ಸಂಚಾರಿಗಳಿಗೆ ಸಂಚಕಾರ: ಬಾಳ್ಕಟ್ಟು ತಿರುವು
10 ಕೋಟಿ ರೂ. ಕಾಮಗಾರಿ ನಡೆದರೂ ರಾ.ಹೆ. ತಿರುವಿಗೆ ಮುಕ್ತಿ ಸಿಕ್ಕಿಲ್ಲ
Team Udayavani, Jan 23, 2020, 5:24 AM IST
ಹಲವು ಜಿಲ್ಲೆಗಳನ್ನು ಕರಾವಳಿಯೊಂದಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಹೆದ್ದಾರಿ ಯಾಗಿದ್ದರೂ ಲೋಕೋಪಯೋಗಿ ಇಲಾಖೆ ತಿರುವು ನೇರಗೊಳಿಸುವ ಪ್ರಯತ್ನ ನಡೆಸಿಲ್ಲ.
ಸಿದ್ದಾಪುರ: ಕುಂದಾಪುರ- ಶಿವಮೊಗ್ಗ ರಾಜ್ಯ ಹೆದ್ದಾರಿಯ ಅಂಪಾರು- ಸಿದ್ದಾಪುರ ಮಧ್ಯೆ ಇರುವ ಬಾಳ್ಕಟ್ಟು ತಿರುವು ವಾಹನ ಸವಾರರ ಪಾಲಿಗೆ ತೀವ್ರ ಅಪಾಯಕಾರಿ ಸ್ಥಳ. ಇಲ್ಲಿ ರಸ್ತೆ ಕಾಮಗಾರಿ ನಡೆದರೂ ತಿರುವಿಗೆ ಮಾತ್ರ ಮುಕ್ತಿ ಸಿಗದ್ದರಿಂದ ಅಪಘಾತದ ತಾಣ ಇನ್ನೂ ಹಾಗೆಯೇ ಇದೆ.
ಕೇಂದ್ರ ಸರಕಾರದ ಸಿಆರ್‌ಎಫ್ ಫಂಡ್‌ನಲ್ಲಿ ಈ ಭಾಗದಲ್ಲಿ ರಸ್ತೆ ಕಾಮಗಾರಿ ನಡೆದಿತ್ತು. ಅಷ್ಟೇ ಅಲ್ಲದೇ ಇದರ ನಿರ್ವಹಣೆ ಅವಧಿಯೂ ಮುಗಿಯುತ್ತ ಬಂದಿದೆ. ಆದರೆ ಈ ಪ್ರದೇಶದಲ್ಲಿರುವ ತಿರುವು ಮಾತ್ರ ಹಾಗೆಯೇ ಇದೆ.
10 ಕೋ. ರೂ. ಕಾಮಗಾರಿ; ಫಲಿತಾಂಶ ಶೂನ್ಯ
ಕುಂದಾಪುರ- ಶಿವಮೊಗ್ಗ ರಾಜ್ಯ ಹೆದ್ದಾರಿಯಾಗಿದ್ದರೂ ಕೂಡ, ಹೆದ್ದಾರಿಯ ಅಭಿವೃದ್ಧಿಗಾಗಿ ರಾಷ್ಟ್ರೀಯ ಹೆದ್ದಾರಿ ಉಪ ವಿಭಾಗದವರಿಗೆ 2017-18ನೇ ಸಾಲಿನಲ್ಲಿ ರಸ್ತೆಯನ್ನು ಹಸ್ತಾಂತರಿಸಲಾಗಿದೆ. ಕುಂದಾಪುರ ವಡೇರಹೋಬಳಿಯಿಂದ ಉಡುಪಿ ಹಾಗೂ ಶಿವಮೊಗ್ಗ ಜಿಲ್ಲೆಯ ಗಡಿ ಭಾಗದವರೆಗೆ 45 ಕಿ. ಮೀ. ಉದ್ದದ ರಸ್ತೆಯನ್ನು ಸಿಆರ್‌ಎಫ್ ಫಂಡ್‌ನಲ್ಲಿ ಕಾಮಗಾರಿ ನಡೆಸಲು 10 ಕೋಟಿ ರೂ. ಮಂಜೂರಾಗಿ ಕಾಮಗಾರಿಯೂ ನಡೆದಿತ್ತು. ಆದರೆ ತಿರುವನ್ನು ಸರಿಪಡಿಸುವ ಗೋಜಿಗೆ ಹೋಗಿಲ್ಲ. ತಿರುವು ಸರಿಪಡಿಸುವಂತೆ ಈ ಭಾಗದ ಜನರು ಮತ್ತು ವಾಹನ ಸವಾರರು ಆಗ್ರಹಿಸಿದ್ದರೂ ಫಲಿತಾಂಶ ಮಾತ್ರ ಶೂನ್ಯವಾಗಿದೆ. ತಿರುವು ಸರಿಪಡಿಸುವ ಕೂಗು ಇಲಾಖೆಯವರಿಗೆ ಇನ್ನೂ ಕೇಳಿಲ್ಲ.
“ಊ’ ಆಕಾರದ ತಿರುವು
ಮೂಡುಬಗೆ ಗಣಪತಿ ದೇವಸ್ಥಾನದಿಂದ ಬಡಬಾಳು ತನಕ ರಸ್ತೆ “ಊ’ ಆಕಾರದಲ್ಲಿದೆ. ವಾಹನಗಳು ಹಾವು ಹೋಗುವ ರೀತಿಯಲ್ಲಿ ಸಾಗಬೇಕಾಗಿರುವುದರಿಂದ ಪರಸ್ಪರ ಗೋಚರವಾಗುವುದಿಲ್ಲ. ವಾಹನ ದಟ್ಟಣೆ ಇರುವ ಈ ರಸ್ತೆಯ ತಿರುವಿನಲ್ಲಿ$ಸೂಚನ ಫಲಕಗಳೂ ಇಲ್ಲ. ವಾಹನ ದಟ್ಟಣೆ ಹೆಚ್ಚಿದ್ದರೂ ರಸ್ತೆ ಸ್ವರೂಪ ಮಾತ್ರ ಹಾಗೆಯೇ ಇದೆ.
ಸೂಚನ ಫಲಕಗಳೂ ಇಲ್ಲಿಲ್ಲ
ತಿರುವುನಲ್ಲಿ ಪ್ರತಿ ವರ್ಷವೂ ದುರಸ್ತಿ ಎಂಬಂತೆ ತೇಪೆ ಕಾರ್ಯ ನಡೆಯುತ್ತದೆ ಹೊರತು ನೇರವಾಗಿಸುವ ಕಾರ್ಯ ಆಗುವುದೇ ಇಲ್ಲ. ವಾಹನ ದಟ್ಟಣೆ ಇರುವ ಈ ರಸ್ತೆಯ ತಿರುವಿನಲ್ಲಿ$ಜಾಗೃತಾ ಸೂಚನ ಫಲಕಗಳೂ ಇಲ್ಲ.
ನಿತ್ಯ ಸಾವಿರಾರು ವಾಹನಗಳ ಸಂಚಾರ ಇದ್ದರೂ ಕೂಡ ಇಂದಿಗೂ ಈ ತಿರುವನ್ನು ನೇರವಾಗಿಸುವ ಪ್ರಯತ್ನಕ್ಕೆ ಇಲಾಖೆ ಮುಂದಾಗಿಲ್ಲ. ಪರಿಣಾಮ ದಿನ ನಿತ್ಯ ಸಣ್ಣಪುಟ್ಟ ಅಪಘಾತಗಳು ನಡೆಯುತ್ತಿರುತ್ತವೆ.
ಕೂಡಲೇ ಗಮನಹರಿಸಿ
ಇಲ್ಲಿ ವಾಹನ ದಟ್ಟಣೆ ಹೆಚ್ಚು. ಬಾಳ್ಕಟ್ಟು ತಿರುವು ಅಪಾಯಕಾರಿಯಾಗಿರುವುದರಿಂದ ಆಗಾಗ ಅಪ ಘಾತಗಳೂ ಸಾಮಾನ್ಯ. ತಿರುವನ್ನು ನೇರವಾಗಿಸಿದರೆ ಅಪಘಾತವಾಗುವುದನ್ನು ತಪ್ಪಿಸಬಹುದು. ಕಾಮಗಾರಿ ನಡೆಯುವಾಗ ಇಲಾಖೆಯ ಗಮನಕ್ಕೆ ತಂದರೂ, ಈ ಬಗ್ಗೆ ಗಮನಹರಿಸಿಲ್ಲ. ಇನ್ನಾದರೂ ಇಲಾಖೆ ಹಾಗೂ ಜನಪ್ರತಿನಿಧಿಗಳು ಗಮನ ಹರಿಸಬೇಕು.
-ಉದಯಕುಮಾರ ಶೆಟ್ಟಿ ಮೂಡುಬಗೆ,
ಸದಸ್ಯರು ಗ್ರಾ. ಪಂ. ಅಂಪಾರು
ರಸ್ತೆ ನೇರವಾಗಿಸಲು ಯತ್ನ
ರಾಷ್ಟ್ರೀಯ ಹೆದ್ದಾರಿ ಉಪ ವಿಭಾಗದವರಿಗೆ 2017-18ನೇ ಸಾಲಿನಲ್ಲಿ ರಸ್ತೆಯನ್ನು ಹಸ್ತಾಂತರಿಸಲಾಗಿದ್ದು 10 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಯೂ ನಡೆದಿದೆ. 2ವರ್ಷದ ಮೆಂಟೆನೆನ್ಸ್ ಕೂಡ ಮುಗಿಯುತ್ತ ಬಂದಿದೆ. ಲೋಕೋಪಯೋಗಿ ಇಲಾಖೆಗೆ ಪುನಃ ಹೆದ್ದಾರಿ ಹಸ್ತಾಂತರಿಸಿದಾಗ ಮತ್ತೆ ಕ್ರಿಯಾಯೋಜನೆ ಸಿದ್ಧ ಪಡಿಸಿ, ಹೆದ್ದಾರಿ ನೇರವಾಗಿಸುವ ಬಗ್ಗೆ ಪ್ರಯತ್ನಿಸುತ್ತೇವೆ.
-ರಾಘವೇಂದ್ರ ನಾಯ್ಕ,
ಎಂಜಿನಿಯರ್‌ಲೋಕೋಪಯೋಗಿ ಇಲಾಖೆ ಉಡುಪಿ ಜಿಲ್ಲೆ ಕುಂದಾಪುರ ಉಪ ವಿಭಾಗ
ವರದಿ ಸಲ್ಲಿಕೆ
ಪೊಲೀಸ್ ಇಲಾಖೆ ವತಿಯಿಂದ ಅಪಘಾತ ವಲಯವೆಂದು ಲೋಕೋಪಯೋಗಿ ಇಲಾಖೆಗೆ ವರದಿ ಸಲ್ಲಿಸಲಾಗಿದೆ. ಈ ವರದಿ ಅನ್ವಯ ರಸ್ತೆಯ ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆ ಮುಂದಾಗಬೇಕಾದುದು ಸವಾರರ ಸುರಕ್ಷೆಯ ಹಿತದೃಷ್ಟಿಯಿಂದ ತುರ್ತು ಅಗತ್ಯವಾಗಿದೆ.
-ಶ್ರೀಧರ್ ನಾಯ…R, ಉಪನಿರೀಕ್ಷಕರು ಶಂಕರನಾರಾಯಣ ಪೊಲೀಸ್ ಠಾಣೆ
ಅಪಘಾತ ವಲಯ
ಈ ರಸ್ತೆ ಕೇವಲ ಎರಡು ಜಿಲ್ಲೆಯ ಮಧ್ಯೆ ಸಂಪರ್ಕ ಸೇತು ಮಾತ್ರವಾಗಿದ್ದರೆ ಬಳ್ಳಾರಿ-ದಾವಣಗೆರೆ ಮತ್ತಿತರ ಜಿಲ್ಲೆಗಳನ್ನು ಕರಾವಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಹೆದ್ದಾರಿಯಾಗಿದೆ. ನಿತ್ಯ ಸಾವಿರಾರು ವಾಹನಗಳು ಇಲ್ಲಿ ಸಂಚರಿಸುತ್ತವೆ. ಪರಿಣಾಮ ಇಲ್ಲಿ ಅಪಘಾತ ನಿತ್ಯವೂ ಆಗುತ್ತಿರುತ್ತವೆ. ರಸ್ತೆಯ ಇಕ್ಕೆಲಗಳಲ್ಲಿ ಬೆಳೆದು ನಿಂತ ಬೃಹತ್ ಮರಗಳು ಮತ್ತು ಪೊದೆ-ಗಿಡಗಂಟಿಗಳಿಂದ ತಿರುವಿನಲ್ಲಿ ಎದುರು ಕಡೆಯಿಂದ ಬರುವ ವಾಹನಗಳು ಗೋಚರಿಸದೆ ಅಪಘಾತ ಸಂಭವಿಸುತ್ತಿರುತ್ತವೆ.
-ಸತೀಶ್ ಆಚಾರ್ ಉಳ್ಳೂರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka ಭಾಷೆಗೆ ಅಕಾಡೆಮಿ ಅಥವಾ ಅಧ್ಯಯನ ಪೀಠ ಅಗತ್ಯ: ರವಿಶಂಕರ್ ಭಟ್
Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ
Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ
Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು
Udupi; ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರೋಗಿಯ ರಕ್ಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.