ಮೇಲ್ದರ್ಜೆಗೇರದ ಸಿದ್ದಾಪುರ ಪ್ರಾ.ಆ. ಕೇಂದ್ರ
ಎಲ್ಲ ಹುದ್ದೆಗಳು ಖಾಲಿ ಖಾಲಿ, ರೋಗಿಗಳ ಪರದಾಟ ;24x7 ವೈದ್ಯಕೀಯ ಸೇವೆ, ಮೆಟರ್ನಿಟಿ ವಾರ್ಡ್ ಅಗತ್ಯ
Team Udayavani, Feb 6, 2020, 5:51 AM IST
ಸಿದ್ದಾಪುರ: ನಕ್ಸಲ್ ಪೀಡಿತ ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಬೇಕೆಂಬ ಗ್ರಾಮಸ್ಥರ ಆಗ್ರಹವು ಮರೀಚಿಕೆಯಾಗಿದೆ. ಇಲ್ಲಿ ಮಂಗನ ಕಾಯಿಲೆಗಳು ಸೇರಿದಂತೆ ಸಾಂಕ್ರಾಮಿಕ ಕಾಯಿಲೆಗಳು ಹರಡುತ್ತಿದ್ದು, ಆರೋಗ್ಯ ಕೇಂದ್ರದಲ್ಲಿ ವೈದ್ಯರು ಸೇರಿದಂತೆ ದಾದಿಯರಿಲ್ಲದೆ ರೋಗಿಗಳು ಪರದಾಡುವಂತಾಗಿದೆ.
ಹುದ್ದೆಗಳು ಖಾಲಿ-ಖಾಲಿ
ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 26 ಹುದ್ದೆಯಲ್ಲಿ 19 ಹುದ್ದೆ ಖಾಲಿ ಇವೆ. ಕೇವಲ 7 ಹುದ್ದೆಗಳಲ್ಲಿ ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆರೋಗ್ಯ ಕೇಂದ್ರಕ್ಕೆ ಅಗತ್ಯವಾಗಿ ಬೇಕಾಗಿರುವ ಸ್ಟಾಫ್ ನರ್ಸ್ ಹುದ್ದೆಯೇ ಇಲ್ಲಿಯ ತನಕ ಸೃಷ್ಟಿಯಾಗಿಲ್ಲ. ಆರೋಗ್ಯ ಕೇಂದ್ರಕ್ಕೆ ಖಾಯಂ ಆಡಳಿತ ವೈದ್ಯಾಧಿಕಾರಿಗಳು ಸೇರಿದಂತೆ 3 ವೈದ್ಯರ ಹುದ್ದೆ ಖಾಲಿ ಇದೆ. ಪ್ರಥಮ ದರ್ಜೆ ಸಹಾಯಕ, ನೇತ್ರಾಧಿಕಾರಿ, ಪ್ರಯೋಗ ಶಾಲೆ ತಂತ್ರಜ್ಞn, ದ್ವಿÌತೀಯ ದರ್ಜೆ ಸಹಾಯಕ ಹುದ್ದೆಯಲ್ಲಿ ತಲಾ ಒಬ್ಬೊಬ್ಬರು ಕಾರ್ಯನಿರ್ವಹಿಸುತ್ತಿದ್ದಾರೆ. ಬಿ.ಎಚ್.ಇ., ಫಾರ್ಮಾಸಿಸ್ಟ್, ಹಿರಿಯ ಮಹಿಳಾ ಆರೋಗ್ಯ ಸಹಾಯಕಿ, ಹಿರಿಯ ಪುರುಷ ಆರೋಗ್ಯ ಸಹಾಯಕ, ವಾಹನ ಚಾಲಕ ತಲಾ ಒಂದೊಂದು ಹುದ್ದೆ ಖಾಲಿ ಇದೆ. ಕಿರಿಯ ಪುರುಷ ಆರೋಗ್ಯ ಸಹಾಯಕ 3 ಹುದ್ದೆಯಲ್ಲಿ 2 ಖಾಲಿ, ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ 8 ಹುದ್ದೆಯಲ್ಲಿ 7 ಖಾಲಿ, ಡಿ ದರ್ಜೆ 3 ಹುದ್ದೆಯಲ್ಲಿ 2 ಖಾಲಿ ಇವೆ. ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯಾಧಿಕಾರಿ ಡಾ| ದೀಕ್ಷಾ ಅವರು ದಿನಕ್ಕೆ ಕನಿಷ್ಠ 90ರಿಂದ 110 ರೋಗಿಗಳನ್ನು ತಪಾಸಣೆ ನಡೆಸುತ್ತಿದ್ದರು. ಈಗ ಅವರು ಮೈಸೂರಿನಲ್ಲಿ ತರಬೇತಿಯಲ್ಲಿರುವುದರಿಂದ ರೋಗಿಗಳು ಪರದಾಡುವಂತಾಗಿದೆ.
ಉಪ ಕೇಂದ್ರಗಳಲ್ಲಿ ಸಹಾಯಕಿಯರ ಕೊರತೆ
ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ 8 ಉಪ ಕೇಂದ್ರಗಳು ಬರುತ್ತವೆ. 8ರಲ್ಲಿ 3 ಉಪ ಕೇಂದ್ರಗಳಿಗೆ ಮಾತ್ರ ಆರೋಗ್ಯ ಸಹಾಯಕಿಯರು ಇದ್ದಾರೆ. ಹೊಸಂಗಡಿ ಉಪ ಕೇಂದ್ರಕ್ಕೆ ಒಬ್ಬರು ಮಾತ್ರ ಖಾಯಂ ಆರೋಗ್ಯ ಸಹಾಯಕಿಯಾದರೆ, ಸಿದ್ದಾಪುರ ಹಾಗೂ ಆಜ್ರಿ ಉಪ ಕೇಂದ್ರಗಳಿಗೆ ಎನ್‌ಆರ್‌ಎಚ್‌ಎಂ ಅಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ತಲಾ ಒಬ್ಬರು ಆರೋಗ್ಯ ಸಹಾಯಕಿಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಉಳಿದ ಉಪ ಕೇಂದ್ರಗಳಲ್ಲಿ ಹುದ್ದೆ ಖಾಲಿ ಇವೆ. ಈ ವರೆಗೆ ಅದು ಭರ್ತಿಯಾಗಿಲ್ಲ. ಅಲ್ಲದೆ ಈ ವ್ಯಾಪ್ತಿಯಲ್ಲಿ 24 ಅಂಗನವಾಡಿ ಕೇಂದ್ರಗಳು, 33 ಶಾಲೆಗಳು, 10 ಎಸ್‌ಸಿ ಮತ್ತು ಎಸ್‌ಟಿ ಕಾಲನಿಗಳು ಇವೆ. ಈ ಉಪ ಕೇಂದ್ರ ಹಾಗೂ ಪ್ರದೇಶಗಳಿಗೆ ಭೇಟಿ ನೀಡುವ ಆರೋಗ್ಯ ಸಹಾಯಕರಿಗೆ ಯಾವುದೇ ವ್ಯವಸ್ಥೆ ಇಲ್ಲ. ಈ ಮೂವರು ಆರೋಗ್ಯ ಸಹಾಯಕಿಯರು ಉಳಿದ ಉಪ ಕೇಂದ್ರಗಳಿಗೂ ಕೂಡ ಭೇಟಿ ನೀಡಬೇಕಾಗಿದೆ.
ದುರಸ್ತಿ ಕಾಣದ ಆರೋಗ್ಯ ಕೇಂದ್ರ
ಹಳೆ ಕಾಲದ ಆಸ್ಪತ್ರೆ ಹಾಗೂ ಕ್ವಾರ್ಟರ್ಸ್‌ಗಳು ದುರಸ್ತಿಯಾಗಬೇಕಾಗಿದೆ. ಇಲ್ಲಿ ಆರು ಹಾಸಿಗೆ ಹೊಂದಿದ್ದರೂ, ಮೂಲ ಸೌಕರ್ಯ ಮಾತ್ರ ಇಲ್ಲ. ಹಾಸಿಗೆಗಳು ಹಳೆಯ ಕಟ್ಟಡದಲ್ಲಿ ಇವೆ. ಕ್ವಾರ್ಟರ್ಸ್‌ಗಳು ಅಲ್ಪಸಲ್ಪ ದುರಸ್ತಿ ಕಂಡರೂ, ಪೂರ್ಣ ಪ್ರಮಾಣದಲ್ಲಿ ದುರಸ್ತಿಯಾಗಲಿಲ್ಲ.
ಆರೋಗ್ಯ ಕೇಂದ್ರದಲ್ಲಿ ಬೆಳಗ್ಗೆ 9ರಿಂದ 1 ಮತ್ತು 2ರಿಂದ 4.30ರ ತನಕ ಆರೋಗ್ಯ ಕೇಂದ್ರ ತೆರೆದಿರುತ್ತದೆ. ಅನಂತರ ಚಿಕಿತ್ಸೆಗಾಗಿ ಕುಂದಾಪುರ ತಾಲೂಕು ಕೇಂದ್ರ ಅಥವಾ ಉಡುಪಿ ಜಿಲ್ಲಾ ಆರೋಗ್ಯ ಕೇಂದ್ರಕ್ಕೆ ಹೋಗಬೇಕಾದೆ.
ಈ ಭಾಗದಲ್ಲಿ ಮಂಗನ ಕಾಯಿಲೆಯ ಭೀತಿ ಇದ್ದು, ಇದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ ಜಾಗೃತಗೊಳಿಸಬೇಕಾದ ವೈದ್ಯಾಧಿಕಾರಿಗಳೇ ಇಲ್ಲದಿರುವುದರಿಂದ ಗ್ರಾಮಸ್ಥರು ಎಚ್ಚರಿಕೆಯಿಂದ ಇರಬೇಕಾಗಿದೆ.
8 ಗ್ರಾಮಗಳಿಗೊಂದು ಪ್ರಾಥಮಿಕ ಆರೋಗ್ಯ ಕೇಂದ್ರ
ಪ್ರಸ್ತುತ ಹೊರ ರೋಗಿ ತಪಾಸಣಾ ವಿಭಾಗ ಹಾಗೂ ತುರ್ತು ಚಿಕಿತ್ಸೆ ವಿಭಾಗ ಹೊಂದಿರುವ ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರವು ಸಿದ್ದಾಪುರ, ಉಳ್ಳೂರು-74, ಜನ್ಸಾಲೆ, ಕೊಡ್ಲಾಡಿ, ಆಜ್ರಿ, ಯಡಮೊಗೆ, ಹೊಸಂಗಡಿ, ಭಾಗೀಮನೆ ಗ್ರಾಮಗಳ ರೋಗಿಗಳನ್ನು ನಿಭಾಯಿಸುವ ಜವಾಬ್ದಾರಿ ಹೊಂದಿದೆ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿಯೇ ವೈದ್ಯರ ಹಾಗೂ ದಾದಿಯರ ಹುದ್ಧೆಗಳು ಖಾಲಿ ಖಾಲಿಯಾಗಿರುದರಿಂದ ಗ್ರಾಮೀಣ ಭಾಗದ ರೋಗಿಗಳಿಗೆ ಚಿಕಿತ್ಸೆ ಸಿಗದೆ ಪರದಾಡುವಂತಾಗಿದೆ. ಆಗೊಮ್ಮೆ ಈಗೊಮ್ಮೆ ಬೇರೆ ಬೇರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಬಂದು ಹೋಗುತ್ತಿದ್ದರೂ, ರೋಗಿಗಳಿಗೆ ಸೂಕ್ತ ಸಂದರ್ಭ ದಲ್ಲಿ ವೈದ್ಯಕೀಯ ಸೇವೆ ಮಾತ್ರ ಲಭಿಸುತ್ತಿ¤ಲ್ಲ.
ಮೆಟರ್ನಿಟಿ ವಾರ್ಡ್ ಕೊರತೆ
ಮೊದಲು ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಖಾಯಂ ವೈದ್ಯರು ಹಾಗೂ ದಾದಿಯರು ನೇಮಕವಾಗಬೇಕು. ಸಿದ್ದಾಪುರ ಪರಿಸರದ 8 ಗ್ರಾಮಗಳ ಗರ್ಭಿಣಿಯರ ಶುಶ್ರೂಷೆಗೆ ಅಗತ್ಯವಿರುವ ಮೆಟರ್ನಿಟಿ ವಾರ್ಡ್ (ಲೇಬರ್ ವಾರ್ಡ್) ಕೊರತೆ ಕಂಡುಬಂದಿದ್ದು ತುರ್ತು ಚಿಕಿತ್ಸೆಗೆ ದೂರದ ಕುಂದಾಪುರಕ್ಕೆ ಸಾಗಬೇಕಾದ ಅನಿವಾರ್ಯತೆ ನಿಭಾಯಿಸುವಲ್ಲಿ ಇಲಾಖೆ ಕ್ರಮ ಕೈಗೊಳ್ಳುವುದು ಅಗತ್ಯ.
– ಭಾಸ್ಕರ್ ಶೆಟ್ಟಿ ಸಿದ್ದಾಪುರ, ಸ್ಥಳೀಯ ನಿವಾಸಿ
ಮೇಲ್ದರ್ಜೆಗೆ ಏರಿಸುವ ಪ್ರಯತ್ನ
ನಕ್ಸಲ್ ಪೀಡಿತ ಪ್ರದೇಶ, ತೀರ ಗ್ರಾಮೀಣ ಭಾಗಗಳು ಸಿದ್ದಾಪುರ ಆರೋಗ್ಯ ಕೇಂದ್ರದ ವ್ಯಾಪ್ತಿಗೊಳಪಡುವುದರಿಂದ ತುರ್ತು ಚಿಕಿತ್ಸೆಗೆ ಬೇಕಾದ ವ್ಯವಸ್ಥೆಗಾಗಿ ಮೇಲಧಿಕಾರಿಗಳ ಗಮನಕ್ಕೆ ಜಿ. ಪಂ. ಸಭೆಯಲ್ಲಿ ತರಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸುವುದರೊಡನೆ 24×7 ಸೇವೆ ಪೂರ್ಣ ಪ್ರಮಾಣದಲ್ಲಿ ಆರಂಭಗೊಳ್ಳುವಂತೆ ಪ್ರಯತ್ನಿಸಲಾಗುದು.
– ರೋಹಿತ್‌ಕುಮಾರ ಶೆಟ್ಟಿ
ಸದಸ್ಯರು ಜಿ. ಪಂ. ಸಿದ್ದಾಪುರ ಕ್ಷೇತ್ರ
ಹುದ್ದೆಗಳ ಭರ್ತಿಗೆ ಸರಕಾರದಿಂದ ಕ್ರಮ
ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಹಾಗೂ ದಾದಿಯರ ಹುದ್ದೆ ಖಾಲಿ ಇದೆ. ಗುತ್ತಿಗೆ ಆಧಾರದ ಮೇಲೆ ವೈದ್ಯ ಹಾಗೂ ದಾದಿಯರ ನೇಮಕ ಇಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಇಲಾಖೆಯ ಮೂಲಕ ಸರಕಾರದ ಗಮನಕ್ಕೆ ತಂದಿದ್ದೇವೆ. ಈ ಬಾರಿ ಬಜೆಟ್‌ನಲ್ಲಿ ಸರಕಾರ ಏನಾದರೂ ಕ್ರಮ ತೆಗೆದುಕೊಳ್ಳಬಹುದು.
– ಡಾ| ನಾಗಭೂಷಣ ಉಡುಪ, ತಾಲೂಕು ವೈದ್ಯಾಧಿಕಾರಿ ಕುಂದಾಪುರ
-ಸತೀಶ್ ಆಚಾರ್ ಉಳ್ಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Oscar: ಕ್ಯಾಲಿಫೋರ್ನಿಯಾ ಕಾಳ್ಗಿಚ್ಚು; ಆಸ್ಕರ್ ನಾಮಿನೇಷನ್ ವೋಟಿಂಗ್ ವಿಸ್ತರಣೆ
ಆರ್ಯಭಟ ಗಣಿತ ಪರೀಕ್ಷೆ; ಸಾಧನೆಗೈದ ಡಿ.ಪಿ.ಎಸ್. ಶಾಲೆಯ ವಿದ್ಯಾರ್ಥಿಗಳು
Koratagere: ಕಾರು-ಬೈಕ್ ಭೀಕರ ಅಪಘಾತ: ಓರ್ವ ಸವಾರ ಸ್ಥಳದಲ್ಲೇ ಸಾವು
Toxic Movie: ಕೇವಲ 13ಗಂಟೆಯಲ್ಲೇ ʼಪುಷ್ಪ-2ʼ ದಾಖಲೆ ಉಡೀಸ್ ಮಾಡಿದ ಯಶ್ ʼಟಾಕ್ಸಿಕ್ʼ
Dharwad: ದಲಿತಪರ ಸಂಘಟನೆ ಕರೆ ನೀಡಿದ ಬಂದ್ ಗೆ ಮಿಶ್ರ ಪ್ರತಿಕ್ರಿಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.