5 ವರ್ಷಗಳಲ್ಲಿ 3 ಸಾವಿರ ಕೋಟಿಗೂ ಅಧಿಕ ಅನುದಾನ ಬಳಕೆ: ಸುನಿಲ್‌ ಕುಮಾರ್‌

ಸಚಿವನಾಗಿ ಸ್ವರ್ಣ ಕಾರ್ಕಳ ಕನಸಿಗೆ ಹಲವು ರೂಪ

Team Udayavani, May 6, 2023, 4:16 PM IST

1-sadsad

ಕಾರ್ಕಳ :  ಕ್ಷೇತ್ರದ ಸಮಗ್ರ ಅಭಿವೃದ್ಧಿ ಜತೆಗೆ ರಸ್ತೆ,ಕಿಂಡಿ ಅಣೆಕಟ್ಟು, ನೀರಾವರಿ ಯೋಜನೆಗಳು, ಪ್ರವಾಸಿ ತಾಣಗಳ ಅಭಿವೃದ್ಧಿ ಹೀಗೆ ಅನೇಕ ಯೋಜನೆಗಳ ಸಾಕಾರದೊಂದಿಗೆ ಸ್ವರ್ಣ ಕಾರ್ಕಳ ಪರಿಕಲ್ಪನೆಯಡಿ ಹಲವು ರೂಪ ನೀಡಲಾಗಿದೆ. 5 ವರ್ಷದಲ್ಲಿ ಸುಮಾರು 3 ಸಾವಿರ ಕೋಟಿಗೂ ಅಧಿಕ ಅನುದಾನ ಬಳಕೆ ಮಾಡಿಕೊಂಡು ಸಮಗ್ರ ಕಾರ್ಕಳದ ಅಭಿವೃದ್ದಿಯಾಗಿದೆ ಎಂದು ಕಾರ್ಕಳ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುನಿಲ್‌ ಕುಮಾರ್‌ ಹೇಳಿದರು. ಮೇ 5ರಂದು ಬೆಳಗ್ಗೆ ಜೋಡು ರಸ್ತೆ ,ಜಾರ್ಕಳ ,ಕುಕ್ಕುಂದೂರು ಭಾಗದ ಗೇರು ಬೀಜದ ಕಾರ್ಖಾನೆಗಳಿಗೆ ಭೇಟಿ ನೀಡಿ, ಕಾರ್ಮಿಕರನ್ನು ಮಾತನಾಡಿಸಿ ಮತಯಾಚನೆ ನಡೆಸಿದರು.

ಕಾಂಗ್ರೆಸ್‌ ಅಪಪ್ರಚಾರಕ್ಕೆ ಕಿವಿಯಾಗಬೇಡಿ
ಕಾರ್ಕಳ ಕ್ಷೇತ್ರವು ರಾಜ್ಯಕ್ಕೆ ಮಾದರಿಯಾಗಿ, ಕಾರ್ಕಳ ಜನತೆ ಹೆಮ್ಮೆಪಡುವಂತಹ ಸಾಧನೆಯ ಬಗ್ಗೆ ಸಹಿಸಲಾಗದೆ ಪ್ರತಿಪಕ್ಷದವರು ಮಾಡುತ್ತಿರುವ ಅಪಪ್ರಚಾರಕ್ಕೆ ಕಿವಿ ಕೊಡದೆ, ಅಭಿವೃದ್ಧಿಪರ ಮತ ಚಲಾಯಿಸುವಂತೆ ವಿನಂತಿಸಿದರು. ಕಾರ್ಖಾನೆಯ ಮಾಲಕ‌ರು, ಆಡಳಿತ ವರ್ಗ ಮತ್ತು ಸ್ಥಳೀಯ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.

ಅಂತರ್ಜಲ ಹೆಚ್ಚಳಕ್ಕೆ ಕ್ರಮ
1500 ಹೆಕ್ಟೇರ್‌ ಪ್ರದೇಶಕ್ಕೆ ನೀರುಣಿಸುವ ವಾರಾಹಿ ಏತ ನೀರಾವರಿ, 108 ಕೋಟಿ ರೂ. ವೆಚ್ಚದಲ್ಲಿ ಎಣ್ಣೆಹೊಳೆ ಏತ ನೀರಾವತಿ ಯೋಜನೆ, ಮುಖ್ಯ ರಸ್ತೆಗಳ ಜತೆಗೆ ಗ್ರಾಮೀàಣ ಭಾಗದಲ್ಲಿ ರಸ್ತೆಗಳ ಅಭಿವೃದ್ದಿ, ಅಂತರ್ಜಲ ವೃದ್ದಿಗಾಗಿ ಒತ್ತು ನೀಡಲು 236ಕ್ಕೂ ಹೆಚ್ಚು ಕಿಂಡಿ ಅಣೆಕಟ್ಟು ನಿರ್ಮಾಣ ಈ ಮೂಲಕ ರೈತರಿಗೆ ಕೃಷಿ ಚಟುವಟಿಕೆ, ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ದೊರೆತಂತಾಗಿದೆ.

ಹಲವು ಕ್ಷೇತ್ರಗಳಲ್ಲಿ ಸುಧಾರಣೆ
ಸುಸಜ್ಜಿತ ತಾ| ಆಸ್ಪತ್ರೆ ನಿರ್ಮಾಣದ ಜತೆಗೆ ಆಮ್ಲಜನಕ ಉತ್ಪಾದನಾ ಘಟಕ, ಡಯಾಲಿಸಿಸ್‌ ಕೇಂದ್ರ, ಮಕ್ಕಳ ತೀವ್ರ ನಿಗಾ ಘಟಕ ಸ್ಥಾಪನೆ, ಜಲಜೀವನ ವಿಷನ್‌ ಯೋಜನೆಯಡಿ 129.74 ಕೋಟಿ ರೂ ವೆಚ್ಚದಲ್ಲಿ ‌ ಪಂಚಾಯತ್‌ನ ಜನವಸತಿ ಪ್ರದೇಶಗಳಿಗೆ ನೀರಿನ ಸಂಪರ್ಕ, ಹೆಬ್ರಿ ನೂತನ ತಾ| ರಚನೆ ಬಳಿಕ ಆಡಳಿತ ಸೌಧ, ಪ್ರವಾಸಿ ಮಂದಿರ, ಪೊಲೀಸ್‌ ಠಾಣೆ ನಿರ್ಮಾಣ, ತಾಪಂ ಕಚೇರಿ ಹಾಗೂ ನೂತನ ಬಸ್‌ ನಿಲ್ದಾಣ ನಿರ್ಮಾಣ ವ್ಯಾಪಾರ ಸಮೃದ್ದಿಗಾಗಿ ಬಜಗೋಳಿ, ಬೆಳ್ಮಣ್‌, ಮುಂಡ್ಕೂರಿನಲ್ಲಿ ನೂತನ ಮಾರುಕಟ್ಟೆ ಕಟ್ಟಡ ನಿರ್ಮಾಣ, ಕಾರ್ಕಳದ ಸರಕಾರಿ ಕಟ್ಟಡಗಳ ನವೀಕರಣ ನ್ಯಾಯಲಯ ಕಟ್ಟಡ, ತಾಪಂ ಕಟ್ಟಡ, ಪೊಲೀಸ್‌ ವಸತಿಗೃಹ, ದೇವರಾಜ ಅರಸು ಭವನ, ಅಕ್ಷರ ಭವನ ನಿುìಸಲಾಗಿದೆ. ತಾ| ಕ್ರೀಡಾಂಗಣ , ಗ್ರಂಥಾಲಯಕ್ಕೆ ಡಿಜಿಟಲ್‌ ಸ್ಪರ್ಶ ನೀಡಲಾಗಿದೆ. 6 ಕೋಟಿ ರೂ. ವೆಚ್ಚದಲ್ಲಿ ಡಾ| ಬಿ.ಆರ್‌ ಅಂಬೇಡ್ಕರ್‌ ಭವನ, ಮಾಳ ಗ್ರಾಮದಲ್ಲಿ ಮಲೆಕುಡಿಯ ಸಮುದಾಯ ಭವನ ನಿರ್ಮಾಣ, ನಾನಾ ಸಮುದಾಯ ಭವನಗಳಿಗೆ ಅನುದಾನ ನೀಡಲಾಗಿದೆ. ಕ್ಷೇತ್ರದಲ್ಲಿ ಸುಮಾರು 25 ಸಮುದಾಯ ಭವನಗಳ ಅಭಿವೃದ್ದಿಗೆ ಅನುದಾನ ನೀಡಲಾಗಿದೆ. ಸಮಗ್ರ ಅಭಿವೃದ್ಧಿಯಡಿ ಇನ್ನು ನೂರಾರು ಸಂಗತಿಗಳಲ್ಲಿ ಸುಧಾರಣೆ ತರಲಾಗಿದೆ ಎಂದರು.

ಬಡವರಿಗೆ ಹಕ್ಕುಪತ್ರ ವಿತರಣೆ
ಸರಕಾರಿ ಜಾಗದಲ್ಲಿ ಹಲವು ವರ್ಷಗಳಿಂದ ಮನೆ ಕಟ್ಟಿ ವಾಸವಾಗಿದ್ದ ಬಡ ಕುಟುಂಬಗಳಿಗೆ ಡೀಮ್ಸ್‌ ಫಾರೆಸ್ಟ್‌ ಕಾರಣದಿಂದಾಗಿ ನನೆಗುದಿಗೆ ಬಿದ್ದಿದ್ದ 94ಸಿ ಮತ್ತು 94ಸಿಸಿ ಅಡಿ 2600ಕ್ಕೂ ಹೆಚ್ಚು ಹಕ್ಕುಪತ್ರಗಳ ವಿತರಣೆ ಮಾಡಲಾಗಿದೆ. ಬಾಕಿ ಇರುವ ಕಡತ ಲೇವಾರಿಗೆ ವೇಗ ಅಭಿಯಾನದಲ್ಲಿ 10 ಸಾವಿರ ಕಡತ ವಿಲೆವರಿ, ಕಂದಾಯ ಮೇಳದ ಆಯೋಜನೆ ಮೂಲಕ 4367 ಫ‌ಲಾನುಭಗಳಿಗೆ ಸರಕಾರದಿಂದ ವಿವಿಧ ಸೌಲಭ್ಯಗಳ ವಿತರಿಸಲಾಗಿದೆ ಎಂದರು.

ಅಭಿವೃದ್ಧಿ ಸಹಿಸದೆ ಕಾಂಗ್ರೆಸ್‌ ಟೀಕೆ: ಮಣಿರಾಜ್‌ ಶೆಟ್ಟಿ
ಕಾಂಗ್ರೆಸ್‌ನ ಆರ್ಥಿಕ ಸಹಾಯದಿಂದಲೇ ಮುತಾಲಿಕ್‌ ಟೀಂ ಕಾರ್ಕಳದಲ್ಲಿದೆ ಇಲ್ಲದಿದ್ದಲ್ಲಿ ಪಲಾಯನ ಮಾಡುತ್ತಿತ್ತು. ಕಾಂಗ್ರೆಸ್‌ ವೇದಿಕೆಯಲ್ಲಿ ಮೋದಿ, ಯೋಗಿಯನ್ನು ಹೊಗಳಿ ನಮ್ಮ ಅಭ್ಯರ್ಥಿಯನ್ನು ತೆಗಳುವ ಪರಿಸ್ಥಿತಿ ಕಾಂಗ್ರೆಸ್‌ ಗೆ ಬಂದಿದೆ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಕೂಡಲೇ ಬಜರಂಗದಳ ಬ್ಯಾನ್‌ ಮಾಡುವುದಾಗಿ ಪ್ರಣಾಳಿಕೆಯಲ್ಲಿ ಹೇಳಿದೆ. ರಾಜಕೀಯವಾಗಿ ಬಜರಂಗದಳವನ್ನು ಮುಗಿಸಲು ಹೊರಟಿದೆ. ಈಬಗ್ಗೆ ಎಚ್ಚೆತ್ತುಕೊಂಡು ಭಾಜಪಾದ ಕಾರ್ಯಕರ್ತರು ಕಾರ್ಯಪ್ರವೃತ್ತರಾಗಬೇಕು. ಕಾಗ್ರೆಸ್ಸಿಗೆ ಅಭಿವೃದ್ಧಿ ಬೇಕಿಲ್ಲ. ಸುಳ್ಳು, ಅಪಪ್ರಚಾರಗಳಿಂದ ಅದು ಗೆಲ್ಲುವ ಕನಸು ಕಾಣುತ್ತಿದೆ. ಸುನಿಲ್‌ 5 ವರ್ಷದಲ್ಲಿ ನಡೆಸಿದ ಅಭಿವೃದ್ಧಿಯನ್ನು ಕನಸಿನಲ್ಲಿಯೂ ನೆನೆಸಲು ಸಾಧ್ಯವಾಗದ ಕಾಂಗ್ರೆಸ್‌ ವಾಮ ಮಾರ್ಗದ ಮೂಲಕ ಗೆಲ್ಲುವುದಕ್ಕೆ ಪ್ರಯತ್ನಿಸುತ್ತಿದೆ. ಸುನಿಲರ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುತ್ತಾರೆ, ಇಲ್ಲಿನ ಕಾಂಗ್ರೆಸ್‌ ಅಭ್ಯರ್ಥಿ ಆದಾಯ ತೆರಿಗೆ ಬಾಕಿ ಇಟ್ಟು ದಂಡ ಸಹಿತವಾಗಿ ಪಾವತಿಸಿದಂತಹ ವ್ಯಕ್ತಿ. ಶಾಸಕರಾದ ವಿ ಸುನಿಲ್‌ ಕುರ್ಮಾ ಸಮಗ್ರ ಅಭಿವೃದ್ದಿ ಮಾಡಿ¨ªಾರೆ. ಅಭಿವೃದ್ದಿ ಬಗ್ಗೆ ಮಾತನಾಡುವ ನೈತಿಕತೆ ಇಲ್ಲದೇ ಅಪಪ್ರಚಾರ ಮಾಡುತ್ತಿ¨ªಾರೆ ಎಂದು ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಣಿರಾಜ್‌ ಶೆಟ್ಟಿ ದೂರಿದರು.

ಟಾಪ್ ನ್ಯೂಸ್

Sandalwood: ಮಾಸ್‌ ಸಿನಿಮಾಗಳಿಗ ಜೈ ಎಂದ ಪ್ರೇಕ್ಷಕ

Sandalwood: ಮಾಸ್‌ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ

Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

IPL 2025-27: BCCI announces dates for next three IPL seasons

IPL 2025-27: ಮುಂದಿನ ಮೂರು ಐಪಿಎಲ್ ಸೀಸನ್‌ ನ ದಿನಾಂಕ ಪ್ರಕಟಿಸಿದ ಬಿಸಿಸಿಐ

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

5-video

ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ

Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್‌ ನಲ್ಲೇ ಪರದಾಡಿದ ಬ್ಯಾಟರ್‌ ಗಳು

Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್‌ ನಲ್ಲೇ ಪರದಾಡಿದ ಬ್ಯಾಟರ್‌ ಗಳು

Tumkur: ತುಮಕೂರಲ್ಲಿ ದಲಿತ ಮಹಿಳೆ ಹ*ತ್ಯೆ: 21 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

Hejamadi: ವಿಷದ ಹಾವು ಕಚ್ಚಿ ವ್ಯಕ್ತಿ ಸಾವು

Hejamadi: ವಿಷದ ಹಾವು ಕಚ್ಚಿ ವ್ಯಕ್ತಿ ಸಾವು

Shirva: ಮಲಗಿದಲ್ಲೇ ವ್ಯಕ್ತಿ ಸಾವು; ಪ್ರಕರಣ ದಾಖಲು

Shirva: ಮಲಗಿದಲ್ಲೇ ವ್ಯಕ್ತಿ ಸಾ*ವು; ಪ್ರಕರಣ ದಾಖಲು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

6-siruguppa

Siruguppa: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ

Sandalwood: ಮಾಸ್‌ ಸಿನಿಮಾಗಳಿಗ ಜೈ ಎಂದ ಪ್ರೇಕ್ಷಕ

Sandalwood: ಮಾಸ್‌ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ

Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

IPL 2025-27: BCCI announces dates for next three IPL seasons

IPL 2025-27: ಮುಂದಿನ ಮೂರು ಐಪಿಎಲ್ ಸೀಸನ್‌ ನ ದಿನಾಂಕ ಪ್ರಕಟಿಸಿದ ಬಿಸಿಸಿಐ

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.