ನಿಲ್ಲಿಸಿದ್ದ ವಾಹನದಿಂದ 2.90 ಲ.ರೂ.ಕಳವು
Team Udayavani, Mar 25, 2017, 12:41 PM IST
ಉಡುಪಿ: ಚಿತ್ತರಂಜನ್ ಸರ್ಕಲ್-ಸಂಸ್ಕೃತ ಕಾಲೇಜು ಮಧ್ಯೆ ಇರುವ ಮಾರುತಿ ವೀಥಿಕಾ ರಸ್ತೆಯಲ್ಲಿರುವ ಜುವೆಲರಿ ಮಳಿಗೆಯ ಮುಂಭಾಗದಲ್ಲಿ ಕಟಪಾಡಿ ಕೋಟೆ ಗ್ರಾಮದ ಪ್ರಭಾಕರ ಕೋಟ್ಯಾನ್ ಪಾರ್ಕ್ ಮಾಡಿದ್ದ ವಾಹನದಲ್ಲಿದ್ದ 2,99,000 ರೂ. ಕಳವಾಗಿದೆ. ಪ್ರಭಾಕರ ಕೋಟ್ಯಾನ್ ಪಿಡಬ್ಲೂéಡಿ ಗುತ್ತಿಗೆದಾಧಿರ. ಗುರುವಾರ ಅಜ್ಜರಕಾಡಿ ನಲ್ಲಿರುವ ಎಸ್‌ಬಿಐ ಬ್ಯಾಂಕಿನಲ್ಲಿ 3,44,393 ರೂ. ಚೆಕ್ಕನ್ನು ಹಾಕಿದ್ದು, ಅದರಲ್ಲಿ 3,44,000 ರೂ. ಡ್ರಾ ಮಾಡಿಕೊಂಡಿದ್ದರು.
ಚಿನ್ನಾಭರಣ ಖರೀದಿಗೆ ಬಂದಿದ್ದರು…
ಡ್ರಾ ಮಾಡಿದ ಹಣವನ್ನು ಹೋಂಡಾ ಆಕ್ಟಿವಾ ಏವಿಯೇಟರ್ ವಾಹನದ ಸೀಟಿನ ಅಡಿಭಾಗದ ಜಾಗದಲ್ಲಿ ಇಟ್ಟುಕೊಂಡು ಮಾರುತಿ ವೀಥಿಕಾದ ಮಳಿಗೆಯಲ್ಲಿ ಚಿನ್ನಾಭರಣ ಖರೀದಿಸಲೆಂದು ಅವರು ಗುರುವಾರ ಸಂಜ ತೆರಳಿದ್ದರು. ಜುವೆಲ್ಲರಿ ಮುಂಭಾಗದ ಪಶ್ಚಿಮ ಭಾಗದಲ್ಲಿ ದ್ವಿಚಕ್ರ ವಾಹನವನ್ನು ಪ್ರಭಾಕರ ಕೋಟ್ಯಾನ್ ಅವರು ಪಾರ್ಕ್ ಮಾಡಿದ್ದರು. ವಾಹನದಲ್ಲಿದ್ದ ಹಣದ ಪೈಕಿ 54 ಸಾವಿರ ರೂ.ಗಳನ್ನು ತನ್ನೊಂದಿಗೆ ಇರಿಸಿಕೊಂಡು ಜುವೆಲರಿಯೊಳಗೆ ಹೋಗಿದ್ದರು. ವಾಹನದ ಸೀಟಿನಡಿಯ ಜಾಗದಲ್ಲಿ 2,99,000 ರೂ. ಇಟ್ಟಿದ್ದರು. ಜುವೆಲರಿಯಲ್ಲಿ ಚಿನ್ನಾಭರಣವನ್ನು ವೀಕ್ಷಿಸಿ ಅರ್ಧ ಗಂಟೆಯ ಮಧ್ಯಾವಧಿಯಲ್ಲಿ ಮರಳಿ ಬಂದು ಗಮನಿಸಿದಾಗ ಹಣ ಕಳವಾಗಿರುವುದುಗಮಧಿನಕ್ಕೆ ಬಂತು.
ಜುವೆಲರಿ ಸಿಸಿ ಟಿವಿಗೆ ಮರೆಯಾಯ್ತು ಮಾರುತಿ ವೀಥಿಕಾ ರಸ್ತೆಯು ಜನಸಂಚಾರವಿರುವ ನಗರದ ರಸ್ತೆಯಾಗಿದೆ. ಪ್ರಭಾಕರ್ ರಸ್ತೆಯ ಬದಿಯಲ್ಲಿಯೇ ವಾಹನ ಪಾರ್ಕ್ ಮಾಡಿದ್ದರು. ಸಂಸ್ಥೆಯು ñಮಳಿಗೆಯ ಮುಂಭಾಗದ ಪಾರ್ಕಿಂಗ್ ಏರಿಯಾ, ಒಳಪ್ರವೇಶದ ಮುಖ್ಯ ದ್ವಾರ ಕಾಣುವಂತೆ ಉತ್ತಮವಾದ ಸಿಸಿ ಕೆಮರಾ ವನ್ನು ಅಳವಡಿಸಿಕೊಂಡಿದೆ.
ಈ ಕೆಮರಾದಲ್ಲಿ ಸೆರೆಯಾಗಿರುವ ಘಟನೆಯ ದೃಶ್ಯಾವಳಿಗಳನ್ನು ವೀಕ್ಷಿಸಿದಾಗ ಪ್ರಭಾಕರ್ ಅವರು ವಾಹನದಲ್ಲಿ ಬಂದು ನಿಲ್ಲಿಸುವ ಚಿತ್ರಣ ಕಾಣುತ್ತದೆ. ರಸ್ತೆ ದಾಟಿ ಪಾರ್ಕ್ ಮಾಡಲು ಸ್ಥಳಾವಕಾಶವಿಲ್ಲವೆಂದು ತಿಳಿದುಕೊಂಡ ಅವರು ಸ್ವಲ್ಪ ಹಿಂದಕ್ಕೆ ಹೋಗಿ ಪಾರ್ಕ್ ಮಾಡಿದ್ದರು. ಹಾಗಾಗಿ ಅವರು ಪಾರ್ಕ್ ಮಾಡಿದ್ದ ಜಾಗವು ಜುವೆಲರಿ ಸಿಸಿ ಕೆಮರಾ ಕಣ್ಣಿನಿಂದೆ ಮರೆಯಾಗಿ ಹೋಗಿತ್ತು.
ಹೆಸರಿಗಷ್ಟೇ ಸಿಸಿ ಕೆಮರಾ?
ಮಾರುತಿ ವೀಥಿಕಾ ರಸ್ತೆಯಲ್ಲಿಯೇ ಹಲವು ಖಾಸಗಿ ಸಿಸಿ ಕೆಮರಾಗಳಿದೆ. ಅದನ್ನು ಪರೀಕ್ಷಿಸ ಬಹುದು. ಚಿತ್ತರಂಜನ್ ಸರ್ಕಲ್‌ನ ರಾಯಲ್ ಲಾಡ್ಜ್ನ ಮುಂಭಾಗದಲ್ಲಿ ಪೊಲೀಸ್ ಇಲಾಖೆ ಅಳವಡಿಸಿರುವ ಸಿಸಿ ಕೆಮರಾವಿದೆ. É ಸಂಸ್ಕೃತ ಕಾಲೇಜಿನ ಮುಂಭಾಗದಲ್ಲಿ ಸಿಸಿ ಕೆಮರಾವನ್ನು ಪೊಲೀಸ್ ಇಲಾಖೆ ಅಳವಡಿಸಿದೆ. ಆದರೆ ಇಲ್ಲಿರುವ ಪೊಲೀಸರ ಸಿಸಿ ಕೆಮರಾಗಳು ಸರಿ ಯಾಗಿ ಕಾರ್ಯನಿರ್ವಹಿಸುತ್ತಲೇ ಇಲ್ಲ. ಹಾಗಾಗಿ ಆರೋಪಿಗಳ ಪತ್ತೆ ಕಾರ್ಯ ಪೊಲೀ ಸರಿಗೆ ಸಾಧ್ಯವಾಗುತ್ತಿಲ್ಲ ಎಂದು ದೂರು ದಾರ ಪ್ರಭಾಕರ ಕೋಟ್ಯಾನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಶುಕ್ರವಾರ ಬೆಳಗ್ಗೆಯಿಂದಲೇ ಪೊಲೀಸರು ಪರಿಸರದ ಕಟ್ಟಡಗಳಲ್ಲಿರುವ ಸಿಸಿ ಕೆಮರಾಗಳಲ್ಲಿ ದಾಖಲಾಗಿದ್ದ ದೃಶ್ಯಾವಳಿಗಳನ್ನು ಪರಿಶೀಲಿಸಿದರು. ಡಿಸಿಐಬಿ ಪೊಲೀಸರ ತಂಡವೂ ಪ್ರಕರಣದ ಹಿಂದೆ ಬಿದ್ದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್ ಯತ್ನಾಳ್
NH Highway Works: ಬಿ.ಸಿ.ರೋಡು: ಟ್ರಾಫಿಕ್ ಜಾಮ್
Rain: ಪುತ್ತೂರು, ಸುಳ್ಯ; ವಿವಿಧೆಡೆ ಲಘು ಮಳೆ
ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ
Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.