1.75 ಲಕ್ಷ ರೂ. ಮೌಲ್ಯದಲ್ಲಿ 25 ಸಾವಿರ ಹಣತೆ ಗುರಿ
ಭಿನ್ನ ಸಾಮರ್ಥ್ಯದ ಮಕ್ಕಳ ಕೈಯಲ್ಲಿ ಅರಳುತ್ತಿದೆ ಅಲ್ಯುಮೀನಿಯಂ ಹಣತೆ
Team Udayavani, Nov 10, 2020, 4:01 AM IST
ಕಾರ್ಕಳ: ವಿಶೇಷ ಸಾಮರ್ಥ್ಯವುಳ್ಳ ಮಕ್ಕಳಲ್ಲಿ ಸ್ವಾವಲಂಬಿ ಪ್ರೇರಣೆ ನೀಡುವ ನಿಟ್ಟಿನಲ್ಲಿ ಕಾರ್ಕಳದ ಅಯ್ಯಪ್ಪನಗರ ವಿಜೇತ ವಿಶೇಷ ವಸತಿ ಶಾಲೆಯು ವಿನೂತನ ಪ್ರಯತ್ನವನ್ನು ಮಾಡುತ್ತಿದೆ.
ಅಯ್ಯಪ್ಪನಗರ ವಿಜೇತ ವಿಶೇಷ ವಸತಿ ಶಾಲೆಯಲ್ಲಿರುವ ಭಿನ್ನ ಸಾಮರ್ಥ್ಯದ 24 ಮಂದಿ ಮಕ್ಕಳು ಅಲ್ಯುಮೀನಿಯಂ ಹಣತೆ ತಯಾರಿ ಮಾಡುವ ಮೂಲಕ ದೀಪಾವಳಿಗೆ ಕಷ್ಟದ ಅಂಧಕಾರ ಹೋಗಲಾಡಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಹಣತೆ ಮಾರಾಟದಿಂದ ಬಂದ ಹಣವನ್ನು ಮಕ್ಕಳ ಶಾಲೆಯ ಶ್ರೇಯೋಭಿವೃದ್ಧಿಗೆ ಬಳಸಿಕೊಳ್ಳಲು ನಿರ್ಧಾರಿಸಲಾಗಿದೆ. ಮಕ್ಕಳ ಜತೆ ಹೆತ್ತವರು ಕೂಡ ಈ ಕಾರ್ಯಕ್ಕೆ ಸಾಥ್ ನೀಡುತ್ತಿದ್ದಾರೆ.
ಶಾಲೆಯಲ್ಲಿ ವಿಭಿನ್ನ ಸಾಮರ್ಥ್ಯದ 75 ಮಕ್ಕಳಿದ್ದು ಕೊರೊನಾ ಹಿನ್ನೆಲೆಯಲ್ಲಿ ಮಕ್ಕಳು ಈಗ ತಮ್ಮ ಪೋಷಕರ ಜತೆ ಮನೆಗಳಲ್ಲಿ ಉಳಿದುಕೊಂಡಿದ್ದಾರೆ. ಶಾಲೆಯಲ್ಲೀಗ ಅನಾಥ 5 ಮಂದಿ ಮಕ್ಕಳಷ್ಟೇ ಇದ್ದಾರೆ. ಅವರ ಪೈಕಿ 24 ಮಂದಿ ಮಕ್ಕಳು 25 ವಯಸ್ಸಿಗಿಂತ ಮೇಲ್ಪಟ್ಟವರು. ಅವರು ಮನೆಗಳಲ್ಲಿ ಹೆತ್ತವರ ನೆರವಿನಿಂದ ಹಣತೆಗಳನ್ನು ಸಿದ್ಧಗೊಳಿಸುತ್ತಿದ್ದು, ಅವರಿಗೆ ತರಬೇತಿ ಕೂಡ ನೀಡಲಾಗಿದೆ. ಈ ಬಾರಿಯ ದೀಪಾವಳಿಗೆ 25 ಸಾವಿರ ಹಣತೆಗಳನ್ನು ಸಿದ್ಧಗೊಳಿಸುವ ಗುರಿಯಿಂದ ತಯಾರಿ ಆರಂಭವಾಗಿದೆ. 20 ಸಾವಿರ ಹಣತೆಗಳು ಸಿದ್ಧಗೊಂಡಿವೆ. ಗುರಿ ತಲುಪಲು 5ಸಾವಿರ ಹಣತೆಗಳ ತಯಾರಿ ಬಾಕಿಯಿದೆ.
ಮಕ್ಕಳು ಸಿದ್ಧಪಡಿಸಿದ ಹಣತೆಗಳನ್ನು ತಲಾ 12ರಂತೆ ಪ್ಯಾಕ್ ಮಾಡಲಾಗುತ್ತಿದೆ. ಪ್ಯಾಕೊಂದರ ಬೆಲೆ 85 ರೂ. ಎಂದು ನಿಗದಿಪಡಿಸಲಾಗಿದೆ. ಮಂಗಳೂರು ಮೂಲದ ವೆಬ್‌ಸೈಟ್ ಮೂಲಕ ಹಾಗೂ ಸ್ಥಳಿಯ ಅಂಗಡಿಗಳಲ್ಲಿ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.
ಭಿನ್ನ ಸಾಮರ್ಥ್ಯದ ಮಕ್ಕಳ ಶಾಲೆ (ವಿಶೇಷ ಶಾಲೆ) ವಿದ್ಯಾರ್ಥಿಗಳು ಹಣತೆ ತಯಾರಿಸುತ್ತಿದ್ದಾರೆ ಎಂದಾಗ ಅಚ್ಚರಿ ಜತೆಗೆ ಮಾನವೀಯತೆಯ ಭಾವನೆಯಿಂದ ನೋಡುವವರೇ ಹೆಚ್ಚು. ವಿಷಯ ತಿಳಿದ ಅನೇಕ ಮಂದಿ ಬಡ ಮಕ್ಕಳಿಗೆ ನೆರವಾಗಲೆಂದು ನೇರ ಶಾಲೆಗೆ ಬಂದು ಹಣತೆ ಖರೀದಿಸಿ ತೆರಳುತ್ತಿದ್ದಾರೆ. 15 ಸಾವಿರ ಹಣತೆ ವಿವಿಧ ರೂಪಗಳಲ್ಲಿ ಈಗಾಗಲೇ ಮಾರಾಟವಾಗಿದೆ.
ವಿಜೇತ ವಿಶೇಷ ವಸತಿಯುತ ಶಾಲೆ 2016ರಲ್ಲಿ ಆರಂಭಗೊಂಡಿದೆ. ಮಕ್ಕಳ ಬೆಳವಣಿಗೆಗೆ ಪೂರಕ ವ್ಯವಸ್ಥೆಗಳು ಇಲ್ಲಿವೆ. ಮಕ್ಕಳ ಪೋಷಕರು ಬಡವರೇ ಆದ ಕಾರಣ ಅವರ ಮೇಲೆ ಯಾವುದೇ ಹೊರೆಯನ್ನು ಹೊರೆಸುತ್ತಿಲ್ಲ. ಹುಟ್ಟುಹಬ್ಬ ಆಚರಣೆ, ವಿಶೇಷ ಕಾರ್ಯಕ್ರಮಗಳ ಮೂಲಕ ದಾನಿಗಳು ಆರ್ಥಿಕ ಜತೆಗೆ ವಿವಿಧ ರೂಪದಲ್ಲಿ ದೇಣಿಗೆ, ವಸ್ತು ರೂಪದಲ್ಲಿ ಕೊಡುಗೆಗಳನ್ನು ನೀಡುತ್ತ ಮಕ್ಕಳ ಮೇಲೆ ಪ್ರೀತಿ ತೋರಿಸುತ್ತಾರೆ. ಈ ನಂಬಿಕೆಯಲ್ಲೆ ಶಾಲೆ ಉತ್ತಮವಾಗಿ ನಡೆಯುತ್ತಿದೆ ಎನ್ನುತ್ತಾರೆ ಸಂಸ್ಥಾಪಕಿ ಕಾಂತಿ ಹರೀಶ್.
ಎಲ್ಲ ರೀತಿಯ ನೆರವು
ಹಣತೆ ತಯಾರಿಸಲು 1.75 ಲಕ್ಷ ರೂ. ಹಣ ವೆಚ್ಚ ಮಾಡಲಾಗುತ್ತಿದೆ. ವಿಜೇತ ಶಾಲೆಯಿಂದ ಮನೆಗಳಲ್ಲಿ ಸಿದ್ಧಪಡಿಸಲು ಎಲ್ಲ ರೀತಿಯ ಸಾಮಗ್ರಿ ಗಳನ್ನು ನೀಡಲಾಗುತ್ತಿದೆ. ಅಲ್ಯುಮೀನಿಯಂ ನಿಂದ ಹಣತೆ ಸಿದ್ಧಪಡಿಸಲಾಗುತ್ತಿದೆ.
ಖುಷಿಯಾಗುತ್ತಿದೆ
ನನಗೆ ಹಣತೆ ತಯಾರಿಸಲು ತರಬೇತಿ ನೀಡಿದ್ದರಿಂದ ಸುಲಭವಾಗಿ ಹಣತೆ ಮಾಡುವುದನ್ನು ಕಲಿತೆ. ಇದರಿಂದ ಮನಸ್ಸಿಗೆ ಖುಷಿಯಾಗುತ್ತಿದೆ. ಸಮಯವೂ ಕಳೆದು ಹೋಗುತ್ತಿದೆ.
-ಸುರೇಶ್, ವಿಜೇತ ವಿಶೇಷ ಶಾಲೆ ವಿದ್ಯಾರ್ಥಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಮಲ್ಪೆ ಬಂದರಿನಲ್ಲಿ ಮೀನು ಕಳ್ಳರಿಗೆ ಧರ್ಮದೇಟು
Manipal: ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸೂಚನೆ
ಕಲಾವಿದರ ಮಾಸಾಶನ ಹೆಚ್ಚಳಕ್ಕೆ ಸಿಗದ ಆರ್ಥಿಕ ಇಲಾಖೆ ಒಪ್ಪಿಗೆ
Udupi: ಗೀತಾರ್ಥ ಚಿಂತನೆ-148: ಹೇಳುವುದು ಸುಖವಾದರೂ ಆಗುವುದು ದುಃಖ
Udupi: ಶ್ರೀಕೃಷ್ಣಮಠದಲ್ಲಿ ದಾಸವರೇಣ್ಯ ಶ್ರೀ ವಿಜಯದಾಸರು ಸಿನೆಮಾ ಪ್ರದರ್ಶನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.