ಯೋಗದಿಂದ ಮನಸ್ಸಿನ ಮೇಲೆ ಉತ್ತಮ ಪರಿಣಾಮ ಬೀರಲು ಸಹಕಾರಿ: ಶ್ರೀವೀರಭದ್ರ ಶಿವಾಚಾರ್ಯ ಸ್ವಾಮೀಜಿ
Team Udayavani, Jun 21, 2022, 8:20 PM IST
ಕೊರಟಗೆರೆ: ಯೋಗದಿಂದ ಮನಸ್ಸಿನ ಮೇಲೆ ಉತ್ತಮ ಪರಿಣಾಮ ಬೀರಲು ಸಹಕಾರಿ ಎಂದು ಸಿದ್ದರಬೆಟ್ಟ ಬಾಳೆಹೊನ್ನೂರು ಶಾಖಾ ಮಠದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಅವರು ತಾಲೂಕಿನ ಶ್ರೀ ಕ್ಷೇತ್ರ ಸಿದ್ದರಬೆಟ್ಟ ರಂಬಾಪುರಿ ಖಾಸಾ ಶಾಖಾ ಮಠದ ಆವರಣದಲ್ಲಿ ತುಮಕೂರು ಜಿಲ್ಲಾ ಪಂಚಾಯತ್, ತುಮಕೂರು ಜಿಲ್ಲಾಡಳಿತ ಆಯುಷ್ ಇಲಾಖೆ ತುಮಕೂರು ವತಿಯಿಂದ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ, ನೆಹರು ಯುವ ಕೇಂದ್ರ, ಜಿಲ್ಲಾ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಅಶ್ವಿನಿ ಆರ್ಯುವೇದ ಮತ್ತು ಹೆಚ್.ಎಂ.ಎಸ್ ಯುನಾನಿ ಕಾಲೇಜುಗಳ ಸಹಯೋಗದೊಂದಿಗೆ ಅವರು ಅಜಾದಿ ಅಮೃತ ಮಹೋತ್ಸವ ಅಂಗವಾಗಿ 8 ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಯೋಗ ಎಂಬುದು ಕೇವಲ ವ್ಯಾಯಾಮವಲ್ಲ ಜೀವದ ಉಸಿರಾಟ, ದೇಹ ಮತ್ತು ಮನಸ್ಸಿನ ಆಂತರಿಕ ಕ್ರಿಯೆಯ ಕ್ರಿಯಾತ್ಮಕ ಚಟುವಟಿಕೆ ಮನಸ್ಸನ್ನು ಹಿಡಿತದಲ್ಲಿಡಲು ಒತ್ತಡವನ್ನು ಕಡಿಮೆ ಮಾಡಲು ಆರೋಗ್ಯವನ್ನು ಕಾಪಾಡಲು ಯೋಗವೊಂದು ಸಾಧನವಾಗಿದೆ. ಬಾಹ್ಯ ಪ್ರಪಂಚದ ತರ್ಕಕ್ಕಕ್ಕೆ ನಿಲುಕದ ಒಂದು ಸಾಧನ ಇದಾಗಿದೆ. ಅಂತರಂಗದ ಮನಸ್ಸಿನಲ್ಲೂ ಯೋಗ ಅಭ್ಯಾಸ ಮಾಡುವುದರಿಂದ ಮನಸ್ಸು ಶಾಂತ ಚಿತ್ತದಿಂದ ಇರುತ್ತದೆ ಯೋಗದಿಂದ ಜ್ಞಾನ, ವಿವೇಕಚಿತ್ತ ಸ್ಥಿರವಾಗಿರುತ್ತದೆ. ಯೋಗ, ಪ್ರಾಣಾಯಾಮ, ಅಷ್ಟಾಂಗದ ಬಗ್ಗೆ ಹಲವು ಮಾಹಿತಿ ನೀಡಿದರು
ತುಮಕೂರು ಜಿಲ್ಲಾಧಿಕಾರಿ ವೈ. ಎಸ್. ಪಾಟೀಲ್ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಯೋಗ ಇದು ನಮ್ಮ ಸಂಸ್ಕೃತಿಯ ಒಂದು ಭಾಗ. ಯೋಗವನ್ನು ನಮ್ಮ ಪೂರ್ವಜರು ಋಷಿ-ಮುನಿಗಳು ನಮಗೆ ಯೋಗವೆನ್ನುವ ಸಂಸ್ಕಾರಯುತ ಜೀವನವನ್ನು ಕೊಡುಗೆಯಾಗಿ ನೀಡಿದ್ದಾರೆ. ಹಲವು ಯೋಗ ಮುನಿಗಳು ಸೇರಿದಂತೆ ಪತಂಜಲಿ ಮುನಿಗಳು ಯೋಗ ಹಾಗೂ ಪ್ರಾಣಾಯಾಮ ಪ್ರತ್ಯಾಹಾರ ಗಳ ಮೂಲಕ ತಮ್ಮ ಜೀವನದ ಉತ್ತುಂಗದ ಶಿಖರವೇರಿದವರು. ಅವರ ಮಾರ್ಗದರ್ಶನದಲ್ಲಿ ಈಗಿನ ವಿನೂತನ ಜಗತ್ತು ಯೋಗಾಭ್ಯಾಸದಲ್ಲಿ ತೊಡಗಿಸಿಕೊಂಡಿದೆ ಎಂದರು.
ಮಕ್ಕಳು ನಿರಂತರ ಯೋಗಾಭ್ಯಾಸದಲ್ಲಿ ತೊಡಗಿಸಿಕೊಳ್ಳುವುದರಿಂದ ಏಕಾಗ್ರತೆ ಹೆಚ್ಚುತ್ತದೆ ಶಾಲಾ ಕಾಲೇಜುಗಳಲ್ಲಿ ಶಿಕ್ಷಣದ ಜೊತೆ ಜೊತೆಗೆ ಯೋಗಾಭ್ಯಾಸ ಕಲಿತರೆ ಮುಂದಿನ ಉನ್ನತ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವುದು ಈ ಹಿಂದೆ ಕೆ.ಎ.ಎಸ್, ಐ.ಎ.ಎಸ್, ಐ.ಪಿ.ಎಸ್, ಐ.ಎಫ್.ಎಸ್ ಗಳಂತಹ ಇಲಾಖಾ ತರಬೇತಿ ನೀಡುವ ಸಂದರ್ಭಗಳಲ್ಲಿ ಯೋಗ, ಧ್ಯಾನ, ಮುದ್ರೆ ಗಳಂತಹ ಅಭ್ಯಾಸಗಳನ್ನು ಬಹಳ ಹಿಂದಿನಿದಲೂ ನೀಡುತ್ತಾ ಬಂದಿದ್ದು ಯೋಗ ನಮ್ಮ ಪರಂಪರೆ ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ. ಕಳೆದ 8 ವರ್ಷಗಳಿಂದೆ ಜೂನ್ 26 ರಂದು ವಿಶ್ವದಾದ್ಯಂತ ಅಂತರಾಷ್ಟ್ರೀಯ ಯೋಗ ದಿನ ಎಂದು ಘೋಷಿಸಲಾಗಿದ್ದು ನಮ್ಮ ಸಂಸ್ಕೃತಿಯ ದೇಶ ವಿದೇಶಗಳೆಲ್ಲೆಡೆ ಪಸರಿಸುತ್ತಿರುವುದು ಹೆಮ್ಮೆಯ ವಿಷಯ ಎಂದು ಸಂತಸ ವ್ಯಕ್ತ ಪಡಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕೊರಟಗೆರೆಯ ವತಿಯಿಂದ ಪಟುಗಳು ಯೋಗಾಭ್ಯಾಸ ಮಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸಿ.ಇ.ಓ ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪುರ್ ವಾಡ್, ಡಿ.ಹೆಚ್.ಓ ಡಾ. ನಾಗೇಂದ್ರಪ್ಪ, ಜಿಲ್ಲಾ ಶಸ್ತ್ರ ಚಿಕಿತ್ಸಕ ವೀರಭದ್ರಪ್ಪ, ಆಯುಷ್ ಇಲಾಖೆಯ ಸಂಜೀವ್, ಮಧುಗಿರಿ ಉಪ ವಿಭಾಗಾಧಿಕಾರಿ ಸೋಮಪ್ಪ ಕಡಕೋಳ, ಕೊರಟಗೆರೆ ತಾಲ್ಲೂಕಿನ ದಂಡಾಧಿಕಾರಿಗಳಾದ ತಹಶಿಲ್ದಾರ್ ನಹೀದಾ ಜಮ್ ಜಮ್. ಕ್ಷೇತ್ರ ಶಿಕ್ಷಣಾಧಿಕಾರಿ ಸುಧಾಕರ್, ಆರಕ್ಷಕ ವೃತ್ತ ನಿರೀಕ್ಷಕ ಸಿದ್ದರಾಮೇಶ್ವರ, ಉಪ ನಿರೀಕ್ಷಕ ನಾಗರಾಜು, ರೇಣುಕಾ ಆಸ್ಪತ್ರೆಯ ಡಾ. ಮಲ್ಲಿಕಾರ್ಜುನ, ಡಾ. ರೇಣು ಮಲ್ಲಿಕಾರ್ಜುನ, ಸಿ.ಡಿ.ಪಿ ಓ ಅಂಬಿಕಾ, ವಲಯ ಅರಣ್ಯಾಧಿಕಾರಿ ಸುರೇಶ್, ಶ್ರೀ ಪತಂಜಲಿ ಯೋಗ ಶಿಕ್ಷಣ ಕೊರಟಗೆರೆ ಸಮಿತಿಯ ಚನ್ನಬಸಪ್ಪ, ಲೋಕೇಶ್, ಮಂಜುನಾಥ್, ವೀರಣ್ಣ, ನಟರಾಜು, ಪತ್ರ ಕರ್ತ ನವೀನ್ ಕುಮಾರ್ ಚಿಕ್ಕನರಸೀಯಪ್ಪ, ಗೋಪಿನಾಥ್, ಪಲ್ಲವಿ, ಸೌಮ್ಯ, ಚೇತನಕ್ಕ, ಲಕ್ಷೀ, ಪ್ರೇಮ, ಕಲ್ಪನಾ, ರುದ್ರಮ್ಮ, ನೆಹರು ಯುವ ಕೇಂದ್ರದ ಮಾರುತಿ ,ರುದ್ರರಾದ್ಯ, ಸೇರಿದಂತೆ ಅನೇಕ ಗಣ್ಯರೂ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಶಿಭಿರಾರ್ಥಿಗಳು ಯೋಗಾಭ್ಯಾಸದಲ್ಲಿ ತೊಡಗಿಸಿಕೊಂಡಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.