ಒಡೆಯರ್ ಉತ್ತೇಜನದಿಂದ ಪರಿಷತ್ ಸ್ಥಾಪನೆ: ಮಹೇಂದ್ರಪ್ಪ
Team Udayavani, May 7, 2019, 5:30 PM IST
ಶಿರಾದ ಕನ್ನಡ ಭವನದಲ್ಲಿ ಏರ್ಪಡಿಸಲಾಗಿದ್ದ ಕಸಾಪ ಸಂಸ್ಥಾಪನಾ ದಿನಾಚರಣೆ ಯನ್ನು ನಿ.ಪ್ರಾಂಶುಪಾಲ ಪಿ.ಎಚ್.ಮಹೇಂದ್ರಪ್ಪ ಉದ್ಘಾಟಿಸಿದರು. ಪ್ರೊ.ಹನುಮಂತರಾಯಪ್ಪ, ಡಾ.ಚಿಕ್ಕಣ್ಣ ಯಣ್ಣೆಕಟ್ಟೆ, ಕೃಷ್ಣಮೂರ್ತಿ ಇತರರಿದ್ದರು.
ಶಿರಾ: ಕನ್ನಡ ಭಾಷೆಯ ಜೊತೆಗೆ ಕನ್ನಡಿಗರ ಜನ ಜೀವನವನ್ನು ಒಂದುಗೂಡಿಸುವ ಕೆಲಸ ವನ್ನು ಪರಿಷತ್ತು ಮಾಡುತ್ತಿದೆ. ಸರ್. ಎಂ. ವಿಶ್ವೇಶ್ವರಯ್ಯನವರು, ನಾಲ್ವಡಿ ಕೃಷ್ಣರಾಜ ಒಡೆಯರ ಉತ್ತೇಜನದಿಂದ ಈ ಪರಿಷತ್ತು ಸ್ಥಾಪನೆಯಾಗಿದೆ ಎಂದು ಆಧ್ಯಾತ್ಮ ಚಿಂತಕರಾದ ಪಿ.ಹೆಚ್. ಮಹೇಂದ್ರಪ್ಪ ತಿಳಿಸಿದರು.
ನಗರದ ಕನ್ನಡಭವನದಲ್ಲಿ ಸಂಸ್ಥಾಪನ ದಿನಾಚರಣೆಯ ಕಾರ್ಯಕ್ರಮದ ಅಧ್ಯಕ್ಷತೆ ವಹಹಿಸಿದ್ದ ತಾಲೂಕು ಕಸಾಪ ಅಧ್ಯಕ್ಷರಾದ ಡಾ.ಎನ್. ನಂದೀಶ್ವರ್ ಮಾತನಾಡಿ, ಕನ್ನಡ ಭಾಷೆ ಶ್ರೀಮಂತವಾಗಿದೆ. ಇಂದಿನ ಎಲ್ಲಾ ಕನ್ನಡ ಸಂಸ್ಥೆಗಳ ರಚನೆಗೆ ಪರಿಷತ್ತು ಒಂದಿಲ್ಲೊಂದು ಕಾರಣದಿಂದ ಮಾತೃ ಸ್ಥಾನ ದಲ್ಲಿದೆ. 105 ವರ್ಷ ಕಂಡಿರುವ ಪರಿಷತ್ತನ್ನು ಕನ್ನಡಿಗರೆಲ್ಲಾ ಸದಸ್ಯತ್ವ ಪಡೆದು ಈ ಸಂಸ್ಥೆಯನ್ನು ಹೆಮ್ಮರವಾಗಿ ಬೆಳಸಬೇಕು ಎಂದು ಹೇಳಿದರು.
ಬ್ರಿಟಿಷರು ಭಾರತಕ್ಕೆ ಆಡಳಿತ ನೀಡು ವುದರ ಜತೆಗೆ ಚರಿತ್ರೆ ಬರೆದರು, ಶಾಸನ ಗಳನ್ನು ಸಂಗ್ರಹಿಸಿ, ಅವುಗಳನ್ನು ಪ್ರಕಟಿ ಸಿದರು, ನಿಘಂಟುಗಳನ್ನು ರಚಿಸಿ ಕನ್ನಡವನ್ನು ಭಾಷೆಯನ್ನು ಉಳಿಸಲು ಶ್ರಮಿಸಿದವರು ಎಂದು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರಾದ ಪ್ರೊ. ಕೆ. ಹನುಮತರಾಯಪ್ಪನವರು ತಿಳಿಸಿದರು. ಮುಖ್ಯ ಅತಿಥಿಯಾಗಿ ಹೋರಾಟಗಾರ ಕಸವನಹಳ್ಳಿ ರಮೇಶ್ ಮಾತನಾಡಿ, ವಿಜ್ಞಾನ ಪದವೀಧರನಾದರೂ, ಕನ್ನಡ ಸಾಹಿತ್ಯ ಓದು ವುದರಿಂದ ಸಿಗುವ ಸಂತೋಷ, ಮತ್ತೆ ಯಾವುದರಿಂದಲೂ ನನಗೆ ಸಿಗುವುದಿಲ್ಲ. ಪ್ರತಿ ದಿನ ಓದದೆ ನನಗೆ ಮಗಲು ಸಾಧ್ಯ ವಾಗುವುದಿಲ್ಲ. ನಾನೊಬ್ಬನೇ ಓದಿ ಜ್ಞಾನಿಯಾದರೇ ಸಾಲದು, ನನ್ನ ಜನರು ಓದಲಿ ಎಂಬ ಉದ್ದೇಶದಿಂದ ನನ್ನ ಮನೆಯ ಗ್ರಂಥಾಲಯವನ್ನು, ನಮ್ಮೂರ ಗ್ರಂಥಾಲಯ ಎಂಬ ಹೆಸರಿಟ್ಟು ಪ್ರಾರಂಭಿಸಿದ್ದೇನೆ ಎಂದು ಹೇಳಿದರು.
ಪ್ರಾಧ್ಯಾಪಕರಾದ ಡಾ. ಚಿಕ್ಕಣ್ಣ ಯಣ್ಣೆಕಟ್ಟೆ ಕನ್ನಡ ಸಾಹಿತ್ಯ ಪರಿಷತ್ತು ನಡೆದುಬಂದ ಹಾದಿಯ ಬಗ್ಗೆ ವಿಶೇಷ ಉಪನ್ಯಾಸವನ್ನು ನೀಡಿದರು. ಸಾಹಿತಿಗಳಾದ ಡಿ.ಎಸ್. ಕೃಷ್ಣ ಮೂರ್ತಿ, ನಿಕಟ ಪೂರ್ವ ಅಧ್ಯಕ್ಷರಾದ ವೈ. ನರೇಶ್ ಬಾಬು, ಸಿರಾ ವೆಂಕಟೇಶ್, ಬಡೇನ ಹಳ್ಳಿ ಗೋವಿಂದಯ್ಯ ಹುಣಸೇಹಳ್ಳಿ ರಾಜಣ್ಣ ನವರು, ಪರಿಷತ್ತಿನ ಕಾರ್ಯದರ್ಶಿಯಾದ ದ್ವಾರನಕುಂಟೆ ಲಕ್ಷ್ಮಣ್. ಮದ್ದಕ್ಕನಹಳ್ಳಿ ಈರಪ್ಪ. ಪರಿಷತ್ತಿನ ಮತ್ತೂಬ್ಬ ಕಾರ್ಯದರ್ಶಿ ಕೆ.ಎಸ್. ಚಿದಾನಂದ್ ಇತರರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.