ಗ್ರಾಮಗಳಲ್ಲಿ ಕಾಡುತ್ತಿದೆ ನೀರಿನ ಸಮಸ್ಯೆ
ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿಗೇ ಪರದಾಟ • ಮಳೆ ಅಭಾವದಿಂದ ಕೊಳವೆ ಬಾವಿಯಲ್ಲಿ ನೀರಿಲ್ಲ
Team Udayavani, May 31, 2019, 10:46 AM IST
ಟ್ಯಾಂಕರ್ ನೀರಿಗಾಗಿ ಸರದಿ ಸಾಲಿನಲ್ಲಿ ನಿಂತಿರುವ ಸಾರ್ವಜನಿಕರು.
ತುರುವೇಕೆರೆ: ತಾಲೂಕಿನಲ್ಲಿ ಸಮರ್ಪಕ ಮುಂಗಾರು ಮಳೆಯಾಗದೇ ಬರದ ಛಾಯೆ ಆವರಿಸಿದ್ದು, ತಾಲೂಕಿನ ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ.
ತಾಲೂಕಿನಲ್ಲಿ ದಬ್ಬೇಘಟ್ಟ, ಮಾಯಸಂದ್ರ, ಕಸಬಾ, ದಂಡಿನಶಿವರ ಹೋಬಳಿ ವ್ಯಾಪ್ತಿಯ ಸುಮಾರು 256 ಗ್ರಾಮಗಳನ್ನು ಹೊಂದಿದೆ. ಇದರಲ್ಲಿ ಅನೇಕ ಗ್ರಾಮ ಗಳಲ್ಲಿ ನೀರಿ ಪ್ರಮಾಣ ಕಡಿಮೆ ಇದೆ.
ಸುಮಾರು 12 ಗ್ರಾಮಗಳಲ್ಲಿ ಮಾತ್ರ ಹನಿ ಕುಡಿಯುವ ನೀರಿಗೂ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವು ದಿನಗಳಿಂದ ಹಿಂದೆಂದೂ ಕಾಣದಷ್ಟು ಬಿಸಿಲಿನ ತಾಪ ಹೆಚ್ಚಾ ಗಿದ್ದು, ಜನರು ಬಿಸಿಲಿನ ತಾಪಕ್ಕೆ ತತ್ತರಿಸಿ ಹೋಗಿದ್ದಾರೆ. ಮಳೆಯ ಅಭಾವ, ಕೊಳವೆ ಬಾವಿಗಳ ನೀರಿನ ತೊಂದರೆ ಯಿಂದಾಗಿ ತೆಂಗು, ಅಡಕೆ, ಬಾಳೆ ತೋಟಗಳು ಓಣಗಿ ಹೋಗುತ್ತಿದ್ದು, ರೈತರು ಮೂಕ ಪ್ರೇಕ್ಷಕರಾಗಿದ್ದಾರೆ.
ಕೆರೆ ಕಟ್ಟೆಗಳಲ್ಲಿ ನೀರು ಖಾಲಿ: ಪಟ್ಟಣಕ್ಕೆ ನೀರನ್ನು ಕಲ್ಪಿಸುವ ಮಲ್ಲಾಘಟ್ಟ ಕೆರೆ ಈಗಾಗಲೇ ಅರ್ಧ ಖಾಲಿ ಯಾಗಿದೆ. ಅದೇ ರೀತಿಯಲ್ಲಿ ಸಾರಿಗೆ ಹಳ್ಳಿ, ಅಮ್ಮಸಂದ್ರ, ಮಾಯಸಂದ್ರ, ಕೊಂಡಜ್ಜಿ, ತುರುವೇಕೆರೆ, ಸಂಪಿಗೆ ಸೇರಿದಂತೆ ತಾಲೂಕಿನ ಹಲವು ಕೆರೆಗಳಲ್ಲಿ ನೀರು ಖಾಲಿಯಾಗುತ್ತಿವೆ.
ಗ್ರಾಮಗಳಲ್ಲಿ ನೀರಿನ ಅಭಾವ: ತಾಲೂಕಿನ ಸುಮಾರು ಗ್ರಾಮಗಳಲ್ಲಿ ನೀರಿನ ಅಭಾವ ಕಾಡುತ್ತಿದೆ.
ಜನರು ಕುಡಿಯುಲು ಹನಿ ಹನಿ ನೀರಿಗೂ ಪರದಾಡು ವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಮಾಯಸಂದ್ರ ಹೋಬಳಿಯ ಭೈತರಹೊಸಹಳ್ಳಿ ಗ್ರಾಪಂ ದೊಡ್ಡಬೀರನ ಕೆರೆ, ಶೆಟ್ಟಿಗೊಂಡನಹಳ್ಳಿ ಗ್ರಾಪಂ ಚಟ್ಟನಹನಳ್ಳಿ, ನರಿಗೇಹಳ್ಳಿ, ಚನ್ನಿಂಗಯ್ಯನ ಪಾಳ್ಯ, ಮುತ್ತುಗದಹಳ್ಳಿ ಗ್ರಾಪಂ ಕಾಚೀಹಳ್ಳಿ, ಹೆಡ್ಡನಕಟ್ಟೆ, ಮಣಿಚಂಡೂರು ಗ್ರಾಪಂ ದೊಡ್ಡೇರಿಹಟ್ಟಿ, ಹನುಮಾಪುರ, ದಬ್ಬೇಘಟ್ಟ ಹೋಬಳಿಯ ಅರೆಮಲ್ಲೇನಹಳ್ಳಿ ಗ್ರಾಪಂ ರಂಗನಾಥ ಪುರ, ದಂಡಿನಶಿವರ ಹೋಬಳಿ ಕೊಂಡಜ್ಜಿ ಗ್ರಾಪಂನ ಡಿ.ಶೆಟ್ಟಿಹಳ್ಳಿ, ದೊಂ.ಗೊಲ್ಲರಹಟ್ಟಿ, ಹೊಸಕಟ್ಟೆ, ಸೊಪ್ಪನ ಹಳ್ಳಿ, ಹಡವನಹಳ್ಳಿ ಗ್ರಾಪಂ ಹೆಗ್ಗೆರೆ, ಕಸಬಾ ಹೋಬಳಿಯ ತಾಳಕೆರೆ ಗ್ರಾಪಂ ಚಂಡೂರು, ಲೋಕಮ್ಮನಹಳ್ಳಿ ಗ್ರಾಪಂ ಬಸವನಹಳ್ಳಿ, ಮೂನಿ ಯೂರು ಗ್ರಾಪಂನ ಮಾದಪಟ್ಟಣ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಕಾಡುತ್ತಿದೆ.
ತಾಲೂಕು ಆಡಳಿತದಿಂದ ನೀರಿನ ವ್ಯವಸ್ಥೆ: ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ತಾಲೂಕು ಆಡಳಿತ ಗ್ರಾಮ ಪಂಚಾಯ್ತಿ ವತಿಯಿಂದ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿದೆ.
ಕೆಲವು ಗ್ರಾಮಗಳಿಗೆ ಖಾಸಗಿ ಕೊಳವೆ ಬಾವಿಗಳ ನೆರವು ಪಡೆದು ನೀರು ಪೂರೈಸಲಾಗುತ್ತಿದೆ. ದಿನೇ ದಿನೆ ತಾಲೂಕಿನ ಹಲವು ಗ್ರಾಮಗಳಲ್ಲಿ ನೀರಿನ ಸಮಸ್ಯೆ ಹೆಚ್ಚಾಗುತ್ತಿದ್ದು, ತಾಲೂಕು ಆಡಳಿತ ಹರಸಾಹಸ ಪಡುವಂತಾಗಿದೆ.
48 ಹೊಸ ಕೊಳವೆ ಬಾವಿ: ಎನ್‌ಆರ್‌ಡಿಪಿ ಇಲಾಖೆ ಯಿಂದ ಕುಡಿಯುವ ನೀರಿಗಾಗಿ ತಾಲೂಕಿನಲ್ಲಿ 48 ಹೊಸ ಕೊಳವೆ ಬಾವಿ ಕೊರೆಸಲಾಗಿದೆ. ಅದರಲ್ಲಿ ದೊಂಬರನಹಳ್ಳಿ, ಡಿ.ಶಟ್ಟಿಹಳ್ಳಿ, ಬಳ್ಳೆಕಟ್ಟೆ, ಮಾಚೇನ ಹಳ್ಳಿ, ಹನುಮಾಪುರ ಗ್ರಾಮಗಳಲ್ಲಿನ 6 ಕೊಳವೆ ಬಾವಿಗಳು ವಿಫಲವಾಗಿದೆ.
79 ಶುದ್ಧ ನೀರಿನ ಘಟಕ: ತಾಲೂಕಿನಲ್ಲಿ ಕೆಆರ್‌ಡಿಎಲ್, ಕೆಎಂಎಫ್, ಎನ್‌ಆರ್‌ಡಿ ಸಂಸದರನಿಧಿಯಿಂದ ಸುಮಾರು 79 ಶುದ್ಧ ನೀರಿನ ಘಟಕ ಗಳನ್ನು ಪ್ರಾರಂಭಿಸಲಾಗಿದೆ.
ಅವುಗಳಲ್ಲಿ ಮಾಯ ಸಂದ್ರ, ಬಾಣಸಂದ್ರ, ಹರಿದಾಸನಹಳ್ಳಿ, ದೊಡ್ಡ ಗೊರಘಟ್ಟ, ಭೂವನಹಳ್ಳಿ ನೀರಿಲ್ಲದೇ ಸ್ಥಗಿತಗೊಂಡಿವೆ. ಗಿರಿನಹಳ್ಳಿ, ಮುದ್ದನಹಳ್ಳಿ ರಾಮಡಿಹಳ್ಳಿ ಇನ್ನೂ ಕೂಡ ಪ್ರಾರಂಭ ಮಾಡಿಲ್ಲ.
● ಎಸ್.ದೇವರಾಜ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್
Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
Kantara Chapter 1: ರಿಷಬ್ ಶೆಟ್ಟಿ ʼಕಾಂತಾರ ಚಾಪ್ಟರ್ -1ʼ ರಿಲೀಸ್ ಗೆ ಡೇಟ್ ಫಿಕ್ಸ್
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
Kinnal raj; ʼಸಿಂಹರೂಪಿಣಿʼಗೆ 25ರ ಸಂಭ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.