1857 ಸಿಪಾಯಿ ದಂಗೆಯಲ್ಲ,ಜನಕ್ರಾಂತಿ: ಡಾ|ಭಾಸ್ಕರ ಮಯ್ಯ


Team Udayavani, Oct 5, 2018, 6:10 AM IST

021018astro12.jpg

ಉಡುಪಿ: 1857ರಲ್ಲಿ ನಡೆದ ಘಟನೆಯನ್ನು ಸಿಪಾಯಿ ದಂಗೆ ಎಂದು ಬ್ರಿಟಿಷರು ಕರೆದಿದ್ದರೂ ಅದನ್ನು ಬ್ರಿಟಿಷರ ವಿರುದ್ಧದ ಜನಕ್ರಾಂತಿ ಎಂದು ಜಗತ್ತಿನ ಅನೇಕ ರಾಷ್ಟ್ರಗಳು ಒಪ್ಪಿದ್ದವು. ಕಾರ್ಲ್ ಮಾರ್ಕ್ಸ್ ಮೊದಲ ಬಾರಿ ನ್ಯೂಯಾರ್ಕ್‌ನ ಡೇಲಿ ಟ್ರಿಬ್ಯೂನ್‌ನಲ್ಲಿ ಲೇಖನದಲ್ಲಿ ಬರೆದಿದ್ದರು. ಏಶ್ಯಾದ ಅನೇಕ ದೇಶಗಳ ಮೇಲೆ ಪರಿಣಾಮ, ತುರ್ಕಿಯ ಮೇಲೆ ಪರಿಣಾಮ ಬೀರಿತ್ತು ಎಂದು ಚಿಂತಕ, ನಿವೃತ್ತ ಪ್ರಾಧ್ಯಾಪಕ ಡಾ| ಗುಂಡ್ಮಿ ಭಾಸ್ಕರ ಮಯ್ಯ ಅಭಿಪ್ರಾಯಪಟ್ಟರು.

ರಥಬೀದಿ ಗೆಳೆಯರು ಬಳಕೆದಾರರ ವೇದಿಕೆ ಕಚೇರಿಯಲ್ಲಿ ಗಾಂಧೀ ಜಯಂತಿ ನಿಮಿತ್ತ ಮಂಗಳವಾರ ಆಯೋಜಿಸಿದ್ದ ವಿಷ್ಣು ಭಟ್ಟ ಶಾಸ್ತ್ರಿ ಗೋಡ್ಸೆಯ “ನನ್ನ ಪ್ರವಾಸ’ ಗ್ರಂಥದ ಕುರಿತು ಅದರ ಅನುವಾದಕರಾದ ಭಾಸ್ಕರ ಮಯ್ಯ ಅವರು ಮಾತನಾಡಿ, ಪುಣೆ ವರಸಾಯಿಯಲ್ಲಿ ಜನಿಸಿದ ಒಬ್ಬ ಸಾಮಾನ್ಯ ಪುರೋಹಿತ ವಿಷ್ಣು ಭಟ್ಟ ಗೋಡ್ಸೆ ಪ್ರಥಮ ಸ್ವಾತಂತ್ರÂ ಸಂಗ್ರಾಮದಲ್ಲಿ ನಡೆದ ಘಟನೆಯನ್ನು ಕಣ್ಣಾರೆ ಕಂಡು ದಾಖಲಿಸಿರುವುದು ವಿಶೇಷ ಎಂದರು.
 
ಬಡತನದಿಂದಾಗಿ ಹಣ ಸಂಪಾದನೆಗೆಂದು ಗ್ವಾಲಿಯರ್‌ಗೆ ತೆರಳಿದ ವಿಷ್ಣು ಭಟ್ಟರಿಗೆ ದಕ್ಕಿದ ಸಂಭಾವನೆಗಳನ್ನು ದಂಗೆಕೋರರು, ಬ್ರಿಟಿಷ್‌ ಸಿಪಾಯಿ ಗಳು ದೋಚಿದರು. ಝಾನ್ಸಿ ರಾಣಿ ಲಕ್ಷ್ಮೀಬಾಯಿ ದೈನಂದಿನ ಚಟುವಟಿಕೆಗಳನ್ನು ದಾಖಲಿಸಿದ ವಿಷ್ಣು ಭಟ್ಟರು ಕೊನೆಗೆ ಗಂಗಾಜಲವನ್ನು ಹೊತ್ತುಕೊಂಡು ಬಂದು ಅದರಲ್ಲಿ ತಂದೆ ತಾಯಿಗಳಿಗೆ ಸ್ನಾನ ಮಾಡಿಸಿ ತೃಪ್ತರಾದರು. 

“ಗಂಗಾಜಲವನ್ನು ತರು ವುದು ಕಷ್ಟವಾದಾಗ ರಾತ್ರಿ ಕನಸಿನಲ್ಲಿ ಒಬ್ಬಳು ಕನ್ಯೆ ಬಂದು ನಾನು ನಿನ್ನ ಹಿಂದಿದ್ದೇನೆಂದು ಹೇಳುತ್ತಾಳೆ. ಮರುದಿನ ತನ್ನ ಅನಾರೋಗ್ಯವೂ ವಾಸಿಯಾಗಿತ್ತು’ ಎಂಬುದನ್ನು ದಾಖಲಿಸು ತ್ತಾರೆ ಎಂದು ಡಾ|ಮಯ್ಯ ಹೇಳಿದರು.

1827ರಲ್ಲಿ ಜನಿಸಿದ ಗೋಡ್ಸೆ, 1856ರಿಂದ 59ರವರೆಗೆ ಸಂಚರಿಸಿ 1883ರಲ್ಲಿ ಅನುಭವ ಕಥನ ಬರೆಯುತ್ತಾರೆ. 1904ರಲ್ಲಿ ನಿಧನರಾದ ಬಳಿಕ 1907ರಲ್ಲಿ ದೋಷಪೂರಿತವಾಗಿ ಮುದ್ರಣ ಆಗು ತ್ತದೆ. ಮೂಲಪ್ರತಿಯನ್ನು 1922ರಲ್ಲಿ ಭಾರತೀಯ ಸಂಶೋಧನ ಮಂಡಳಿ ಓದಿದರೂ ಸಂಶೋಧಕರು ಸಾಕಷ್ಟು ಲಾಭ ಪಡೆದುಕೊಂಡರೆ ವಿನಾ ಗೋಡ್ಸೆಗೆ ನ್ಯಾಯ ಒದಗಿಸಲಿಲ್ಲ. 1948ರಲ್ಲಿ ಮರಾಠಿ ಪತ್ರಿಕೆ ಸಹ್ಯಾದ್ರಿಯಲ್ಲಿ ತಣ್ತೀವಾಮನ ಪೋತೆದಾರ್‌ ಮತ್ತು ಎನ್‌.ಆರ್‌. ಪಾಠಕ್‌ ಅವರಿಂದ ಪ್ರಕಟವಾಯಿತು. ಇದನ್ನು ಅನುವಾದಿಸುವಾಗ ನಾನು ರೋಮಾಂಚನವನ್ನು ಅನುಭವಿಸಿದ್ದೇನೆ ಎಂದು ಡಾ|ಮಯ್ಯ ಹೇಳಿದರು. ರಥಬೀದಿ ಗೆಳೆಯರು ಅಧ್ಯಕ್ಷ ಪ್ರೊ|ಮುರಳೀಧರ ಉಪಾಧ್ಯ ಹಿರಿಯಡಕ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಸುಬ್ರಹ್ಮಣ್ಯ ಜೋಷಿ ಸ್ವಾಗತಿಸಿದರು. 

1857ರಲ್ಲಿ ಬ್ರಾಹ್ಮಣರ ಪಾತ್ರ
ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತಾತ್ಯಾಟೋಪೆ, ಮಂಗಲ್‌ಪಾಂಡೆ, ಅಸಂಖ್ಯಾಕ ಸಿಪಾಯಿಗಳು ಬ್ರಾಹ್ಮಣರಾಗಿದ್ದರು. ಆದರೆ ಈಗ ಎಲ್ಲದಕ್ಕೂ ಬ್ರಾಹ್ಮಣರೇ ಕಾರಣವೆಂಬ ದ್ವೇಷ ಜಗಜ್ಜಾಹೀರಾಗಿದೆ. ಕಥಾನಕದಲ್ಲಿ ಬರುವ “ಕರಿಯರು’ ಎಂಬ ಶಬ್ದ “ಭಾರತೀಯ’ರನ್ನುದ್ದೇಶಿಸಿ ಇದೆ ವಿನಾ ಈಗಿನಂತ ಪರಿಶಿಷ್ಟರು ಎಂಬ ಅರ್ಥದಲ್ಲಲ್ಲ ಎಂದು ಡಾ|ಮಯ್ಯ ಹೇಳಿದರು. 

ಗಾಂಧಿಯನ್ನು ಚರಕಕ್ಕೆ ಕಟ್ಟಿಹಾಕಿದವರು!
ಒಂದನೆಯ ಮಹಾಯುದ್ಧದ ವೇಳೆ ಭಾರತೀಯರನ್ನು ಬ್ರಿಟಿಷ್‌ ಸೇನೆಗೆ ಸೇರಿಸುವಲ್ಲಿ ಪಾತ್ರ ವಹಿಸಿದ್ದ ಗಾಂಧೀಜಿ ಎರಡನೆಯ ಮಹಾಯುದ್ಧದಲ್ಲಿ ಬ್ರಿಟಿಷರ ವಿರುದ್ಧ “ಭಾರತ ಬಿಟ್ಟು ತೊಲಗಿ’ ಚಳವಳಿ ನಡೆಸಿದ್ದರು. ಇದು ಒಂದಕ್ಕೊಂದು ವಿರೋಧಾಭಾಸವಲ್ಲ. ವಿಕಾಸದ ಮೆಟ್ಟಿಲು. ತನಗೆ ಸರಿ ಕಂಡದ್ದನ್ನು ಧೈರ್ಯದಿಂದ ಹೇಳಿದವರು ಗಾಂಧಿ. ಮಾರ್ಕ್ಸ್ವಾದದಂತೆ ಗಾಂಧೀಯಿಸಮ್‌ನ್ನು ಅವರ ಅನುಯಾಯಿಗಳು ಅರ್ಥ ಮಾಡಿಕೊಳ್ಳುವಲ್ಲಿ ವಿಫ‌ಲರಾದರು. ಅನಂತಮೂರ್ತಿ, ಆಶಿಶ್‌ ನಂದಿ, ಪ್ರಸನ್ನ ಅವರು ಗಾಂಧಿಯನ್ನು ಚರಕಕ್ಕೆ ಕಟ್ಟಿ ಹಾಕಿದರು. ಸ್ವಾತಂತ್ರಾéಅನಂತರ ರೈಲು, ತಂತಿ ಜತೆಗೆ ಗ್ರಾಮಸ್ವರಾಜ್‌ಗಾಗಿ ನೆಹರೂಗೆ ಪತ್ರ ಬರೆದರೂ ಸ್ಪಂದಿಸಲಿಲ್ಲ. 1947ರ ಘಟನೆಯೆಂದರೆ ಬ್ರಿಟಿಷರಿಂದ ಭೂಮಾಲಕರು, ಬಂಡವಾಳಶಾಹಿಗಳಿಗೆ ದೇಶವನ್ನು ಹಸ್ತಾಂತರ ಮಾಡಿದ್ದಷ್ಟೆ. ಮುಂದಿನ ಸ್ವಾತಂತ್ರ್ಯ ಜಾರಿಗೊಳಿಸಲು ಭೂಮಾಲಕರಿಗೂ, ಕಾಂಗ್ರೆಸ್‌ನವರಿಗೂ ಗಾಂಧೀಜಿ ಬೇಡವಾಗಿದ್ದರು. 1947ರ ಪ್ರಾರ್ಥನಾ ಸಭೆಯಲ್ಲಿ “ಎಲ್ಲರೂ ಕೈಬಿಡಬಹುದು. ದೇವರು ಕೈಬಿಡಲಾರ’ ಎಂದು ಹೇಳಿದ್ದರು. 120 ವರ್ಷ ಬದುಕುತ್ತೇನೆಂದವರು ಇಂತಹ ಪರಿಸ್ಥಿತಿಗೆ ತಲುಪಿದ್ದರು. 
– ಡಾ| ಗುಂಡ್ಮಿ ಭಾಸ್ಕರ ಮಯ್ಯ

ಅಯೋಧ್ಯೆಯಲ್ಲಿ 400-500 ರಾಮಮಂದಿರಗಳಿದ್ದವು
ವಿಷ್ಣು ಭಟ್ಟ ಗೋಡ್ಸೆಯವರು 1857ರ ಅವಧಿಯಲ್ಲಿ ಅಯೋಧ್ಯೆಯಲ್ಲಿ 400-500 ರಾಮಮಂದಿರಗಳಿದ್ದವು. ಹನುಮಾನ್‌ ಮಂದಿರವಿತ್ತು. 8 ಕೃಷ್ಣ ಮಂದಿರಗಳಿದ್ದವು. ಅಲ್ಲಿನ ಮಂಗಗಳಿಗೆ ಜಿಲೇಬಿ ಅಂದರೆ ಇಷ್ಟ. ರಾಮಜನ್ಮಭೂಮಿ ಮೈದಾನವಾಗಿದೆ. 50-40 ಗಜಗಳ ಸುತ್ತಳತೆಯ ಗೋಡೆಗಳಿದ್ದವು. ಕೌಸಲ್ಯ ಮಂದಿರದಲ್ಲಿಯೂ ಮೈದಾನವಿದೆ. ರಾಮನವಮಿ ದಿನ ಲಕ್ಷಾಂತರ ಜನರು ಸೇರುತ್ತಿದ್ದರು ಎಂದು ದಾಖಲಿಸಿದ್ದಾರೆ. 
– ಪ್ರೊ| ಮುರಲೀಧರ ಉಪಾಧ್ಯ ಹಿರಿಯಡಕ

ಡಾ| ಗುಂಡ್ಮಿ ಭಾಸ್ಕರ ಮಯ್ಯ ಮಾತನಾಡಿದರು. 

ಟಾಪ್ ನ್ಯೂಸ್

Hunsur: ಶಬರಿಮಲೈ ಯಾತ್ರಿಗಳಿದ್ದ ಬಸ್‌ ಪಲ್ಟಿ: ನಾಲ್ವರಿಗೆ ಗಾಯ

Hunsur: ಶಬರಿಮಲೆ ಯಾತ್ರಿಗಳಿದ್ದ ಬಸ್‌ ಪಲ್ಟಿ: ನಾಲ್ವರಿಗೆ ಗಾಯ

MPR

Davanagere: ಶಾಸಕರ ಖರೀದಿ ಆರೋಪ; ತನಿಖೆಗೆ ಎಸ್‌ಐಟಿ ರಚಿಸಿ: ಎಂ.ಪಿ.ರೇಣುಕಾಚಾರ್ಯ

Bandipur:  ಸಫಾರಿಯಲ್ಲಿ ಪ್ರವಾಸಿಗರ ಮುಂದೆಯೇ ಜಿಂಕೆ ಬೇಟೆಯಾಡಿದ ಚಿರತೆ

Bandipur: ಸಫಾರಿಯಲ್ಲಿ ಪ್ರವಾಸಿಗರ ಮುಂದೆಯೇ ಜಿಂಕೆ ಬೇಟೆಯಾಡಿದ ಚಿರತೆ

Contracters-Assoi

Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ

IFFI: ಪಾಪ್‌ ಸಂಗೀತಗಾರ ರಾಬಿ ವಿಲಿಯಮ್ಸ್‌ ಬೆಟರ್‌ ಮ್ಯಾನ್‌ ಚಿತ್ರೋತ್ಸವದ ಉದ್ಘಾಟನಾ ಸಿನಿಮಾ

IFFI: ಪಾಪ್‌ ಸಂಗೀತಗಾರ ರಾಬಿ ವಿಲಿಯಮ್ಸ್‌ ಬೆಟರ್‌ ಮ್ಯಾನ್‌ ಚಿತ್ರೋತ್ಸವದ ಉದ್ಘಾಟನಾ ಸಿನಿಮಾ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

vikr

Naxal: ಸರ್ಕಾರಿ ಬಸ್‌ ಅಡ್ಡ ಹಾಕಿ ಬೆಂಕಿ ಹಚ್ಚಿ ಕರಪತ್ರ ಹಂಚಿದ್ದ ವಿಕ್ರಂಗೌಡ ಮತ್ತು ತಂಡ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

16-roopa

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ… ನಕ್ಸಲ್‌ ಎನ್‌ಕೌಂಟರ್‌ ಬಗ್ಗೆ ಡಿಐಜಿ ಹೇಳಿದ್ದೇನು ?

13(2)

Udupi: ಈಶ್ವರನಗರ-ಪರ್ಕಳ ರಸ್ತೆಯ ಹೊಂಡಗಳಿಗೆ ಕೊನೆಗೂ ತೇಪೆ

12

Udupi: ವಿಸಿಲ್‌ ಹೊಡೆದು, ಕೈ ಸನ್ನೆಯಲ್ಲೇ ಟ್ರಾಫಿಕ್‌ ನಿರ್ವಹಣೆ!

11

Padubidri: ನಿಧಾನವಾಗಿ ಚಲಿಸಿ, ಹೆದ್ದಾರಿ ಕಾಮಗಾರಿ ನಡೆಯುತ್ತಿದೆ!

1-karkala

Karkala: ನಕ್ಸಲ್ ನಾಯಕ ವಿಕ್ರಂ ಗೌಡ ಹೆಬ್ರಿಯ‌ ಕಾಡಿನಲ್ಲಿ ಎನ್ ಕೌಂಟರ್ ಗೆ ಬಲಿ

MUST WATCH

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

udayavani youtube

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್‌ ನಕ್ಸಲ್ ಸಾವು

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

ಹೊಸ ಸೇರ್ಪಡೆ

Protect Manipur: Mallikarjun Kharge’s letter to the President

ಮಣಿಪುರವನ್ನು ರಕ್ಷಿಸಿ: ರಾಷ್ಟ್ರಪತಿಗೆ ಖರ್ಗೆ ಪತ್ರ

Madras High Court stays awarding of M.S. Subbulakshmi Award to Krishna

Chennai: ಕೃಷ್ಣಗೆ ಎಂ.ಎಸ್‌.ಸುಬ್ಬುಲಕ್ಷ್ಮಿಪ್ರಶಸ್ತಿ ನೀಡಿಕೆಗೆ ಮದ್ರಾಸ್‌ ಹೈಕೋರ್ಟ್‌ ತಡೆ

Savarkar defamation case:: Rahul ordered to appear in person on December 2

Savarkar defamation case:: ಡಿ.2ರಂದು ಖುದ್ದು ಹಾಜರಾಗಲು ರಾಹುಲ್‌ಗೆ ಆದೇಶ

Hunsur: ಶಬರಿಮಲೈ ಯಾತ್ರಿಗಳಿದ್ದ ಬಸ್‌ ಪಲ್ಟಿ: ನಾಲ್ವರಿಗೆ ಗಾಯ

Hunsur: ಶಬರಿಮಲೆ ಯಾತ್ರಿಗಳಿದ್ದ ಬಸ್‌ ಪಲ್ಟಿ: ನಾಲ್ವರಿಗೆ ಗಾಯ

MPR

Davanagere: ಶಾಸಕರ ಖರೀದಿ ಆರೋಪ; ತನಿಖೆಗೆ ಎಸ್‌ಐಟಿ ರಚಿಸಿ: ಎಂ.ಪಿ.ರೇಣುಕಾಚಾರ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.