![Arebashe-Academy](https://www.udayavani.com/wp-content/uploads/2025/02/Arebashe-Academy-415x249.jpg)
![Arebashe-Academy](https://www.udayavani.com/wp-content/uploads/2025/02/Arebashe-Academy-415x249.jpg)
Team Udayavani, Mar 8, 2018, 7:30 AM IST
ಉಡುಪಿ: ಪಶ್ಚಿಮಘಟ್ಟ ಪ್ರದೇಶದ ನಕ್ಸಲ್ ಪೀಡಿತ ಸ್ಥಳಗಳಲ್ಲಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರ ಪರಿಕಲ್ಪನೆಯಂತೆ ಪಶ್ಚಿಮ ಘಟ್ಟ, ಗುಡ್ಡಗಾಡು ಪ್ರದೇಶಾಭಿವೃದ್ಧಿ ಯೋಜನೆಯಿಂದ 2 ಕೋ.ರೂ. ವೆಚ್ಚದ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗಿದೆ ಎಂದು ಕಾರ್ಯಕ್ರಮ ಅನುಷ್ಠಾನದ ಸಂಯೋಜಕ ನಾಗೇಶ್ ಅಂಗೀರಸ ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಕೊಪ್ಪ ತಾಲೂಕಿ ಬರಕನಕಟ್ಟದಲ್ಲಿ ಆರಂಭವಾದ ಸೇವಾ ಅಭಿಯಾನವು 12 ವರ್ಷಗಳಲ್ಲಿ ಉಡುಪಿ ಸಹಿತ ಚಿಕ್ಕಮಗಳೂರು, ದ.ಕ., ಶಿವಮೊಗ್ಗ ಜಿಲ್ಲೆಗಳ ನೂರಾರು ಹಳ್ಳಿಗಳನ್ನು ತಲುಪಿದೆ. ಈವರೆಗೆ 2 ಕೋ.ರೂ. ವ್ಯಯ ಮಾಡಲಾಗಿದೆ. 500ಕ್ಕೂ ಅ ಧಿಕ ಬಡ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಸಹಾಯ ಮಾಡಲಾಗಿದೆ. ಸಾವಿರಕ್ಕೂ ಮಿಕ್ಕಿ ಮನೆಗಳಿಗೆ ವಿದ್ಯುತ್ ಸೌಲಭ್ಯ ಕಲ್ಪಿಸಲಾಗಿದೆ. ಅನೇಕ ಹಳ್ಳಿಗಳಿಗೆ ಐದಾರು ಕಿ.ಮೀ. ದೂರದಿಂದ ವಿದ್ಯುತ್ ಲೇನ್ ಹಾಕಲಾಗಿದೆ. ಸೊದ್ಯೋಗಕ್ಕೆ ಕಾಯಿನ್ ಫೋನ್, ವಿಲ್ ಫೋನ್, ಮೊಬೈಲ್ ಫೋನ್, ಹೊಲಿಗೆ ಯಂತ್ರ ನೀಡಲಾಗಿದೆ. ಕುಡಿಯುವ ನೀರಿನ ಯೋಜನೆ ಜಾರಿ ಮಾಡಲಾಗಿದೆ. ಗಿರಿಜನರಿಗೆ ಭತ್ತದ ಗದ್ದೆಗಳನ್ನು ಕೊಂಡು ನೀಡಲಾಗಿದೆ. ನೀರಾವರಿ ಸೌಲಭ್ಯ, ವಸತಿ ರಹಿತರಿಗೆ ಮನೆ ನಿರ್ಮಿಸಲಾಗಿದೆ ಎಂದರು.
ನಿವೃತ್ತಿ ಘೋಷಣೆ: ಪೇಜಾವರ ಮಠ ಪ್ರಾಯೋಜಿತ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ 4 ಜಿಲ್ಲೆಗಳಲ್ಲಿ ಇಂತಹ ಚಟುವಟಿಕೆ ಹಾಗೂ ಜನರ ಸಹಭಾಗಿತ್ವಕ್ಕಾಗಿ ರಚಿಸಿಕೊಂಡಿದ್ದ ನಾಗರಿಕ ಸಮಿತಿಗಳನ್ನು ವಿಸರ್ಜಿಸಲಾಗುವುದು ಎಂದು ತಿಳಿಸಿದ ನಾಗೇಶ್ ಅಂಗೀರಸ ಅವರು, ಪೇಜಾವರ ಶ್ರೀಗಳ ಆದೇಶದಂತೆ 12 ವರ್ಷ ನಕ್ಸಲ್ ಪೀಡಿತ ಪ್ರದೇಶದಲ್ಲಿ ಕೈಗೊಂಡ ಗಿರಿಜನರ ಸಮಗ್ರ ಅಭಿವೃದ್ಧಿ ಕಾರ್ಯಗಳು ತೃಪ್ತಿ ನೀಡಿದೆ. ವೈಯುಕ್ತಿಕ ಕಾರಣಗಳಿಂದಾಗಿ ತಾನು ಈ ಕಾರ್ಯದಿಂದ ನಿವೃತ್ತಿ ಪಡೆಯುತ್ತಿರುವುದಾಗಿ ಘೋಷಿಸಿದರು.
ವಿದ್ಯುತ್ ಯೋಜನೆ ಪೂರ್ಣ
ಮುಂಡುಗಾರು ಗಿರಿಜನರ ಹ್ಯಾಮ್ಲೆಟ್ ಪ್ರದೇಶಕ್ಕೆ ಪೇಜಾವರ ಶ್ರೀಗಳ ನಕ್ಸಲ್ ಪ್ರದೇಶಾಭಿವೃದ್ಧಿ ಯೋಜನೆಯಡಿ ಸುಮಾರು 30ಲ.ರೂ. ವೆಚ್ಚದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿದ್ಯುತ್ ಯೋಜನೆ ಪೂರ್ಣಗೊಂಡಿದೆ. ಈ ಪ್ರದೇಶದ ಸುಮಾರು 35ಕ್ಕೂ ಅಧಿ ಕ ಗಿರಿಜನರ ಮನೆಗಳಿಗೆ ಮೆಸ್ಕಾಂ ವಿದ್ಯುತ್ ಸಂಪರ್ಕ ನೀಡಿದೆ. 2012ರಿಂದ 2018ರ ವರೆಗೆ ಶೃಂಗೇರಿ ತಾಲೂಕಿನ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಗಿರಿಜನರ 156 ಮನೆಗಳಿಗೆ ಪೇಜಾವರ ಮಠದಿಂದ ವಿದ್ಯುತ್ ಸಂಪರ್ಕ ಒದಗಿಸಲಾಗಿದೆ. ಇದಕ್ಕೆ 35-40 ಲ.ರೂ. ವಿನಿಯೋಗಿಸಲಾಗಿದೆ ಎಂದು ಹೇಳಿದರು.
Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ
Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ
Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ
Sulya: ಪಯಸ್ವಿನಿ ನದಿಯಲ್ಲಿ ಯುವಕನ ಶವ ಪತ್ತೆ
Davanagere: ಪೂಜೆಯಿಂದ ಕಷ್ಟ ಪರಿಹರಿಸುವ ನೆಪದಲ್ಲಿ ಮನೆಯಿಂದ ಕಳವು: ಇಬ್ಬರ ಬಂಧನ
You seem to have an Ad Blocker on.
To continue reading, please turn it off or whitelist Udayavani.