ಪೊಲೀಸರಿಗೆ ಸವಾಲಾದ ಬಾಲಕಿಯ ಅತ್ಯಾಚಾರ, ಕೊಲೆ ಪ್ರಕರಣ

ಕೆಲಸಕ್ಕೆಂದು ಹೋದಾಕೆಯನ್ನು ಅಪಹರಿಸಿ ಹಾಡಿಯಲ್ಲಿ ಕತ್ತು ಹಿಸುಕಲಾಯಿತೆ?

Team Udayavani, Mar 25, 2019, 6:30 AM IST

sagri

ಉಡುಪಿ: ಎಂದಿನಂತೆ ಅಂದೂ ಅಂಗಡಿಯೊಂದರ ಕೆಲಸಕ್ಕೆಂದು ಹೋದಾಕೆ ವಾಪಸಾಗದೆ ಇದ್ದಾಗ ಮನೆಯವರು ಪೊಲೀಸರಿಗೆ ದೂರು ನೀಡಿದ್ದರು. ಇದನ್ನು ಪೊಲೀಸರು ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸುವ ದಿನವೇ ಆಕೆ ಶವವಾಗಿ ಪತ್ತೆಯಾಗಿ ದ್ದಳು. ಮಾ.10ರ ಸಂಜೆ ಒಂದಷ್ಟು ಕೊಳೆತ ಸ್ಥಿತಿಯಲ್ಲಿದ್ದ ಶವವನ್ನು ಸ್ಥಳೀಯರು ಪತ್ತೆ ಹಚ್ಚಿ ಪೊಲೀಸರಿಗೆ ಮಾಹಿತಿ ರವಾನಿಸಿದ್ದರು. ಶವ ಪತ್ತೆಯಾದ ಸ್ಥಳ ಮಣಿಪಾಲ ನಗರದಿಂದ ಸುಮಾರು ಒಂದೂವರೆ ಕಿ.ಮೀ ದೂರದ ಸಗ್ರಿಯೆಂಬ ಒಂದಷ್ಟು ಒಳಪ್ರದೇಶದಂತಿರುವ ಹಾಡಿ ಜಾಗ. ಆಕೆ ಕೆಲಸ ಮಾಡುತ್ತಿದ್ದ ಅಂಗಡಿ ಪರಿಸರಕ್ಕೂ ಶವ ಪತ್ತೆಯಾದ ಸ್ಥಳಕ್ಕೂ ಸುಮಾರು 3ರಿಂದ 4ರಿಂದ 5 ಕಿ.ಮೀ ದೂರ.

ನಿರ್ಜನ ಪ್ರದೇಶ
ಉಡುಪಿ ಮತ್ತು ಮಣಿಪಾಲ ನಗರಗಳ ನಡುವೆ ಇರುವ ಕೆಲವೊಂದು ನಿರ್ಜನ ಪ್ರದೇಶಗಳಲ್ಲಿ ಸಗ್ರಿಯ ಈ ಹಾಡಿ ಪ್ರದೇಶವೂ ಒಂದು. ದೊಡ್ಡಣಗುಡ್ಡೆ ಮಾರ್ಗವಾಗಿ ಹೋಗುವುದಾದರೆ ದೊಡ್ಡಣಗುಡ್ಡೆಯ ಮುಖ್ಯರಸ್ತೆಯಿಂದ ಆ ಕಡೆಗೆ ಬಸ್‌ಗಳು ಸಂಚರಿಸುವುದಿಲ್ಲ. ಒಳರಸ್ತೆ ಕೊನೆಗೊಳ್ಳುವಲ್ಲಿ ಆಚೆ ಈಚೆ ಕೆಲವೊಂದು ಮನೆಗಳು, ಇತರ ಕಟ್ಟಡಗಳು ಇವೆಯಾದರೂ ಅನಂತರದ್ದು ಕಾಲು ಹಾದಿ. ದ್ವಿಚಕ್ರ ವಾಹನಗಳು ಸಂಚರಿಸುವಷ್ಟು ದಾರಿಯಿದೆ. ಮುಂದಕ್ಕೆ ಹೋದಂತೆ ಅದು ಕೂಡ ಕಷ್ಟಸಾಧ್ಯ. ಪೊದೆಗಳ ನಡುವಿನ ಈ ಸ್ಥಳ ಬಹುತೇಕ ನಿರ್ಜನ. ಪೂರ್ವಯೋಜಿತವಾಗಿಯೇ ಈ ಸ್ಥಳವನ್ನು ಆಯ್ಕೆ ಮಾಡಿ ಇಲ್ಲಿಯೇ ದುಷ್ಕೃತ್ಯ ಎಸಗಿರುವ ಸಾಧ್ಯತೆಗಳು ಅಧಿಕ. ಕುತ್ತಿಗೆಯನ್ನು ವೇಲ್‌ನಿಂದ ಬಿಗಿದು ಕೊಲೆ ಮಾಡಿರುವುದು ಬಹತೇಕ ಖಚಿತಗೊಂಡಿದೆ.

ಕೊಲೆ, ಅತ್ಯಾಚಾರ
ಬಾಲಕಿಯ ಮೈಮೇಲಿನ ಬಟ್ಟೆಗಳು ಅಸ್ತವ್ಯಸ್ತವಾಗಿದ್ದುದರಿಂದ ಪೊಲೀಸರು ಆರಂಭದಲ್ಲೇ ಇದೊಂದು ಅತ್ಯಾಚಾರ ಮತ್ತು ಕೊಲೆ ಪ್ರಕರಣವೆಂಬ ತೀರ್ಮಾನಕ್ಕೆ ಬಂದಿದ್ದರು. ಅನಂತರ ಪರೀಕ್ಷಾ ವರದಿಗಳು ಇದನ್ನು ದೃಢಪಡಿಸಿದ್ದವು. ಈಕೆ ಅಪ್ರಾಪೆ¤ (17 ವರ್ಷ) ಆಗಿದ್ದ ಕಾರಣ ಪೋಕೊÕà ಕಾಯಿದೆಯಡಿ ಪ್ರಕರಣ ದಾಖಲಾಗಿತ್ತು.

ಒಬ್ಬಂಟಿಯಿಂದ ಕೃತ್ಯ?
ಬಾಲಕಿಯನ್ನು ಬಲವಂತವಾಗಿ ಕೊಂಡೊಯ್ದಿದ್ದರೆ ಆತ ವಾಹನ ಬಳಸಿರ ಬಹುದು. ದ್ವಿಚಕ್ರವಾಹನದಲ್ಲಿ ಸಾಧ್ಯವಿಲ್ಲ. ನಾಲ್ಕುಚಕ್ರದಲ್ಲಾದರೆ ಬೇರೆಯವರ ಸಹಕಾರ ಬೇಕು. ಜಾಗದ ಬಗ್ಗೆ ಸಾಕಷ್ಟು ಮಾಹಿತಿ ಇರುವವರೇ ಇದರ ಹಿಂದಿರುವ ಸಾಧ್ಯತೆಗಳು ಅಧಿಕ. ಯುವತಿಯನ್ನು ಪುಸಲಾಯಿಸಿ ಕೊಂಡೊಯ್ದು ಅನಂತರ ದುಷ್ಕೃತ್ಯ ಎಸಗಲಾಗಿದೆಯೋ ಎಂಬ ಪ್ರಶ್ನೆ ಎದ್ದಿದೆ. ಸದ್ಯಕ್ಕೆ ಪೊಲೀಸರ ಬಳಿ ಒಂದಷ್ಟು “ಸುಳಿವು’ಗಳು ಮಾತ್ರ ಇವೆ.

ಸಿಸಿ ಟಿವಿ ನೆರವು?
ಆಕೆ ಕೆಲಸ ಮಾಡುತ್ತಿದ್ದುದು ನಗರ ಮಧ್ಯೆ ಅಂಗಡಿಯಲ್ಲಿ. ಹಾಗಾಗಿ ಸಿಸಿಟಿವಿ
ದೃಶ್ಯಗಳು ಪ್ರಕರಣ ಭೇದಿಸಲು ನೆರವಾಗ ಬಹುದೆಂಬ ನಿರೀಕ್ಷೆ ಪೊಲೀಸರಲ್ಲಿತ್ತು. ಅಂದೇ ಒಂದು ಸಿಸಿ ಟಿ.ವಿ ಫ‌ೂಟೇಜ್‌ ಕೂಡ ಪೊಲೀಸರ ಕೈಸೇರಿದೆ ಎನ್ನಲಾಗಿದೆ. ಇದರಲ್ಲಿ ಓರ್ವ ವ್ಯಕ್ತಿ ಬಲವಂತದ ರೀತಿಯಲ್ಲಿ ಬಾಲಕಿಯನ್ನು ಕರೆ ದೊಯ್ಯುವ ದೃಶ್ಯಗಳು ದಾಖಲಾಗಿವೆ ಎನ್ನುತ್ತವೆ ನಂಬಲರ್ಹ ಮೂಲಗಳು. ಆದರೆ ಆ ವ್ಯಕ್ತಿಯನ್ನು ನಿಖರವಾಗಿ ಗುರುತಿಸುವಷ್ಟು ಸ್ಪಷ್ಟತೆ ಈ ದೃಶ್ಯ ಹೊಂದಿಲ್ಲ. ಆದಾಗ್ಯೂ ಬೇರೊದು ಕೋನದಲ್ಲಿ ತನಿಖೆ ಮುಂದುವರೆಸಿರುವ ಪೊಲೀಸರು ಆಗಲೋ ಈಗಲೋ ಪ್ರಕರಣ ಭೇದಿಸಿಯೇ ತೀರುತ್ತೇವೆ ಎಂಬ ವಿಶ್ವಾಸ ಹೊಂದಿದ್ದಾರೆ.

ನೂತನ ಎಸ್‌ಪಿಗೆ ಮೊದಲ ಸವಾಲು
ಈ ವರ್ಷದ ಫೆ.23ರಂದು ಉಡುಪಿ ಎಸ್‌ಪಿಯಾಗಿ ಅಧಿಕಾರ ಸ್ವೀಕರಿಸಿರುವ ನಿಶಾ ಜೇಮ್ಸ್‌ ಅಧಿಕಾರ ಸ್ವೀಕಾರ ಸಂದರ್ಭ ಮಹಿಳೆಯರ ರಕ್ಷಣೆಗೂ ಹೆಚ್ಚಿನ ಆದ್ಯತೆ ನೀಡುವುದಾಗಿ ಹೇಳಿದ್ದರು. ಚಿತ್ರದುರ್ಗದ “ಓಬವ್ವ ಪಡೆ’, ಸಾಗರದಲ್ಲಿ ತಾನೇ ಮಾಡಿದ್ದ “ಕೆಳದಿ ಪಡೆ’ಯಂಥ ಪ್ರತ್ಯೇತ ಮಹಿಳಾ ಪೊಲೀಸರ ಪಡೆಯ ಅಗತ್ಯ ಉಡುಪಿಗೆ ಬೇಕಾದರೆ ಅದಕ್ಕೂ ಸಿದ್ಧಳಿದ್ದೇನೆ ಎಂದಿದ್ದರು. ಅವರು ಅಧಿಕಾರ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ಈ ಪ್ರಕರಣದ ಮೂಲಕ ಸವಾಲು ಎದುರಾಗಿದೆ.

ಕೇಳದ ಕೂಗು
ಬಾದಾಮಿಯಿಂದ ಉಡುಪಿಗೆ ಬಂದಿದ್ದ ಕಾರ್ಮಿಕ ದಂಪತಿಯ ಬಡ ಹೆಣ್ಮಗಳು ತನ್ನ ಕುಟುಂಬಕ್ಕೆ ಒಂದಿಷ್ಟು ನೆರವಾಗಬೇಕೆಂದು ಅಂಗಡಿಯಲ್ಲಿ ಕೆಲಸಕ್ಕೆ ಸೇರಿದ್ದಳು. ಈಗ ಕುಟುಂಬ ಅಸಹಾಯಕವಾಗಿದೆ. ಸುಶಿಕ್ಷಿತರ ಊರು ಎಂದು ಕರೆಯಲ್ಪಡುವ ಉಡುಪಿ, ಮಣಿಪಾಲ ಪರಿಸರದಲ್ಲಿಯೇ ಈ ರೀತಿ ದುಷ್ಕೃತ್ಯ ನಡೆದಿದೆ. ಆದರೆ ಯಾವುದೇ ಸಂಘಟನೆಗಳು ಇದುವರೆಗೆ ದನಿ ಎತ್ತಿಲ್ಲ.

ಬೀಟ್‌ ಪೊಲೀಸ್‌ ಬಲಿಷ್ಠವಾಗಲಿ
ಉಡುಪಿ, ಮಣಿಪಾಲದ ನಗರ ಕೇಂದ್ರ ಭಾಗಗಳನ್ನು ಹೊರತುಪಡಿಸಿದರೆ ಸುತ್ತಮುತ್ತ ಗಿಡಗಂಟಿಯ ನಿರ್ಜನ ಪ್ರದೇಶಗಳು ಹಲವಾರಿವೆ. ಕೆಲವು ತಿಂಗಳುಗಳ ಹಿಂದೆ ಉಡುಪಿ ನಗರದ ನಡುವೆಯೇ ಸಣ್ಣ ಹಾಡಿಯಂತಿದ್ದ ಪ್ರದೇಶದಲ್ಲಿ ಬೇರೆ ಜಿಲ್ಲೆಯ ಮಹಿಳೆಯೋರ್ವರ ಶವ ಪತ್ತೆಯಾಗಿತ್ತು. ಆ ತನಿಖೆಯೂ ತಾರ್ಕಿಕ ಅಂತ್ಯ ಕಂಡಿಲ್ಲ. ಇಂತಹ ಜಾಗಗಳನ್ನು ಕೇಂದ್ರೀಕರಿಸಿ ಪೊಲೀಸರು ಹೆಚ್ಚು ಜಾಗೃತವಾಗುವ, ಬೀಟ್‌ ಬಲಗೊಳಿಸುವ ಆವಶ್ಯಕತೆ ಇದೆ.

ಸಂತೋಷ್‌ ಬೊಳ್ಳೆಟ್ಟು

ಟಾಪ್ ನ್ಯೂಸ್

Edaneer-swmij

Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ

Constable-Hsn

Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್‌ ಬರ್ಬರ ಹ*ತ್ಯೆ!

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿUS Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ

Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ

Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ

Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ

ಸಜೀಪಮೂಡ: ಮನೆಗೆ ಸಿಡಿಲು ಬಡಿದು ಹಾನಿ

Bantwal ಸಜೀಪಮೂಡ: ಮನೆಗೆ ಸಿಡಿಲು ಬಡಿದು ಹಾನಿ

DK-Suresh

By Election: ಮಗನಿಗಾಗಿ ಎಚ್‌ಡಿಕೆ ನಿಮ್ಮ ಊರು ಹುಡುಕಿ ಬರುತ್ತಾರಷ್ಟೇ: ಡಿ.ಕೆ.ಸುರೇಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ

Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ

fraud-2

ಆನ್‌ಲೈನ್‌ನಲ್ಲಿ ಅಧಿಕ ಲಾಭಾಂಶದ ಆಮಿಷ: ಬ್ಯಾಂಕ್‌ ಮ್ಯಾನೇಜರ್‌ಗೆ ಲಕ್ಷಾಂತರ ರೂ. ವಂಚನೆ

ಸಿಎಂ ಕ್ಷಮೆಯಾಚಿಸಲಿ ರಾಘವೇಂದ್ರ ಆಗ್ರಹ

ಸಿಎಂ ಕ್ಷಮೆಯಾಚಿಸಲಿ ರಾಘವೇಂದ್ರ ಆಗ್ರಹ

Udupi: ಹೂಡೆ ಬೀಚ್‌ನಲ್ಲಿ ಪ್ರವಾಸಿಗರ ಮೇಲೆ ಸ್ಥಳೀಯರಿಂದ ಹಲ್ಲೆ

Udupi: ಹೂಡೆ ಬೀಚ್‌ನಲ್ಲಿ ಪ್ರವಾಸಿಗರ ಮೇಲೆ ಸ್ಥಳೀಯರಿಂದ ಹಲ್ಲೆ

2

Hiriydaka: ಒಟಿಪಿ ನೀಡಿ 5 ಲಕ್ಷ ರೂ. ಕಳೆದುಕೊಂಡ ಯುವತಿ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Edaneer-swmij

Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ

Constable-Hsn

Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್‌ ಬರ್ಬರ ಹ*ತ್ಯೆ!

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿUS Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ

Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ

Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ

Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.