ಎಲೆರಾಮಪುರ ಉತ್ತಮ ಪಂಚಾಯತ್
Team Udayavani, Jan 8, 2022, 5:45 AM IST
ಸಾಂದರ್ಭಿಕ ಚಿತ್ರ.
ತುಮಕೂರು: ಕಲ್ಪತರು ನಾಡಿನ ಬರಡು ಭೂಮಿಯ ಗ್ರಾಮ ಪಂಚಾಯತ್‌ಗೆ ಕೇಂದ್ರ ಸರಕಾರದ “ಉತ್ತಮ ಪಂಚಾಯತ್ ಪುರಸ್ಕಾರ’ ಲಭಿಸಿದೆ.
ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಎಲೆರಾಮಪುರ ಗ್ರಾ.ಪಂ.ನ ಡಿ. ನಾಗೇನಹಳ್ಳಿ ಗ್ರಾಮದಲ್ಲಿ ಹಿರೇಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಕೇಂದ್ರ ಸರಕಾರದ ನಿಕಾ ಯೋಜನೆಯಡಿ ಅಂತರ್ಜಲ ವೃದ್ಧಿಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮಕ್ಕೆ 3ನೇ ರಾಷ್ಟ್ರೀಯ ನೀರು ಅಭಿವೃದ್ಧಿ ಪ್ರಶಸ್ತಿ ಲಭಿಸಿದೆ.
ಏಕೆ ಈ ಗೌರವ?
ಡಿ. ನಾಗೇನಹಳ್ಳಿಯ ಸುಮಾರು 400 ಹೆಕ್ಟೇರ್ ಭೂ ಪ್ರದೇಶದಲ್ಲಿ 85 ಚೆಕ್ ಡ್ಯಾಂ, 5 ನಾಲೆ, ಅಣೆಕಟ್ಟು ಸೇರಿದಂತೆ ಹಲವು ಕೃಷಿ ಹೊಂಡ, ಗೋ-ಕಟ್ಟೆ, ಕೆರೆಗಳ ಅಭಿವೃದ್ಧಿ ಮಾಡಲಾಗಿದೆ. ಜತೆಗೆ ಒಣ ಬೇಸಾಯ ತೋಟಗಾರಿಕೆಗೆ ಒತ್ತು ನೀಡಲಾಗಿದೆ. ಇದಲ್ಲದೆ ಅರಣ್ಯೀಕರಣಕ್ಕೆ ಒತ್ತು ನೀಡಿದ್ದು, ಹಣ್ಣಿನ ಗಿಡಗಳನ್ನು ಬೆಳೆಸಿ, ನೀರಿನ ಮೂಲ ಹೆಚ್ಚಿಸಿ ಪ್ರಾಣಿ ಪಕ್ಷಿಗಳು ಮತ್ತು ಜಾನುವಾರುಗಳಿಗೆ ಆಶ್ರಯ ಕಲ್ಪಿಸ ಲಾಗಿದೆ. ಅಭಿವೃದ್ಧಿ ಕಾಮಗಾರಿ ಗಳಿಂದಾಗಿ ಈ ಭಾಗದಲ್ಲಿ ಫಲವತ್ತತೆ ಹೆಚ್ಚಿ ಕೃಷಿಗೆ ಪೂರಕ ವಾತಾವರಣ ಉಂಟಾಗಿದೆ.
ಮಣ್ಣು ಸವಕಳಿ ತಪ್ಪಿಸಲು ಮತ್ತು ಮಳೆ
ನೀರು ಇಂಗಿಸಲು ಬದುಗಳ ನಿರ್ಮಾಣ, ಬರ ನಿರೋಧಕ ತಳಿಗಳಾದ ರಾಗಿ ಎಂಎಲ್ 365, ಎರೋಬಿಕ್ ಭತ್ತ, ಕಡಿಮೆ ಅವಧಿಯ ತೊಗರಿ ಬೆಳೆಗೆ ಆದ್ಯತೆ ನೀಡಲಾಗಿದೆ.
ಎಲೆರಾಂಪುರ ಗ್ರಾ.ಪಂ. ವ್ಯಾಪ್ತಿಯಲ್ಲಿ ನಡೆದಿರುವ ಅಂತರ್ಜಲ ಅಭಿವೃದ್ಧಿ ಕಾಮಗಾರಿಗಳ ವೀಕ್ಷಣೆಗೆ ಬಂದಿದ್ದ ಕೇಂದ್ರ ಅಂತರ್ಜಲ ಅಭಿವೃದ್ಧಿ ಯೋಜನೆ ಅಧಿಕಾರಿಗಳು ಗ್ರಾಮ ಪಂಚಾಯತ್ ಮತ್ತು ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದಿಂದ ಮಾಡಿರುವ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದ್ದರು.
ಇದನ್ನೂ ಓದಿ:ನಿಯಮ ಜಾರಿ ಯಾರಿಗೂ ತೊಂದರೆ ಮಾಡುವುದ್ದಲ್ಲ
ಎಲೆರಾಂಪುರ ಗ್ರಾ.ಪಂ.ನಲ್ಲಿ ನಡೆ ದಿರುವ ಕಾಮಗಾರಿಗಳಿಂದಾಗಿ ಈ ಭಾಗದ ಬೋರ್ ವೆಲ್‌ಗಳಲ್ಲಿ ಅಂತರ್ಜಲ ವೃದ್ಧಿಯಾಗಿದೆ. ಇದನ್ನೆಲ್ಲಾ ಪರಿಗಣಿಸಿರುವ ಕೇಂದ್ರ ಸರಕಾರ, ಎಲೆರಾಂಪುರ ಗ್ರಾ.ಪಂ.ಗೆ ಉತ್ತಮ ಪ್ರಶಸ್ತಿ ಜತೆಗೆ 3 ಲಕ್ಷ ರೂ. ನಗದು ಬಹುಮಾನ ಘೋಷಿಸಿದ್ದು, ಅದರಲ್ಲಿ 1.50 ಲಕ್ಷ ಗ್ರಾ.ಪಂ.ಗೆ, 1.50 ಲಕ್ಷ ರೂ. ಹಿರೇಹಳ್ಳಿಗೆ ನೀಡಲಾಗಿದೆ.
ಎಲೆರಾಂಪುರ ಗ್ರಾ.ಪಂ. ವ್ಯಾಪ್ತಿಯ ಡಿ. ನಾಗೇನಹಳ್ಳಿ ಯಲ್ಲಿ ಗ್ರಾ.ಪಂ. ಮತ್ತು ಕೆವಿಕೆ ಸೇರಿ ಮಾಡಿರುವ ಅಭಿವೃದ್ಧಿ ಕಾರ್ಯಕ್ಕೆ ಕೇಂದ್ರ ಸರಕಾರದ ಪ್ರಶಸ್ತಿ ಲಭಿ ಸಿರುವುದು ಸಂತಸ ತಂದಿದೆ. ಇದು ಇತರೆ ಪಂಚಾಯ್ತಿಗಳಿಗೆ ಮಾದರಿಯಾಗಲಿದೆ.
– ಡಾ| ಕೆ. ವಿದ್ಯಾಕುಮಾರಿ, ಸಿಇಒ, ತುಮಕೂರು ಜಿ.ಪಂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಧುಗಿರಿ: ಕಚೇರಿಯಲ್ಲೇ DYSP ರಾಸಲೀಲೆ!!: ವಿಡಿಯೋ ಸೆರೆ
Minister ಸೋಮಣ್ಣ, ಸಿ.ಎಸ್. ಹೆಸರಲ್ಲಿ ನಕಲಿ ಸಹಿ, ಲೆಟರ್‌ಹೆಡ್: ಬಂಧನ
Koratagere: ರಸ್ತೆಯಲ್ಲಿ ಚರಂಡಿ ನೀರು; ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಗ್ರಾಮಸ್ಥರು
Kunigal: ಮರಕ್ಕೆ ಕಾರು ಡಿಕ್ಕಿಯಾಗಿ ಪಲ್ಟಿ: ಬೆಸ್ಕಾಂ ನೌಕರರ ಸ್ಥಳದಲ್ಲೇ ಸಾವು
Kunigal: ನಾಮಫಲಕಕ್ಕೆ ಬಸ್ ಡಿಕ್ಕಿ, ಪಲ್ಟಿ; ಮಂಗಳೂರು ಮೂಲದ ಚಾಲಕ ಸಾವು; 8 ಮಂದಿಗೆ ಗಾಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Governor: ಮಣಿಪುರದ 19 ನೇ ರಾಜ್ಯಪಾಲರಾಗಿ ಅಜಯ್ ಭಲ್ಲಾ ಪ್ರಮಾಣ ವಚನ ಸ್ವೀಕಾರ
Bidar; ಗುತ್ತಿಗೆದಾರ ಸಚಿನ್ ಕೇಸ್; ತನಿಖೆ ಆರಂಭಿಸಿದ ಸಿಐಡಿ ತಂಡ
Prajwal Devaraj; ಶಿವರಾತ್ರಿಗೆ ʼರಾಕ್ಷಸʼ ಅಬ್ಬರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.