ಪುರದಮಠದ ಬಳಿ ತ್ಯಾಜ್ಯ ವಿಲೇವಾರಿ ಘಟಕ ಬೇಡ
Team Udayavani, Jan 25, 2022, 1:34 PM IST
ಹುಳಿಯಾರು: ಪಟ್ಟಣ ಪಂಚಾಯ್ತಿಯ ತ್ಯಾಜ್ಯ ವಿಲೇವಾರಿ ಘಟಕವನ್ನು ಪುರಾಣ ಪ್ರಸಿದ್ಧ ಕೆಂಕೆರೆಬಳಿಯ ಪುರದಮಠದ ಬಳಿ ನಿರ್ಮಾಣಮಾಡುವುದು ಬೇಡ ಎಂದು ಸ್ಥಳೀಯರು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಜೆ.ಸಿ.ಮಾಧುಸ್ವಾಮಿ ಅವರಿಗೆ ಮನವಿ ಮಾಡಿದರು.
ಪ್ರತಿ ಸೋಮವಾರ ವಿಶೇಷ ಪೂಜೆ ಸೇರಿದಂತೆಪುರದ ಮಠದಲ್ಲಿ ಅನೇಕ ಧಾರ್ಮಿಕ ಕೈಂಕರ್ಯನಡೆಯುತ್ತವೆ. ನೂರಾರು ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಅಲ್ಲದೆ, ಕಾರ್ತಿಕ ಮಾಸದಲ್ಲಿ ಸಾವಿರಾರು ಜನಸೇರುವ ಮುದ್ದೆ ಜಾತ್ರೆ ಸಹ ನಡೆಯುತ್ತದೆ.ಮುಖ್ಯವಾಗಿ ಈ ಭಾಗದಿಂದಲೇ ನೀರು ಸರಬರಾಜುಆಗುತ್ತದೆ. ಹಾಗಾಗಿ, ತ್ಯಾಜ್ಯ ವಿಲೇವಾರಿ ಘಟಕನಿರ್ಮಿಸಿದರೆ ಅಂತರ್ಜಲ ಕೆಡುತ್ತದೆ. ದುರ್ವಾಸನೆಯಿಂದ ದೇವಸ್ಥಾನಕ್ಕೆ ಬರುವ ಭಕ್ತರು ಸೇರಿದಂತೆಸ್ಥಳಿಯ ನಿವಾಸಿಗಳಿಗೆ ತೊಂದರೆ ಆಗುತ್ತದೆ ಎಂದು ಮನವಿ ಮಾಡಿದರು.
ಇದಕ್ಕೆ ಸಚಿವರು ಈ ತ್ಯಾಜ್ಯ ವಿಲೇವಾರಿ ಘಟಕಕ್ಕೆದ್ರವರೂಪದ ತ್ಯಾಜ್ಯ ತರುವುದಿಲ್ಲ. ಪ್ಲಾಸ್ಟಿಕ್, ಹಾಲಿನಕವರ್, ಸಾಲಿಡ್ ವೇಸ್ಟ್ ತರುತ್ತೇವೆ. ಅಲ್ಲದೆ ಸುತ್ತಲೂಶೆಡ್ ಕಟ್ಟಿ ಇವುಗಳನ್ನು ನೆಲದ ಮೇಲೆ ಹಾಕದೆ ಎನ್‌ಜಿಒ ಅಥವಾ ಸ್ತ್ರೀಶಕ್ತಿ ಸಂಘದವರಿಂದ ವಿಂಗಡಣೆಮಾಡಿ ಮಾರುತ್ತೇವೆ. ಇದರಿಂದ ಪಂಚಾಯ್ತಿಗೆಆದಾಯ ಬರುತ್ತದೆ. ಅಲ್ಲದೆ ಆಸ್ಪತ್ರೆಗೆ ಸಂಬಂಧಪಟ್ಟಯಾವುದೇ ತ್ಯಾಜ್ಯ ಇಲ್ಲಿ ತರುವುದಿಲ್ಲ. ಹಾಗಾಗಿ, ಆತಂಕ ಪಡುವ ಅಗತ್ಯವಿಲ್ಲ ಎಂದರು.
ಹುಳಿಯಾರು ಪಟ್ಟಣ ಪಂಚಾಯ್ತಿಯ ತ್ಯಾಜ್ಯ ಇಲ್ಲಿಗೆಬೇಡ. ಅಂತರ್ಜಲ ಕಲುಷಿತ ಆಗುತ್ತದೆ ಎಂದು ಮತ್ತೆ ತಕರಾರು ತೆಗೆದಾಗ ಸುತ್ತಮುತ್ತಲೂ ಯಾವುದೇತೊಂದರೆಯಾಗುವುದಿಲ್ಲ ಎಂದು ಈ ಜಾಗ ಆಯ್ಕೆ ಮಾಡಿದ್ದೇವೆ. ಹೀಗೆ ಅಭಿವೃದ್ಧಿ ಕಾಮಗಾರಿಗಳಿಗೆ ಅಡ್ಡಿಯುಂಟು ಮಾಡುತ್ತಿದ್ದರೆ ಕೆಲಸ ಮಾಡುವುದಾದರೂ ಹೇಗೆ ಎಂದು ಪ್ರಶ್ನಿಸಿದ ಅವರು, ಮತ್ತೂಮ್ಮೆ ಕೂಲಂಕಶವಾಗಿ ತಾವೆಲ್ಲರೂ ಹೇಳಿದ ಅಂಶಗಳ ಬಗ್ಗೆಅಧಿಕಾರಿಗಳಿಗೆ ವರದಿ ಪಡೆದು ಮುಂದಿನ ತೀರ್ಮಾನ ತೆಗೆದುಕೊಳ್ಳುವುದಾಗಿ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pavagada: ವಿಷ ಸೇವಿಸಿ ಗಂಡ-ಹೆಂಡತಿ ಆತ್ಮಹತ್ಯೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Drone Prathap: ನೀರಿಗೆ ಸ್ಫೋಟಕ ಎಸೆದ ಪ್ರಕರಣ; ಪ್ರತಾಪ್‌ಗೆ 10 ದಿನ ನ್ಯಾಯಾಂಗ ಬಂಧನ
Huliyar; ಕೆಮ್ಮಿನ ಔಷಧವೆಂದು ಭಾವಿಸಿ ಕೀಟನಾಶಕ ಸೇವಿಸಿದ ರೈತ ಸಾ*ವು
ಕೃಷಿ ಹೊಂಡದಲ್ಲಿ ಅದೇನೋ ಮಾಡಲು ಹೋಗಿ ಅರೆಸ್ಟ್ ಅದ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.