ಹೇಮೆ ನೀರು ಹರಿಸದಿದ್ದರೆ ಗ್ರಾಪಂ ಚುನಾವಣೆ ಬಹಿಷ್ಕಾರ
Team Udayavani, Dec 12, 2020, 5:26 PM IST
ಚೇಳೂರು: ಸ್ಥಳೀಯ ಕೆರೆಗಳಿಗೆ ಹೇಮಾವತಿ ನೀರು ಹರಿಸುವುದಾಗಿ 20 ವರ್ಷಗಳಿಂದ ಹೇಳಿಕೊಂಡು ಗ್ರಾಪಂ ಚುನಾವಣೆ ನಡೆಸುತ್ತಿದ್ದು, ನೀರು ಹರಿಸದಕಾರಣ 33 ಗ್ರಾಮಗಳಿಂದ ಅಂಕಸಂದ್ರ, ಮಂಚಲ ದೊರೆ ಗ್ರಾಪಂ ಚುನಾವಣೆ ಬಹಿಷ್ಕಾರ ಮಾಡಿದ್ದಾರೆ.
ಹೋಬಳಿ ಅಂಕಸಂದ್ರ ಗ್ರಾಪಂನ ಕುರಬರಹಳ್ಳಿ, ಶೇಷನಹಳ್ಳಿ (ದೇವರಹಳ್ಳಿ) ಮತ್ತು ಹಾಗಲಾವಾಡಿಹೋಬಳಿಯ ಮಂಚಲದೊರೆ ಗ್ರಾಪಂನ ಮಠದಾಳಕೆರೆಗಳಿಗೆ ಹೇಮೆಯಿಂದ ನೀರು ಹರಿಸುತ್ತೇವೆ ಎಂದು 20 ವರ್ಷಗಳಿಂದ ಹೇಳುತ್ತಿದ್ದು, 2011ರಲ್ಲಿ ಕೆರೆಗಳಿಗೆ ನೀರು ಹರಿಸಲು ಬಂದಿದ್ದ ಹಣವನ್ನು ವಾಪಸ್ ಕಳುಹಿಸುವ ಮೂಲಕ ಜನಪ್ರತಿನಿಧಿಗಳು ದ್ರೋಹವೆಸಗಿದ್ದಾರೆಎಂಬುದಸ್ಥಳೀಯರಆಕ್ರೋಶಕ್ಕೆ ಕಾರಣವಾಗಿದೆ.
ಜನಪ್ರತಿನಿಧಿಗಳು ನಮ್ಮ ಕೆರೆಗಳ ಬಗ್ಗೆ ನಿರ್ಲಕ್ಷ್ಯ ತಾಳಿದ್ದಾರೆ. ಈ ನಿಟ್ಟಿನಲ್ಲಿ ಮತದಾರರು ಮತ್ತು ಆಕಾಂಕ್ಷಿಗಳು ನಾವು ಒಗಟ್ಟಾಗಿ ನಿರ್ಧರಿಸಿಚುನಾವಣೆ ಬಹಿಷ್ಕರಿಸಲು ನಿರ್ಧಸಿದ್ದು, ಕೊಡಲೇ ಸರ್ಕಾರದ ಗಮನ ಸಳೆದು ಹೇಮಾವತಿ ಹರಿಸುವಕಾಮಗಾರಿಗೆ ಚಾಲನೆ ನೀಡಬೇಕು. ಇಲ್ಲದಾದಲಿ ಯಾವುದೇಕಾರಣಕ್ಕೂ ಉಮೇದುವಾರಿಕೆ ಸಲಿಕೆಯ ಪ್ರಕ್ರಿಯೆಯನ್ನು ಪ್ರಾರಂಭಿಸುವುದಲ್ಲ ಎಂದು ಅಂಕಸಂದ್ರ ಗ್ರಾಪಂ, ಮಂಚಲದೊರೆ ಗ್ರಾಪಂ ಸೇರಿದ ಹಳ್ಳಿಗಳಪ್ರಮುಖರು ಶಾಂತ ಹೋರಾಟಕ್ಕೆ ಮುಂದಾಗಿದ್ದರು.
ಹೋರಾಟದ ಸ್ಥಳಕ್ಕೆ ಬೇಟಿ ನೀಡಿದ ಉಪವಿಭಾಗಾಧಿಕಾರಿ ಅಜಯ್ ನಿಮ್ಮಗಳ ಹೋರಾಟಕ್ಕೆ ಅರ್ಥವಿದೆ ಅದರೆ ನೀವುಗಳು ನಿಮ್ಮಜನಪ್ರನಿಧಿಗಳನ್ನುಆಯ್ಕೆಮಾಡಿಕೊಂಡುಹೋರಾಟ ಮಾಡುವುದರಿಂದ ಹೆಚ್ಚಿನ ಅನಕೂಲವಾಗುತ್ತದೆ. ಸರ್ಕಾರ ಈಗ ಕೊವೀಡ್ ಸಂಕಷ್ಟದಲ್ಲಿದ್ದು, ನಿಮ್ಮ ಪಕ್ಕದ ತಾಲೂಕಿನಲ್ಲಿಯೇ ನೀರಿನ ಸಮಸ್ಯೆಯಿದೆ. ಡಿ 30 ಕ್ಕೆ ಗ್ರಾಪಂಗಳ ಪಲಿತಾಂಶ ಬರುತ್ತದೆ. ಇದರಿಂದಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ಮಾಡಿಕೊಂಡು ನಿಮ್ಮಗಳಹೋರಟ ಮಾಡಿ, ನಾನು ನಿಮ್ಮ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತರುತ್ತೇನೆ. ದಯವಿಟ್ಟು ನಿಮ್ಮಮತದಾನದ ಹಕ್ಕನ್ನು ಚಲಾಯಿಸಿ ಎಂದು ಮನವಿ ಮಾಡಿದರು.
ಇದಕ್ಕೆ ಹೋರಾಟದಲ್ಲಿ ಭಾಗವಹಿಸಿದವರು ನಾವು ಯಾವುದೇ ಕಾರಣಕ್ಕೂ ನ್ಯಾಯ ಸಿಗುವರೆಗೂ ಚುನಾವಣೆಯ ಪ್ರಕ್ರಿಯೆಯಲ್ಲಿಭಾಗವಹಿಸುವುದಿಲ್ಲಚುನಾವಣೆಯನ್ನು ಬಹಿಷ್ಕರಿಸುವುದಾಗಿ ಎಂದುಒಮ್ಮತದ ಪ್ರತಿಕ್ರಿಯೆ ನೀಡಿದರು. ಮಾಜಿ ಗ್ರಾಪಂ ಆದ್ಯಕ್ಷ ನಾಗರಾಜು, ಗುರು ಲಿಂಗಯ್ಯ, ಜಿ.ಎಂ.ಶಿವಲಿಂಗಯ್ಯ, ದೇವರಹಳ್ಳಿ ಮಂಜುನಾಥ್,ಗಂಗಾಧರಪ್ಪ,ಮಂಜಣ್ಣ,ವೆಂಕಟೇಶ್, ಆನಂದ್,ಕೆ.ಆರ್.ಗೌಡ್, ಪ್ರಕಾಶ್ ಇತರರಿದ್ದರು.
ನಾಮಪತ್ರ ಸಲ್ಲಿಸದ ಗ್ರಾಮಸ್ಥರು : ಅಂಕಸಂದ್ರ ಗ್ರಾಪಂ, ಮಂಚಲದೊರೆ ಗ್ರಾಪಂ ಚುನಾವಣೆ ಸಂಬಂಧ ನಾಮಪತ್ರ ಸಲ್ಲಿಸುವುದಿಲ್ಲ ಎಂದು ಹೇಳಿದ್ದ ಗ್ರಾಮಸ್ಥರು ಶುಕ್ರವಾರ ಯಾವುದೇ ನಾಮಪತ್ರ ಸಲ್ಲಿಸಿಲ್ಲ. ಹೇಮೆ ನೀರು ಹರಿಸುವವರೆಗೂ ಚುನಾವಣೆ ಆಗಲು ಬಿಡವುದಿಲ್ಲ ಎಂದು ಸ್ಥಳೀಯರು ಪಟ್ಟು ಹಿಡಿದಿದ್ದು ಶಾಂತ ಹೋರಾಟ ಮುಂದುವರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tumkur: ತುಮಕೂರಲ್ಲಿ ದಲಿತ ಮಹಿಳೆ ಹ*ತ್ಯೆ: 21 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
Road Mishap: ಚಲಿಸುತ್ತಿದ್ದ ಲಾರಿಗೆ ಕಾರು ಢಿಕ್ಕಿ: ತಂದೆ-ಮಗು ಸ್ಥಳದಲ್ಲೇ ಸಾವು
Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್: ಸಚಿವ ಡಾ| ಜಿ. ಪರಮೇಶ್ವರ್
Kunigal: ಹಳ್ಳಕ್ಕೆ ಉರುಳಿ ಬಿದ್ದ ಟ್ರ್ಯಾಕ್ಟರ್… ತಂದೆ ಮಗ ಸಾವು
Kunigal: ಕೆಂಪನಹಳ್ಳಿ ಗ್ರಾಮದಲ್ಲಿ ಸರಣಿ ಕಳ್ಳತನ
MUST WATCH
ಹೊಸ ಸೇರ್ಪಡೆ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.