ಗೊಬ್ಬರ ಮಾರಾಟದಲ್ಲೂ ಪುರಸಭೆ ದಾಖಲೆ!

Municipal record for fertilizer sales

Team Udayavani, Mar 27, 2019, 6:30 AM IST

gobbara

ಕುಂದಾಪುರ: ಮನೆ ಮನೆ, ಹೊಟೇಲ್‌, ಮಾಂಸದಂಗಡಿಗಳಿಂದ ಸಂಗ್ರಹಿಸಿದ ಕಸವನ್ನು ಗೊಬ್ಬರ ತಯಾರಿಸಿ ಮಾರಾಟ ಮಾಡುವಲ್ಲೂ ಇಲ್ಲಿನ ಪುರಸಭೆ ದಾಖಲೆ ಮಾಡಿದೆ. ಹೀಗೆ ಸಿದ್ಧಪಡಿಸಲು ಈ ಮೊದಲಿದ್ದ ಯಂತ್ರದ ಬದಲಾಗಿ ಈಗ ದಿನಕ್ಕೆ 80 ಟನ್‌ ಗೊಬ್ಬರ ತಯಾರಿಸಬಹುದಾದ ಹೊಸದಾಗಿ 60 ಲಕ್ಷ ರೂ.ಗಳ ಯಂತ್ರ ತರಿಸಲಾಗಿದೆ. ಸ್ಥಳೀಯಾಡಳಿತ ಸಂಸ್ಥೆಗಳ ಪೈಕಿ ದಾಖಲೆಯಾಗುವ ಕಾರ್ಯಕ್ಕೆ ಪುರಸಭೆ ಮುನ್ನುಗ್ಗುತ್ತಿದೆ. ಸಂಗ್ರಹವಾಗುವ ಕಸಕ್ಕೆ ಹೋಲಿಸಿದರೆ ಎರಡು ಜಿಲ್ಲೆಗಳಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಕಸದಿಂದ ಗೊಬ್ಬರ ತಯಾರಿ ನಡೆಯುತ್ತಿಲ್ಲ.

ತ್ಯಾಜ್ಯ ಸಂಗ್ರಹ
ಕಂದಾವರದಲ್ಲಿ 15 ಎಕರೆ ಜಾಗ ದಲ್ಲಿ ಕುಂದಾಪುರ ಪುರಸಭೆಯ ತ್ಯಾಜ್ಯ ಘಟಕ ಇದೆ. ಬಹುತೇಕ ಘಟಕಗಳಂತೆ ಇಲ್ಲಿ ತ್ಯಾಜ್ಯರಾಶಿ ಹಾಕುವುದಲ್ಲ. ಬದಲಿಗೆ ಸೂಕ್ತ ವಿಲೇವಾರಿ ಮಾಡಲಾಗುತ್ತದೆ. ಪ್ರತಿದಿನ ಸುಮಾರು 1,500 ಕಡೆಗಳಿಂದ ಒಟ್ಟು 12ರಿಂದ15 ಟನ್‌ ಕಸ ಸಂಗ್ರಹಿಸಲಾಗುತ್ತದೆ. ಇದರಲ್ಲಿ 9 ಟನ್‌ ಒಣಕಸವಾದರೆ 3 ಟನ್‌ನಷ್ಟು ತರಕಾರಿ ತ್ಯಾಜ್ಯ, ಹೋಟೆಲ್‌ ಇತ್ಯಾದಿಗಳ ಹಸಿಕಸವಿರುತ್ತದೆ. ಇದನ್ನೆಲ್ಲ ಕೊಂಡೊಯ್ದು ಕಂದಾವರದಲ್ಲಿ ಗುಡ್ಡೆ ಹಾಕಲಾಗುತ್ತದೆ ಎನ್ನುತ್ತಾರೆ ಪುರಸಭೆಯ ವಿಶ್ವನಾಥ ಅವರು.

ವಿಲೇವಾರಿ
ತೇವಾಂಶಭರಿತ ಕಸವನ್ನು 45 ದಿನಗಳ ಕಾಲ ಒಂದೆಡೆ ಹಾಕಲಾಗುತ್ತದೆ. ಎರಡು ದಿನಕ್ಕೊಮ್ಮೆ ಇದನ್ನು ಮಿಶ್ರ ಮಾಡಲಾಗುತ್ತದೆ. ಆಗ ಅದರಲ್ಲಿನ ತೇವದ ಅಂಶ ಹರಿದು ಹೋಗುತ್ತದೆ. ಹೀಗೆ ಹರಿದುಹೋದ ವಿಷಯುಕ್ತ ನೀರನ್ನು ಕಾಂಕ್ರಿಟ್‌ ಕಾಲುವೆ ಮೂಲಕ ಕಾಂಕ್ರಿಟ್‌ ತೊಟ್ಟಿಗೆ ಹರಿಸಿ ರಾಸಾಯನಿಕ ಬಳಸಿ ಆವಿ ಮಾಡಲಾಗುತ್ತದೆ. 45 ದಿನಗಳ ಬಳಿಕ ಒಣಗಿದ ಕಸವನ್ನು ಯಂತ್ರದ ಮೂಲಕ ಹುಡಿ ಮಾಡಿ ಜರಡಿಯಾದರೆ ಗೊಬ್ಬರ ಸಿದ್ಧವಾಗುತ್ತದೆ. ಹೀಗೆ ಸಿದ್ಧವಾದ ಗೊಬ್ಬರ ಪ್ರಯೋಗಾಲಯದಿಂದ ಪ್ರಮಾಣಪತ್ರ ಪಡೆದಿದ್ದು ಕೆಜಿಗೆ 3.5 ರೂ., 2.5 ರೂ. ದರದಂತೆ ಮಾರಾಟ ಮಾಡಲಾಗುತ್ತದೆ. ತಿಂಗಳಿಗೆ 20ಟನ್‌ನಷ್ಟು ಇಂತಹ ಗೊಬ್ಬರ ಈವರೆಗೆ ತಯಾರಾಗುತ್ತಿತ್ತು.

ಬೆಲ್ಲ ಇತ್ಯಾದಿ ಹಾಕಿ ಅದನ್ನು ಕಸದ ರಾಶಿಯ ಮಧ್ಯೆ ಇಟ್ಟು ಜೀವದ್ರವ್ಯ ತಯಾರಿಸಲಾಗುತ್ತಿದೆ. ಇದಕ್ಕೆ 1:40 ಪ್ರಮಾಣದಲ್ಲಿ ನೀರು ಸೇರಿಸಿ ಹೂವಿನ ಗಿಡ, ತರಕಾರಿ ಗಿಡ, ಅಡಿಕೆ ತೋಟಕ್ಕೆ ಜೀವದ್ರವ್ಯವಾಗಿ ಬಳಸಬಹುದಾಗಿದೆ. ಅಂತೆಯೇ ಎರೆಗೊಬ್ಬರ ಕೂಡಾ ತಯಾರಿಸಲಾಗುತ್ತಿದೆ ಎಂದು ವಿವರಿಸುತ್ತಾರೆ ಆರೋಗ್ಯ ನಿರೀಕ್ಷಕ ರಾಘವೇಂದ್ರ.

ಹೊಸಯಂತ್ರ
ಈವರೆಗೆ ಕಾರ್ಯಾಚರಿಸುತ್ತಿದ್ದ ಹಳೆಯಂತ್ರದ ಬದಲಿಗೆ ಈಗ ಬೆಂಗಳೂರಿನ ಸಾಧನಾ ಎನ್ವರೋ ಎಂಜಿನಿಯರಿಂಗ್‌ ಸರ್ವಿಸಸ್‌ ಸಂಸ್ಥೆಗೆ ಆದ ಟೆಂಡರ್‌ನಂತೆ 60 ಲಕ್ಷ ರೂ. ವೆಚ್ಚದಲ್ಲಿ ಹೊಸದಾಗಿ ಟ್ರಾ ಮಿಲ್‌ ಯಂತ್ರ ಅಳವಡಿಸಲಾಗಿದೆ. ಸುಧಾರಿತ ಗೊಬ್ಬರ ತಯಾರಿಕೆಗೆ ಪುರಸಭೆಯ ಪರಿಸರ ಎಂಜಿನಿಯರ್‌ ಮಂಜುನಾಥ ಶೆಟ್ಟಿ ಅವರು ಮಾರ್ಗದರ್ಶನ ಮಾಡಿದ್ದು ಕಡಿಮೆ ಮಾನವ ಶ್ರಮದಲ್ಲಿ ಯಂತ್ರಗಳ ಮೂಲಕವೇ ಸಿದ್ಧಪಡಿಸಲಾಗುತ್ತಿದೆ. ವಿಶಾಲವಾದ ಈ ಜಾಗದಲ್ಲಿ 350ರಷ್ಟು ಗಿಡಗಳನ್ನು ಬೆಳೆಸಲಾಗಿದೆ.

ಆದಾಯ
ಕಸಸಂಗ್ರಹದಿಂದ ಪುರಸಭೆಗೆ ವಾರ್ಷಿಕ 40 ಲಕ್ಷ ರೂ. ಆದಾಯವಿದೆ, 1.2ಕೋ.ರೂ. ಖರ್ಚಾಗುತ್ತದೆ. ಇನ್ನು ಸುಮಾರು 10 ಲಕ್ಷ ರೂ. ಗೊಬ್ಬರ ಮಾರಾಟದಿಂದ ನಿರೀಕ್ಷಿಸಲಾಗಿದೆ.
ಜೀವದ್ರವ್ಯ ಕೋಳಿತ್ಯಾಜ್ಯವನ್ನು ಕ್ಯಾನ್‌ನಲ್ಲಿ ಸಂಗ್ರಹಿಸಿ

ಮರುಗೊಬ್ಬರ
10 ವರ್ಷಗಳಷ್ಟು ಹಿಂದಿನ ಕಸದ ಸಂಗ್ರಹ ಇಲ್ಲಿದ್ದು ಅವುಗಳಲ್ಲಿ ಪ್ಲಾಸ್ಟಿಕ್‌ ಇತ್ಯಾದಿಗಳನ್ನು ಬೇರ್ಪಡಿಸಿ ಸಾಧ್ಯವಾದಷ್ಟು ಗೊಬ್ಬರ ತಯಾರಿ ಮಾಡಬೇಕಿದೆ. ಪರಿಸರಕ್ಕೆ ಹಾನಿಯಾಗದಂತೆ, ಪರಿಸರದ ಜನತೆಗೆ ಎಲ್ಲೂ ದುರ್ಗಂಧ ಪಸರಿಸದಂತೆ ತ್ಯಾಜ್ಯ ವಿಲೇ ಘಟಕದ ಕಾರ್ಯಾಚರಣೆಯಿದೆ.
-ಶರತ್‌, ಆರೋಗ್ಯ ನಿರೀಕ್ಷಕ, ಪುರಸಭೆ

ಪಂಚಾಯತ್‌ಗಳ ಕಸವೂ ಗೊಬ್ಬರ
ಈಗಾಗಲೇ ಪುರಸಭೆಗೆ ಬರುವ ನೀರನ್ನು 5 ಪಂಚಾಯತ್‌ಗಳಿಗೆ ನೀಡಲಾಗುತ್ತಿದೆ. ಅಂತೆಯೇ ತ್ಯಾಜ್ಯ ವಿಲೇಗೆ ಜಾಗದ ಸಮಸ್ಯೆ ಇರುವ ಪಂಚಾಯತ್‌ಗಳು ಇಲ್ಲಿಗೆ ಹಸಿಕಸ ಕೊಟ್ಟರೆ ಅದನ್ನು ಗೊಬ್ಬರವಾಗಿಸಲಾಗುವುದು. ಹೊಸಯಂತ್ರದಲ್ಲಿ ದಿನಕ್ಕೆ 20 ಟನ್‌ ಗೊಬ್ಬರ ತಯಾರಿಸಬಹುದು. ಇದಕ್ಕೂ ಆಡಳಿತ ಮಂಡಳಿ ಅಂದೇ ಸಹಮತ ಸೂಚಿಸಿ ಯಂತ್ರಸ್ಥಾಪನೆಗೆ ಮುಂದಡಿಯಿಟ್ಟದ್ದು.
-ಗೋಪಾಲಕೃಷ್ಣ ಶೆಟ್ಟಿ, ಮುಖ್ಯಾಧಿಕಾರಿ, ಪುರಸಭೆ

ಟಾಪ್ ನ್ಯೂಸ್

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

death

Gangolli: ಲಾರಿ ಪ್ರಯಾಣದ ವೇಳೆ ಕ್ಲೀನರ್‌ ಸಾವು

accident2

Padubidri: ಅಪರಿಚಿತ ವಾಹನ ಢಿಕ್ಕಿ;‌ ಪಾದಚಾರಿಗೆ ತೀವ್ರ ಗಾಯ

de

Padubidri: ಕೆಎಸ್‌ಆರ್‌ಟಿಸಿ ಬಸ್ಸು ಢಿಕ್ಕಿ; ಪಾದಚಾರಿ ಸಾವು

accident

Kundapura: ಕಾರು ಢಿಕ್ಕಿ; ಸ್ಕೂಟರ್‌ ಸವಾರನಿಗೆ ಗಾಯ

Udupi: ಗೀತೋತ್ಸವದಲ್ಲಿ ಹಾಸ್ಯೋತ್ಸವ; ನಕ್ಕು ನಲಿದ ಜನಸ್ತೋಮ

Udupi: ಗೀತೋತ್ಸವದಲ್ಲಿ ಹಾಸ್ಯೋತ್ಸವ; ನಕ್ಕು ನಲಿದ ಜನಸ್ತೋಮ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

death

Gangolli: ಲಾರಿ ಪ್ರಯಾಣದ ವೇಳೆ ಕ್ಲೀನರ್‌ ಸಾವು

accident2

Padubidri: ಅಪರಿಚಿತ ವಾಹನ ಢಿಕ್ಕಿ;‌ ಪಾದಚಾರಿಗೆ ತೀವ್ರ ಗಾಯ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

de

Padubidri: ಕೆಎಸ್‌ಆರ್‌ಟಿಸಿ ಬಸ್ಸು ಢಿಕ್ಕಿ; ಪಾದಚಾರಿ ಸಾವು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.