ದ.ಕ., ಉಡುಪಿಯಲ್ಲಿ 16 ವಸತಿ ಸಮುಚ್ಚಯ
ರಾಜ್ಯಾದ್ಯಂತ ಪೊಲೀಸರಿಗೆ ಸುಸಜ್ಜಿತ ಸೂರು ಒದಗಿಸುವ ಸಂಕಲ್ಪ
Team Udayavani, Sep 25, 2019, 5:19 AM IST
ಉಡುಪಿ ಜಿಲ್ಲೆಯ ಬಡಗಬೆಟ್ಟುವಿನ ಬಳಿ ನಿರ್ಮಾಣ ಹಂತದಲ್ಲಿರುವ ಪೊಲೀಸ್ ವಸತಿಗೃಹ.
ಉಡುಪಿ: ಪೊಲೀಸರಿಗೆ ಸೂರು ಒದಗಿಸಲು 1,822 ಕೋ.ರೂ. ಅನುದಾನ ಮೀಸಲಿರಿಸಲಾಗಿದ್ದು, ರಾಜ್ಯದ 290 ಕಡೆಗಳಲ್ಲಿ ವಿವಿಧೆಡೆ ಸುಸಜ್ಜಿತ ಪೊಲೀಸ್ ವಸತಿ ಸಮುಚ್ಚಯಗಳು ನಿರ್ಮಾಣಗೊಳ್ಳುತ್ತಿವೆ. 2020ರೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ.
ಉಡುಪಿ ಜಿಲ್ಲೆಯ 4 ಮತ್ತು ದ.ಕ. ಜಿಲ್ಲೆಯ 12 ಕಡೆಗಳಲ್ಲಿ ವಸತಿ ಸಮುಚ್ಚಯಗಳು ನಿರ್ಮಾಣವಾಗುತ್ತಿವೆ. ಇದಕ್ಕೆ ಉಡುಪಿಯಲ್ಲಿ 25.89 ಕೋ.ರೂ. ಮತ್ತು ದ.ಕ.ದಲ್ಲಿ 95.32 ಕೋ.ರೂ. ವೆಚ್ಚವಾಗಲಿದೆ.
2013ರಲ್ಲಿ ಈ ಯೋಜನೆ ಜಾರಿಗೆ ಬಂದಿದ್ದು, ಮೂರು ವರ್ಷಗಳ ಒಳಗೆ ಮುಗಿಸುವ ಯೋಜನೆ ಹಾಕಿಕೊಳ್ಳಲಾಗಿತ್ತು. ಕಾರಣಾಂತರಗಳಿಂದ ಕೆಲವೆಡೆ ವಿಳಂಬವಾಗಿದೆ. ಕೆಲವೆಡೆ ವರ್ಷದ ಹಿಂದಷ್ಟೇ ಕಾಮಗಾರಿ ಆರಂಭಗೊಂಡಿದೆ.
ಸುಸಜ್ಜಿತ ಕಟ್ಟಡಗಳು
ಪೊಲೀಸ್ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಅಧಿಕಾರಿಗಳವರೆಗೆ ಈ ಕಟ್ಟಡಗಳನ್ನು ಸೇವಾ ಅವಧಿಯ ಹಿರಿತನದ ಮೇಲೆ ಒದಗಿಸಲಾಗುತ್ತದೆ. ಅಲ್ಲಿರುವ ಸಿಬಂದಿ ವರ್ಗವಾದಲ್ಲಿ ಠಾಣಾ ವ್ಯಾಪ್ತಿಯವರಿಗೆ ಸೇವಾವಧಿಯ ಹಿರಿತನದ ಮೇಲೆ ನೀಡಲಾಗುತ್ತದೆ. ಕಟ್ಟಡಗಳು ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಳ್ಳಲಿವೆ. ಈಗಾಗಲೇ ಇರುವ ಕಟ್ಟಡಗಳ ಆಧುನೀಕರಣ, ಎಲೆಕ್ಟ್ರಿಕಲ್ ಕೆಲಸ, ಪೈಂಟಿಂಗ್ ನಡೆಯುತ್ತಿವೆ. ಕೆಲವೆಡೆ ಕಾಮಗಾರಿ ಪೂರ್ಣಗೊಂಡಿದ್ದು, ಕೆಲವೆಡೆ ಪ್ರಗತಿಯಲ್ಲಿದೆ.
ಕೊಲ್ಲೂರಿಗೂ ಬೇಕು
ಉಡುಪಿ ಜಿಲ್ಲೆಯ ಕೊಲ್ಲೂರು ಠಾಣಾ ವ್ಯಾಪ್ತಿಯಲ್ಲಿ ಪೊಲೀಸರಿಗೆ ವಸತಿಗೃಹವೇ ಇಲ್ಲ. ಇಲ್ಲಿ ನಿರ್ಮಿಸುವ ಬಗ್ಗೆ ಈಗಾಗಲೇ ಪ್ರಸ್ತಾವನೆಯನ್ನು ಇಲಾಖೆಗೆ ಕಳುಹಿಸಲಾಗಿದೆ. ಆದರೆ ನಿರ್ಮಾಣ ಆದೇಶ ಇನ್ನೂ ಬಂದಿಲ್ಲ.
2020-2025ರ ಯೋಜನೆ?
2020ರ ಯೋಜನೆ ಯಶಸ್ವಿಯಾಗಿ ಪೂರ್ಣಗೊಳ್ಳುತ್ತಿದ್ದಂತೆ ಮುಂದಿನ 5 ವರ್ಷಗಳ ಯೋಜನೆಯ ಬಗ್ಗೆಯೂ ರೂಪರೇಖೆ ಸಿದ್ಧಗೊಳ್ಳುತ್ತಿದೆ. ಕಟ್ಟಡಗಳ ಬೇಡಿಕೆ ಮನವಿಯನ್ನು ಗಮನಿಸಿ ಅವಶ್ಯವಿರುವ ಠಾಣೆಗಳ ವ್ಯಾಪ್ತಿಗಳಲ್ಲೂ ಪೊಲೀಸ್ ವಸತಿಗೃಹಗಳನ್ನು ನಿರ್ಮಿಸುವ ಚಿಂತನೆ ಇಲಾಖೆಯ ಮುಂದಿದೆ.
ರಾಜ್ಯಾದ್ಯಂತ ಪೊಲೀಸ್ ವಸತಿಗೃಹ ನಿರ್ಮಾಣ ಯೋಜನೆಯಡಿ ಕಟ್ಟಡ ನಿರ್ಮಾಣ ನಡೆಯುತ್ತಿದೆ. ಜಿಲ್ಲೆಯಲ್ಲೂ ನಾಲ್ಕು ಕಡೆ ನಿರ್ಮಾಣ ಹಂತದಲ್ಲಿವೆ. ಕಟ್ಟಡಗಳು ಸುಸಜ್ಜಿತವಾಗಿರಲಿದ್ದು, ಸೇವಾವಧಿಯ ಹಿರಿತನದ ಆಧಾರದ ಮೇಲೆ ನೀಡಲಾಗುತ್ತದೆ.
-ನಿಶಾ ಜೇಮ್ಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಉಡುಪಿ
– ಪುನೀತ್ ಸಾಲ್ಯಾನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.