ಮಣಿಪಾಲ: ಬಾಲಕಿ ಕೊಲೆ ಆರೋಪಿ ಪೊಲೀಸ್ ಕಸ್ಟಡಿಯಿಂದ ಪರಾರಿ
Team Udayavani, Apr 1, 2019, 10:32 AM IST
ಉಡುಪಿ: ಮೂಡು ಸಗ್ರಿಯಲ್ಲಿ 17 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಆತ ಹಿರಿಯಡಕದ ಜೈಲಿಗೆ ಕೊಂಡೊಯ್ಯುತ್ತಿದ್ದಾಗ ಪೊಲೀಸರ ಕೈಯಿಂದ ತಪ್ಪಿಸಿಕೊಂಡಿದ್ದಾನೆ.
ಬಂಧಿತನಾದ ಮೂಲತಃ ಬಾದಾಮಿ ತಾಲೂಕಿನ, ಪ್ರಸ್ತುತ ಕಾಪು ಮಲ್ಲಾರು ಗ್ರಾಮ ದಲ್ಲಿದ್ದ ಹನುಮಂತ ಬಸಪ್ಪ ಕಂಬಳಿ(39)ಯನ್ನು ರವಿವಾರ ಮಣಿಪಾಲ ಪೊಲೀಸರು ಉಡುಪಿ ನ್ಯಾಯಾಧೀಶರ ಎದುರು ಹಾಜರು ಪಡಿಸಿದ್ದರು. ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದ ಹಿನ್ನೆಲೆಯಲ್ಲಿ ಪೊಲೀಸ್ ವಾಹನದಲ್ಲಿ ಹಿರಿಯಡಕದ ಜಿಲ್ಲಾ ಕಾರಾಗೃಹಕ್ಕೆ ಕರೆದೊಯ್ಯುತ್ತಿದ್ದಾಗ ತಪ್ಪಿಸಿಕೊಂಡಿದ್ದಾನೆ. ಆತ ಕಾರಾಗೃಹದ ಸಮೀಪವೇ ರಾತ್ರಿ 7 ಗಂಟೆ ವೇಳೆಗೆ ತಪ್ಪಿಸಿಕೊಂಡಿದ್ದು, ಪೊಲೀಸರು ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ. ಬಾಲಕಿಗೆ ಹೆಚ್ಚು ಸಂಬಳದ ಆಮಿಷ ಒಡ್ಡಿದ್ದ ಆರೋಪಿಗೆ ಮಾರ್ಚ್ ತಿಂಗಳ ಮೊದಲ ವಾರದಲ್ಲಿ ಬಾಲಕಿಯ ಪರಿಚಯವಾಗಿತ್ತು. ಹೆಚ್ಚಿನ ಸಂಬಳದ ಕೆಲಸ ಕೊಡಿಸುವುದಾಗಿ ನಂಬಿಸಿ ಆಕೆ ಯನ್ನು ಮೂಡುಸಗ್ರಿ ರೈಲು ಹಳಿ ಸಮೀಪದ ಹಾಡಿಗೆ ಕರೆದೊಯ್ದು ಅತ್ಯಾಚಾರ ನಡೆಸಿದ್ದ.
ವಿಷಯ ಬಹಿರಂಗದ ಭೀತಿಯಿಂದ ಕೊಲೆ
ವಿಷಯವನ್ನು ಮನೆಯವರಿಗೆ ತಿಳಿಸುವುದಾಗಿ ಬಾಲಕಿ ಹೇಳಿದಾಗ ಗಾಬರಿಗೊಂಡ ಆರೋಪಿ ಚೂಡಿದಾರದ ಶಾಲಿನಿಂದ ಆಕೆಯ ಕುತ್ತಿಗೆ ಬಿಗಿದು ಕೊಲೆ ಮಾಡಿ ಪರಾರಿಯಾಗಿದ್ದ ಎಂದು ತನಿಖೆ ವೇಳೆ ತಿಳಿದುಬಂದಿದೆ ಉಡುಪಿಯ ಅಂಗಡಿಯೊಂದರಲ್ಲಿ ಕೆಲಸಕ್ಕಿದ್ದ ಬಾಲಕಿ ನಾಪತ್ತೆಯಾಗಿದ್ದ ಬಗ್ಗೆ ಮಾ.10ರಂದು ಬೆಳಗ್ಗೆ ಹೆತ್ತವರು ಪೊಲೀಸರಿಗೆ ದೂರು ನೀಡಿದ್ದರು. ಅಂದು ಸಂಜೆ ಮೂಡುಸಗ್ರಿಯ ಹಾಡಿಯಲ್ಲಿ ಶವ ಪತ್ತೆಯಾಗಿತ್ತು. ಎಸ್‌ಪಿ ನಿಶಾ ಜೇಮ್ಸ್ ನಿರ್ದೇಶನ, ಎಎ ಸ್‌ಪಿ ಕುಮಾರಚಂದ್ರ ಹಾಗೂ ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಟಿ. ಜೈ ಶಂಕರ್ ಅವರ ಮಾರ್ಗದರ್ಶನದಲ್ಲಿ ನಡೆಸಲಾದ ಕಾರ್ಯಾಚರಣೆಯಲ್ಲಿ ಮಣಿಪಾಲ ವೃತ್ತ ನಿರೀಕ್ಷಕ ಎಚ್.ಟಿ. ಸುನಿಲ್ ಕುಮಾರ್, ಮಣಿಪಾಲ ಎಸ್‌ಐ ಶ್ರೀಧರ್ ಎಂ.ಪಿ., ಮಣಿಪಾಲದ ಪ್ರೊಬೆಷನರಿ ಎಸ್‌ಐ ನಿರಂಜನ್ ಗೌಡ ಹಾಗೂ ಸಿಬಂದಿ, ಉಡುಪಿ ಡಿಸಿಐಬಿಯ ನಿರೀಕ್ಷಕ ಸಿ. ಕಿರಣ್ ಮತ್ತು ಸಿಬಂದಿ, ಉಡುಪಿ ಸೆನ್ ನಿರೀಕ್ಷಕ ಸೀತಾರಾಮ್ ಮತ್ತು ಅವರ ಸಿಬಂದಿ ಪಾಲ್ಗೊಂಡಿದ್ದರು.
ಬಂಧನಕ್ಕೆ ನೆರವಾದ ಸಿಸಿಟಿವಿ ದೃಶ್ಯ
ಪೊಲೀಸರಿಗೆ ದೊರೆ ತಿದ್ದ ಸಿಸಿಟಿವಿಯ ದೃಶ್ಯಾವಳಿಯಲ್ಲಿ ಅನು ಮಾನಾಸ್ಪದ ವ್ಯಕ್ತಿಯ ಅಸ್ಪಷ್ಟ ಮಾಹಿತಿ ಸಿಕ್ಕಿತ್ತು. ಆದರೆ ಆರೋಪಿಯನ್ನು ಗುರುತಿಸುವುದು ಸಾಧ್ಯವಾಗಲಿಲ್ಲ. ಅನಂತರ ತನಿಖೆಗಾಗಿ ಎಸ್‌ಪಿ ನಿಶಾ ಜೇಮ್ಸ್ 3 ತಂಡಗಳನ್ನು ರಚಿಸಿದ್ದರು. ಆಗ ಸುಮಾರು 35-40 ವರ್ಷದ ವಯಸ್ಸಿನ ಕಪ್ಪಗಿನ ವ್ಯಕ್ತಿ ಬಾಲಕಿಯನ್ನು ಹಿಂಬಾಲಿಸಿಕೊಂಡು ಬಂದು ಆಕೆಯೊಂದಿಗೆ ಮಾತನಾಡಿ, ಆಕೆಯನ್ನು ಮೂಡುಸಗ್ರಿಗೆ ಕರೆದೊಯ್ದುದು ಗೊತ್ತಾಗಿದೆ. ಮಾ.30ರಂದು ಸಿಟಿ ಬಸ್ ನಿಲ್ದಾಣದಲ್ಲಿ ಆರೋಪಿಯನ್ನು ಬಂಧಿಸಲಾಯಿತು.
ಕಕ್ಕುಂಜೆ ಅಪಘಾತ: ಬೈಕ್ ಸವಾರ ಸಾವು
ಸಿದ್ದಾಪುರ: ಹಾಲಾಡಿ ಸಮೀಪದ ಕಕ್ಕುಂಜೆ ಕ್ರಾಸ್ ಬಳಿ ಶನಿವಾರ ರಾತ್ರಿ ಬೈಕಿಗೆ ಟ್ಯಾಂಕರ್ ಢಿಕ್ಕಿಯಾಗಿ ಸವಾರ ಸಾವನ್ನಪ್ಪಿದ್ದು, ಸಹ ಸವಾರನನ್ನು ಚಿಂತಾಜನಕ ಸ್ಥಿತಿಯಲ್ಲಿ ಮಣಿಪಾಲದ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಹಾರ್ದಳ್ಳಿ – ಮಂಡಳ್ಳಿ ಗ್ರಾಮದ ಮರ್ಜಿ ಚೇತನ್ (19) ಮೃತಪಟ್ಟ ಯುವಕ ಹಾಗೂ ಶಿವಮೊಗ್ಗ ಮೂಲದ ದೀಪಕ್ ಗಾಯಾಳು. ಶನಿವಾರ ರಾತ್ರಿ ಹಾಲಾಡಿ ಕಕ್ಕುಂಜೆ ಕ್ರಾಸ್ ಬಳಿ ಅಪಘಾತ ಸಂಭವಿಸಿತ್ತು.
ಬಡ ಕುಟುಂಬ
ಬೈಕ್ ಸವಾರರಿಬ್ಬರೂ ಬಡ ಕುಟುಂಬವಾಗಿದ್ದು, ಒಟ್ಟಿಗೆ ಗಾರೆ ಕೆಲಸ ಮಾಡುತ್ತಿದ್ದರು. ಚೇತನ್‌ನ ತಂದೆ ಮೃತಪಟ್ಟಿದ್ದು, ತಾಯಿ ಮತ್ತು ತಂಗಿಯಿದ್ದಾರೆ. ಈ ಕುಟುಂಬಕ್ಕೆ ಇವರೇ ಆಧಾರವಾಗಿದ್ದರು. ದೀಪಕ್ ಹಾರ್ದಳ್ಳಿ – ಮಂಡಳ್ಳಿಯಲ್ಲಿರುವ ಚಿಕ್ಕಮ್ಮನ ಮನೆಯಲ್ಲಿದ್ದುಕೊಂಡು ಗಾರೆ ಕೆಲಸ ಮಾಡುತ್ತಿದ್ದರು. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.