ದೇವರಾಯನದುರ್ಗ ಅರಣ್ಯದಲ್ಲೂ ಜಲಕ್ಕೆ ಬರ
ವಿನಾಶದ ಅಂಚಿನಲಿದೆ ನಾಮದ ಚಿಲುಮೆಯಲ್ಲಿದ್ದ ಔಷಧಿ ವನ
Team Udayavani, May 20, 2019, 4:12 PM IST
ತುಮಕೂರು: ಮಾನಸಿಕ ಶಾಂತಿ, ನೆಮ್ಮದಿ, ಆನಂದ ನೀಡುವ ಪ್ರಾಕೃತಿಕ ಸೊಬಗಿನ ದೇವರಾಯನ ದುರ್ಗದ ನಾಮದ ಚಿಲುಮೆಯ ಔಷಧಿ ವನ, ಜಿಂಕೆಯ ವನಗಳು ಈಗ ಮಳೆಯ ಕೊರತೆಯಿಂದ ಹಸಿರು ಮಾಯವಾಗಿ ಬೆಂಗಾಡಾಗುವ ಲಕ್ಷಣಗಳು ಗೋಚರವಾಗುತ್ತಿದೆ. ಈ ವೇಳೆ ಮುಂಗಾರು ಮಳೆ ಬಿದ್ದು, ಅರಣ್ಯದಲ್ಲಿ ಹಸಿರು ಹುಲ್ಲು ಕಾಣಬೇಕಿತ್ತು.
ಆದರೆ, ಈ ಅರಣ್ಯದಲ್ಲಿ ಎಲ್ಲಿ ನೋಡಿದರೂ ಒಣ ಹುಲ್ಲು ಕಾಣುತ್ತಿದೆ. ಇಲ್ಲಿರುವ ಪ್ರಾಣಿ, ಪಕ್ಷಿಗಳಿಗೆ ಆಹಾರ, ನೀರಿನ ಕೊರತೆ ಕಂಡುಬರುತ್ತಿದೆ. ಪ್ರವಾಸಿ ಕೇಂದ್ರದಲ್ಲಿಯೂ ತಂಪು ವಾತಾವರಣ ದೂರವಾಗಿ ಉಷ್ಣಾಂಶ ಏರತೊಡಗಿದೆ. ಜಿಲ್ಲೆಯ ಪ್ರಕೃತಿಧಾಮ ದೇವರಾಯನ ದುರ್ಗ, ನಾಮದ ಚಿಲುಮೆ ಇಲ್ಲಿಗೆ ಹೋದರೆ ಬೀಸುವ ತಂಗಾಳಿ, ತಂಪಾದವಾತಾವರಣ ಎಂತಹವರಿಗೂ ಸಂತಸ ಮೂಡಿ ಸುತ್ತಿರುವ ಪ್ರವಾಸಿ ಕೇಂದ್ರವಾಗಿವೆ. ಭಾನುವಾರ ಸೇರಿದಂತೆ ಎಲ್ಲಾರಜಾ ದಿನಗಳಲ್ಲಿ ಹಾಗೂ ಇತರೇ ದಿನಗಳಲ್ಲೂ ಜಿಲ್ಲೆಯ ವಿವಿಧ ಭಾಗಗಳಿಂದ ಅಲ್ಲದೇ ನಾಡಿನ ವಿವಿಧೆಡೆಯಿಂದ ಇಲ್ಲಿಗೆ ಬಂದು ಈ ತಂಪಾದ ಪ್ರದೇಶಗಳಲ್ಲಿ ಆನಂದವಾಗಿ ತಮ್ಮ ಕುಟುಂಬದ ಹಾಗೂ ಸ್ನೇಹಿತರೊಡನೆ ಸಂತಸಪಡುವ ಸ್ಥಳವಾಗಿದೆ.
ನಾಶವಾಗುತ್ತಿದೆ ಅರಣ್ಯ ಸಂಪತ್ತು: ಈ ಪ್ರದೇಶದಲ್ಲಿ ಹಲವಾರು ವರ್ಷಗಳ ಹಳೆ ಮರಗಳು ದೊಡ್ಡ ದೊಡ್ಡದಾಗಿ ಬೆಳದು ದೊಡ್ಡ ಅರಣ್ಯ ಪ್ರದೇಶವಾಗಿದೆ. ಇಲ್ಲಿ ಅಮೂಲ್ಯವಾದ ಸಸ್ಯ ಸಂಪತ್ತು ಎಲ್ಲವೂ ಇತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಈ ಎಲ್ಲಾ ಸಂಪತ್ತು ನಾಶವಾಗುತ್ತಿದೆ. ಈ ಪ್ರದೇಶದಲ್ಲಿದ್ದ ವನ್ಯ ಜೀವಿಗಳು ಇಂದು ಇಲ್ಲದಂತಾಗುತ್ತಿವೆ. ಈ ಪ್ರಾಕೃತಿಕ ಸಂಪತ್ತನ್ನು ಉಳಿಸುವತ್ತ ಅಧಿಕಾರಿಗಳು ಗಮನ ಹರಿಸದ ಹಿನ್ನೆಲೆಯಲ್ಲಿ ಐತಿಹಾಸಿಕ ತಾಣದ ಔಷಧಿ ವನವು ಸಮರ್ಪಕ ನಿರ್ವಹಣೆ ಇಲ್ಲದೇ ಒಣಗಿ ಹೋಗುತ್ತಿವೆ.ಜಿಲ್ಲೆಯಲ್ಲಿ ಪ್ರಾಕೃತಿಕ ಸಂಪತ್ತಿನ ತಾಣ ಎಂದೇ ಪ್ರಸಿದ್ಧಿ ಪಡೆದಿರುವ ದೇವರಾಯನ ದುರ್ಗದ ಶಿಖರಗಳು ಬೇಸಿಗೆಯಲ್ಲಿ ಜನರಿಗೆ ತಂಪನ್ನು ನೀಡುವ ಕೇಂದ್ರಗಳಾಗಿವೆ. ನಗರದಿಂದ 11 ಕಿ.ಮೀ ದೂರದ ಅಂತರದಲ್ಲಿರುವ ಈ ದೇವರಾಯನದುರ್ಗ ಅರಣ್ಯ ಪ್ರದೇಶ ಬಹಳ ಎತ್ತರವಾದ ಪ್ರದೇಶವಾಗಿದ್ದು, ಈ ಭಾಗದಲ್ಲಿ ಅಮೂಲ್ಯವಾದ ಗಿಡ ಮರಗಳು ಬೆಳೆದು ದೊಡ್ಡ ಅರಣ್ಯ ಪ್ರದೇಶವಾಗಿದೆ.
ಅಧಿಕಾರಿಗಳು ಮಾತ್ರ ಮೌನ:ಅನಾದಿ ಕಾಲದಿಂದಲೂ ಪ್ರಸಿದ್ಧ ಪ್ರಕೃತಿ ಧಾಮವೆಂದೇ ಹೆಸರು ಪಡೆದಿರುವ ಜೊತೆಗೆ ಇಲ್ಲಿ ಲಕ್ಷ್ಮೀ ನರಸಿಂಹಸ್ವಾಮಿ ನೆಲೆಸಿರುವಹಿನ್ನೆಲೆಯಲ್ಲಿ ಕನಕಗಿರಿ ಎಂದು ಪ್ರಸಿದ್ಧಿ ಪಡೆದಿದೆ. ಪ್ರಾಕೃತಿಕ ಹಾಗೂ ಧಾರ್ಮಿಕ ಕ್ಷೇತ್ರವಾಗಿರುವ ದೇವರಾಯನದುರ್ಗದಬೆಟ್ಟಗುಡ್ಡಗಳಲ್ಲಿ ಬೆಳೆದು ನಿಂತಿರುವ ಮರ ಗಿಡಗಳು ಇಂದು ವಿನಾಶದ ಅಂಚಿನತ್ತ ಹೋಗುತ್ತಿರುವುದನ್ನು ನೋಡಿದರೆ ಅರಣ್ಯ ಇಲಾಖೆ ಏನು ಮಾಡುತ್ತಿದೆ ಎಂಬ ಪ್ರಶ್ನೆ ಉದ್ಭವವಾಗುತ್ತದೆ. ದೇವರಾಯನ ದುರ್ಗಕ್ಕೆ ಹೊಂದಿಕೊಂಡಂತಿರುವ ನಾಮದ ಚಿಲುಮೆ ಇಲ್ಲಿದ್ದ ಸಿದ್ಧ ಸಂಜೀವಿನಿ ಔಷಧಿ ವನ ಇಂದು ವಿನಾಶದ ಅಂಚಿನತ್ತ ಬಂದರೂ ಅಧಿಕಾರಿಗಳು ಮಾತ್ರ ಮೌನವಹಿಸಿದ್ದಾರೆ.
ಪೌರಾಣಿಕ ಹಿನ್ನೆಲೆಯಿರುವ ನಾಮದ ಚಿಲುಮೆಯು ರಾಮಾಯಣ ಕಾಲದಿಂದಲೂ ಪ್ರಸಿದ್ಧಿ ಪಡೆದಿರುವ ಕ್ಷೇತ್ರವಾಗಿದೆ. ಒಮ್ಮೆ ಶ್ರೀರಾಮಚಂದ್ರ ತಮ್ಮ ಲಕ್ಷ್ಮಣ, ಪತ್ನಿ ಸೀತೆ ಸಮೇತವಾಗಿ ದೇವರಾಯನ ದುರ್ಗ ತಪ್ಪಲಿಗೆ ಬಂದ ಸಂದರ್ಭದಲ್ಲಿ ನೀರುದೊರಕದ ಕಾರಣ ತನ್ನ ಬಾಣದಿಂದ ಬಂಡೆಗೆ ಬಿಲ್ಲು ಹೊಡೆದು ನೀರು ತೆಗೆದ ಹಿನ್ನೆಲೆಯಲ್ಲಿ ನಾಮದಚಿಲುಮೆ ಪ್ರಸಿದ್ಧಿ ಪಡೆದಿದೆ ಎನ್ನುವ ಇತಿಹಾಸ ಹೊಂದಿರುವ ಈ ಕ್ಷೇತ್ರ ಈ ಚಿಲುಮೆಯಲ್ಲಿ ಸದಾ ನೀರು ಇರುತ್ತದೆ ಎನ್ನುವ ಪ್ರತೀತಿ ಇದೆ.
ಬೆಂಕಿಯಿಂದ ಮರ, ಗಿಡಗಳು ನಾಶ: ಇಲ್ಲಿಗೆ ಪ್ರಯಾಣಿಕರು ಬಂದು ತಣ್ಣನೆಯ ವಾತಾವರಣದಲ್ಲಿವಿಶ್ರಾಂತಿ ಪಡೆದು ಹೋಗುವ ಪವಿತ್ರವಾದ ಪ್ರಾಕೃತಿಕ ಕ್ಷೇತ್ರದಲ್ಲಿ ಇಂದು ಮರಗಳ್ಳರ ಹಾವಳಿಗೆ ಸಿಲುಕಿ ಮರಗಳು ಇಂದು ದಿನದಿಂದ ಅಳಿವಿನ ಅಂಚಿಗೆ ತಲುಪಿವೆ. ಇದರ ನಡುವೆ ಆಗಿಂದ್ದಾಗೆ ಬೆಟ್ಟಗುಡ್ಡ ಗಳಿಗೆಬೀಳುವ ಬೆಂಕಿಯಿಂದಾಗಿ ಅಪಾರ ಪ್ರಮಾಣದ ಮರಗಿಡಗಳು ನಾಶವಾಗುತ್ತಿವೆ. ಈ ಪ್ರದೇಶದಲ್ಲಿರುವಅರಣ್ಯ ಸಂಪತ್ತು ನಾಶವಾಗುತ್ತಿರುವಂತೆಯೇ ಈ ಅರಣ್ಯದಲ್ಲಿದ್ದ ವನ್ಯ ಜೀವಿಗಳು ನಾಶವಾಗುತ್ತಿದ್ದು,ಸುಂದರ ಪ್ರಾಕೃತಿಕ ಧಾಮ ವಿನಾಶದ ಅಂಚಿನತ್ತ ತಲುಪುತ್ತಲಿದೆ. ಈ ಪ್ರದೇಶದಲ್ಲಿರುವ ಅತ್ಯಮೂಲ್ಯವಾದ ಗಿಡ, ಮರಗಳನ್ನು ಮರಗಳ್ಳರು ಹೇರಳವಾಗಿ ದೋಚು ತ್ತಿದ್ದರೂ ಅರಣ್ಯ ಇಲಾಖೆ ಈ ಬಗ್ಗೆ ಯಾವುದೇ ರೀತಿಯ ಗಮನ ಹರಿಸದೇ ಕಣ್ಣುಮುಚ್ಚಿ ಕುಳಿತಿದೆ.
ಸರ್ಕಾರ ಯಾವುದೇ ರೀತಿಯ ಸೌಲಭ್ಯ ಕಲ್ಪಿಸಿಲ್ಲ: ನಾಮದ ಚಿಲುಮೆಯಲ್ಲಿ ಬೆಳೆಸಿದ ಸಿದ್ಧ ಸಂಜೀವಿನಿ ಔಷಧಿ ವನ ಅನೇಕ ಜನರಿಗೆ ಔಷಧಿ ಗಿಡಗಳಿಂದ ಬಹಳ ರೀತಿಯ ಅನುಕೂಲಗಳು ಆಗುತ್ತಿದ್ದವು.ಆದರೆ, ಇತ್ತೀಚಿನ ದಿನಗಳಲ್ಲಿ ಈ ಗಿಡಗಳ ಆರೈಕೆ ಇಲ್ಲದೇ ಸಿದ್ಧ ಸಂಜೀವಿನಿ ಔಷಧಿ ಗಿಡಗಳು ಒಣಗುತ್ತಿವೆ. ಈ ಕ್ಷೇತ್ರದಲ್ಲಿ ಬರುವ ಪ್ರಯಾಣಿಕರಿಗೆ ಯಾವುದೇ ರೀತಿಯ ಸೌಲಭ್ಯಗಳನ್ನು ಸರ್ಕಾರ ಕಲ್ಪಿಸಿಕೊಟ್ಟಿಲ್ಲ. ಕುಡಿಯುವ ನೀರಿಗೂ ಇಲ್ಲಿ ತಾತ್ವಾರ ಇದೆ. ಮಳೆ ಬರದ ಹಿನ್ನೆಲೆಯಲ್ಲಿ ಸುಂದರ ತಾಣ ಇಲ್ಲದಾಗುತ್ತಿದೆ.
ತಂಪಾದ ಗಾಳಿಯ ಬದಲು ಬಿಸಿ ಗಾಳಿ ಈ ಪ್ರಕೃತಿ ಧಾಮದಲ್ಲಿ ಬರುತ್ತಿದೆ. ಸರ್ಕಾರ ಈ ದೇವರಾನದುರ್ಗ, ನಾಮದಚಿಲುಮೆ ಅಭಿವೃದ್ಧಿ ಪಡಿಸಬೇಕು ಎಂದು ಹೇಳುತ್ತಿದೆ. ಆದರೆ, ಈವರೆಗೂ ಇದರ ಅಭಿವೃದ್ಧಿ ಕಂಡಿಲ್ಲ. ಸುಡುಬಿಸಿಲಿನ ಬೇಸಿಗೆಯಲ್ಲಿ ಈ ಅರಣ್ಯ ಪ್ರದೇಶದಲ್ಲಿ ಕುಡಿಯುವ ನೀರಿಲ್ಲದೇ ಪ್ರಾಣಿ, ಪಕ್ಷಗಳು ಕಂಗಾಲಾಗಿವೆ. ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಿ ದೇವರಾಯನದುರ್ಗ ಅರಣ್ಯ ಪ್ರದೇಶವನ್ನು ಉಳಿಸುವತ್ತ ಮುಂದಾಗಬೇಕಾಗಿದೆ.
● ಚಿ.ನಿ. ಪುರುಷೋತ್ತಮ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pavagada: ವಿಷ ಸೇವಿಸಿ ಗಂಡ-ಹೆಂಡತಿ ಆತ್ಮಹತ್ಯೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Drone Prathap: ನೀರಿಗೆ ಸ್ಫೋಟಕ ಎಸೆದ ಪ್ರಕರಣ; ಪ್ರತಾಪ್‌ಗೆ 10 ದಿನ ನ್ಯಾಯಾಂಗ ಬಂಧನ
Huliyar; ಕೆಮ್ಮಿನ ಔಷಧವೆಂದು ಭಾವಿಸಿ ಕೀಟನಾಶಕ ಸೇವಿಸಿದ ರೈತ ಸಾ*ವು
ಕೃಷಿ ಹೊಂಡದಲ್ಲಿ ಅದೇನೋ ಮಾಡಲು ಹೋಗಿ ಅರೆಸ್ಟ್ ಅದ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್ ರನ್ ಆರಂಭಿಸಿದ ಸಿ.ಟಿ.ರವಿ
Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.