲ್ಲಿ ದಂಡ ವಿಧಿಸಿ, ವಾಹನಗಳ ಲೈಸೆನ್ಸ್ ರದ್ದುಪಡಿಸಲು ಜಿಲ್ಲಾಧಿ ಕಾರಿಗಳಿಗೆ ಶಿಫಾರಸು ಮಾಡಲಾಗುವುದು ಎಂದು ಹೇಳಿದರು. ಗಾರೆ ನರಸಯ್ಯನಕಟ್ಟೆಗೆ ಖಾಸಗಿ ಬ್ಯಾಂಕ್‌ನವರು ಪೇಪರ್ ತುಂಬಿಕೊಂಡು ಕಸ ಹಾಕಲು ಬಂದಿದ್ದರು. ಅದೇ ರೀತಿ ಅಕ್ಕತಂಗಿ ಯವರ ಕೆರೆ ಬಳಿಗೆ ತರಕಾರಿ ತುಂಬಿಕೊಂಡು ಮತ್ತೂಂದು ವಾಹನ ಬಂದಿತ್ತು. ಈ ಎರಡೂ ವಾಹನವನ್ನು ಪಾಲಿಕೆ ಸಿಬ್ಬಂದಿ ಹಿಡಿದು ಪಾಲಿಕೆ ಆವರಣಕ್ಕೆ ಕರೆ ತಂದಿದ್ದರು. ಈ ಎರಡೂ ವಾಹನಗಳಿಗೆ ತಲಾ 2 ಸಾವಿರ ರೂ.ದಂಡ ವಿಧಿಸಿ, ಸ್ವಚ್ಛತೆ ಕಾಪಾಡುವಂತೆ ಅರಿವು ಮೂಡಿಸಲಾಗಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tumkur: ತುಮಕೂರಲ್ಲಿ ದಲಿತ ಮಹಿಳೆ ಹ*ತ್ಯೆ: 21 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
Road Mishap: ಚಲಿಸುತ್ತಿದ್ದ ಲಾರಿಗೆ ಕಾರು ಢಿಕ್ಕಿ: ತಂದೆ-ಮಗು ಸ್ಥಳದಲ್ಲೇ ಸಾವು
Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್: ಸಚಿವ ಡಾ| ಜಿ. ಪರಮೇಶ್ವರ್
Kunigal: ಹಳ್ಳಕ್ಕೆ ಉರುಳಿ ಬಿದ್ದ ಟ್ರ್ಯಾಕ್ಟರ್… ತಂದೆ ಮಗ ಸಾವು
Kunigal: ಕೆಂಪನಹಳ್ಳಿ ಗ್ರಾಮದಲ್ಲಿ ಸರಣಿ ಕಳ್ಳತನ
MUST WATCH
ಹೊಸ ಸೇರ್ಪಡೆ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Actor Darshan Bail Case: ಹತ್ಯೆ ಸ್ಥಳದಲ್ಲಿ ದರ್ಶನ್ ಇದ್ರು: ಫೋಟೋ ಸಾಕ್ಷ್ಯ ಲಭ್ಯ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.