ಯಾಂತ್ರೀಕೃತ ಮೀನುಗಾರಿಕೆ ದೋಣಿಗಳಿಗೆ 25,000 ಕಿ.ಲೀ ಡೀಸೆಲ್ ಹೆಚ್ಚುವರಿ ವಿತರಣೆಗೆ ಆದೇಶ
Team Udayavani, Feb 23, 2023, 8:10 AM IST
ಉಡುಪಿ: ಯಾಂತ್ರೀಕೃತ ಮೀನುಗಾರಿಕೆ ದೋಣಿಗಳಿಗೆ ಕರರಹಿತ 25 ಸಾವಿರ ಕಿಲೋ ಲೀ. ಡೀಸೆಲ್ ಹೆಚ್ಚುವರಿಯಾಗಿ ವಿತರಿಸಲು ಸರಕಾರ ಆದೇಶಿಸಿದೆ.
ಯಾಂತ್ರೀಕೃತ ದೋಣಿಗಳಿಗೆ ಕರರಹಿತ 25 ಸಾವಿರ ಕಿ.ಲೀ. ಡೀಸೆಲ್ 2022-23ನೇ ಸಾಲಿಗೆ ಹೆಚ್ಚುವರಿ ಯಾಗಿ ವಿತರಿಸಲು ಫೆ. 22ರಂದು ಸರಕಾರ ಆದೇಶ ಹೊರಡಿಸಿದೆ.
ಈ ಹಿಂದೆ ಸರಕಾರವು ಕರರಹಿತ ಡೀಸೆಲನ್ನು ಡೆಲಿವರಿ ಪಾಯಿಂಟ್ ನಲ್ಲಿ ವಿತರಿಸಲು ಆದೇಶಿಸಿದ್ದು, 2022 – 23ನೇ ಸಾಲಿಗೆ ಆರ್ಥಿಕ ವರ್ಷ ಎಪ್ರಿಲ್ನಿಂದ ಅನ್ವಯ ವಾಗುವಂತೆ ದೋಣಿಗಳಿಗೆ ವಾರ್ಷಿಕ ಕರರಹಿತ ಡೀಸೆಲ್ ಮಿತಿಯನ್ನು 1.50 ಲಕ್ಷ ಕಿಲೋ ಲೀಟರ್ನಿಗದಿಪಡಿಸಿರುತ್ತದೆ. ಯಾಂತ್ರಿಕ ದೋಣಿಗಳಿಗೆ ನೀಡುತ್ತಿರುವ ಕರರಹಿತ ಡೀಸೆಲ್ ಕೋಟಾ
ಡಿಸೆಂಬರ್ಗೆ ಮುಗಿಯುತ್ತಿದ್ದು, ಸದ್ದರಿ ಕೋಟಾ ಸಾಕಾಗುತ್ತಿಲ್ಲವಾ ದ್ದರಿಂದ ಪ್ರಸ್ತುತ ನಿಗದಿಯಾಗಿರುವ ವಾರ್ಷಿಕ ಮಿತಿಯನ್ನು 1.50 ಲಕ್ಷ ಕಿ.ಲೀ.ದಿಂದ 2 ಲಕ್ಷ ಕಿಲೋ ಲೀ.ಗೆ ಹೆಚ್ಚಿಸಲು ಮನವಿ ಮಾಡಲಾಗಿತ್ತು. ಅಲ್ಲದೆ ಪ್ರತೀ ಮಾಹೆಗೆ ಸರಾಸರಿ 17,500 ಕಿಲೋ ಲೀಟರ್ಪ್ರಮಾಣ ಬೇಕಾಗಿದ್ದು, ಅದರಂತೆ ಫೆಬ್ರವರಿ ಯಿಂದ ಮಾರ್ಚ್ ವರೆಗೆ ಕನಿಷ್ಠ 35,000 ಕಿ.ಲೀ. ಬೇಕಿರುವುದರಿಂದ 25,000 ಕಿ.ಲೀ. ಹೆಚ್ಚುವರಿಯಾಗಿ ಕರರಹಿತ ಡೀಸೆಲ್ ವಿತರಿಸಲು ಮನವಿ ಮಾಡಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸಹ ಸವಾರ ಸಾವು
Udupi: ಆಟೋರಿಕ್ಷಾ ಢಿಕ್ಕಿ; ವೃದ್ಧನಿಗೆ ಗಾಯ
ಬೆಳಪು ಸಹಕಾರಿ ಸಂಘ: ಡಾ.ದೇವಿಪ್ರಸಾದ್ ಶೆಟ್ಟಿ ನೇತೃತ್ವದ ತಂಡಕ್ಕೆ 8ನೇ ಬಾರಿ ಚುಕ್ಕಾಣಿ
Aadhar Card: ಆಧಾರ್ ನವೀಕರಣ ಮಾಡಿಕೊಂಡಿದ್ದೀರಾ?: ಹಾಗಾದರೆ ಈ ಸುದ್ದಿ ಓದಲೇಬೇಕು!
Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.