ತುಮಕೂರು : ಮದುವೆ ಮಾಡಿಸುವಂತೆ ಡಿಸಿಗೆ ಅರ್ಜಿ ಸಲ್ಲಿಸಿದ ಯುವಕರು
Team Udayavani, Oct 17, 2021, 12:42 PM IST
ಚಿಕ್ಕನಾಯಕನಹಳ್ಳಿ : “ಮದುವೆ ಯಾಗಲು ಹೆಣ್ಣು ಸಿಗದಂತಾಗಿದೆ. ದೇಶದ ಬೆನ್ನೆ ಲುಬು ರೈತ ಎಂದು ಬಾಯಿ ಮಾತಿಗೆ ಹೇಳಿದರೆ ಸಾಲದು, ಯುವ ರೈತರಿಗೆ ಹೆಣ್ಣು ಸಿಗುತ್ತಿಲ್ಲ. ಸರ್ಕಾರದ ಮಟ್ಟದಲ್ಲಿ ಇದರ ಬಗ್ಗೆ ಚರ್ಚೆಯಾಗಿ ಒಂದು ಕಾರ್ಯಕ್ರಮ ರೂಪಿಸಬೇಕು’ ಎಂದು ಗ್ರಾಮದ ಯುವಕರು ತಹಶೀಲ್ದಾರ್‌ರಿಗೆ ಮನವಿ ಸಲ್ಲಿಸಿದ ಅಪರೂಪ ಪ್ರಸಂಗ ನಡೆಯಿತು.
ಜಿಲ್ಲಾಧಿಕಾರಿ ನಡೆ ಹಳ್ಳಿಯಕಡೆ ಎಂಬ ವಿಶೇಷ ಕಾರ್ಯಕ್ರಮ ತಾಲೂಕಿ ನ ಲಕ್ಮಕೊಂಡನಹಳ್ಳಿಯಲ್ಲಿ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ 50ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದು, ಇವುಗಳಲ್ಲಿ ಯುವಕರ ಒಂದು ಅರ್ಜಿ ಎಲ್ಲರ ಗಮನ ಸೆಳೆಯಿತು. ಈ ಅರ್ಜಿಯಲ್ಲಿ ಮೊದಲ ಅಕ್ಷರಗಳೇ ಅವಿವಾಹಿತರಿಗೆ ವಿವಾಹ ಮಾಡಿಸುವಂತೆ ಜಿಲ್ಲಾಧಿಕಾರಿಗಳಿಗೆ ಲಕ್ಮಗೊಂಡನಹಳ್ಳಿ ಆಜು- ಬಾಜು ಯುವಕರು ಬರೆದಿದ್ದರು.
ಲಕ್ಮಗೊಂಡನಹಳ್ಳಿ ಹಾಗೂ ತಿಮ್ಮಾಲಪುರ ಗ್ರಾಮದಲ್ಲಿನ ರೈತಾಪಿ ವರ್ಗದ ಗಂಡು ಮಕ್ಕಳಿಗೆ ಮದುವೆ ಆಗಲು ಹೆಣ್ಣು ಮಕ್ಕಳು ಸಿಗುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳು ಯುವ ರೈತರನ್ನು ಮದುವೆಯಾಗಲು ಒಪ್ಪುತ್ತಿಲ್ಲ. ಆದ್ದರಿಂದ, ಸರ್ಕಾರದ ಮಟ್ಟದಲ್ಲಿ ಈ ಸಮಸ್ಯೆ ಬಗೆಹರಿಸಬೇಕು ಎಂಬುದು ಯುವಕರ ಮನವಿಯಾಗಿತು.
ಇದು ಗಂಭೀರ ಸಮಸ್ಯೆ: ಯುವಕರ ಅರ್ಜಿ ಕೆಲವರಿಗೆ ತಮಾಷೆಯಾಗಿ ಕಂಡರೂ ಸಹ ಇದು ಅತ್ಯಂತ ಗಂಭೀರವಾದ ಸಮಸ್ಯೆಯಾಗಿದೆ. ಸರ್ಕಾರ ಯುವಕರು ಹೆಚ್ಚು ಕೃಷಿಯಲ್ಲಿ ತೊಡಗಿಕೊಳ್ಳಬೇಕು.
ಸ್ವಯಂ ಉದ್ಯೋಗದಲ್ಲಿ ಜೀವನವನ್ನು ಕಟ್ಟಿಕೊಳ್ಳ ಬೇಕು ಎಂದು ಹಲವಾರು ಯೋಜನೆ ರೂಪಿಸುತ್ತದೆ. ಆದರೆ, ಯುವಕರು ಜೀವನ ಕಟ್ಟಿಕೊಳ್ಳಲು ದಿನನಿತ್ಯ ಶ್ರಮ ಹಾಕುತ್ತಾರೆ. ಆದರೆ, ಯುವ ರೈತರಿಂದ ತಾಳಿ ಕಟ್ಟಿಸಿಕೊಳ್ಳಲು ಇಂದಿನ ಬಹುತೇಕ ಯುವತಿಯರು ಮನಸ್ಸು ಮಾಡುವುದಿಲ್ಲ.
ಇದು ಯುವತಿಯರ ತಪ್ಪಲ್ಲ, ಕೃಷಿ ಪ್ರಧಾನ ದೇಶದಲ್ಲಿ ಕೃಷಿಕರಿಗೆ ಬೆಲೆ ಇಲ್ಲದಂತಾಗಿದ್ದು ಹಾಗೂ ಜೀವನಕ್ಕೆ ಭದ್ರತೆ ಸಿಗದಂತಾಗಿರುವುದು. ಹಳ್ಳಿಗಳಲ್ಲಿ ಯುವ ರೈತರಿಗೆ 35 ವರ್ಷ ಕಳೆದರೂ ಮದುವೆ ಮರೀಚಿಕೆಯಂತಾಗಿದೆ.
ಮದುವೆಯಾದರೆ ಪ್ರೋತ್ಸಾಹಧನ ನೀಡಿ: ದಿನನಿತ್ಯ ತೋಟ, ಹೊಲಗಳಲ್ಲಿ ದುಡಿಯುವ ಯುವಕರಿಗೆ ವಧು ಸಿಗದೇ ನೆಮ್ಮದಿ ಇಲ್ಲದಂ ತಾಗಿದೆ. ಈ ಸಮಸ್ಯೆ ಎಲ್ಲ ರೈತ ಕುಟುಂಬಗಳಲ್ಲಿ ಇದ್ದು, ಕೆಲವರು ತಮ್ಮ ಸಮಸ್ಯೆಯನ್ನು ನೇರವಾಗಿ ವ್ಯಕ್ತಪಡಿಸುತ್ತಾರೆ. ಇನ್ನೂ ಕೆಲವರು ಸುಮ್ಮ ನಾಗುತ್ತಾರೆ. ಸರ್ಕಾರ ಈ ಸಮಸ್ಯೆಯನ್ನು ಗಂಭೀ ರವಾಗಿ ಪರಿಗಣಿಸಬೇಕು. ಯುವ ರೈತರನ್ನು ಮದುವೆಯಾದರೆ ಸರ್ಕಾರ ಪ್ರೋತ್ಸಾಹಧನ ನೀಡಬೇಕು. ಇಲ್ಲವಾದರೆ ಅವರು ಬೆಳೆಯುವ ಬೆಳೆಗೆ ನಿಗದಿತ ಬೆಲೆ ಸಿಗುವಂತೆ ಮಾಡಬೇಕು. ರೈತ ಕುಟುಂಬಕ್ಕೆ ಆರ್ಥಿಕ ಭದ್ರತೆ ಸಿಗುವಂತಹ ಕಾರ್ಯ ಕ್ರಮ ರೂಪಿಸಬೇಕು ಎಂದು ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
MUST WATCH
ಹೊಸ ಸೇರ್ಪಡೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.