ನೀರಾವರಿ ಯೋಜನೆಗೆ ಗೌರಿಶಂಕರ್ ಅಡ್ಡಗಾಲು
ಏತ ನೀರಾವರಿ ಯೋಜನೆ ಅವೈಜ್ಞಾನಿಕ ಎಂಬ ಹೇಳಿಕೆ ಕುಣಿಯಲಾರದವನಿಗೆ ನೆಲ ಡೊಂಕು ಎಂಬಂತಾಗಿದೆ: ಸುರೇಶ್‌ಗೌಡ ವಾಗ್ದಾಳಿ
Team Udayavani, Oct 24, 2021, 4:26 PM IST
ತುಮಕೂರು: ಗ್ರಾಮಾಂತರ ಕ್ಷೇತ್ರದ ಹೆಬ್ಬೂರು- ಗೂಳೂರು ಹೋಬಳಿಗಳ ಏತ ನೀರಾವರಿ ಯೋಜನೆ ಅವೈಜ್ಞಾನಿಕ ಎಂದು ಹೇಳಿಕೆ ನೀಡಿರುವ ಶಾಸಕ ಡಿ.ಸಿ. ಗೌರಿಶಂಕರ್ ವಿರುದ್ಧ ಹರಿಹಾಯ್ದಿರುವ ಮಾಜಿ ಶಾಸಕ ಬಿ.ಸುರೇಶ್‌ಗೌಡ, “ಕೆರೆಗೆ ಬರಬೇಕಾಗಿರುವ ನೀರು ಹರಿಸಿಕೊಳ್ಳಲು ತಾಕತ್ತು ಇಲ್ಲದೆ ಕ್ಷೇತ್ರಕ್ಕೆ ಕಷ್ಟ ಬಿದ್ದು ದಶಕ ಗಳ ಕಾಲ ಹೋರಾಟ ನಡೆಸಿ ಅನುಷ್ಠಾನ ಗೊಳಿಸಿದ ನೀರಾವರಿ ಯೋಜನೆಗೆ ಅಡ್ಡಗಾಲು ಹಾಕಲು ಹೊರಟಿ ದ್ದಾರೆ’ ಎಂದು ವಾಗ್ಧಾಳಿ ನಡೆಸಿದರು.
ನಗರದಲ್ಲಿ ಶನಿವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಏತ ನೀರಾವರಿ ಯೋಜನೆ ಅವೈಜ್ಞಾನಿಕ ಎಂದು ಹೇಳಿರುವುದನ್ನು ಗಮನಿಸಿದರೆ ಕುಣಿಯಲಾರದವನಿಗೆ ನೆಲ ಡೊಂಕು ಎಂಬಂತಾಗಿದೆ. ಶಾಸಕ ಗೌರಿಶಂಕರ್‌ಗೆ ಇರುವ ನೀರನ್ನು ಹರಿಸಿಕೊಳ್ಳಲು ಶಕ್ತಿ ಇಲ್ಲ. ನರ ಸತ್ತು ಹೋಗಿದೆ ಎಂದು ಹರಿಹಾಯ್ದರು. ಹೆಬ್ಬೂರು-ಗೂಳೂರು ಏತ ನೀರಾವರಿ ಯೋಜನೆ ಕುಡಿಯುವ ನೀರಿಗಾಗಿ ಅನುಷ್ಠಾನಗೊಂಡಿದೆ. ಕೂಡಲೇ ಅಗತ್ಯ ಇರುವಷ್ಟು ನೀರನ್ನು ಹರಿಸಬೇಕು.
ಎಲ್ಲೋ ಇದ್ದ ವ್ಯಕ್ತಿಗೆ ಹೇಮಾವತಿ ನದಿ ನೀರಿಗಾಗಿ ಇಲ್ಲಿನ ಜನರು ಮಾಡಿರುವ ಹೋರಾಟ, ಪೊಲೀಸ ರಿಂದ ತಿಂದಿರುವ ಏಟುಗಳು ಹೇಗೆ ಗೊತ್ತಾಗಬೇಕು. ಸುಭಿಕ್ಷೆಯ ಕಾಲದಲ್ಲೂ ಗ್ರಾಮಾಂತರ ಕ್ಷೇತ್ರಕ್ಕೆ ಹಂಚಿಕೆ ಯಾಗಿರುವಷ್ಟು ಹೇಮಾವತಿ ನೀರನ್ನು ಬಿಡುವಂತೆ ಕೇಳದಷ್ಟು ತಾಕತ್ತು ಇಲ್ಲದ ಶಾಸಕರಾಗಿದ್ದಾರೆ. ನಾನು ಅಧಿಕಾರದಲ್ಲಿದ್ದರೆ ರಕ್ತ ಕೊಟ್ಟಾದರೂ ನೀರು ಹರಿಸುತ್ತಿದ್ದೆ ಎಂದರು.
ನೀರು ಹರಿದಿದೆ: ಗೊರೂರು ಜಲಾಶಯದಿಂದ ಜಿಲ್ಲೆಗೆ 2011-12 ರಲ್ಲಿ 19.594 ಟಿಎಂಸಿ, 2012-13 ರಲ್ಲಿ 12.975 ಟಿಎಂಸಿ, 2013-14 ರಲ್ಲಿ 21.127 ಟಿಎಂಸಿ, 2014-15 ರಲ್ಲಿ 20.401 ಟಿಎಂಸಿ, 2015- 16 ರಲ್ಲಿ 10.896 ಟಿಎಂಸಿ, 2016-17 ರಲ್ಲಿ 3.8534 ಟಿಎಂಸಿ, 2017-18 ರಲ್ಲಿ 8.856 ಟಿಎಂಸಿ, 2018- 19 ರಲ್ಲಿ 23.137 ಟಿಎಂಸಿ, 2019-20 ರಲ್ಲಿ 21.358 ಟಿಎಂಸಿ, 2020-21 ರಲ್ಲಿ 23.495 ಟಿಎಂಸಿ ಹಾಗೂ 2021-22 ರಲ್ಲಿ 12.086 ಟಿಎಂಸಿ ನೀರು ಹರಿದಿದೆ. 2016-17 ರಲ್ಲಿ ಬರಗಾಲ ಇದ್ದ ಕಾರಣ ಕೇವಲ 3 ಟಿಎಂಸಿ ನೀರು ಮಾತ್ರ ಜಿಲ್ಲೆಗೆ ಹರಿದಿದೆ. ಇಂತಹ ಪರಿಸ್ಥಿತಿಯಲ್ಲಿ ಕ್ಷೇತ್ರಕ್ಕೆ ನೀರು ಹರಿಸದಿರುವುದು ಶಾಸಕರ ಹೊಣಗೇಡಿತನ ತೋರಿಸುತ್ತದೆ ಎಂದರು.
ತಿಳಿದು ಮಾತನಾಡಲಿ: ಗ್ರಾಮಾಂತರ ಕ್ಷೇತ್ರಕ್ಕೆ ನಾನು ಶಾಸಕನಾಗಿದ್ದಾಗ ನೀರೇ ಹರಿಸಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ನಾನು 10 ವರ್ಷ ಶಾಸಕನಾಗಿದ್ದಾಗ 8 ವರ್ಷ ನಿರಂತರವಾಗಿ ನೀರು ಹರಿಸಿದ್ದೇನೆ. 2016- 17, 2017-18 ರಲ್ಲಿ ಬರಗಾಲ ಎದುರಾಗಿದ್ದರಿಂದ ಹೇಮಾವತಿ ಜಲಾಶಯದಲ್ಲಿ ನೀರು ಎಷ್ಟಿತ್ತು ಎಂಬುದನ್ನು ಮೊದಲು ತಿಳಿದುಕೊಂಡು ಮಾಹಿತಿ ನೀಡಬೇಕಿತ್ತು. ಆ ಬಗ್ಗೆ ತಿಳಿದುಕೊಳ್ಳುವ ವ್ಯವದಾನವೂ ಇಲ್ಲದಿದ್ದರೇ ಹೇಗೆ ಎಂದು ಅವರು ಪ್ರಶ್ನಿಸಿದರು.
ಇದನ್ನೂ ಓದಿ:- ಹಗ್ಗ-ಸೀಮೆ ಎಣ್ಣೆ ಹಿಡಿದು ಗ್ರಾಮಸ್ಥರ ಪ್ರತಿಭಟನೆ
ಕೆರೆಗಳನ್ನು ನೋಡಿದರೆ ನೋವಾಗುತ್ತಿದೆ: ಶಾಸಕ ಗೌರಿಶಂಕರ್‌ಗೆ ಹೆಬ್ಬೂರು- ಗೂಳೂರು ಏತ ನೀರಾ ವರಿ ಮೂಲ ಯೋಜನೆ ಬಗ್ಗೆಯೇ ಅರಿವಿಲ್ಲ. ಆದರೆ ನಾವು ಈ ಯೋಜನೆ ಅನುಷ್ಠಾನವಾಗುವವರೆಗೂ ನಿದ್ದೆ ಮಾಡಿಲ್ಲ. ಪ್ರತಿ ಹಂತದ ಮಾಹಿತಿಯೂ ತಮಗೆ ಗೊತ್ತಿದೆ. ಪಕ್ಕದ ಎಲ್ಲ ಕ್ಷೇತ್ರಗಳಲ್ಲೂ ಎಲ್ಲ ಕೆರೆಗಳು ಹೇಮಾವತಿ ನೀರಿನಿಂದ ತುಂಬಿ ಕಂಗೊಳಿಸುತ್ತಿವೆ. ನಮ್ಮ ಕ್ಷೇತ್ರದ ಕೆರೆಗಳು ಖಾಲಿ ಇರುವುದನ್ನು ನೋಡಿದರೆ ನೋವಾಗುತ್ತದೆ ಎಂದರು.
ದುರುದ್ದೇಶ: ಹೇಮಾವತಿ ನದಿ ನೀರು ಕ್ಷೇತ್ರಕ್ಕೆ ಹರಿ ಯುವುದು ಅವರಿಗೆ ಬೇಕಾಗಿಲ್ಲ. ಹೀಗಾಗಿಯೇ ಯೋಜನೆಯೇ ಅವೈಜ್ಞಾನಿಕ ಎಂದು ಹೇಳುವ ಮೂಲಕ ಕ್ಷೇತ್ರದ ಜನರ ದಿಕ್ಕು ತಪ್ಪಿಸಿ ಮಕ್ಮಾಲ್ ಟೋಪಿ ಹಾಕುತ್ತಿದ್ದಾರೆ. ಯೋಜನೆಯನ್ನು ಹಾಳು ಮಾಡುವ ದುರುದ್ದೇಶದಿಂದಲೇ ಈ ರೀತಿ ಹೇಳಿಕೆ ನೀಡುತ್ತಿದ್ದಾರೆಂದರು. ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ಉಮೇಶ್ ಗೌಡ, ಮುಖಂಡ ರಾದ ನರಸಿಂಹಮೂರ್ತಿ, ಗೂಳೂ ರು ಶಿವ ಕುಮಾರ್, ವಿಜಯಕುಮಾರ್, ಸಿದ್ದೇಗೌಡ, ಪ್ರಭಾಕರ್, ಅರಕೆರೆ ರವೀಶ್ ಮತ್ತಿತರರಿದ್ದರು.
“ಗ್ರಾಮಾಂತರ ಕ್ಷೇತ್ರಕ್ಕೆ ಸಮರ್ಪಕವಾಗಿ ಬರಬೇಕಾಗಿರುವ ಹೇಮಾವತಿ ನೀರು ಬಿಡಿಸಲು ತಾಕತ್ ಇಲ್ಲದಿದ್ದರೆ ರಾಜೀನಾಮೆ ನೀಡಲಿ. ನೀರು ಬಿಡಿಸುವ ಯೋಗ್ಯತೆ ಇಲ್ಲದವರಿಗೆ ಶಾಸಕ ಸ್ಥಾನ ಏಕೆ ಬೇಕು. ಶಾಸಕರು ಮೊದಲು ಕ್ಷೇತ್ರಕ್ಕೆ ನೀರು ಹರಿಸಿಕೊಳ್ಳುವತ್ತ ಚಿತ್ತ ಹರಿಸಲಿ. ಕ್ಷೇತ್ರಕ್ಕೆ ನೀರು ಹರಿಸಬೇಕು ಎಂಬುದನ್ನು ನಮ್ಮ ಉದ್ದೇಶವಷ್ಟೆ.” – ಬಿ.ಸುರೇಶ್ಗೌಡ, ಮಾಜಿ ಶಾಸಕ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Koratagere: ಗೃಹ ಸಚಿವರ ಸ್ವ ಕ್ಷೇತ್ರದಲ್ಲೇ ಮಲ ಹೊತ್ತ 10 ವರ್ಷದ ಬಾಲಕ!
Kunigal: ಬೈಕ್, ಕ್ಯಾಂಟರ್ ಮುಖಾಮುಖಿ ಢಿಕ್ಕಿ; ಇಬ್ಬರು ಸ್ಥಳದಲ್ಲೇ ಮೃತ್ಯು
Gubbi: ಮೀಟರ್ ಬಡ್ಡಿ ದಂಧೆಕೋರರ ಕಿರುಕುಳಕ್ಕೆ ಬೇಸತ್ತು ಪೌರ ಕಾರ್ಮಿಕ ಆತ್ಮಹತ್ಯೆ
Koratagere: ವೃದ್ದೆ ಮೇಲೆ ಕೆಎಸ್ಆರ್ಟಿಸಿ ಬಸ್ ಹರಿದು ಸಾವು
Hunasur: ವರದಕ್ಷಿಣೆ ಕಿರುಕುಳಕ್ಕೆ ಬಲಿಯಾದ ತಿಪಟೂರಿನ ಮಹಿಳೆ!
MUST WATCH
ಹೊಸ ಸೇರ್ಪಡೆ
By Election: ಯೋಗೇಶ್ವರ್ ನಿಂದಿಸಿದ್ದ ಡಿ.ಕೆ.ಸುರೇಶ್ ಆಡಿಯೋ ಎಚ್‌ಡಿಕೆ ಬಿಡುಗಡೆ
By Election: ನಾಗೇಂದ್ರ, ಜಮೀರ್, ಡಿಕೆಶಿ ಮೇಲೆ ಚುನಾವಣಾ ಆಯೋಗ ಕಣ್ಣಿಡಲಿ: ಡಿವಿಎಸ್
Waqf: ಮುಸ್ಲಿಮರ ಗುರಿ ಮಾಡುವುದು ಬಿಟ್ಟರೆ ಬಿಜೆಪಿಗೆ ಬೇರೇನೂ ಇಲ್ಲ: ಸಚಿವ ದಿನೇಶ್
Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ
Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್ ಅನುಮತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.