ಹರಕೆ ರೂಪದಲ್ಲಿ ಬಿಟ್ಟ 26 ವರ್ಷ ಪ್ರಾಯದ ಬಸವ; ಹಿಲಿಯಾಣ ಗರೋಡಿ ಬಸವ ಇನ್ನಿಲ್ಲ
Team Udayavani, Jan 23, 2020, 11:01 PM IST
ಸಿದ್ದಾಪುರ: ಹಿಲಿಯಾಣ ಶ್ರೀ ಬ್ರಹ್ಮಬೈದರ್ಕಳ ಗರೋಡಿಗೆ ಹರಕೆ ರೂಪದಲ್ಲಿ ಬಿಟ್ಟ 26 ವರ್ಷ ಪ್ರಾಯದ ಬಸವ ವಯೋ ಸಹಜವಾಗಿ ಮಂಗಳ ವಾರ ಬೆಳಗ್ಗೆ ಮೃತಪಟ್ಟಿದೆ. ಮೃತಪಟ್ಟ ಬಸವವನ್ನು ಹಿಂದೂ ಸಂಪ್ರದಾಯದಂತೆ ವಿವಿಧ ಧಾರ್ಮಿಕ ವಿಧಿ ಕ್ರಿಯೆಯಿಂದ ಅಂತ್ಯ ಸಂಸ್ಕಾರ ನಡೆಸಲಾಯಿತು.
ಹಿಲಿಯಾಣ ಶಾಲೆ ಬಳಿ ನಿವಾಸಿ ಗೋಪಾಲ ಮಡಿವಾಳ ಅವರು 1994ರ ಅಗೋಸ್ಟ್ 16ರಂದು ಒಂದು ವರ್ಷ ಪ್ರಾಯದ ಗಂಡು ಕರುವನ್ನು ದೇವರಿಗೆ ಹರಕೆ ರೂಪದಲ್ಲಿ ಬಿಟ್ಟರು. ಅಂದಿನಿಂದ ಇಂದಿನ ತನಕ ಈ ಬಸವ ಹಿಲಿಯಾಣ ಗ್ರಾಮದಲ್ಲಿ ಮನೆ ಮನೆ ಸುತ್ತಾಡಿಕೊಂಡು ರಾತ್ರಿ ಗರೋಡಿಗೆ ಬಂದು ಮಲಗುತ್ತಿತ್ತು. ಸುಮಾರು 26 ವರ್ಷ ಪ್ರಾಯದಿಂದಲೂ ಸೌಮ್ಯ ಸ್ವಭಾವದಿಂದ ಕೂಡಿದೆ. ಹಿಲಿಯಾಣದ ಗ್ರಾಮದವರು ಬಸವ ಮನೆಗೆ ಬಂದಾಗ ಗರೋಡಿಯ ದೇವರು ಮನೆಗೆ ಬಂದಿದ್ದಾರೆ ಎಂದು ಭಕ್ತಿಯಿಂದ ಆಹಾರ ನೀಡಿ, ಕಾಲಿಗೆ ನಮಸ್ಕRರಿಸುತ್ತಿದ್ದರು. ಜನರಿಗೆ ಅಚ್ಚು ಮೆಚ್ಚಿನ ದೇವರ ಬಸವನಾಗಿದ ಎತ್ತನ್ನು ಗರೋಡಿಯಲ್ಲಿ ಪ್ರತಿ ಸಂಕ್ರಮಣ, ಕಾಯದಾ ಪೂಜೆ, ಗೋವು ಪೂಜೆ, ವಾರ್ಷಿಕ ನೇಮೋತ್ಸವದಂದು ಸ್ನಾನ ಮಾಡಿಸಿ, ಹೂ ಹಾರಗಳಿಂದ ಶೃಂಗ ರಿಸುವ ಮೂಲಕ ದೇವರ ಪ್ರಸಾದ ಹಾಕಿ ಪೂಜಿಸುತ್ತಿದ್ದರು. ಹಿಲಿಯಾಣ ಪರಿಸರದಲ್ಲಿ ತಿರುಗಾಡಿಕೊಂಡಿದ ಬಸವ ಹಿಲಿಯಾಣ ಪಕ್ಕದ ಗ್ರಾಮವಾದ ಹಳ್ಳಿ ಎಂಬಲ್ಲಿ ಮಂಗಳವಾರ ಬೆಳಿಗ್ಗೆ ಕೊನೆಯು ಸಿರೆಳಿದಿದೆ.
ಹಿಲಿಯಾಣ ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಅಧ್ಯಕ್ಷ ವೈ. ಕರುಣಾಕರ ಶೆಟ್ಟಿ ಯರುಕೋಣೆ ಘಟನೆಯ ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿ, ಬಸವನಿಗೆ ಸ್ಥಾನ್ನಾಧಿಗಳನ್ನು ನೆರವೇರಿಸಿ, ಹೂವಿನ ಹಾರ ಹಾಕಿ, ಹೊಸ ಬಟ್ಟೆ ಹೋದಿಸಿ ವಿವಿಧ ಧಾರ್ಮಿಕ ಕ್ರೀಯೆ ನಡೆದಿದರು. ಅನಂತರ ಭಕ್ತರಿಂದ ನುಡಿ ನಮನ ಸಲ್ಲಿಸಲಾಯಿತು. ಅಂತಿಮ ಕಾರ್ಯ ಮುಗಿದ ಬಳಿಕ ದಫನ ಕಾರ್ಯ ಮಾಡಲಾಯಿತು.
ಬಸವ ಮೃತಪಟ್ಟ ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ತರು ಹಳ್ಳಿಗೆ ಆಗಮಿಸಿ, ಪೂಜಿಸಿ ಅಂತಿಮದರ್ಶನ ಪಡೆದರು. ಗರೋಡಿಗೆ ಬಸವನ್ನು ಹರಕೆ ರೂಪವಾಗಿ ನೀಡಿದ ಗೋಪಾಲ ಮಡಿವಾಳ, ಸಿದ್ದಾರ್ಥ ನಾಯ್ಕ, ಸದಾಶಿವ ಶೆಟ್ಟಿ, ಕುಶಲ ಶೆಟ್ಟಿ ಹಾಗೂ ಸ್ಥಳೀಯರು ಮತ್ತು ಭಕ್ತರು ಬಸವನ ಅಂತಿಮ ದರ್ಶನದಲ್ಲಿ ಪಾಲ್ಗೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Malpe: ಬೀಚ್‌ನಲ್ಲಿ ಮತ್ತೆ ಆರಂಭವಾಗಿದೆ ಫ್ಲೋಟಿಂಗ್ ಬ್ರಿಡ್ಜ್, ಪ್ರವಾಸಿಗರ ಸ್ಪಂದನೆ
Udupi: ಗೀತಾರ್ಥ ಚಿಂತನೆ-88: ಸಮಸ್ಯೆಯ ಮೂಲ ಹುಡುಕುವ ರೀತಿ
Kaup: ಪಠ್ಯದ ಜತೆಗೆ ಶಿಕ್ಷಣಕ್ಕೆ ಆದ್ಯತೆ ಅತ್ಯಗತ್ಯ: ಡಾ| ಕೆ. ಪ್ರಕಾಶ್ ಶೆಟ್ಟಿ
Ajekar Case: ನ್ಯಾಯಾಂಗ ಬಂಧನ ವಿಸ್ತರಣೆ
Karkala Parashurama statue Case: ಶಿಲ್ಪಿ ಕೃಷ್ಣ ನಾಯ್ಕ ಜಾಮೀನು ಅರ್ಜಿ ತಿರಸ್ಕೃತ
MUST WATCH
ಹೊಸ ಸೇರ್ಪಡೆ
Golden Jubliee: ಪತ್ರಿಕೆಯ ಓದು ಪ್ರತಿಯೊಬ್ಬರಿಗೂ ಆಹಾ! ಎನಿಸುವಂತಿರಲಿ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
High Court: ʼಅಪರಾಧಿ ಪತಿಯೊಂದಿಗೆ ನೆಲೆಸಿದ ಮಾತ್ರಕ್ಕೆ ಪತ್ನಿಯನ್ನೂ ಅಪರಾಧಿ ಮಾಡಲಾಗದುʼ
Karnataka: ಅರಣ್ಯದಲ್ಲಿ ನಿರಂತರ ಗಣಿ ಚಟುವಟಿಕೆಗೆ ಅನುಮತಿ?
Mangaluru: ಮಾರುಕಟ್ಟೆಯಲ್ಲೀಗ ಬಂಗುಡೆ ಬಲು ಅಗ್ಗ! ವಿದೇಶದಲ್ಲಿ ಬೇಡಿಕೆ ಇಳಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.