ಕೆರೆ ಕಟ್ಟೆ ಖಾಲಿ, ಭೂಗರ್ಭ ಸೇರಿದ ಅಂತರ್ಜಲ
Team Udayavani, Apr 13, 2021, 5:18 PM IST
ಕೊರಟಗೆರೆ: ಸರ್ಕಾರದ ಅಧಿಕೃತ ಆದೇಶದ ಎತ್ತಿನಹೊಳೆ ಕಾಮಗಾರಿ ಅಪೂರ್ಣವಾಗಿದ್ದು,ಗ್ರಾಮೀಣ ಪ್ರದೇಶದ ಹತ್ತಾರು ಕೆರೆಗಳಿಗೆ ಹರಿಯಬೇಕಾದ ಹೇಮಾವತಿ ನೀರು ಜೆಟ್ಟಿ ಅಗ್ರ ಹಾರ ಕೆರೆಗೆ ಮಾತ್ರ ಸೀಮಿತವಾಗಿದೆ. ಬಯಲುಸೀಮೆ ಪ್ರದೇಶದ ನೀರಾವರಿ ಯೋಜನೆಯಕನಸು ಇನ್ನು ಕನಸಾಗೆ ಉಳಿದಿದ್ದು, ಬರಗಾಲದಛಾಯೆಯಿಂದ ಕೆರೆ ಕಟ್ಟೆಗಳು ಖಾಲಿಯಾಗಿ ಅಂತರ್ಜಲಮಟ್ಟ ಪಾತಾಳಕ್ಕೆ ಕುಸಿದಿದೆ.
ಸಣ್ಣ ನೀರಾವರಿ ಇಲಾಖೆ 44 ಕೆರೆ, ಪಂಚಾಯತ್‌ರಾಜ್ ಇಲಾಖೆ 82 ಕೆರೆ ಮತ್ತು ಮೀನುಗಾರಿಕೆಇಲಾಖೆ 10 ಕೆರೆ ಸೇರಿ ಒಟ್ಟು 166 ಕೆರೆಗಳಲ್ಲಿನೀರು ಬಹುತೇಕ ಖಾಲಿಯಾಗಿದ್ದು, ರೈತಾಪಿವರ್ಗ ಮತ್ತು ಸರ್ಕಾರಿ ಸ್ವಾಮ್ಯದ ನೂರಾರುಕೊಳವೆಬಾವಿಗಳು ಬತ್ತಿ ಹೋಗಿವೆ. 24 ಗ್ರಾಪಂವ್ಯಾಪ್ತಿಯ ಕೊಳವೆಬಾವಿಯ ಅಂಕಿ-ಅಂಶವೇತಾಪಂ ಕಚೇರಿಯಿಂದ ಮಾಯವಾಗಿದೆ.
ನೂರಾರು ಕೆರೆಗಳು ಒತ್ತುವರಿ: ಕೊರಟಗೆರೆ ಕ್ಷೇತ್ರದ ನೀರಾವರಿ ಕನಸಿನ ಯೋಜನೆಯಾದ ಹೇಮಾವತಿ ನೀರು ಜೆಟ್ಟಿ ಅಗ್ರಹಾರಕೆರೆಗೆ ಸೀಮಿತವಾದರೆ, ಎತ್ತಿನಹೊಳೆ ಯೋಜನೆ ಕಾಮಗಾರಿಗೆ ಹತ್ತಾರು ಬಗೆಯ ವಿಘ್ನಗಳು ಪ್ರಾರಂಭವಾಗಿವೆ. ಕೆರೆ ಕಟ್ಟೆಗಳ ಪುನಶ್ಚೇತನ ಮತ್ತು ಅಭಿವೃದ್ಧಿ ಕಾಣದೇ ನೂರಾರು ಕೆರೆ ಒತ್ತುವರಿ ಮಾಯಾವಾಗಿವೆ. ಅಧಿಕಾರಿ ವರ್ಗ ಮೌನಕ್ಕೆ ಶರಣಾಗಿದ್ದಾರೆ.
20 ನೀರಿನ ಘಟಕ ಸ್ಥಗಿತ: ಗ್ರಾಮೀಣ ಕುಡಿ ಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಕೆಆರ್‌ಐಡಿಎಲ್, ಕೆಎಂಎಫ್,ಇತರೆ ಇಲಾಖೆಯಿಂದ 154 ಘಟಕ ನಿರ್ಮಾಣವಾಗಿವೆ. ಆದರೆ, ನೀರಿನ ಸಮಸ್ಯೆ-ನಿರ್ವಹಣೆ ಕೊರತೆಯಿಂದ20ಕ್ಕೂ ಅಧಿಕ ಕಡೆಗಳಲ್ಲಿ ಸ್ಥಗಿತವಾಗಿವೆ. ಇನ್ನೂ100 ಕ್ಕೂ ಅಧಿಕ ಗ್ರಾಮಗಳಲ್ಲಿ ಶುದ್ಧ ನೀರಿನ ಅವಶ್ಯಕತೆ ಇದೆ. ಮತ್ತೂಂದೆಡೆ ಅರಸಾಪುರ, ಅಕ್ಕಿರಾಂಪುರ, ಬೈಚಾಪುರ, ಹೊಳವನಹಳ್ಳಿ, ಬಿ.ಡಿ.ಪುರ, ಕ್ಯಾಮೇನಹಳ್ಳಿ, ದೊಡ್ಡಸಾಗ್ಗೆರೆ, ಚಿನ್ನಹಳ್ಳಿ, ಎಲೆರಾಂಪುರ, ವಜ್ಜನಕುರಿಕೆ, ತುಂಬಾಡಿ, ವಡ್ಡ ಗೆರೆ, ಪಾತಗಾನಹಳ್ಳಿ, ಹಂಚಿಹಳ್ಳಿ, ಕುರಂ ಕೋಟೆ, ಜೆಟ್ಟಿ ಅಗ್ರಹಾರ, ತೋವಿನಕೆರೆ, ಬುಕ್ಕಾಪಟ್ಟಣ,ಬೂದಗವಿ ಗ್ರಾಪಂನ 15ಕ್ಕೂ ಅಧಿಕ ಗ್ರಾಮಗಳಲ್ಲಿ ಈಗಾಗಲೇ ನೀರಿನ ಅಭಾವ ಸೃಷ್ಟಿಯಾಗಿದೆ.
ಕಾಡಿನಲ್ಲಿ ನೀರಿನ ವ್ಯವಸ್ಥೆ ಕಲ್ಪಿಸಿ :
ಸಿದ್ದರಬೆಟ್ಟ, ಚನ್ನರಾಯನದುರ್ಗ, ದೇವರಾಯನದುರ್ಗ, ಹಿರೇಬೆಟ್ಟದಅಕ್ಕ-ಪಕ್ಕದ ಕೆರೆಗಳಲ್ಲಿ ನೀರು ಖಾಲಿಯಾಗಿದೆ.ಕಾಡಿನಲ್ಲಿ ವಾಸಿಸುವ ಪ್ರಾಣಿ ಮತ್ತು ಪಕ್ಷಿಗಳಿಗೆನೀರಿನ ಅಭಾವ ಸೃಷ್ಟಿಯಾಗಿದೆ. ಹಾಗಾಗಿ ಪ್ರಾಣಿಗಳು ನಾಡಿಗೆ ಆಗಮಿಸಿ ಮನುಷ್ಯರ ಮೇಲೆ ದಾಳಿ ಮಾಡುವ ಮುನ್ನ ಅರಣ್ಯಇಲಾಖೆಯಿಂದ ಕಾಡಿನಲ್ಲಿಯೇ ನೀರಿನ ವ್ಯವಸ್ಥೆ ಕಲ್ಪಿಸಬೇಕಾದ ಅನಿವಾರ್ಯತೆ ಇದೆ.
ತಾಲೂಕಿನ ಬೈಚಾಪುರ ಗ್ರಾಪಂ, ಬಸವನಹಳ್ಳಿ, ಮಾವತ್ತೂರು ಗ್ರಾಪಂನ ಅಕ್ಕಪಕ್ಕದ ಗ್ರಾಮದಲ್ಲಿ ಹಾಗೂ ತೋವಿನಕೆರೆ ಗ್ರಾಪಂ ಕಬ್ಬಿಗೆರೆ, ಅಜ್ಜೇನಹಳ್ಳಿ, ಸೂರೇನಹಳ್ಳಿ ಗ್ರಾಮದಲ್ಲಿಕುಡಿಯುವ ನೀರಿನ ಸಮಸ್ಯೆ ತಲೆದೂರಿದೆ.ಇದಕ್ಕೆ ಪರ್ಯಾಯವಾಗಿ ಗ್ರಾಪಂನ15ನೇ ಹಣಕಾಸು ಯೋಜನೆಯಲ್ಲಿ ಶೇ.50 ರಷ್ಟು ಹಣವನ್ನು ಕುಡಿಯುವ ನೀರಿನ ವೆಚ್ಚ ಭರಿಸಲು ಆದೇಶಿಸಲಾಗಿದೆ. – ಶಿವಪ್ರಕಾಶ್, ತಾಪಂ ಇಒ
ಪ್ರತಿ ಶುಕ್ರವಾರ ನೀರಿನ ಸಮಸ್ಯೆ ಬಗ್ಗೆ ಟಾಸ್ಕ್ ಪೊರ್ಸ್ ಸಭೆ ನಡೆಯುತ್ತಿದ್ದು,ಶಾಸಕರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ35 ಲಕ್ಷ ರೂ. ಅನುದಾನಕ್ಕೆ ಜಿಪಂಗೆ ಬೇಡಿಕೆ ಸಲ್ಲಿಸಿದ್ದೇವೆ. ಕೊರಟಗೆರೆ ತಾಲೂಕಿನ 46 ಗ್ರಾಮದಲ್ಲಿ ನೀರಿನ ಸಮಸ್ಯೆ ಇದೆ. ಗ್ರಾಮದಲ್ಲಿ ನೀರಿನ ಸಮಸ್ಯೆ ಇದ್ದರೇ ದೂರು ಸಲ್ಲಿಸಬಹುದು. – ಗೋವಿಂದರಾಜು, ತಹಶೀಲಾ
– ಸಿದ್ದರಾಜು ಕೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.