ಕಾಪು ಪುರಸಭೆಗೆ 2 ಕೋ. ರೂ. ವಿಶೇಷ ಪ್ಯಾಕೇಜ್ ಭರವಸೆ: ಲಾಲಾಜಿ
ಕಾಪು ಪುರಸಭೆ ವ್ಯಾಪ್ತಿಯಲ್ಲಿ 1.34 ಕೋ. ರೂ. ವೆಚ್ಚದ 27 ಕಾಮಗಾರಿಗಳ ಗುದ್ದಲಿ ಪೂಜೆ, 7 ಕಾಮಗಾರಿಗಳ ಉದ್ಘಾಟನೆ
Team Udayavani, Sep 17, 2019, 5:24 AM IST
ಕಾಪು: ಕಾಪು ಪುರಸಭೆ ವ್ಯಾಪ್ತಿಯ ಅಭಿವೃದ್ಧಿ ಕಾಮಗಾರಿಗಳಿಗಾಗಿ ವಿಶೇಷ ಅನುದಾನ ಬಿಡುಗಡೆಗಾಗಿ ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ವಿಶೇಷ ಪ್ಯಾಕೇಜ್‌ನಡಿ 2 ಕೋಟಿ ರೂ. ಅನುದಾನ ಮಂಜೂರು ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದು ಶಾಸಕ ಲಾಲಾಜಿ ಆರ್. ಮೆಂಡನ್ ತಿಳಿಸಿದರು.
ಸೋಮವಾರ ಕಾಪು ಪುರಸಭಾ ವ್ಯಾಪ್ತಿಯ ವಿವಿಧೆಡೆ ಸುಮಾರು 1.34 ಕೋ. ರೂ. ವೆಚ್ಚದ ವಿವಿಧ ಕಾಮಗಾರಿಗಳ ಗುದ್ದಲಿ ಪೂಜೆ ಮತ್ತು ಉದ್ಘಾಟನೆ ನೆರವೇರಿಸಿ, ಬಳಿಕ ಮಾಧ್ಯಮದ ಜತೆಗೆ ಅವರು ಮಾತನಾಡಿದರು.
ಪ್ರತೀ ವಾರ್ಡ್‌ಗಳ ಸದಸ್ಯರ ಬೇಡಿಕೆ ಪಟ್ಟಿಯಂತೆ ಅಗತ್ಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ಪುರಸಭೆ ವ್ಯಾಪ್ತಿಯ ವಾರ್ಡ್ ಸದಸ್ಯ ಬೇಡಿಕೆ ಯನ್ನು ಆಧರಿಸಿ ನಡೆಸಲಾಗುವ ಸಣ್ಣ ಮೊತ್ತದ ಎಲ್ಲ ಕಾಮಗಾರಿಗಳನ್ನು ಸ್ಥಳೀಯ ಗುತ್ತಿಗೆದಾರರ ಮೂಲಕವೇ ಮಾಡಲಾಗುತ್ತಿದ್ದು, ಪ್ರತೀ ವಾರ್ಡ್‌ನ ಸದಸ್ಯರೇ ಕಾಮಗಾರಿಯ ಗುಣಮಟ್ಟ ವನ್ನು ಪರಿಶೀಲಿಸಲಿದ್ದಾರೆ ಎಂದರು.
ಪುರಸಭೆ ವ್ಯಾಪ್ತಿಯ ಸದಸ್ಯರ ಬೇಡಿಕೆಯನ್ನು ಆಧರಿಸಿ 1,34,22,000 ರೂ. ಮೊತ್ತದ 27 ಕಾಮಗಾರಿಗಳಿಗೆ ಗುದ್ದಲಿಪೂಜೆ ಮತ್ತು ಪೂರ್ಣಗೊಂಡ 7 ಕಾಮಗಾರಿಗಳನ್ನು ಲೋಕಾರ್ಪಣೆ ಮಾಡಲಾಯಿತು.
ಗುದ್ದಲಿಪೂಜೆ ನಡೆದ ಕಾಮಗಾರಿಗಳು
4ನೇ ವಾರ್ಡ್ ಪೊಲಿಪು ಲಕ್ಷ್ಮೀ ಜನಾರ್ದನ ಮಂದಿರ ಬಳಿ ತಡೆಗೊಡೆ, 1ನೇ ವಾರ್ಡ್ ಭಟ್ರ ತೋಟ ಹತ್ತಿರ ರಸ್ತೆ, 5ನೇ ವಾರ್ಡ್ ಬಬ್ಬು ಸ್ವಾಮಿ ದೇವಸ್ಥಾನ ರಸ್ತೆ, 6ನೇ ವಾರ್ಡ್ ತೆಂಕು ಕಲ್ಯ ರಸ್ತೆ ಚರಂಡಿ ನಿರ್ಮಾಣ, 10ನೇ ವಾರ್ಡ್ ಕಾಪು ಪೇಟೆ ರಸ್ತೆ ಚರಂಡಿ ನಿರ್ಮಾಣ, 17ನೇ ವಾರ್ಡ್ ಗಿರಿಜಾ ಮನೆ ಬಳಿ ಕಲ್ವರ್ಟ್ ರಚನೆ, ಗೀತಾ ದೇವಾಡಿಗ ಮನೆ ಬಳಿ ತಡೆಗೊಡೆ, ಅನಂತರಾಜ ಆಚಾರ್ಯ ರಸ್ತೆ ಬದಿ ಚರಂಡಿ, 18ನೇ ವಾರ್ಡ್ ಕಟ್ಟದ ಮನೆ ಉಮೇಶ್ ಕರ್ಕೇರ ಮನೆಗೆ ಬಳಿ ಕಲ್ವರ್ಟ್ ರಚನೆ, 19ನೇ ವಾರ್ಡ್ ಅಚ್ಚಲು ಗೋವರ್ಧನ್ ಭಟ್ ಮನೆ ಬಳಿ ಕಲ್ವರ್ಟ್ ರಚನೆ ಮತ್ತು ರಸ್ತೆ ಅಭಿವೃದ್ಧಿ, 20ನೇ ವಾರ್ಡ್ ಎಎಂಎಸ್ ಬಸ್ ಮಾಲಕರ ಮನೆ ಹತ್ತಿರ ಚರಂಡಿ ರಚನೆ, 22ನೇ ವಾರ್ಡ್ ಪಕೀರಣಕಟ್ಟೆ ಮುಖ್ಯರಸ್ತೆ ಅಭಿವೃದ್ಧಿ, ಗುರ್ಮೆ ಮನ್ಮಥ ಹತ್ತಿರ ಚರಂಡಿ ರಚನೆ, 21ನೇ ವಾರ್ಡ್ ಗರಡಿ ರಮೇಶ್ ಪೂಜಾರಿ ಮನೆ ಬಳಿ ಕಲ್ವರ್ಟ್, ಜನಾರ್ದನ ವಾರ್ಡ್ ರಸ್ತೆ ಅಭಿವೃದ್ಧಿ, 15ನೇ ವಾರ್ಡ್ ಕಾಂತು ಮನೆ ಬಳಿ, ಫಿಶರೀಶ್ ರಸ್ತೆ ಅಜೀಬ್ ಮನೆ ಬಳಿ ಚರಂಡಿ ರಚನೆ, 14ನೇ ವಾರ್ಡ್ ರಜಬ್ ಮನೆ ಬಳಿ ರಸ್ತೆ, 13ನೇ ವಾರ್ಡ್ ಪ.ಜಾ. ಕಾಲನಿ ಚರಂಡಿ ನಿರ್ಮಾಣ, 11ನೇ ವಾರ್ಡ್ ರಾಮನಗರ ರಸ್ತೆ ಅಭಿವೃದ್ಧಿ, ಮೂರು ಸೆಂಟ್ಸ್ ಕಾಲನಿ ಇಂಟರ್‌ಲಾಕ್ ಅಳವಡಿಕೆ, 12 ನೇ ವಾರ್ಡ್ ಕೊಪ್ಪಲಂಗಡಿ ಎಸ್‌ಸಿ ಮನೆಗಳ ಹತ್ತಿರ, ಪ.ಜಾ, ಮನೆ ಬಳಿ ರಸ್ತೆ ಅಭಿವೃದ್ಧಿ, 8ನೇ ವಾರ್ಡ್ ಲಕ್ಷ್ಮೀ ನಗರ ರಸ್ತೆ ಅಭಿವೃದ್ಧಿ, 10ನೇ ವಾರ್ಡ್ ಅಪ್ಪಿ ಮನೆ ಹತ್ತಿರ, 9ನೇ ವಾರ್ಡ್ ಲಕ್ಷ್ಮೀ ಮನೆ ಹತ್ತಿರ ತಡೆಗೊಡೆ ರಚನೆ.
ಕಾಪು ಪುರಸಭೆಯ ಸದಸ್ಯರಾದ ಅರುಣ್ ಶೆಟ್ಟಿ ಪಾದೂರು, ರಮೇಶ್ ಹೆಗ್ಡೆ, ಅನಿಲ್ ಕುಮಾರ್, ಕಿರಣ್ ಆಳ್ವ, ಸುಧಾ ರಮೇಶ್, ಮೋಹಿನಿ ಶೆಟ್ಟಿ, ರಮಾ ವೈ. ಶೆಟ್ಟಿ, ಶಾಂಭವಿ ಕುಲಾಲ್, ಗುಲಾಬಿ ಪಾಲನ್, ಮಮತಾ ಕೆ. ಸಾಲ್ಯಾನ್, ಮಹಮ್ಮದ್ ಇಮ್ರಾನ್, ಸುರೇಶ್ ದೇವಾಡಿಗ, ಮಾಲಿನಿ ಮತ್ತಿತರ ಸದಸ್ಯರು, ಮುಖ್ಯಾಧಿಕಾರಿ ರಾಯಪ್ಪ, ಎಂಜಿನಿಯರ್ ಪ್ರತಿಮಾ, ಪುರಸಭೆ ವ್ಯಾಪ್ತಿ ಬಿಜೆಪಿ ಘಟಕ ಅಧ್ಯಕ್ಷ ಸಂದೀಪ್ ಶೆಟ್ಟಿ, ಸ್ಥಳೀಯ ಗಣ್ಯರಾದ ಶೀÅನಿವಾಸ ತಂತ್ರಿ ಕಲ್ಯ, ಸುಧಾಮ ಶೆಟ್ಟಿ, ರತ್ನಾಕರ ಶೆಟ್ಟಿ, ಚಂದ್ರ ಮಲ್ಲಾರು, ನಜೀರ್ ಅಹಮದ್, ಯೋಗೀಶ್ ಕೈಪುಂಜಾಲು, ಹೈದರ್ ಆಲಿ, ಸಖೇಂದ್ರ ಸುವರ್ಣ, ರವೀಂದ್ರ ಮಲ್ಲಾರು, ಚಂದ್ರಹಾಸ ಶೆಟ್ಟಿ, ರಮೇಶ್ ಪೂಜಾರಿ, ಸುಧಾಕರ ಶೆಟ್ಟಿ, ಪ್ರಶಾಂತ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
ಉದ್ಘಾಟನೆಗೊಂಡ ಕಾಮಗಾರಿಗಳು
17ನೇ ವಾರ್ಡ್‌ನ ಕೊಂಬಗುಡ್ಡೆಯಲ್ಲಿ ಕೊಳವೆ ಬಾವಿ ಕೊರೆದು ಪೈಪ್ ಲೆ„ನ್ ಕಾಮಗಾರಿ, 18ನೇ ವಾರ್ಡ್ ಅಚ್ಚಲು ಮಲ್ಲಾರು ನಾಗಬನ ಹತ್ತಿರ ಕಲ್ವರ್ಟ್ ರಚನೆ, ನಾಗಮೂಲ ಸ್ಥಾನ ಹತ್ತಿರ ತೊಡಿಗೆ ತಡೆಗೊಡೆ, 22ನೇ ವಾರ್ಡ್ ಬಾಬು ಮುಖಾರಿ ಮನೆ ಬಳಿ ಪೈಪ್ ಲೆ„ನ್ ಕಾಮಗಾರಿ, ಕುಡ್ತಿಮಾರ್ ವಾರ್ಡಿನಲ್ಲಿ ರಸ್ತೆ ಅಭಿವೃದ್ಧಿ, ಕೋಟೆ ರಸ್ತೆ ಅಭಿವೃದ್ಧಿ, 21 ನೇ ವಾರ್ಡ್ ಗೌರಿಕೆರೆ ಹತ್ತಿರ ಪೈಪ್ ಲೆ„ನ್ ಕಾಮಗಾರಿಗಳನ್ನು ಉದ್ಘಾಟಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.