12.50 ಲ.ರೂ. ವಿದ್ಯಾರ್ಥಿವೇತನ, ಸಹಾಯಧನ ವಿತರಣೆ
Team Udayavani, Aug 16, 2017, 9:40 AM IST
ಕಾಪು: ಮರಳುಗಾಡಿನ ರಾಷ್ಟ್ರಗಳಲ್ಲಿ ಹೊಟ್ಟೆಪಾಡಿಗಾಗಿ ದುಡಿಯುತ್ತಿರುವ ಬಿಲ್ಲವ ಸಮಾಜದ ಜನರು ಸಮದಾಯದ ಜನರ ಬಗೆಗೆ ಹೊಂದಿರುವ ಕಾಳಜಿ ಪ್ರಶಂಸನೀಯವಾಗಿದೆ. ಮಕ್ಕಳೇ ಭವಿಷ್ಯದ ಆಸ್ತಿಗಳೆಂಬ ಚಿಂತನೆಯೊಂದಿಗೆ ಯುವಶಕ್ತಿಗೆ ಆಧಾರವಾಗುವ ನಿಟ್ಟಿನಲ್ಲಿ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವ ಸಂಘಟನೆಗಳ ಸೇವಾ ಕಾರ್ಯ ಶ್ಲಾಘನೀಯವಾಗಿದೆ ಎಂದು ಕಾಪು ಶಾಸಕ ವಿನಯ ಕುಮಾರ್ ಸೊರಕೆ ಹೇಳಿದರು.
ಕಟಪಾಡಿ ವಿಶ್ವನಾಥ ಕ್ಷೇತ್ರದ ಗುರುಪ್ರಸಾದ ಆಡಿಟೋರಿಯಂನಲ್ಲಿ ಆ. 13ರಂದು ಬಿಲ್ಲವಾಸ್ ದುಬಾೖ ಮತ್ತು ನಾರ್ತರ್ನ್ ಎಮಿರೇಟ್ಸ್ ಚಾರಿಟೆಬಲ್ ಟ್ರಸ್ಟ್ ಮಂಗಳೂರು ಇವರ ನೇತೃತ್ವದಲ್ಲಿ ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರ ಮತ್ತು ಶ್ರೀ ಗುರು ಚಾರಿಟೇಬಲ್ ಟ್ರಸ್ಟ್ ಸುರತ್ಕಲ್ ಇವರ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ವಿದ್ಯಾರ್ಥಿ ವೇತನ, ಪ್ರತಿಭಾವಂತರಿಗೆ ಸಮ್ಮಾನ ಮತ್ತು ಆರೋಗ್ಯ ನಿಧಿ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
1. ಕೋ. ರೂ. ನೆರವು
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬಿಲ್ಲವಾಸ್ ದುಬಾೖನ ಅಧ್ಯಕ್ಷ ಸತೀಶ್ ಪೂಜಾರಿ ಬೆಳಪು ಮಾತನಾಡಿ, ಸಮಾಜದಲ್ಲಿರುವ ಪ್ರತೀಯೋರ್ವ ಪ್ರತಿಭಾವಂತ ವಿದ್ಯಾರ್ಥಿ-
ವಿದ್ಯಾರ್ಥಿನಿಯರೂ ಹಣಕಾಸಿನ ಅಡಚಣೆಯಿಂದಾಗಿ ಶೈಕ್ಷಣಿಕವಾಗಿ ಹಿಂದುಳಿಯುಂತಾಗಬಾರದು ಎಂಬ ಚಿಂತನೆಯೊಂದಿಗೆ ಕಳೆದ 11 ವರ್ಷಗಳಲ್ಲಿ 85 ಲಕ್ಷ ರೂ. ವಿದ್ಯಾರ್ಥಿ ವೇತನ ಮತ್ತು 15 ಲಕ್ಷ ರೂ. ಅನುದಾನವನ್ನು ಆರೋಗ್ಯ ನಿಧಿಗಾಗಿ ವಿತರಿಸಲಾಗಿದೆ ಎಂದರು.
ವಿದ್ಯಾರ್ಥಿವೇತನ
ಬಿಲ್ಲವಾಸ್ ದುಬಾೖ ಮತ್ತು ನಾರ್ತನ್ ಎಮಿರೇಟ್ಸ್ ಚಾರಿಟೆಬಲ್ ಟ್ರಸ್ಟ್ (ರಿ.) ಮಂಗಳೂರು ಇವರ ನೇತೃತ್ವದಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 200ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ 10.50 ಲಕ್ಷ ರೂ. ವಿದ್ಯಾರ್ಥಿ ವೇತನ, ಸಾಮಾಜಿಕ ಭದ್ರತಾ ಯೋಜನೆಯಡಿ 2.00 ಲಕ್ಷ ರೂ. ಸಹಾಯಧನವನ್ನು ವಿತರಿಸಲಾಯಿತು.
ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷೆ ಪ್ರೊ| ಜಾನಕಿ ಬ್ರಹ್ಮಾವರ, ಸಮೂಹ ಸಂಪನ್ಮೂಲ ವ್ಯಕ್ತಿ ಪ್ರತಿಭಾ ಕುಳಾç, ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದ ಕ್ಷೇತ್ರಾಡಳಿತ ಮಂಡಳಿಯ ಅಧ್ಯಕ್ಷ ಅಶೋಕ್ ಎಂ. ಸುವರ್ಣ, ಶ್ರೀ ಗುರು ಚಾರಿಟೆಬಲ್ ಟ್ರಸ್ಟ್‌ನ ಅಧ್ಯಕ್ಷ ಚಂದ್ರಶೇಖರ್ ನಾನಿಲ್, ಗೆಜ್ಜೆಗಿರಿ ನಂದನಬಿತ್ತಿಲ್ ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ರವಿ ಪೂಜಾರಿ ಚಿಲಿಂಬಿ, ಬಿಲ್ಲವಾಸ್ ದುಬಾೖನ ಪದಾಧಿಕಾರಿಗಳಾದ ಪ್ರಕಾಶ್ ಪೂಜಾರಿ, ದೀಪಕ್ ಪೂಜಾರಿ, ಆನಂದ ಬೈಲೂರು, ವಸಂತ್ ತುಂಬೆ, ಪ್ರಭಾಕರ ಪೂಜಾರಿ, ನಾಗರಾಜ ಅಮೀನ್, ವಿಠಲ ಪೂಜಾರಿ ಉಪಸ್ಥಿತರಿದ್ದರು.
ಬಿಲ್ಲವಾಸ್ ದುಬಾೖ ಮತ್ತು ನಾರ್ತನ್ ಎಮಿರೇಟ್ಸ್ ಚಾರಿಟೆಬಲ್ ಟ್ರಸ್ಟ್‌ನ ಗೌರವಾಧ್ಯಕ್ಷ ಜಿತೇಂದ್ರ ಸುವರ್ಣ ಪ್ರಸ್ತಾವನೆಗೈದರು. ಅಧ್ಯಕ್ಷ ಸತೀಶ್ ಪೂಜಾರಿ ಬೆಳಪು ಸ್ವಾಗತಿಸಿದರು. ಮಾಜಿ ಕಾರ್ಯದರ್ಶಿ ಮಾಧವ ಪೂಜಾರಿ ವಂದಿಸಿದರು. ಜಯಶ್ರೀ ಸುಧಾಕರ್ ಮತ್ತು ಶರತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.