5 ವರ್ಷಗಳಲ್ಲಿ 3 ಸಾವಿರ ಕೋಟಿಗೂ ಅಧಿಕ ಅನುದಾನ ಬಳಕೆ: ಸುನಿಲ್ ಕುಮಾರ್
ಸಚಿವನಾಗಿ ಸ್ವರ್ಣ ಕಾರ್ಕಳ ಕನಸಿಗೆ ಹಲವು ರೂಪ
Team Udayavani, May 6, 2023, 4:16 PM IST
ಕಾರ್ಕಳ : ಕ್ಷೇತ್ರದ ಸಮಗ್ರ ಅಭಿವೃದ್ಧಿ ಜತೆಗೆ ರಸ್ತೆ,ಕಿಂಡಿ ಅಣೆಕಟ್ಟು, ನೀರಾವರಿ ಯೋಜನೆಗಳು, ಪ್ರವಾಸಿ ತಾಣಗಳ ಅಭಿವೃದ್ಧಿ ಹೀಗೆ ಅನೇಕ ಯೋಜನೆಗಳ ಸಾಕಾರದೊಂದಿಗೆ ಸ್ವರ್ಣ ಕಾರ್ಕಳ ಪರಿಕಲ್ಪನೆಯಡಿ ಹಲವು ರೂಪ ನೀಡಲಾಗಿದೆ. 5 ವರ್ಷದಲ್ಲಿ ಸುಮಾರು 3 ಸಾವಿರ ಕೋಟಿಗೂ ಅಧಿಕ ಅನುದಾನ ಬಳಕೆ ಮಾಡಿಕೊಂಡು ಸಮಗ್ರ ಕಾರ್ಕಳದ ಅಭಿವೃದ್ದಿಯಾಗಿದೆ ಎಂದು ಕಾರ್ಕಳ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುನಿಲ್ ಕುಮಾರ್ ಹೇಳಿದರು. ಮೇ 5ರಂದು ಬೆಳಗ್ಗೆ ಜೋಡು ರಸ್ತೆ ,ಜಾರ್ಕಳ ,ಕುಕ್ಕುಂದೂರು ಭಾಗದ ಗೇರು ಬೀಜದ ಕಾರ್ಖಾನೆಗಳಿಗೆ ಭೇಟಿ ನೀಡಿ, ಕಾರ್ಮಿಕರನ್ನು ಮಾತನಾಡಿಸಿ ಮತಯಾಚನೆ ನಡೆಸಿದರು.
ಕಾಂಗ್ರೆಸ್ ಅಪಪ್ರಚಾರಕ್ಕೆ ಕಿವಿಯಾಗಬೇಡಿ
ಕಾರ್ಕಳ ಕ್ಷೇತ್ರವು ರಾಜ್ಯಕ್ಕೆ ಮಾದರಿಯಾಗಿ, ಕಾರ್ಕಳ ಜನತೆ ಹೆಮ್ಮೆಪಡುವಂತಹ ಸಾಧನೆಯ ಬಗ್ಗೆ ಸಹಿಸಲಾಗದೆ ಪ್ರತಿಪಕ್ಷದವರು ಮಾಡುತ್ತಿರುವ ಅಪಪ್ರಚಾರಕ್ಕೆ ಕಿವಿ ಕೊಡದೆ, ಅಭಿವೃದ್ಧಿಪರ ಮತ ಚಲಾಯಿಸುವಂತೆ ವಿನಂತಿಸಿದರು. ಕಾರ್ಖಾನೆಯ ಮಾಲಕರು, ಆಡಳಿತ ವರ್ಗ ಮತ್ತು ಸ್ಥಳೀಯ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.
ಅಂತರ್ಜಲ ಹೆಚ್ಚಳಕ್ಕೆ ಕ್ರಮ
1500 ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸುವ ವಾರಾಹಿ ಏತ ನೀರಾವರಿ, 108 ಕೋಟಿ ರೂ. ವೆಚ್ಚದಲ್ಲಿ ಎಣ್ಣೆಹೊಳೆ ಏತ ನೀರಾವತಿ ಯೋಜನೆ, ಮುಖ್ಯ ರಸ್ತೆಗಳ ಜತೆಗೆ ಗ್ರಾಮೀàಣ ಭಾಗದಲ್ಲಿ ರಸ್ತೆಗಳ ಅಭಿವೃದ್ದಿ, ಅಂತರ್ಜಲ ವೃದ್ದಿಗಾಗಿ ಒತ್ತು ನೀಡಲು 236ಕ್ಕೂ ಹೆಚ್ಚು ಕಿಂಡಿ ಅಣೆಕಟ್ಟು ನಿರ್ಮಾಣ ಈ ಮೂಲಕ ರೈತರಿಗೆ ಕೃಷಿ ಚಟುವಟಿಕೆ, ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ದೊರೆತಂತಾಗಿದೆ.
ಹಲವು ಕ್ಷೇತ್ರಗಳಲ್ಲಿ ಸುಧಾರಣೆ
ಸುಸಜ್ಜಿತ ತಾ| ಆಸ್ಪತ್ರೆ ನಿರ್ಮಾಣದ ಜತೆಗೆ ಆಮ್ಲಜನಕ ಉತ್ಪಾದನಾ ಘಟಕ, ಡಯಾಲಿಸಿಸ್ ಕೇಂದ್ರ, ಮಕ್ಕಳ ತೀವ್ರ ನಿಗಾ ಘಟಕ ಸ್ಥಾಪನೆ, ಜಲಜೀವನ ವಿಷನ್ ಯೋಜನೆಯಡಿ 129.74 ಕೋಟಿ ರೂ ವೆಚ್ಚದಲ್ಲಿ ಪಂಚಾಯತ್‌ನ ಜನವಸತಿ ಪ್ರದೇಶಗಳಿಗೆ ನೀರಿನ ಸಂಪರ್ಕ, ಹೆಬ್ರಿ ನೂತನ ತಾ| ರಚನೆ ಬಳಿಕ ಆಡಳಿತ ಸೌಧ, ಪ್ರವಾಸಿ ಮಂದಿರ, ಪೊಲೀಸ್ ಠಾಣೆ ನಿರ್ಮಾಣ, ತಾಪಂ ಕಚೇರಿ ಹಾಗೂ ನೂತನ ಬಸ್ ನಿಲ್ದಾಣ ನಿರ್ಮಾಣ ವ್ಯಾಪಾರ ಸಮೃದ್ದಿಗಾಗಿ ಬಜಗೋಳಿ, ಬೆಳ್ಮಣ್, ಮುಂಡ್ಕೂರಿನಲ್ಲಿ ನೂತನ ಮಾರುಕಟ್ಟೆ ಕಟ್ಟಡ ನಿರ್ಮಾಣ, ಕಾರ್ಕಳದ ಸರಕಾರಿ ಕಟ್ಟಡಗಳ ನವೀಕರಣ ನ್ಯಾಯಲಯ ಕಟ್ಟಡ, ತಾಪಂ ಕಟ್ಟಡ, ಪೊಲೀಸ್ ವಸತಿಗೃಹ, ದೇವರಾಜ ಅರಸು ಭವನ, ಅಕ್ಷರ ಭವನ ನಿುìಸಲಾಗಿದೆ. ತಾ| ಕ್ರೀಡಾಂಗಣ , ಗ್ರಂಥಾಲಯಕ್ಕೆ ಡಿಜಿಟಲ್ ಸ್ಪರ್ಶ ನೀಡಲಾಗಿದೆ. 6 ಕೋಟಿ ರೂ. ವೆಚ್ಚದಲ್ಲಿ ಡಾ| ಬಿ.ಆರ್ ಅಂಬೇಡ್ಕರ್ ಭವನ, ಮಾಳ ಗ್ರಾಮದಲ್ಲಿ ಮಲೆಕುಡಿಯ ಸಮುದಾಯ ಭವನ ನಿರ್ಮಾಣ, ನಾನಾ ಸಮುದಾಯ ಭವನಗಳಿಗೆ ಅನುದಾನ ನೀಡಲಾಗಿದೆ. ಕ್ಷೇತ್ರದಲ್ಲಿ ಸುಮಾರು 25 ಸಮುದಾಯ ಭವನಗಳ ಅಭಿವೃದ್ದಿಗೆ ಅನುದಾನ ನೀಡಲಾಗಿದೆ. ಸಮಗ್ರ ಅಭಿವೃದ್ಧಿಯಡಿ ಇನ್ನು ನೂರಾರು ಸಂಗತಿಗಳಲ್ಲಿ ಸುಧಾರಣೆ ತರಲಾಗಿದೆ ಎಂದರು.
ಬಡವರಿಗೆ ಹಕ್ಕುಪತ್ರ ವಿತರಣೆ
ಸರಕಾರಿ ಜಾಗದಲ್ಲಿ ಹಲವು ವರ್ಷಗಳಿಂದ ಮನೆ ಕಟ್ಟಿ ವಾಸವಾಗಿದ್ದ ಬಡ ಕುಟುಂಬಗಳಿಗೆ ಡೀಮ್ಸ್ ಫಾರೆಸ್ಟ್ ಕಾರಣದಿಂದಾಗಿ ನನೆಗುದಿಗೆ ಬಿದ್ದಿದ್ದ 94ಸಿ ಮತ್ತು 94ಸಿಸಿ ಅಡಿ 2600ಕ್ಕೂ ಹೆಚ್ಚು ಹಕ್ಕುಪತ್ರಗಳ ವಿತರಣೆ ಮಾಡಲಾಗಿದೆ. ಬಾಕಿ ಇರುವ ಕಡತ ಲೇವಾರಿಗೆ ವೇಗ ಅಭಿಯಾನದಲ್ಲಿ 10 ಸಾವಿರ ಕಡತ ವಿಲೆವರಿ, ಕಂದಾಯ ಮೇಳದ ಆಯೋಜನೆ ಮೂಲಕ 4367 ಫಲಾನುಭಗಳಿಗೆ ಸರಕಾರದಿಂದ ವಿವಿಧ ಸೌಲಭ್ಯಗಳ ವಿತರಿಸಲಾಗಿದೆ ಎಂದರು.
ಅಭಿವೃದ್ಧಿ ಸಹಿಸದೆ ಕಾಂಗ್ರೆಸ್ ಟೀಕೆ: ಮಣಿರಾಜ್ ಶೆಟ್ಟಿ
ಕಾಂಗ್ರೆಸ್‌ನ ಆರ್ಥಿಕ ಸಹಾಯದಿಂದಲೇ ಮುತಾಲಿಕ್ ಟೀಂ ಕಾರ್ಕಳದಲ್ಲಿದೆ ಇಲ್ಲದಿದ್ದಲ್ಲಿ ಪಲಾಯನ ಮಾಡುತ್ತಿತ್ತು. ಕಾಂಗ್ರೆಸ್ ವೇದಿಕೆಯಲ್ಲಿ ಮೋದಿ, ಯೋಗಿಯನ್ನು ಹೊಗಳಿ ನಮ್ಮ ಅಭ್ಯರ್ಥಿಯನ್ನು ತೆಗಳುವ ಪರಿಸ್ಥಿತಿ ಕಾಂಗ್ರೆಸ್ ಗೆ ಬಂದಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೇ ಬಜರಂಗದಳ ಬ್ಯಾನ್ ಮಾಡುವುದಾಗಿ ಪ್ರಣಾಳಿಕೆಯಲ್ಲಿ ಹೇಳಿದೆ. ರಾಜಕೀಯವಾಗಿ ಬಜರಂಗದಳವನ್ನು ಮುಗಿಸಲು ಹೊರಟಿದೆ. ಈಬಗ್ಗೆ ಎಚ್ಚೆತ್ತುಕೊಂಡು ಭಾಜಪಾದ ಕಾರ್ಯಕರ್ತರು ಕಾರ್ಯಪ್ರವೃತ್ತರಾಗಬೇಕು. ಕಾಗ್ರೆಸ್ಸಿಗೆ ಅಭಿವೃದ್ಧಿ ಬೇಕಿಲ್ಲ. ಸುಳ್ಳು, ಅಪಪ್ರಚಾರಗಳಿಂದ ಅದು ಗೆಲ್ಲುವ ಕನಸು ಕಾಣುತ್ತಿದೆ. ಸುನಿಲ್ 5 ವರ್ಷದಲ್ಲಿ ನಡೆಸಿದ ಅಭಿವೃದ್ಧಿಯನ್ನು ಕನಸಿನಲ್ಲಿಯೂ ನೆನೆಸಲು ಸಾಧ್ಯವಾಗದ ಕಾಂಗ್ರೆಸ್ ವಾಮ ಮಾರ್ಗದ ಮೂಲಕ ಗೆಲ್ಲುವುದಕ್ಕೆ ಪ್ರಯತ್ನಿಸುತ್ತಿದೆ. ಸುನಿಲರ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುತ್ತಾರೆ, ಇಲ್ಲಿನ ಕಾಂಗ್ರೆಸ್ ಅಭ್ಯರ್ಥಿ ಆದಾಯ ತೆರಿಗೆ ಬಾಕಿ ಇಟ್ಟು ದಂಡ ಸಹಿತವಾಗಿ ಪಾವತಿಸಿದಂತಹ ವ್ಯಕ್ತಿ. ಶಾಸಕರಾದ ವಿ ಸುನಿಲ್ ಕುರ್ಮಾ ಸಮಗ್ರ ಅಭಿವೃದ್ದಿ ಮಾಡಿ¨ªಾರೆ. ಅಭಿವೃದ್ದಿ ಬಗ್ಗೆ ಮಾತನಾಡುವ ನೈತಿಕತೆ ಇಲ್ಲದೇ ಅಪಪ್ರಚಾರ ಮಾಡುತ್ತಿ¨ªಾರೆ ಎಂದು ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಣಿರಾಜ್ ಶೆಟ್ಟಿ ದೂರಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸಹ ಸವಾರ ಸಾವು
Udupi: ಆಟೋರಿಕ್ಷಾ ಢಿಕ್ಕಿ; ವೃದ್ಧನಿಗೆ ಗಾಯ
ಬೆಳಪು ಸಹಕಾರಿ ಸಂಘ: ಡಾ.ದೇವಿಪ್ರಸಾದ್ ಶೆಟ್ಟಿ ನೇತೃತ್ವದ ತಂಡಕ್ಕೆ 8ನೇ ಬಾರಿ ಚುಕ್ಕಾಣಿ
Aadhar Card: ಆಧಾರ್ ನವೀಕರಣ ಮಾಡಿಕೊಂಡಿದ್ದೀರಾ?: ಹಾಗಾದರೆ ಈ ಸುದ್ದಿ ಓದಲೇಬೇಕು!
Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.