ಅಂಡರ್‌ಪಾಸ್ ನಿರ್ಮಾಣಕ್ಕಾಗಿ ಪ್ರಾಮಾಣಿಕ ಬೇಡಿಕೆ
ಬೈಪಾಸ್ ನಿರ್ಮಿಸಲು ಅಣೇಪಾಳ್ಯದವರ ವಿರೋಧವಿಲ್ಲ ! ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ವಿವರಣೆ
Team Udayavani, Feb 7, 2021, 4:22 PM IST
ತುಮಕೂರು: ಬೈಪಾಸ್ ನಿರ್ಮಾಣಕ್ಕೆ ಅಣೇಪಾಳ್ಯ ನಿವಾಸಿಗಳ ವಿರೋಧವಿಲ್ಲ. ಆದರೆ, ತಿಪಟೂರು ನಗರಕ್ಕೆ ಬರಲು ಅಗತ್ಯವಾದ ಅಂಡರ್‌ಪಾಸ್ ನಿರ್ಮಿಸಿಕೊಡಿ ಎಂಬುದಷ್ಟೇ ಅವರ ಪ್ರಾಮಾಣಿಕ ಬೇಡಿಕೆ ಎಂದು ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ತಿಳಿಸಿದರು.
ಜಿಲ್ಲೆಯ ತಿಪಟೂರು ನಗರದಲ್ಲಿ ಕಳೆದ 9 ದಿನಗಳಿಂದ ಜನರು ಬೀದಿಯಲ್ಲಿ ಕುಳಿತು ಅಹೋರಾತ್ರಿ ಧರಣಿ ನಡೆಸುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಿ, ಸ್ಥಳೀಯರ ಪರವಾಗಿ ಎನ್‌ಎಚ್ ಎಐ ಅಧಿಕಾರಿಗೆ ಮನವಿ ಮಾಡಿ ಮಾತನಾಡಿದ ಅವರು, ತಿಪಟೂರಿನ ಹಳೇಪಾಳ್ಯದಲ್ಲಿ ಕಳೆದ 9 ದಿನಗಳಿಂದ ಪ್ರತಿಭಟನೆ ನಡೆಸಿರುವ ಸ್ಥಳೀಯ ನಿವಾಸಿಗಳ ಜತೆ ತುಮಕೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಚೇರಿಗೆ ಭೇಟಿ ನೀಡಿ ಹಿರಿಯ ಅಧಿಕಾರಿಗೆ ಪತ್ರ ನೀಡಿ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯರ ಸಮಸ್ಯೆ ಆಲಿಸಬೇಕೆಂದು ತಿಳಿಸಿದ್ದೇನೆ ಎಂದರು.
ತಿಪಟೂರು ನಗರದ ಹೊರವಲಯದ ಬೈಪಾಸ್ ರಸ್ತೆ ನಿರ್ಮಾಣದಿಂದ ಹಳೇಪಾಳ್ಯ ನಿವಾಸಿಗಳು ತಿಪಟೂರಿನ ಜತೆ ಸಂಪರ್ಕಕ್ಕೆ ರಸ್ತೆಗೆ ತೊಂದರೆಯಾಗಿದ್ದು, ಸ್ಥಳೀಯರ ಅನುಕೂಲಕ್ಕಾಗಿ ಅಂಡರ್‌ಪಾಸ್ ನಿರ್ಮಿಸಿಕೊಡಬೇಕು ಎಂದು ಎನ್ ಎಚ್‌ಎಐ ಯೋಜನಾ ನಿರ್ದೇಶಕ ಸಿರಿಶ್‌ಗಂಗಾಧರ್ ಗೆ ಮನವಿ ಮಾಡಿರುವುದಾಗಿ ತಿಳಿಸಿದರು.
ಬೈಪಾಸ್ ರಸ್ತೆಯಿಂದ ಅಲ್ಲಿನ ಸ್ಥಳೀಯರಿಗೆ ನಯಾಪೈಸೆಯ ಲಾಭವಾಗುವುದಿಲ್ಲ ಆದರೂ, ಯೋಜನೆಗೆ ಇಲ್ಲಿನ ಜನರ ವಿರೋಧವಿಲ್ಲ ಆದರೆ, ಅವರು ರಸ್ತೆ ದಾಟಲು ಅನುಕೂಲವಾಗುವಂತೆ ಎಂಟು ಅಡಿ ಅಗಲದ ಒಂದು ಅಂಡರ್‌ಪಾಸ್ ಅವರ ಬೇಡಿಕೆಯಾಗಿದ್ದು ಕೂಡಲೇ ಅಧಿಕಾರಿಗಳು ಇದನ್ನು ಬಗೆಹರಿಸಬೇಕು ಎಂದು ಮನವಿ ಮಾಡಿದರು.
ಹಳೇಪಾಳ್ಯದಿಂದ ಕೆಂಚರಾಯನಗರ ಭಾಗದಿಂದ ತಿಪಟೂರು ನಗರದಲ್ಲಿ 30ಕ್ಕೂ ಹೆಚ್ಚು ಜನರು ತಳ್ಳುವ ಗಾಡಿಯಲ್ಲಿ ವ್ಯಾಪಾರ ನಡೆಸಿಕೊಂಡು ಬದುಕು ಕಂಡುಕೊಂಡಿದ್ದಾರೆ, ಬೈಪಾಸ್ ನಿರ್ಮಾಣದಿಂದ ರಸ್ತೆ ಅಣೇಪಾಳ್ಯದ ಜನರು ರಸ್ತೆ ದಾಟಲು ಸರ್ವಿಸ್ ರಸ್ತೆಯಲ್ಲಿ 1 ಕಿಮೀ ದೂರ ಬಳಸಿಕೊಂಡು ಬರಬೇಕು ಇದರಿಂದ ವ್ಯಾಪಾರಿಗಳು, ವೃದ್ಧರು, ಅಂಗವಿಕಲರಿಗೆ ತೊಂದರೆ ಮಾಡಿದೆ ಎಂದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಲಾಭದ ದೃಷ್ಟಿಯಲ್ಲಿ ನೋಡದೇ ಜನರ ಭಾವನೆಗಳನ್ನು ಗೌರವಿಸುವ ದೃಷ್ಟಿಯಿಂದ ಕೂಡಲೇ ಅಂಡರ್‌ಪಾಸ್ ನಿರ್ಮಾಣಕ್ಕೆ ಕ್ರಮಕೈಗೊಳ್ಳಬೇಕು, ಸ್ಥಳೀಯರು ತಮ್ಮ ಅಸ್ಥಿತ್ವ ಉಳಿಸಿಕೊಳ್ಳಲು ಪಕ್ಷಾತೀತವಾಗಿ ಕಳೆದ 9 ದಿನಗಳಿಂದ ನಿರಂತರವಾಗಿ ಧರಣಿ ನಡೆಸುತ್ತಿದ್ದು, ಮಹಿಳೆಯರೂ ಬೀದಿಗೆ ಬಂದು ಕುಳಿತಿದ್ದಾರೆ ಎಂದರು.
ಇದನ್ನೂ ಓದಿ :ಕೇಂದ್ರದಿಂದ ರೈತರ ಕಡೆಗಣನೆ: ವೀರಣ್ಣ
ಕಾಂಗ್ರೆಸ್ ಮುಖಂಡ ಸಿ.ಬಿ.ಶಶಿಧರ್ ಮಾತನಾಡಿ, ಬೈಪಾಸ್ ನಿರ್ಮಾಣದಿಂದ ಅಣೇಪಾಳ್ಯ ಹಾಗೂ ತಿಪಟೂರು ನಡುವಿನ ಸಂಪರ್ಕವೇ ಕಡಿತವಾಗಲಿದ್ದು, ಸಾಕಷ್ಟು ಜನರ ಬದುಕು ಬೀದಿಗೆ ಬರಲಿದೆ, ಮಹಿಳೆಯರು, ಮಕ್ಕಳು ಬೀದಿಯಲ್ಲಿ ಕುಳಿತು ಕಳೆದೊಂದು ವಾರದಿಂದಲೂ ಧರಣಿ ನಡೆಸುತ್ತಿದ್ದಾರೆ ಕೂಡಲೇ ಅಧಿಕಾರಿಗಳು ಆಗಮಿಸಿ ಸಮಸ್ಯೆಗೆ ಪರಿಹಾರ ಒದಗಿಸಬೇಕು ಎಂದರು.
ರೈತ ಕೃಷಿ ಕಾರ್ಮಿಕ ಸಂಘದ ಜಿಲ್ಲಾ ಸಂಚಾಲಕ ಸ್ವಾಮಿ, ಸ್ಥಳೀಯ ನಿವಾಸಿಗಳಾದ ನಾರಾಯಣ, ರಂಜಿತ, ರಂಗಧಾಮಯ್ಯ, ದಿವಾಕರ್, ಗಂಗಾಬಾಯಿ ಇತರರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharmasthala: ನ.26-30: ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
Siruguppa: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.