ಬೇಕಿದ್ದ ಕಾಲಕ್ಕೆ ಕೈಕೊಟ್ಟು ಕೆಟ್ಟು ನಿಂತ “108′ ಆ್ಯಂಬ್ಯುಲೆನ್ಸ್’
Team Udayavani, Mar 30, 2018, 6:25 AM IST
ಪಡುಬಿದ್ರಿ: ಹೃದ್ರೋಗಿ ಓರ್ವರನ್ನು ತುರ್ತು ಚಿಕಿತ್ಸೆಗಾಗಿ ಕೆಎಂಸಿ ಆಸ್ಪತ್ರೆಗೆ ಒಯ್ಯಲೆಂದು ಬಂದಿದ್ದ ಸರಕಾರಿ ಸೇವೆಯ 108 ಆ್ಯಂಬುಲೆನ್ಸ್ ಉಪಯೋಗಕ್ಕಿಲ್ಲದೇ ಕೈಕೊಟ್ಟು ಕೆಟ್ಟು ನಿಂತಿದ್ದರಿಂದ ರೋಗಿಯನ್ನು ಬೇರೇ ಖಾಸಗಿ ಆ್ಯಂಬುಲೆನ್ಸ್ ವಾಹನಕ್ಕೆ ಸ್ಥಳಾಂತರಿಸಿ ಅದರಲ್ಲಿಯೇ ಆಸ್ಪತ್ರೆಗೊಯ್ಯಬೇಕಾದ ಸನ್ನಿವೇಶವು ಪಡುಬಿದ್ರಿಯಲ್ಲಿ ಮಾ. 29ರಂದು ಘಟಿಸಿತು.
ಸಾರ್ವಜನಿಕರ ಪರದಾಟ
ಹೆಜಮಾಡಿಯ ರೋಗಿಯೋರ್ವರನ್ನು ತುರ್ತು ಸಂದರ್ಭದಲ್ಲಿ ತಮ್ಮ ಖಾಸಗಿ ಕಾರಲ್ಲಿಯೇ ಪಡುಬಿದ್ರಿಯ ಖಾಸಗಿ ಚಿಕಿತ್ಸಾಲಯಕ್ಕೆ ಮಾಜಿ ತಾ. ಪಂ. ಸದಸ್ಯ ಭಾಸ್ಕರ ಪಡುಬಿದ್ರಿ ಅವರು ಕರೆತಂದಿದ್ದರು. ಆ ಮಧ್ಯೆಯೇ ಅವರು ಸರಕಾರಿ ಆ್ಯಂಬುಲೆನ್ಸ್ ಕರೆ ಮಾಡಿದ್ದು ಪಡುಬಿದ್ರಿಗೆ ಸುಮಾರು ಅರ್ಧ ಗಂಟೆಗಳ ಬಳಿಕ ಈ ಆ್ಯಂಬುಲೆನ್ಸ್ ಆಗಮಿಸಿತ್ತು. ಇದಕ್ಕೆ ಚಿಕಿತ್ಸಾಲಯದಿಂದ ರೋಗಿಯನ್ನು ಕೂಡಾ ಸ್ಥಳಾಂತರಿಸಲಾಗಿತ್ತು. ಆಮ್ಲಜನಕವನ್ನೂ ಹೃದ್ರೋಗಿಗೆ ಅಳವಡಿಸಲಾಗಿತ್ತು. ಆ ವೇಳೆಗೆ 108 ಚಾಲಕನು ತನ್ನ ವಾಹನವು ಕೆಟ್ಟು ಹೋಗಿರುವುದಾಗಿ ಹೇಳಿದ. ರೋಗಿಯ ಸಂಬಂಧಿಕರ ಸಹಿತ ಸಾರ್ವಜನಿಕರು ಪರದಾಡುವಂತಾಯಿತು.
ಬಳಿಕ ಖಾಸಗಿ ವಾಹನ ಸೇವೆಯನ್ನು ಪಡೆದು ರೋಗಿಯನ್ನು ಮಂಗಳೂರು ಕೆಎಂಸಿಗೆ ಚಿಕಿತ್ಸೆಗಾಗಿ ಡಾ| ಭವಾನಿಶಂಕರ್ ಸಹಾಯದೊಂದಿಗೆ ಒಯ್ಯುತ್ತಿರುವಾಗಲೇ ಅವರು ಕೊನೆಯುಸಿರೆಳೆದರು. ಸರಕಾರಿ ಸೇವೆಯ ಸದ್ಬಳಕೆಯ ಉದ್ದೇಶದಿಂದ ಈ ಜನಸೇವಾ ವಾಹನಗಳನ್ನು ಸಶಕ್ತವಾಗಿರಿಸಬೇಕೆಂಬ ಸಾರ್ವಜನಿಕ ಆಕ್ರೋಶವೂ ವ್ಯಕ್ತವಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.