17 ಟನ್‌ ಮಾರಾಟ: 15 ಲ.ರೂ. ವಹಿವಾಟು

ಮಾವು ಮೇಳಕ್ಕೆ ಭರ್ಜರಿ ಸ್ಪಂದನೆ

Team Udayavani, May 23, 2022, 12:08 PM IST

mango-sale

ಉಡುಪಿ: ಜಿಲ್ಲಾಡಳಿತ, ಜಿ. ಪಂ. ಹಾಗೂ ತೋಟಗಾರಿಕೆ ಇಲಾಖೆಯಿಂದ ರಾಮನಗರ ಜಿಲ್ಲಾ ತೆಂಗು ಮತ್ತು ಮಾವು ರೈತ ಉತ್ಪಾದಕರ ಸಂಸ್ಥೆ ಆಶ್ರಯದಲ್ಲಿ ದೊಡ್ಡಣಗುಡ್ಡೆ ಶಿವಳ್ಳಿ ತೋಟಗಾರಿಕೆ ತೋಟಗಾರಿಕೆ ಕ್ಷೇತ್ರದ ರೈತ ಸೇವಾ ಕೇಂದ್ರದ ಆವರಣದಲ್ಲಿ ಆಯೋಜಿಸಿದ ಮಾವು ಮೇಳಕ್ಕೆ ಎರಡನೆಯ ದಿನ ಉಡುಪಿ ನಾಗರಿಕರಿಂದ ಭರ್ಜರಿ ಸ್ಪಂದನೆ ವ್ಯಕ್ತವಾಗಿದೆ.

ಮಾವು ಮೇಳವನ್ನು ಮೇ 23ರವರೆಗೆ ಆಯೋಜಿಸಲಾಗಿದ್ದು, ರವಿವಾರ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ ಗ್ರಾಕರು ವಿವಿಧ ತಳಿಯ ಮಾವಿನ ಹಣ್ಣಿನ ರುಚಿ ನೋಡಿ ಖರೀದಿಸಿದರು. ಒಟ್ಟಾರೆ ಶನಿವಾರ, ಭಾನುವಾರ ಮಧಾಹ್ನವರೆಗೆ 17 ಟನ್‌ ವರೆಗೂ ಮಾವು ಮಾರಾಟವಾಗಿದೆ. ಸರಾಸರಿ ಕೆಜಿಗೆ 70 ರಿಂದ 120 ರೂ. ಲೆಕ್ಕವಾದರೂ ಅಂದಾಜು 15ಲಕ್ಷ ರೂ., ಮಿಕ್ಕಿ ವಹಿವಾಟು ನಡೆದಿದೆ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು. ಬೆಳೆಗಾರರು 30 ಟನ್‌ ಮಾವು ಮೇಳಕ್ಕೆ ತಂದಿದ್ದು, ರವಿವಾರವೂ ಎರಡು ಏಸ್‌ ಟೆಂಪೋಗಳಲ್ಲಿ ಮತ್ತೆ ಮಾವನ್ನು ತರಿಸಿಕೊಂಡಿದ್ದಾರೆ.

ಕೋಲಾರ ಬಳಿಕ ರಾಮ ನಗರ ರಾಜ್ಯದಲ್ಲಿ ಅತೀ ಹೆಚ್ಚು ಮಾವು ಬೆಳೆಯುವ ಎರಡನೇ ಸ್ಥಾನದಲ್ಲಿರುವ ಜಿಲ್ಲೆಯಾಗಿದೆ. ನೈಸರ್ಗಿಕವಾಗಿ ಮಾಗಿಸಿರುವ ವಿವಿಧ ಮಾವಿನ ತಳಿಯ ಹಣ್ಣುಗಳು ಇಲ್ಲಿ ಹೆಚ್ಚು ಪ್ರಸಿದ್ದಿ. ಬೆಳೆಗಾರರು ರಾಮನಗರ ಜಿಲ್ಲಾ ತೆಂಗು ಮತ್ತು ಮಾವು ರೈತ ಉತ್ಪಾದಕರ ಸಂಸ್ಥೆ ಸ್ಥಾಪಿಸಿಕೊಂಡು ಬೆಂಗಳೂರು, ಮೈಸೂರು ಭಾಗದಲ್ಲಿ ನಡೆಯುವ ಮಾವು ಮೇಳಕ್ಕೆ ಹೋಗಿ ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡುತ್ತಾರೆ. ಇದೀಗ ಉಡುಪಿಯಲ್ಲಿ ಮೊದಲ ಬಾರಿಗೆ ಮಾವು ಮೇಳ ಆಯೋಜನೆಯಾಗಿದ್ದು, ತೋಟಗಾರಿಕೆ, ಉಡುಪಿ ಜಿಲ್ಲಾಡಳಿತ ಮಾವು ಮಾರಾಟಕ್ಕೆ ಉತ್ತಮ ವೇದಿಕೆ ಮಾಡಿಕೊಟ್ಟಿದೆ. ಎಲ್ಲ ಬಗೆಯ ಹಣ್ಣುಗಳಿಗೂ ಬೇಡಿಕೆ ಇದ್ದು, ಅಲ್ಫೋನ್ಸ್‌, ಸಕ್ಕರೆ ಗುತ್ತಿ, ಮಲಗೋವ ಖಾಲಿಯಾಗಿದೆ. ಉತ್ತಮ ಸ್ಪಂದನೆ ವ್ಯಕ್ತವಾಗಿದೆ ಎನ್ನುತ್ತಾರೆ ಮಾವು ಬೆಳೆಗಾರ ರಾಮನಗರದ ಸಿದ್ದರಾಜು.

ಸಕ್ಕರೆಗುತ್ತಿ (ಶುಗರ್‌ ಬೇಬಿ) ಮೊದಲ ದಿನವೇ ಖಾಲಿ

ಮೇಳದಲ್ಲಿ ವಿಶೇಷ ಆಕರ್ಷಣೆಯಾಗಿದ್ದ ಸಕ್ಕರೆಗುತ್ತಿ ಮಾವು ಮೊದಲ ದಿನವೆ ಖಾಲಿಯಾಗಿತ್ತು. ತಿನ್ನಲು ರುಚಿ, ಸಾಂಬಾರ್‌ ಮಾಡಲು ಬಳಸುವ ಸಕ್ಕರೆ ಗುತ್ತಿ ಮಾವಿಗೆ ಬಹು ಬೇಡಿಕೆ ಇದ್ದರಿಂದ ಹೆಚ್ಚಿನ ಪ್ರಮಾಣದಲ್ಲಿ ಗ್ರಾಕರು ಖರೀದಿಸಿದ್ದರು. ರಸಪುರಿ, ಅಲ್ಫೋನ್ಸ್‌, ಮಲಗೋವ, ಸಿಂಧೂರಕ್ಕೂ ಹೆಚ್ಚಿನ ಬೇಡಿಕೆ ಇದ್ದು ಬಹುತೇಕ ಮಳಿಗೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಈ ತಳಿ ಮಾರಾಟವಾದವು.

ಮಾವು ಮೇಳಕ್ಕೆ ಉತ್ತಮ ಸ್ಪಂದನೆ ದೊರೆತಿದ್ದು, ಮೇಳದಲ್ಲಿ ಅಂದಾಜು 15 ಲಕ್ಷ ರೂ,ಗೂ ಅಧಿಕ ವಹಿವಾಟು ನಡೆದಿದೆ. ರವಿವಾರ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದು, ರಸಪುರಿ, ಅಲ್ಫೋನ್ಸ್‌, ಮಲಗೋವ ಹಣ್ಣುಗಳು ಹೆಚ್ಚಿನ ಬೇಡಿಕೆಯೊಂದಿಗೆ ಮಾರಾಟವಾದವು. ನಿದೀಶ್‌ ಹೊಳ್ಳ, ಸಹಾಯಕ ನಿರ್ದೇಶಕ, ತೋಟಗಾರಿಕೆ ಇಲಾಖೆ, ಉಡುಪಿ

ಟಾಪ್ ನ್ಯೂಸ್

Cancer ಔಷಧವನ್ನೇ ಡ್ರಗ್‌ ಆಗಿ ಬಳಸುವ ಯುವಕರು: ಅಶೋಕ್‌

Cancer ಔಷಧವನ್ನೇ ಡ್ರಗ್‌ ಆಗಿ ಬಳಸುವ ಯುವಕರು: ಅಶೋಕ್‌

Vitla: ಸೂರಿಕುಮೇರು ಜಂಕ್ಷನ್ ನಲ್ಲಿ ಅಪಘಾತ… ಬೈಕ್ ಸವಾರ ಮೃತ್ಯು

Vitla: ಸೂರಿಕುಮೇರು ಜಂಕ್ಷನ್ ನಲ್ಲಿ ಅಪಘಾತ… ಬೈಕ್ ಸವಾರ ಮೃತ್ಯು

BGV-CM

Belagavi: ಎಐಸಿಸಿ ಅಧಿವೇಶನದ ಶತಮಾನೋತ್ಸವಕ್ಕೆ ಅಡ್ಡಿಪಡಿಸಿದರೆ ಕ್ರಮ: ಸಿದ್ದರಾಮಯ್ಯ

Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ

Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ

BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್.. ವಿಡಿಯೋದಲ್ಲಿ ಸುಳಿವು

BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು

Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ

Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ

ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್‌

ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

byndoor

Malpe: ತೀವ್ರ ಆಸ್ವಸ್ಥಗೊಂಡ ವ್ಯಕ್ತಿ ಸಾವು

byndoor

Udupi: ಸ್ಕೂಟರ್‌ ಢಿಕ್ಕಿ; ಪಾದಚಾರಿಗೆ ಗಾಯ

hejjenu 1

Kundapura: ಹೆಜ್ಜೇನು ದಾಳಿ; ವ್ಯಕ್ತಿ ಸಾವು

7

Kundapura: ರಾಷ್ಟ್ರೀಯ ಹೆದ್ದಾರಿ; ಮುಗಿಯದ ಕಿರಿಕಿರಿ

5-thekkatte

Thekkatte: ಮನೆಯೊಂದರ ಅಂಗಳದಲ್ಲಿ ಚಿರತೆ ಸಂಚಾರ; ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Cancer ಔಷಧವನ್ನೇ ಡ್ರಗ್‌ ಆಗಿ ಬಳಸುವ ಯುವಕರು: ಅಶೋಕ್‌

Cancer ಔಷಧವನ್ನೇ ಡ್ರಗ್‌ ಆಗಿ ಬಳಸುವ ಯುವಕರು: ಅಶೋಕ್‌

police-ban

Bantwal: ಜೂಜಾಟಕ್ಕೆ ದಾಳಿ; 7.81 ಲಕ್ಷ ರೂ.ವಶ

Vitla: ಸೂರಿಕುಮೇರು ಜಂಕ್ಷನ್ ನಲ್ಲಿ ಅಪಘಾತ… ಬೈಕ್ ಸವಾರ ಮೃತ್ಯು

Vitla: ಸೂರಿಕುಮೇರು ಜಂಕ್ಷನ್ ನಲ್ಲಿ ಅಪಘಾತ… ಬೈಕ್ ಸವಾರ ಮೃತ್ಯು

BGV-CM

Belagavi: ಎಐಸಿಸಿ ಅಧಿವೇಶನದ ಶತಮಾನೋತ್ಸವಕ್ಕೆ ಅಡ್ಡಿಪಡಿಸಿದರೆ ಕ್ರಮ: ಸಿದ್ದರಾಮಯ್ಯ

byndoor

Malpe: ತೀವ್ರ ಆಸ್ವಸ್ಥಗೊಂಡ ವ್ಯಕ್ತಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.