ಇನ್ನೂ ಜಾರಿಯಾಗದ ಶೇ. 30 ಶಿಕ್ಷಣ ಶುಲ್ಕ ಕಡಿತ ಆದೇಶ
Team Udayavani, Feb 13, 2021, 1:47 AM IST
ಉಡುಪಿ: ರಾಜ್ಯ ಸರಕಾರ ಶಾಲಾಮಕ್ಕಳ ಶುಲ್ಕದಲ್ಲಿ ಶೇ. 30ರಷ್ಟು ಕಡಿತಗೊಳಿಸಿ ಆದೇಶಿಸಿದ್ದರೂ ಈ ಬಗ್ಗೆ ಸೂಕ್ತ ಸುತ್ತೋಲೆ ಬಾರದ ಕಾರಣ ಶಾಲೆಗಳಲ್ಲಿ ಈ ಹಿಂದಿನ ಮಾದರಿಯಂತೆಯೇ ಶುಲ್ಕ ವಸೂಲಿ ಮಾಡಲಾಗುತ್ತಿದೆ.
ಬೋಧನ ಶುಲ್ಕದ ಬಿಟ್ಟು ಇತರ ಯಾವುದೇ ಶುಲ್ಕ ಪಡೆಯುವಂತಿಲ್ಲ ಇದರಲ್ಲೇ ಕ್ರೀಡಾ, ಪ್ರಯೋಗಾಲಯ, ಗ್ರಂಥಾಲಯ ಶುಲ್ಕ ಸೇರಿ ರುತ್ತದೆ. ಅಭಿವೃದ್ಧಿ ಶುಲ್ಕ, ದೇಣಿಗೆ, ಅವಧಿ ಶುಲ್ಕ ಪಡೆಯುವಂತಿಲ್ಲ. ಪ್ರವಾಸ, ಈಜುಕೊಳ, ಕರಾಟೆ, ಸಮವಸ್ತ್ರ, ಸಾರಿಗೆ ಶುಲ್ಕ ಪಡೆಯುವಂತಿಲ್ಲ ಎಂದು ರಾಜ್ಯ ಸರಕಾರ ಫೆ. 29ರಂದು ಆದೇಶಿಸಿತ್ತು.
ಸಮಿತಿ ರಚನೆಯೂ ಇಲ್ಲ :
ಕೋವಿಡ್ ದಿಂದಾಗಿ ಈ ವರ್ಷ ತರಗತಿಗಳು ಸರಿಯಾಗಿ ನಡೆಯದ ಕಾರಣ ಪಾಲಕರು ಅಥವಾ ಶಾಲಾಡಳಿತ ಮಂಡಳಿ ನೀಡುವ ದೂರುಗಳನ್ನು ಪರಿಶೀಲಿಸಿ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ನಡೆಸಲು ಉದ್ದೇಶಿಸಿದ್ದ ಉನ್ನತ ಮಟ್ಟದ ಸಮಿತಿ ಇನ್ನೂ ರಚನೆಯಾಗಿಲ್ಲ. ಈ ಕಾರಣಕ್ಕಾಗಿ ಈಗ ಹಳೆಯ ಮಾದರಿಯ ವ್ಯವಸ್ಥೆಯೇ ಮುಂದು ವರಿಯುವಂತಾಗಿದೆ.
ಪೋಷಕರು, ಖಾಸಗಿ ಶಾಲೆಗಳ ಸಮಾಧಾನ :
ಸರಕಾರ ಅವೈಜ್ಞಾನಿಕವಾಗಿ ಶುಲ್ಕ ಕಡಿತ ಮಾಡಿದೆ. ಬೇರೆ ಬೇರೆ ವಿಭಾಗಗಳಲ್ಲಿ ಕಡಿತ ಮಾಡಿರು ವುದರಿಂದ ಶೇ. 50ರಿಂದ 55ರಷ್ಟು ಕಡಿತ ಆದಂತಾಗುತ್ತದೆ. ಇದನ್ನು ಪರಿಷ್ಕರಿಸಬೇಕು ಎಂಬ ಆಗ್ರಹವನ್ನು ಈಗಾಗಲೇ ಖಾಸಗಿ ಶಿಕ್ಷಣ ಸಂಸ್ಥೆಗಳು ಸರಕಾರದ ಮುಂದಿರಿಸಿವೆ.
ಮಕ್ಕಳ ಭವಿಷ್ಯದ ವಿಚಾರ :
ಶೈಕ್ಷಣಿಕ ವರ್ಷದ ಬಗ್ಗೆ ಪೋಷಕರಲ್ಲಿ ಇನ್ನೂ ಗೊಂದಲಗಳಿವೆ. ಈ ನಡುವೆ ಸರಕಾರ ಶುಲ್ಕ ಕಡಿತದ ಭರವಸೆ ನೀಡಿ ಖಾಸಗಿ ಲಾಬಿ ನೆಪದಿಂದ ಶುಲ್ಕ ಕಡಿತಕ್ಕೆ ಹಿಂದೇಟು ಹಾಕುತ್ತಿರುವುದರಿಂದ ಸಹಜ ವಾಗಿಯೇ ವಿದ್ಯಾರ್ಥಿಗಳ ಪೋಷಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಮಕ್ಕಳ ಭವಿಷ್ಯದ ಕುರಿತು ಆತಂಕ ಕ್ಕೀಡಾಗಿದ್ದಾರೆ.
ವಿನಾ ಕಾರಣ ಗೊಂದಲ :
ಒಂದೆಡೆ ವಿದ್ಯಾರ್ಥಿಗಳ ಪೋಷಕರು ಮಕ್ಕಳ ಭವಿಷ್ಯದ ಬಗ್ಗೆ ಆತಂಕಿತರಾಗಿರುವ ನಡುವೆಯೇ ಸರಕಾರವು ಆದೇಶ ನೀಡಿ ಅದನ್ನು ಜಾರಿಗೊಳಿಸದಿರುವುದರಿಂದ ಪೋಷಕರು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಇದೇ ವಿಚಾರಕ್ಕೆ ಜಗಳ ನಡೆಯುತ್ತಿರುತ್ತವೆ. ಸರಕಾರದ ಆದೇಶ ತಲುಪಿಲ್ಲ ಎಂದು ಶಾಲೆಗಳು ತಿಳಿಸಿದರೆ, ಆದೇಶ ಬರದಿರಲು ಅಸಾಧ್ಯ ಎಂದು ಪೋಷಕರು ಹೇಳುತ್ತಾರೆ. ಆದೇಶ ನೀಡುವ ಮೊದಲೇ ಅದರ ಬಗ್ಗೆ ಪರಮಾರ್ಶೆ ನಡೆಸಿ ಆದೇಶ ಹೊರಡಿಸಿದರೆ ಎಲ್ಲರಿಗೂ ಅನುಕೂಲವಾಗಲಿದೆ.
ಶಾಲೆಗಳಲ್ಲಿ ಶೇ. 30ರಷ್ಟು ಶುಲ್ಕ ಕಡಿತ ಆದೇಶವನ್ನು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮಾಡ ಲಾಗಿದೆ. ಆದರೆ ಕೆಲವೊಂದು ಸಂಘಟನೆಗಳು ಇದನ್ನು ವಿರೋಧಿಸುತ್ತಿವೆ. ಈ ಆದೇಶದ ಬಗ್ಗೆ ಶೀಘ್ರ ಮತ್ತೂಮ್ಮೆ ಸುತ್ತೋಲೆ ಹೊರಡಿಸಲಾಗು ವುದು. ಸ್ಪಷ್ಟವಾಗಿ ಜಾರಿಯಾದಲ್ಲಿ ಈಗಾಗಲೇ ತೆಗೆದುಕೊಂಡಿ ರುವ ಮೊತ್ತವನ್ನು ಹಿಂದಿರುಗಿಸಲು ಕ್ರಮ ತೆಗೆದುಕೊಳ್ಳಲಾಗುವುದು.– ಸುರೇಶ್ ಕುಮಾರ್, ಶಿಕ್ಷಣ ಸಚಿವರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.