Kunigal ಶ್ರೀ ಕ್ಷೇತ್ರ ಎಡೆಯೂರು ದೇವಾಲಯದ ಆನೆ ಗಂಗಾ ಇನ್ನಿಲ್ಲ!
Team Udayavani, Jun 18, 2024, 8:21 PM IST
ಕುಣಿಗಲ್ : ಗದಗ ಡಂಬಾಳ ಮಠದಿಂದ ತಾಲೂಕಿನ ಪ್ರಸಿದ್ದ ಶ್ರೀ ಕ್ಷೇತ್ರ ಎಡೆಯೂರು ಸಿದ್ದಲಿಂಗೇಶ್ವರಸ್ವಾಮಿ ದೇವಸ್ಥಾನಕ್ಕೆ ನೀಡಿದ ಗಂಗ ಆನೆ ಅನಾರೋಗ್ಯದಿಂದ ಮಂಗಳವಾರ ಮೃತಪಟ್ಟಿದೆ.
ಇಲ್ಲಿನ ದೇವಸ್ಥಾನದ ಹೆಣ್ಣಾನೆ ಗಂಗಾ (76) ಅನಾರೋಗ್ಯದಿಂದ ಇಹಲೋಕ ತ್ಯಜಿಸಿದೆ.
ಘಟನೆ ವಿವರ : ಗಂಗಾ ಹೆಣ್ಣಾನೆ ಕಳೆದ ಮೂರು ತಿಂಗಳಿನಿಂದ ಗ್ಯಾಂಗ್ರೀನ್ ರೋಗದಿಂದ ಬಳಲುತ್ತಿತ್ತು. ಇದರ ಚಿಕಿತ್ಸೆಗಾಗಿ ಕೋಲಾರ ಜಿಲ್ಲೆ ಮಾಲೂರು ತಾಲೂಕು ಲಕ್ಷ್ಮಿಸಾಗರ ಮೀಸಲು ಅರಣ್ಯ ವನ್ಯ ಜೀವಿ ರಕ್ಷಣಾ ಮತ್ತು ಪುನರ್ವಸತಿ ಕೇಂದ್ರ ( ಡಬ್ಲ್ಯೂಆರ್.ಆರ್.ಸಿ) ಸಂಸ್ಥೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.
ಆದರೆ ಚಿಕಿತ್ಸೆ ಫಲಕಾರಿಯಾಗದೇ ಜು. 18 ರಂದು ಮಂಗಳವಾರ ಮಧ್ಯಾಹ್ನ ಮೃತಪಟ್ಟಿದೆ ಎಂದು ದೇವಾಲಯದ ಮೂಲಗಳು ತಿಳಿಸಿವೆ.
ಗಂಗಾಳ ಹಿನ್ನಲೆ : 1996 ರಲ್ಲಿ ಗದಗ ಡಂಬಾಳ ಮಠದ ಅಂದಿನ ತೋಟದಾರ್ಯ ಸಿದ್ದಲಿಂಗ ಶ್ರೀಗಳು ಗಂಗಾ ಎಂಬ ಹೆಣ್ಣು ಆನೆಯನ್ನು ಅಂದಿನ ಮುಖ್ಯಮಂತ್ರಿ ಜೆ.ಹೆಚ್.ಪಾಟೀಲ್ ಅವರ ಮೂಲಕ ಎಡೆಯೂರು ಸಿದ್ದಲಿಂಗೇಶ್ವರ ದೇವಾಲಯಕ್ಕೆ ಅಸ್ತಂತರಿಸಿದರು.ಈ ಆನೆಯನ್ನು ದೇವಾಲಯದ ವತಿಯಿಂದ ಪೋಷಣೆ ಮಾಡಿಕೊಂಡು ಬರಲಾಗುತ್ತಿತ್ತು. ಲಕ್ಷದೀಪೋತ್ಸವ , ಜಾತ್ರಾ ಮಹೋತ್ಸವ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಭಕ್ತಾಧಿಗಳನ್ನುಆನೆ ಗಂಗಾ ಆಕರ್ಷಿಸುತ್ತಿತ್ತು.
ಮಗು ಬಲಿ ಪಡೆದ ಆನೆ : ದೇವಾಲಯದ ಸಮೀಪದಲ್ಲಿ ಪ್ರತ್ಯೇಕವಾಗಿ ಶೆಡ್ ನಿರ್ಮಾಣ ಮಾಡಿ ಗಂಗಾಳನ್ನು ಪೋಷಣೆ ಮಾಡಲಾಗುತ್ತಿತ್ತು. ಆದರೆ ಹಾಸನ ಜಿಲ್ಲೆ ಅರಕಲುಗೂಡು ತಾಲೂಕಿನ ಬಾಲಕ ಸಚಿನ್ ಗಂಗಾಳಿಗೆ ಬಾಳೇಹಣ್ಣು ತಿನ್ನಿಸಲು ಮುಂದಾದ ವೇಳೆಯಲ್ಲಿ ಆನೆ ಗಂಗಾ ಬಾಲಕನನ್ನು ಸೊಂಡಲಿನಲ್ಲಿ ಎಳೆದುಕೊಂಡು ಬಲಿ ತೆಗೆದುಕೊಂಡಳು.
ದೇವಾಲಯದ ಬಳಿ ಅಂತ್ಯಸಂಸ್ಕಾರಕ್ಕೆ ಆಗ್ರಹ : ಗಂಗಾ ಕಳೆದ 28 ವರ್ಷಗಳಿಂದ ಎಡೆಯೂರಿನ ಶ್ರೀ ಸಿದ್ದಲಿಂಗೇಶ್ವರ ಕ್ಷೇತ್ರದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತರನ್ನು ಆಕರ್ಷಿಸುತ್ತಾ ತನ್ನದೆಯಾದ ಸೇವೆ ಸಲ್ಲಿಸುವ ಮೂಲಕ ಕ್ಷೇತ್ರದಲ್ಲಿ ಹೆಸರುಗಳಿಸಿದ್ದಳು.
ಗಂಗಾಳನ್ನು ಕಂಡರೇ ಇಲ್ಲಿನ ಭಕ್ತಾಧಿಗಳಿಗೆ ಎಲ್ಲಿಲ್ಲದ ಪ್ರೀತಿ ಇತ್ತು ಆದರೆ ಗಂಗಾ ಮೃತಪಟ್ಟ ಸುದ್ದಿ ತಿಳಿದ ಇಲ್ಲಿನ ದೇವಾಲಯದ ಅರ್ಚಕರು, ಸಿಬ್ಬಂದಿಗಳು ಮತ್ತು ಭಕ್ತಾಧಿಗಳಲ್ಲಿ ತುಂಬಲಾರದ ನೋವು ಉಂಟಾಗಿದೆ. ಗಂಗಾಳ ಅಂತ್ಯಕ್ರಿಯೆ, ಮಾಲೂರು ತಾಲೂಕು ಲಕ್ಷ್ಮಿಸಾಗರ ಮೀಸಲು ಅರಣ್ಯ ಪ್ರದೇಶದಲ್ಲಿ ನೆರವೇರಿಸುತ್ತಿರುವುದು ಭಕ್ತಾಧಿಗಳಿಗೆ ಬೇಸರದ ಸಂಗತಿಯಾಗಿದೆ. ಗಂಗಾಳನ್ನು ಶ್ರೀ ಕ್ಷೇತ್ರದಲ್ಲಿ ಅಂತ್ಯ ಸಂಸ್ಕಾರ ಮಾಡಬೇಕು ಎಲ್ಲವಾದಲ್ಲಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಗ್ರಾ.ಪಂ ಮಾಜಿ ಅಧ್ಯಕ್ಷ ದೇವರಾಜು(ದೀಪು) ಎಚ್ಚರಿಸಿದ್ದಾರೆ.
ಹಲವು ವರ್ಷಗಳಿಂದ ಆನೆ ಗಂಗಾ ಮಲಗದೇ ನಿಂತೆ ಇರುತ್ತಿದ್ದಳು. ಹಾಗಾಗಿ ಕಾಲು ಊದಿಕೊಂಡು ಗಾಯವಾಗಿ ಸೋಂಕಿಗೆ ಒಳಗಾಗಿತ್ತು. ಅವಳನ್ನು ಪರೀಕ್ಷಿಸಿದ ಪಶು ಸಂಗೋಪನ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಪುನರ್ವಸತಿ ಕೇಂದ್ರ ಲಕ್ಷ್ಮಿಸಾಗರಕ್ಕೆ ದಾಖಲಿಸುವಂತೆ ಸೂಚಿಸಿದರು. ಈ ಹಿನ್ನಲೆಯಲ್ಲಿ ಅಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಮಂಗಳವಾರ ಹೃದಯಾಘಾತದಿಂದ ಗಂಗಾಳು ಮೃತಪಟ್ಟಿದ್ದಾಳೆ. ಮರಣೋತ್ತರ ಪರೀಕ್ಷೆ ಬಳಿಕ ಸಾವಿನ ಬಗ್ಗೆ ಸ್ಪಷ್ಟ ಮಾಹಿತಿ ಸಿಗಲಿದೆ.
-ಪಿ.ಜಗದೀಶ್
ಆರ್.ಎಫ್.ಓ ಹುಲಿಯೂರುದುರ್ಗ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Koratagere: ಗೃಹ ಸಚಿವರ ಸ್ವ ಕ್ಷೇತ್ರದಲ್ಲೇ ಮಲ ಹೊತ್ತ 10 ವರ್ಷದ ಬಾಲಕ!
Kunigal: ಬೈಕ್, ಕ್ಯಾಂಟರ್ ಮುಖಾಮುಖಿ ಢಿಕ್ಕಿ; ಇಬ್ಬರು ಸ್ಥಳದಲ್ಲೇ ಮೃತ್ಯು
Gubbi: ಮೀಟರ್ ಬಡ್ಡಿ ದಂಧೆಕೋರರ ಕಿರುಕುಳಕ್ಕೆ ಬೇಸತ್ತು ಪೌರ ಕಾರ್ಮಿಕ ಆತ್ಮಹತ್ಯೆ
Koratagere: ವೃದ್ದೆ ಮೇಲೆ ಕೆಎಸ್ಆರ್ಟಿಸಿ ಬಸ್ ಹರಿದು ಸಾವು
Hunasur: ವರದಕ್ಷಿಣೆ ಕಿರುಕುಳಕ್ಕೆ ಬಲಿಯಾದ ತಿಪಟೂರಿನ ಮಹಿಳೆ!
MUST WATCH
ಹೊಸ ಸೇರ್ಪಡೆ
By Election: ಯೋಗೇಶ್ವರ್ ನಿಂದಿಸಿದ್ದ ಡಿ.ಕೆ.ಸುರೇಶ್ ಆಡಿಯೋ ಎಚ್‌ಡಿಕೆ ಬಿಡುಗಡೆ
By Election: ನಾಗೇಂದ್ರ, ಜಮೀರ್, ಡಿಕೆಶಿ ಮೇಲೆ ಚುನಾವಣಾ ಆಯೋಗ ಕಣ್ಣಿಡಲಿ: ಡಿವಿಎಸ್
Waqf: ಮುಸ್ಲಿಮರ ಗುರಿ ಮಾಡುವುದು ಬಿಟ್ಟರೆ ಬಿಜೆಪಿಗೆ ಬೇರೇನೂ ಇಲ್ಲ: ಸಚಿವ ದಿನೇಶ್
Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ
Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್ ಅನುಮತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.