ಜಲ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ
Team Udayavani, Mar 23, 2021, 3:51 PM IST
ಕುಣಿಗಲ್: ನೀರು ಅತ್ಯ ಅಮೂಲ್ಯ ಹಾಗೂ ಜೀವದ್ರವ್ಯವಾಗಿದೆ. ಹಾಗಾಗಿ ಇದರ ಸಂರಕ್ಷಣೆಎಲ್ಲರ ಹೊಣೆಯಾಗಿದೆ ಎಂದು ಪುರಸಭಾ ಅಧ್ಯಕ್ಷ ಎಸ್.ಕೆ.ನಾಗೇಂದ್ರ ತಿಳಿಸಿದ್ದಾರೆ.
ಪಟ್ಟಣದಲ್ಲಿ ಪುರಸಭೆ, ಕಾನೂನು ಸೇವಾಸಮಿತಿ, ಮಹಾತ್ಮಗಾಂಧಿ ಪ್ರೌಢ ಶಾಲೆ ಎನ್‌ಎಸ್‌ಎಸ್ ಘಟಕದ ಸಂಯಕ್ತಾಶ್ರಯದಲ್ಲಿ ಎಂ.ಜಿ. ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ವಿಶ್ವ ಜಲದಿನಾಚರಣೆಯಲ್ಲಿ ಮಾತನಾಡಿದ ಅವರು,ಭೂಗೋಳದಲ್ಲಿ ಮೂರನೇ ಭಾಗ ನೀರಿದ್ದರೇ,ಒಂದು ಭಾಗ ಭೂಮಿ ಇದೆ. ಹಿಂದೆ 300-400ಅಡಿಗಳು ಕೊಳವೆ ಬಾವಿ ಕೊರೆದರೆ ನೀರುಸಿಗುತಿತ್ತು. ಈಗ 1200 ಅಡಿ ಕೊರೆದರು ನೀರು ಸಿಗುತ್ತಿಲ್ಲ, ಇದಕ್ಕೆ ಕಾರಣ ಭೂಮಿಯ ಮೇಲೆ ಗಿಡಮರಗಳು ಕಡಿಮೆಯಾಗುತ್ತಿದೆ. ಇದರಿಂದಮಳೆಯ ಪ್ರಮಾಣ ಕಡಿಮೆಯಾಗಿದೆ. ಪುರಸಭೆನೀರಿನ ಬಗ್ಗೆ ಹೆಚ್ಚಿನ ಪ್ರಾಮುಖ್ಯತೆ ವಹಿಸಬೇಕು ಎಂದರು.
ಬೇಸಿಗೆ ಕಾಲ ಪ್ರಾರಂಭವಾಗಿದೆ. ಪಟ್ಟಣದಲ್ಲಿ ನೀರಿನ ಸಮಸ್ಯೆ ಎದರಾಗದಂತೆ ಇರುವ ನೀರನ್ನುಸಮರ್ಪಕವಾಗಿ ಬಳಕೆ ಮಾಡಿಕೊಂಡು ಜನರಿಗೆ ವಿತರಿಸುವಂತಹ ಕೆಲಸ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಶುದ್ಧ ಕುಡಿಯುವ ನೀರಿನ ಘಟಕ: ಸಂಸದ ಡಿ.ಕೆ.ಸುರೇಶ್ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತಶುದ್ಧ ಕುಡಿಯುವ ನೀರಿನ ಘಟಕಗಳನ್ನುಪ್ರಾರಂಭಿಸಿ ಬಡ ಜನರಿಗೆ ಒಂದು ರೂ.ಗಳಿಗೆ 10ಲೀಟರ್ ನೀರಿನಂತೆ ಶುದ್ಧ ಕುಡಿಯುವ ನೀರುವ್ಯವಸ್ಥೆ ಮಾಡಿ ನಾಗರಿಕರಿಗೆ ಅನುಕೂಲ ಮಾಡಿ ಕೊಟ್ಟಿದ್ದಾರೆ. ಈ ನಿಟ್ಟಿನಲ್ಲಿ ಪುರಸಭೆಯಿಂದಪಟ್ಟಣದಲ್ಲಿ ನಾಲ್ಕು ಕಡೆ ಶುದ್ಧ ಕುಡಿಯುವ ನೀರಿನ ಘಟಕ ಪ್ರಾರಂಭಿಸಲಾಗಿದೆ ಎಂದರು.
ವಕೀಲೆ ಪಾರ್ವತಿಬಾಯಿ, ಕಾನೂನು ಸೇವಾ ಸಮಿತಿಯ ಜೀಜಾಬಾಯಿ ಮಾತನಾಡಿದರು.ಪುರಸಭಾ ಉಪಾಧ್ಯಕ್ಷೆ ಮಂಜುಳಾ, ಸ್ಥಾಯಿ ಸಮಿತಿಅಧ್ಯಕ್ಷ ಸೆಮಿಉಲ್ಲಾ, ಎಂಜಿನಿಯರ್ ಸುಮಾ,ಆರೋಗ್ಯ ಕಿರಿಯ ಸಹಾಯಕಿ ಮಮತಾ, ಭೈರಪ್ಪ,ಉಪ ಪ್ರಾಚಾರ್ಯ ಡಿ.ಎಸ್.ಸೋಮಶೇಖರ್,ದೈಹಿಕ ಶಿಕ್ಷಕ ಅಜೀಜ್‌ಉಲ್ಲಾ, ಶಿಕ್ಷಕಿ ಸೀತಾಲಕ್ಷ್ಮೀ ಇದ್ದರು.
ಜನರಿಗೆ ನೀರಿನ ಜಾಗೃತಿ ಮೂಡಿಸಿ :
ಮಾನವ ವೈಜ್ಞಾನಿಕವಾಗಿ ಎತ್ತರಕ್ಕೆ ಬೆಳೆದಿದ್ದರೂನೀರನ್ನು ಸೃಷ್ಟಿಸುವ ತಂತ್ರಜ್ಞಾನದ ಆವಿಷ್ಕಾರಸಾಧ್ಯವಾಗಿಲ್ಲ, ಇದು ಭೂಮಿಯಿಂದ ಪ್ರಕೃತಿದತ್ತವಾಗಿ ಬಂದ ಅಮೂಲ್ಯ ಕೊಡುಗೆ. ಇದನ್ನುವ್ಯರ್ಥವಾಗಿ ಹರಿ ಬಿಡದೇ ಸಂರಕ್ಷಿಸಬೇಕು. ನೀರಿನ ಪ್ರಮುಖ್ಯತೆ ಹಾಗೂ ಮಿತ ಬಳಕೆ ಬಗ್ಗೆವಿದ್ಯಾರ್ಥಿಗಳು ತಿಳಿದು ಜನರಿಗೆ ನಿರಂತರ ಜಾಗೃತಿಮೂಡಿಸುವ ಕೆಲಸಗಳು ಮಾಡಬೇಕು ಎಂದು ಮುಖ್ಯಾಧಿಕಾರಿ ಕೆ.ಪಿ.ರವಿಕುಮಾರ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pavagada: ವಿಷ ಸೇವಿಸಿ ಗಂಡ-ಹೆಂಡತಿ ಆತ್ಮಹತ್ಯೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Drone Prathap: ನೀರಿಗೆ ಸ್ಫೋಟಕ ಎಸೆದ ಪ್ರಕರಣ; ಪ್ರತಾಪ್‌ಗೆ 10 ದಿನ ನ್ಯಾಯಾಂಗ ಬಂಧನ
Huliyar; ಕೆಮ್ಮಿನ ಔಷಧವೆಂದು ಭಾವಿಸಿ ಕೀಟನಾಶಕ ಸೇವಿಸಿದ ರೈತ ಸಾ*ವು
ಕೃಷಿ ಹೊಂಡದಲ್ಲಿ ಅದೇನೋ ಮಾಡಲು ಹೋಗಿ ಅರೆಸ್ಟ್ ಅದ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kundapura ದೊಡ್ಡಾಸ್ಪತ್ರೆಗೆ ವೈದ್ಯರ ಕೊರತೆ
Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾ*ವು
Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್ ಸಿಇಒ ಸುಂದರ್ ಪಿಚೈ
Arrest Warrant: ರಾಬಿನ್ ಉತ್ತಪ್ಪ ವಿರುದ್ದ ಬಂಧನ ವಾರೆಂಟ್; ಜೈಲು ಪಾಲಾಗ್ತಾರಾ ಕ್ರಿಕೆಟಿಗ
Mangaluru: ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ನಗರದ ದರ್ಶನಕ್ಕೆ ಅವಕಾಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.