ಪ್ರಮೋದ್ ಸಾಂದರ್ಭಿಕ ಶಿಶು
ಯಾವ ಪಕ್ಷದ ಅಭ್ಯರ್ಥಿ ಎನ್ನುವುದು ಸ್ವತಃ ಪ್ರಮೋದ್‌ಗೆ ಗೊಂದಲವಿದೆ: ಶೋಭಾ
Team Udayavani, Apr 4, 2019, 2:38 PM IST
ಕಡೂರು: ಸಖರಾಯಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅಂಗಡಿಗಳಿಗೆ ತೆರಳಿ ಮತಯಾಚಿಸಿದರು.
ಕಡೂರು: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಸಾಂದರ್ಭಿಕ ಶಿಶು ಮಾತ್ರ ಎಂದು ಸಂಸದೆ ಶೋಭಾ ಕರಂದ್ಲಾಜೆ ಲೇವಡಿ ಮಾಡಿದರು. ತಾಲೂಕಿನ ಸಖರಾಯಪಟ್ಟಣದಲ್ಲಿ ಬುಧವಾರ ಉಡುಪಿ-ಚಿಕ್ಕಮಗಳೂರು ಲೋಕಸಭಾ ಚುನಾವಣೆಯ ಪ್ರಯುಕ್ತ ಮತಯಾಚಿಸಿ ಮಾತನಾಡಿದರು.
ಪ್ರಮೋದ್ ಮಧ್ವರಾಜ್ ಯಾವ ಪಕ್ಷದ ಅಭ್ಯರ್ಥಿ ಎಂಬುದು ಅವರಿಗೇ ಗೊತ್ತಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳುವಂತೆ ಸಮ್ಮಿಶ್ರ ಸರ್ಕಾರದಲ್ಲಿ ನಾನು ಹೇಗೆ ಸಾಂದರ್ಭಿಕ ಶಿಶುವೋ ಹಾಗೇ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದಿಂದ ಮಧ್ವರಾಜ್ ಸಹ ಒಬ್ಬರು. ಯಾರೂ ಇಲ್ಲದ ಕಾರಣ ಪ್ರಮೋದ್ ಅವರನ್ನು ಕರೆತಂದಿದ್ದಾರೆ ಎಂದರು.
ಸಮ್ಮಿಶ್ರ ಸರ್ಕಾರದಿಂದ ಅಭಿವೃದ್ಧಿ ಕೆಲಸ ಆಗುತ್ತಿಲ್ಲ. ಸಾಲಮನ್ನಾ ಮಾಡುತ್ತೇವೆ ಎಂದು ಬರಿ ತುಪ್ಪ ಹಚ್ಚುವ ಕೆಲಸವಾಗುತ್ತಿದೆ. ಬರಗಾಲದ ಕಾಮಗಾರಿಯೂ ನಡೆದಿಲ್ಲ ಎಂದು ಆರೋಪಿಸಿದರು.
ಪ್ರಮೋದ್ ಉಡುಪಿ ಬಿಟ್ಟರೆ ಎಲ್ಲಿಗೆ ಬಂದಿದ್ದಾರೆ. ಪಕ್ಕದ ಕುಂದಾಪುರ, ಕಾರ್ಕಳಕ್ಕಾಗಲಿ ಹೋಗಿಲ್ಲ. ಸಚಿವರಾಗಿದ್ದಾಗ ಚಿಕ್ಕಮಗಳೂರಿಗೆ ಎಷ್ಟು ಬಾರಿ ಬಂದಿದ್ದಾರೆ ಎಂದು ಅವರನ್ನೇ ಕೇಳಬೇಕು. ಅವರಿಗೆ ತಾನು ಜೆಡಿಎಸ್ ಅಭ್ಯರ್ಥಿಯೋ ಅಥವಾ ಕಾಂಗ್ರೆಸ್ ಅಭ್ಯರ್ಥಿಯೋ ಎಂಬ ಗೊಂದಲವಿದೆ. ಎರಡೂ ಚಿಹ್ನೆಗಳನ್ನು ಇಟ್ಟುಕೊಂಡು ತಿರುಗುತ್ತಿದ್ದಾರೆ. ಇಂತಹ ಗೊಂದಲದ ಅಭ್ಯರ್ಥಿ ನಮಗೆ ಬೇಕೆ ? ಎಂದು ಪ್ರಶ್ನಿಸಿದರು.
ಬಿಜೆಪಿ ಮುಖಂಡೆ ಎಚ್.ಸಿ. ಕಲ್ಮರುಡಪ್ಪ ಮಾತನಾಡಿ, ಮುಂದುವರೆದ ರಾಷ್ಟ್ರಗಳ ಸಾಲಿನಲ್ಲಿ ಭಾರತ ಇಂದು ನಿಂತಿದ್ದರೆ ಅದು ಮೋದಿಯವರ ಸರ್ಕಾರದ ಕೊಡುಗೆ. ದೇಶ ಮೊದಲು ನಂತರ ಎಲ್ಲವೂ ಎನ್ನುವ ಮೋದಿಯಂತಹ ನಾಯಕ ನಮಗೆ ಬೇಕಿದೆ. ಅದಕ್ಕಾಗಿ ರಾಜ್ಯದಲ್ಲಿ 22 ರಿಂದ 23 ಸ್ಥಾನಗಳನ್ನು ಗೆಲ್ಲುತ್ತೇವೆ ಎಂಬ ಭರವಸೆ ಇದೆ ಎಂದರು.
ಜಿಪಂ ಸದಸ್ಯ ವಿಜಯಕುಮಾರ್, ಸೋಮಶೇಖರ್, ಬೆಳವಾಡಿ ರವೀಂದ್ರ, ಜಸಿಂತ ಅನಿಲ್ ಕುಮಾರ್ ಮಾತನಾಡಿದರು. ಬಿಜೆಪಿ ಮುಖಂಡರಾದ ಶ್ರೀನಿವಾಸ ಗೌಡ, ಚಂದ್ರಶೇಖರಪ್ಪ, ಉಮೇಶ್, ಪಾದಮನೆ ದಿನೇಶ್, ರಾಜು, ಪ್ರದೀಪನಾಯ್ಕ, ರವಿನಾಯ್ಕ, ಸೌಭಾಗ್ಯ, ಶಶಿಧರ್, ಚಿದಾನಂದ ಹಾಗೂ ನೂರಾರು ಕಾರ್ಯಕರ್ತರು ಅಂಗಡಿ ಮುಂಗಟ್ಟುಗಳಲ್ಲಿ ಮತಯಾಚಿಸಿದರು.
ನರೇಂದ್ರ ಮೋದಿಯವರ ಚಿಂತನೆಯಂತೆ ನಮ್ಮ ರಾಷ್ಟ್ರವು ಆರ್ಥಿಕವಾಗಿ ಆರನೇ ಸ್ಥಾನದಲ್ಲಿದೆ. ಕಳೆದ ಐದು ವರ್ಷಗಳಲ್ಲಿ ಮೋದಿಯವರು ಬಡವರಿಗಾಗಿ, ರೈತರಿಗಾಗಿ ಹಲವಾರು ಯೋಜನೆಗಳು, ರಾಷ್ಟ್ರ ರಕ್ಷಣೆಗಾಗಿ ಕೈಗೊಂಡ ದಿಟ್ಟ ಕ್ರಮ ಎಲ್ಲರ ಮನಮುಟ್ಟಿದೆ. ಯುವಕರ, ವಿದ್ಯಾವಂತರ ಮತ್ತು ಬುದ್ಧಿವಂತರ ದೇಶ ಭಾರತವಾಗಿದೆ. ಇಲ್ಲಿರುವ ಸಂಪತ್ತನ್ನು ಸದ್ಬಳಕೆ ಮಾಡಿಕೊಳ್ಳುವಂತಹ ವ್ಯಕ್ತಿ ಬೇಕಾಗಿದ್ದಾರೆ. ನಮ್ಮ ರಾಷ್ಟ್ರವನ್ನು ಆರ್ಥಿಕವಾಗಿ ಮತ್ತು ರಕ್ಷಣೆಯಲ್ಲಿ ಒಂದು ಅಥವಾ ಎರಡು ಸ್ಥಾನಕ್ಕೆ ಕೊಂಡೊಯ್ಯಬೇಕಾದರೆ ಮೋದಿಯಂತಹ ದಿಟ್ಟ ನಾಯಕ ನಮ್ಮ ಜನಕ್ಕೆ ಬೇಕು. ಅದಕ್ಕಾಗಿ ಬಿಜೆಪಿ ಬೆಂಬಲಿಸಿ ಶೋಭಾ ಕರಂದ್ಲಾಜೆ, ಸಂಸದ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Election: ನಿಖಿಲ್ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್; ಕುತೂಹಲದತ್ತ ಚನ್ನಪಟ್ಟಣ
Karkala: ಶಾಲಾ ವಾಹನಕ್ಕೆ ಢಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವು
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
MUST WATCH
ಹೊಸ ಸೇರ್ಪಡೆ
Maharashtra Results 2024: ಮಾಹಾಯುತಿಗೆ ಭರ್ಜರಿ ಜನಮನ್ನಣೆ, ಮಹಾವಿಕಾಸ್ ಅಘಾಡಿಗೆ ಮುಖಭಂಗ
Maharashtra: ಫಲಿತಾಂಶಕ್ಕೂ ಮೊದಲೇ ರಾರಾಜಿಸುತ್ತಿದೆ ಅಜಿತ್ ಪವಾರ್ ಗೆಲುವಿನ ಬ್ಯಾನರ್
Aaram Aravinda Swamy Movie Review: ಪಕ್ಕದ್ಮನೆ ಹುಡುಗನ ಫನ್‌ರೈಡ್
Karnataka By Poll Results: ಮತಎಣಿಕೆ-ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು “ಕೈ” ಮುನ್ನಡೆ
By Election: ನಿಖಿಲ್ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್; ಕುತೂಹಲದತ್ತ ಚನ್ನಪಟ್ಟಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.