ಒಂದೇ ಗ್ರಾಮದಲ್ಲಿ 6 ತಿಂಗಳಲ್ಲಿ 3 ಕ್ವಿಂ.ಪ್ಲಾಸ್ಟಿಕ್‌ ಸಂಗ್ರಹ

Team Udayavani, Apr 22, 2018, 6:00 AM IST

1904bvre1-varamballi.jpg

ಬ್ರಹ್ಮಾವರ: ಸಮರ್ಪಕ ತ್ಯಾಜ್ಯ ವಿಲೇವಾರಿಯ ಉದ್ದೇಶದೊಂದಿಗೆ ಆರಂಭ ಗೊಂಡ ವಾರಂಬಳ್ಳಿಯ ಘನ-ದ್ರವ ಸಂಪನ್ಮೂಲ- ನಿರ್ವಹಣಾ ಘಟಕ(ಎಸ್‌.ಎಲ್‌.ಆರ್‌.ಎಂ.) ಕೇವಲ 6 ತಿಂಗಳಲ್ಲಿ 3 ಕ್ವಿಂಟಾಲ್‌ಗ‌ೂ ಮಿಕ್ಕಿ ಪ್ಲಾಸ್ಟಿಕ್‌ ಸಂಗ್ರಹಿಸಿ ದಾಖಲೆ ಬರೆದಿದೆ. 
ಸುಮಾರು 250 ಮನೆಗಳು ಹಾಗೂ ವಾಣಿಜ್ಯ ಕಟ್ಟಡಗಳಿಂದ ಪ್ಲಾಸ್ಟಿಕ್‌ ಅಲ್ಲದೆ ಪ್ರತಿನಿತ್ಯ 1 ಕ್ವಿಂಟಾಲ್‌ಗ‌ೂ ಮಿಕ್ಕಿ ತ್ಯಾಜ್ಯ ಸಂಗ್ರಹಿಸುತ್ತದೆ. ಅಲ್ಲದೇ ಇದನ್ನು ಮರುಬಳಕೆಗೆ ಆಗುವಂತೆ ಮೌಲ್ಯವರ್ಧನೆಗೊಳಿಸಿ ಮಾರಾಟಕ್ಕೆ ಸಿದ್ಧಪಡಿಸುತ್ತಿದೆ. 
 
ಹೇಗಿದೆ ಘಟಕ? 
16 ಮಂದಿ ಕಾರ್ಯಕರ್ತರು ಇಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಬೆಳಗ್ಗೆ ಹಾಗೂ ಸಂಜೆಯ ಎರಡು ಅವ ಧಿಯಲ್ಲಿ ಗ್ರಾಮದ ಮನೆಗಳು, ವಾಣಿಜ್ಯ ಸಂಕೀರ್ಣಕ್ಕೆ ತೆರಳಿ ತ್ಯಾಜ್ಯ ಸಂಗ್ರಹಿಸಲಾಗುತ್ತಿದೆ. ಬಳಿಕ ತರಬೇತಿ ಪಡೆದಂತೆ ವೈಜ್ಞಾನಿಕವಾಗಿ ಬೇರ್ಪಡಿಸಲಾಗುತ್ತಿದೆ. ಬಳಿಕ ಇವುಗಳಲ್ಲಿ ಆಯ್ದವುಗಳನ್ನು ಮೌಲ್ಯವರ್ಧನೆ ಮಾಡಲಾಗುತ್ತದೆ. ಪ್ಲಾಸ್ಟಿಕ್‌ ಅನ್ನು ಪುನರ್ಬಳಕೆಗೆ ಬೇರೆ ಕೇಂದ್ರಕ್ಕೆ ಕಳಿಸಿಕೊಡಲಾಗುತ್ತದೆ. 

ಕಸದಿಂದ ರಸ
ಹೂವಿನ ತ್ಯಾಜ್ಯದಿಂದ ರಂಗೋಲಿ ಪುಡಿ ತಯಾರಿಸುವ ಹಾಗೂ ಸಾವಯವ ವಸ್ತುಗಳಿಂದ ಅಲಂಕಾರಿಕ ವಸ್ತು ತಯಾರಿಸುವ ಕಾರ್ಯ ಇಲ್ಲಿ ಪ್ರಾರಂಭಿಸಲಾಗಿದೆ. ಕೃಷಿ ಪೂರಕ ಔಷಧೋತ್ಪನ್ನಗಳ ತಯಾರಿ ಹಾಗೂ ಮಾರಾಟಕ್ಕೂ ಸಿದ್ಧತೆ ನಡೆದಿದೆ. ಈ ಬಗ್ಗೆ ತರಬೇತಿಯನ್ನು ಪಡೆದ ಕಾರ್ಯಕರ್ತರು ಉತ್ಪನ್ನ ಸಿದ್ಧಪಡಿಸಲು ತೊಡಗಿದ್ದಾರೆ.

ಮುಂದಿನ ಯೋಜನೆ
ದ್ರವತ್ಯಾಜ್ಯ ನಿರ್ವಹಣೆಯ ಮಾದರಿಯನ್ನು ನೈಸರ್ಗಿಕವಾಗಿ ಇಲ್ಲಿ ರೂಪಿಸಲಾಗಿದೆ. ಕಾಬಾಳೆಗಿಡ, ಕಾಂಪೋಸ್ಟ್‌ ತೊಟ್ಟಿಯ ಮೂಲಕ ಹೊಸ ಪ್ರಯತ್ನಗಳು ನಿರಂತರವಾಗಿ ಸಾಗಿವೆ. ಬಯೋಗ್ಯಾಸ್‌ನ್ನು ತ್ಯಾಜ್ಯದಿಂದ ತಯಾರಿಸುವ ಯೋಜನೆಗೂ ಪಂಚಾಯತ್‌ ಚಿಂತನೆ ನಡೆಸಿದೆ. ಉಡುಪಿಯ ಕೈಗಾರಿಕಾ ತರಬೇತಿ ಕಾಲೇಜು ತ್ರಿಚಕ್ರವಾಹನ ಒದಗಿಸಿದ್ದು, ಕೆಲಸಕ್ಕೆ ಉಪಯೋಗವಾಗಿದೆ. 
 
ವಿಸ್ತರಣೆ ಯೋಜನೆ
ಪ್ರಾಯೋಗಿಕವಾಗಿ 250 ಮನೆ ಹಾಗೂ ವಾಣಿಜ್ಯ ಕಟ್ಟಡಗಳಲ್ಲಿ ಪ್ರಾರಂಭಿಸಿದ ಈ ಯೋಜನೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಇನ್ನಷ್ಟು ವಿಸ್ತರಿಸಲು ಯೋಜಿಸಲಾಗಿದೆ. ಘಟಕಕ್ಕೆ ಹೆಚ್ಚಿನ ಮಾನವ ಶ್ರಮ ಅಗತ್ಯವಿರುವುದರಿಂದ ಯಂತ್ರಗಳ ಬಳಕೆಯತ್ತ ಯೋಚಿಸಲಾಗಿದೆ.

4 ಲಕ್ಷ ರೂ. ಆದಾಯ
ತ್ಯಾಜ್ಯಗಳನ್ನು ಪ್ರತ್ಯೇಕಿಸಿ, ಪುನರ್ಬಳಕೆಗೆ ಯೋಗ್ಯವಾಗುವಂತೆ ಮೌಲ್ಯವಧನೆ ಮಾಡಲಾಗಿದೆ. ಈ ಕಾರಣ ಪಂಚಾಯತ್‌ ಭರ್ಜರಿ ಲಾಭ ಪಡೆಯುವ ನಿರೀಕ್ಷೆಯಲ್ಲಿದೆ. ಕಳೆದ 6 ತಿಂಗಳಿಂದ ಮೌಲ್ಯವರ್ಧನೆಗೊಳಿಸಿದ ಉತ್ಪನ್ನಗಳು ಮಾರಾಟಕ್ಕೆ ಸಿದ್ಧವಾಗಿದ್ದು 4 ಲಕ್ಷ ರೂ. ಆದಾಯ ಬರುವ ನಿರೀಕ್ಷೆ ಇದೆ.

ಕೊಕ್ಕರ್ಣೆಯಲ್ಲಿ ಶೀಘ್ರ ಆರಂಭ
ಘನ ದ್ರವ ಸಂಪನ್ಮೂಲ ನಿರ್ವಹಣೆ ಯೋಜನೆಯಡಿ ಕೊಕ್ಕರ್ಣೆ ಗ್ರಾ.ಪಂ. ಕೂಡಾ ಆಯ್ಕೆಯಾಗಿದೆ. ಪ್ರಾಯೋಗಿಕವಾಗಿ ಪೇಟೆಯ ಸುಮಾರು 200ರಷ್ಟು ಅಂಗಡಿ, ಮನೆಗಳನ್ನು ಆಯ್ಕೆ ಮಾಡಲಾಗಿದೆ. ತ್ಯಾಜ್ಯ ಸಂಗ್ರಹಿಸಲು ಬೇಕಾದ ಬಕೆಟ್‌, ವಾಹನ ಇತ್ಯಾದಿಗಳ ಪೂರ್ವಸಿದ್ಧತೆ ನಡೆಯುತ್ತಿದ್ದು, ಶೀಘ್ರದಲ್ಲಿ ಕಾರ್ಯಾರಂಭಗೊಳ್ಳಲಿದೆ.

ಸಾರ್ವಜನಿಕರ ಸಹಭಾಗಿತ್ವ  ಅಗತ್ಯ
ಪಂಚಾಯತ್‌ ಮತ್ತು ಎಸ್‌ಎಲ್‌ಆರ್‌ಎಂ ಕಾರ್ಯಕರ್ತರ ಪ್ರಯತ್ನ ಮಾತ್ರ ಸಾಲದು, ಸಾರ್ವಜನಿಕರ ಸಹಭಾಗಿತ್ವ ಅತೀ ಅಗತ್ಯ. ಮನೆಯಲ್ಲಿಯೇ ಘನ ಹಾಗೂ ದ್ರವ ತ್ಯಾಜ್ಯವನ್ನು ವಿಂಗಡಿಸಿ ಇಡುವಲ್ಲಿ, ಕನಿಷ್ಠ ಶುಲ್ಕ ನೀಡುವಲ್ಲಿ ಸಹಕಾರ ಅವಶ್ಯ. ಆಗ ಮಾತ್ರ ಇನ್ನಷ್ಟು ಭಾಗಕ್ಕೆ ವಿಸ್ತರಿಸಲು ಸಾಧ್ಯ.

– ದಿವ್ಯಾ ಎಸ್‌. ಪಿಡಿಒ, ವಾರಂಬಳ್ಳಿ ಗ್ರಾ.ಪಂ.

– ಪ್ರವೀಣ್‌ ಮುದ್ದೂರು

ಟಾಪ್ ನ್ಯೂಸ್

ಹೊಸ ವರ್ಷ: ಕರಾವಳಿಯ ದೇವಸ್ಥಾನಗಳಲ್ಲಿ ಭಕ್ತಸಂದಣಿ

ಹೊಸ ವರ್ಷ: ಕರಾವಳಿಯ ದೇವಸ್ಥಾನಗಳಲ್ಲಿ ಭಕ್ತಸಂದಣಿ

Ullala; ನರಿಂಗಾನ ದುರಂತ: ಗಾಯಾಳುಗಳಿಗೆ ನಿರಂತರ ಧೈರ್ಯ ತುಂಬುತ್ತಿದ್ದ ಶಿಕ್ಷಕ

Ullala; ನರಿಂಗಾನ ದುರಂತ: ಗಾಯಾಳುಗಳಿಗೆ ನಿರಂತರ ಧೈರ್ಯ ತುಂಬುತ್ತಿದ್ದ ಶಿಕ್ಷಕ

ಅರಣ್ಯದಲ್ಲಿ ಹೊಸ ವರ್ಷ ಆಚರಣೆಗೆ ಸಿದ್ಧತೆ: 30 ಮಂದಿ ವಶ, ಮುಚ್ಚಳಿಕೆ ಪಡೆದು ಬಿಡುಗಡೆ

ಅರಣ್ಯದಲ್ಲಿ ಹೊಸ ವರ್ಷ ಆಚರಣೆಗೆ ಸಿದ್ಧತೆ: 30 ಮಂದಿ ವಶ, ಮುಚ್ಚಳಿಕೆ ಪಡೆದು ಬಿಡುಗಡೆ

ESI ಆಸ್ಪತ್ರೆಯಲ್ಲಿ ಡಯಾಲಿಸಿಸ್‌ ಸಂಕಷ್ಟ:ಸಂಸದ ಬ್ರಿಜೇಶ್‌ ಚೌಟ ಭೇಟಿ;ಅಧಿಕಾರಿಗಳಿಗೆ ತಾಕೀತು

ESI ಆಸ್ಪತ್ರೆಯಲ್ಲಿ ಡಯಾಲಿಸಿಸ್‌ ಸಂಕಷ್ಟ:ಸಂಸದ ಬ್ರಿಜೇಶ್‌ ಚೌಟ ಭೇಟಿ;ಅಧಿಕಾರಿಗಳಿಗೆ ತಾಕೀತು

Kodagu: ಯೋಧ ದಿವಿನ್‌ ಪಂಚಭೂತಗಳಲ್ಲಿ ಲೀನ

Kodagu: ಯೋಧ ದಿವಿನ್‌ ಪಂಚಭೂತಗಳಲ್ಲಿ ಲೀನ

Udupi: ಘನತೆಯ ಬದುಕಿನಂತೆ ಸಾವೂ ಒಂದು ಹಕ್ಕು: ಡಾ| ರವೀಂದ್ರನಾಥ ಶಾನುಭಾಗ್‌

Udupi: ಘನತೆಯ ಬದುಕಿನಂತೆ ಸಾವೂ ಒಂದು ಹಕ್ಕು: ಡಾ| ರವೀಂದ್ರನಾಥ ಶಾನುಭಾಗ್‌

Uppinangady: ಕೆಮರಾ ಕಣ್ಣಿಗೆ ಸಿಕ್ಕಿದ ಕಾಡಾನೆ

Uppinangady: ಕೆಮರಾ ಕಣ್ಣಿಗೆ ಸಿಕ್ಕಿದ ಕಾಡಾನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಘನತೆಯ ಬದುಕಿನಂತೆ ಸಾವೂ ಒಂದು ಹಕ್ಕು: ಡಾ| ರವೀಂದ್ರನಾಥ ಶಾನುಭಾಗ್‌

Udupi: ಘನತೆಯ ಬದುಕಿನಂತೆ ಸಾವೂ ಒಂದು ಹಕ್ಕು: ಡಾ| ರವೀಂದ್ರನಾಥ ಶಾನುಭಾಗ್‌

Road Mishap: ಮೋಟಾರು ಸೈಕಲ್‌ ಢಿಕ್ಕಿ: ಮಹಿಳೆಗೆ ಗಾಯ

Road Mishap: ಮೋಟಾರು ಸೈಕಲ್‌ ಢಿಕ್ಕಿ: ಮಹಿಳೆಗೆ ಗಾಯ

POlice

Udupi: 9 ಲೀಟರ್ ಗೋವಾ ಮದ್ಯ ವಶಕ್ಕೆ

21

Karkala: ಶಾಲೆಯಿಂದ ಲ್ಯಾಪ್‌ಟಾಪ್‌ ಕಳವು

WhatsApp Image 2025-01-01 at 19.31.55

Udupi: ಅಸ್ವಸ್ಥಗೊಂಡ ರೈಲು ಪ್ರಯಾಣಿಕೆ ಸಾವು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಹೊಸ ವರ್ಷ: ಕರಾವಳಿಯ ದೇವಸ್ಥಾನಗಳಲ್ಲಿ ಭಕ್ತಸಂದಣಿ

ಹೊಸ ವರ್ಷ: ಕರಾವಳಿಯ ದೇವಸ್ಥಾನಗಳಲ್ಲಿ ಭಕ್ತಸಂದಣಿ

Kasaragod: ವೈದ್ಯಕೀಯ ಕಾಲೇಜು ಆಗಿ ಭಡ್ತಿಗೊಳ್ಳಲಿರುವ ಕಾಸರಗೋಡು ಜಿಲ್ಲಾ ಜನರಲ್‌ ಆಸ್ಪತ್ರೆ

Kasaragod: ವೈದ್ಯಕೀಯ ಕಾಲೇಜು ಆಗಿ ಭಡ್ತಿಗೊಳ್ಳಲಿರುವ ಕಾಸರಗೋಡು ಜಿಲ್ಲಾ ಜನರಲ್‌ ಆಸ್ಪತ್ರೆ

Ullala; ನರಿಂಗಾನ ದುರಂತ: ಗಾಯಾಳುಗಳಿಗೆ ನಿರಂತರ ಧೈರ್ಯ ತುಂಬುತ್ತಿದ್ದ ಶಿಕ್ಷಕ

Ullala; ನರಿಂಗಾನ ದುರಂತ: ಗಾಯಾಳುಗಳಿಗೆ ನಿರಂತರ ಧೈರ್ಯ ತುಂಬುತ್ತಿದ್ದ ಶಿಕ್ಷಕ

ಅರಣ್ಯದಲ್ಲಿ ಹೊಸ ವರ್ಷ ಆಚರಣೆಗೆ ಸಿದ್ಧತೆ: 30 ಮಂದಿ ವಶ, ಮುಚ್ಚಳಿಕೆ ಪಡೆದು ಬಿಡುಗಡೆ

ಅರಣ್ಯದಲ್ಲಿ ಹೊಸ ವರ್ಷ ಆಚರಣೆಗೆ ಸಿದ್ಧತೆ: 30 ಮಂದಿ ವಶ, ಮುಚ್ಚಳಿಕೆ ಪಡೆದು ಬಿಡುಗಡೆ

ESI ಆಸ್ಪತ್ರೆಯಲ್ಲಿ ಡಯಾಲಿಸಿಸ್‌ ಸಂಕಷ್ಟ:ಸಂಸದ ಬ್ರಿಜೇಶ್‌ ಚೌಟ ಭೇಟಿ;ಅಧಿಕಾರಿಗಳಿಗೆ ತಾಕೀತು

ESI ಆಸ್ಪತ್ರೆಯಲ್ಲಿ ಡಯಾಲಿಸಿಸ್‌ ಸಂಕಷ್ಟ:ಸಂಸದ ಬ್ರಿಜೇಶ್‌ ಚೌಟ ಭೇಟಿ;ಅಧಿಕಾರಿಗಳಿಗೆ ತಾಕೀತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.