ಉಡುಪಿ ಸಂತಸಂಗಮಕ್ಕೆ 3,000 ಸಂತರು, ಸ್ವಾಗತಕ್ಕೆ ಸಿದ್ಧತೆ
Team Udayavani, Aug 13, 2017, 7:55 AM IST
ಉಡುಪಿ: ಶ್ರೀಕೃಷ್ಣ ಮಠದಲ್ಲಿ ವಿಶ್ವ ಹಿಂದೂ ಪರಿಷತ್ತಿನ ನೇತೃತ್ವದಲ್ಲಿ ನ. 24ರಿಂದ 26ರ ವರೆಗೆ ನಡೆಯುವ ಧರ್ಮ ಸಂಸತ್ ಅಧಿವೇಶನದಲ್ಲಿ 2,500ರಿಂದ 3,000 ಸಂತರು, ಮಹಂತರು, ಮಹಾಮಂಡಲೇಶ್ವರರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಪೇಜಾವರ ಶ್ರೀಗಳ ಮೂರನೇ ಪರ್ಯಾಯದಲ್ಲಿ (1984-85) ನಡೆದ ಧರ್ಮಸಂಸತ್ ಅಧಿವೇಶನದಲ್ಲಿ ರಾಮಮಂದಿರದ ಬೀಗ ತೆಗೆಯಬೇಕೆಂದು ನಿರ್ಣಯ ಕೈಗೊಂಡ ಕೆಲವೇ ದಿನಗಳಲ್ಲಿ ತಾನಾಗಿ ಬೀಗ ತೆಗೆಯುವಂತಾದರೆ ಈ ಬಾರಿ ಐದನೇ ಪರ್ಯಾಯದ ಧರ್ಮ ಸಂಸತ್ತಿನಲ್ಲಿ ಮಂದಿರ ನಿರ್ಮಾಣಕ್ಕೆ ಬೇಕಾದ ವಾತಾವರಣ ಸೃಷ್ಟಿಸಲು ನಿರ್ಣಯ ತಳೆಯುವ ನಿರೀಕ್ಷೆ ಇದೆ.
ಶನಿವಾರ ಪೇಜಾವರ ಮಠದ ಸಭಾಭವನದಲ್ಲಿ ನಡೆದ ಸ್ವಾಗತ ಸಮಿತಿ ಸಭೆಯಲ್ಲಿ ಮಾತನಾಡಿದ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು, ವಿಶ್ವ ಹಿಂದೂ ಪರಿಷತ್ತಿನಿಂದಾಗಿ ಜಾತಿ ಮತ ಮೀರಿ ನಾವೆಲ್ಲ ಹಿಂದೂಗಳು ಎಂಬ ಭಾವನೆ ವ್ಯಕ್ತವಾಗಿದೆ. ಆದರೆ ಈಗ ಸಣ್ಣಪುಟ್ಟ ಉತ್ತಮ ಅಥವಾ ಕೆಟ್ಟ ಘಟನೆಗಳು ನಡೆದರೂ ಅದನ್ನು ಜಾತಿ ಆಧಾರದಲ್ಲಿ ನೋಡುವ ಜಾತೀವಾದ ದೃಷ್ಟಿಕೋನ ಬೆಳೆದಿದೆ. ಇದರ ಬದಲು ಇದು ಸಮಗ್ರ ಸಮಾಜದ ಒಂದು ಭಾಗವಾಗಿ ಕಾಣುವಂತಾಗಬೇಕು. ಸಣ್ಣಪುಟ್ಟ ಸಂಗತಿ ಗಳನ್ನು ದೂರವಿಟ್ಟು ಏಕತೆ, ಸಂಘಟನೆಗೆ ಒತ್ತು ನೀಡಬೇಕಾ ಗಿದೆ ಎಂದರು.
ವಿಹಿಂಪದಿಂದ ಜಾತಿ ಮತ್ತು ಅಸ್ಪೃಶ್ಯತೆ ಭಾವನೆ ಮೀರಿ ನಿಲ್ಲಲು ಶಕ್ಯವಾಗಿದೆ. ಆದರೆ ಬುದ್ಧಿಜೀವಿಗಳು ಮಾತ್ರ ದಲಿತ ವಿರೋಧಿಗಳೆನ್ನುತ್ತಾರೆ. ಸಾವಿರಾರು ಸಂತರು ಪಾಲ್ಗೊಳ್ಳುವ ಧರ್ಮಸಂಸತ್ ಅಧಿವೇಶನದಲ್ಲಿ ರಾಮಮಂದಿರ ನಿರ್ಮಾಣ ಕುರಿತು ಚರ್ಚೆ ನಡೆಸಲಾಗುವುದು. ಡಿಸೆಂಬರ್ ಕೊನೆಯೊಳಗೆ ನ್ಯಾಯಾಲಯದ ತೀರ್ಪು ಹೊರಬೀಳುವ ಲಕ್ಷಣಗಳಿವೆ. ಸಮ್ಮೇಳನವನ್ನು ಯಶಸ್ವಿಗೊಳಿಸುವ ಜವಾಬ್ದಾರಿ ಕರ್ನಾಟಕ ರಾಜ್ಯಕ್ಕೆ, ವಿಶೇಷವಾಗಿ ಉಡುಪಿ, ದ.ಕ. ಜಿಲ್ಲೆಯವರಿಗೆ ಇದೆ ಎಂದು ಪರ್ಯಾಯ ಶ್ರೀ ಪೇಜಾವರ ಸ್ವಾಮೀಜಿ ಅವರು ನುಡಿದರು.
ಭಾಗವತ್ ಭಾಗಿ, ಲಕ್ಷ ಜನರ ಸಭೆ
ಆರೆಸ್ಸೆಸ್ ಸರಸಂಘಚಾಲಕ್ ಮೋಹನ್ ಭಾಗವತ್ ಮೊದಲ ದಿನ ಪಾಲ್ಗೊಳ್ಳುವರು. ಕೊನೆಯ ದಿನ ಸಂಜೆ ಆಕರ್ಷಕ ಶೋಭಾಯಾತ್ರೆ, ಬಳಿಕ ಒಂದು ಲಕ್ಷ ಜನರು ಸೇರುವ ಸಾರ್ವಜನಿಕ ಸಭೆ ನಡೆಯಲಿದೆ ಎಂದು ವಿಹಿಂಪ ರಾಷ್ಟ್ರೀಯ ಪ್ರ. ಕಾರ್ಯದರ್ಶಿ ಚಂಪತ್‌ರಾಯ್, ಮಂಗಳೂರು ವಿಭಾಗಾಧ್ಯಕ್ಷ ಪ್ರೊ| ಎಂ.ಬಿ. ಪುರಾಣಿಕ್ ತಿಳಿಸಿ ಪದಾಧಿಕಾರಿಗಳ ಪಟ್ಟಿ ವಾಚಿಸಿದರು. ವಿಹಿಂಪ ಕ್ಷೇತ್ರೀಯ ಸಂಘಟನ ಕಾರ್ಯದರ್ಶಿ ಗೋಪಾಲ್ ಪ್ರಸ್ತಾವನೆ ಗೈದರು. ಪ್ರಾಂತ ಕಾರ್ಯದರ್ಶಿಗಳಾದ ಕೃಷ್ಣಮೂರ್ತಿ ಕಾರ್ಯಕ್ರಮ ನಿರ್ವಹಿಸಿ ಟಿ.ಎ.ಪಿ. ಶೆಣೈ ವಂದಿಸಿದರು.
5 ಕೋ.ರೂ. ಖರ್ಚು
ಸ್ವಾಗತ ಸಮಿತಿ ಕೋಶಾಧ್ಯಕ್ಷ ಪಿ. ವಿಲಾಸ ನಾಯಕ್ ಅಡುಗೆ, ಸಂತರ ಪ್ರಯಾಣ, ಪೆಂಡಾಲು, ವಸತಿ, ಮುದ್ರಣ, ಸ್ಮರಣ ಸಂಚಿಕೆ, ವಿದ್ಯುತ್, ಧ್ವನಿವರ್ಧಕ ಇತ್ಯಾದಿಗಳ ಅಂದಾಜು ಖರ್ಚು ಮಂಡಿಸಿ ಸುಮಾರು 5 ಕೋ.ರೂ. ಸಂಗ್ರಹಿಸುವ ಗುರಿ ಇರಿಸಿಕೊಳ್ಳಲಾಗಿದೆ ಎಂದರು. ಸ್ಮರಣ ಸಂಚಿಕೆ ಪ್ರಧಾನ ಸಂಪಾ ದಕಿ ಡಾ| ಸಂಧ್ಯಾ ಎಸ್. ಪೈ, ವಿವಿಧ ಪದಾಧಿಕಾರಿಗಳಾದ ಮೂಡಬಿದಿರೆಯ ಡಾ| ಮೋಹನ ಆಳ್ವ, ಗೋಪಾಲ್ ಹೊಸೂರು, ಡಾ| ಏರ್ಯ ಲಕ್ಷ್ಮೀನಾರಾಯಣ ಆಳ್ವ, ಪತ್ರಿಕೋದ್ಯಮಿ ವಿಜಯ ಸಂಕೇಶ್ವರ, ಡಾ| ರಾಮನ ಗೌಡರ್, ಮನೋಹರ ಶೆಟ್ಟಿ, ವಿಹಿಂಪ ಕರ್ನಾಟಕ ದಕ್ಷಿಣ ಪ್ರಾಂತ ಅಧ್ಯಕ್ಷೆ ಡಾ| ವಿಜಯಲಕ್ಷ್ಮೀ ದೇಶಮಾನೆ ಮೊದಲಾದವರು ಉಪಸ್ಥಿತರಿದ್ದರು. ಕರ್ನಾಟಕದ ಎಲ್ಲ ಜಿಲ್ಲೆಗಳ ಪ್ರಮುಖರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಚುನಾವಣೆ ಬರುತ್ತಿದೆ-ಅಪಾಯವೂ ಇದೆ
ಮುಂದಿನ ದಿನಗಳಲ್ಲಿ ಚುನಾವಣೆ ಬರುತ್ತಿದೆ. ಧರ್ಮ ಸಂಸತ್ ಚಟುವಟಿಕೆಗಳಿಗೆ ರಾಜಕೀಯ ಬಣ್ಣ ಬರುವ ಅಪಾಯವಿದೆ. ಆದ್ದರಿಂದ ರಾಜಕೀಯಾತೀತವಾಗಿ ಅಧಿವೇಶನ ನಡೆಯುವಂತೆ, ಹಿಂದೂ ಸಮಾಜದ ಏಕತೆಗಾಗಿ ದುಡಿಯುವಂತೆ ನೋಡಿಕೊಳ್ಳಬೇಕಾಗಿದೆ.
ಡಾ| ಹೆಗ್ಗಡೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ವಿದೇಶಿ ಹಕ್ಕಿಗಳ ಕಲರವ- ಕುಷ್ಟಗಿಯ ನಿಡಶೇಸಿ ಕೆರೆಗೆ ಬಂದ ಬಾನಾಡಿಗಳು!
Aranthodu: ಲಾರಿ-ಸ್ಕೂಟಿ ಅಪಘಾತ; ಸವಾರರ ಪೈಕಿ ಓರ್ವ ಮೃತ್ಯು, ಸಹಸವಾರೆ ಗಾಯ
ದೆಹಲಿ ಪರೇಡ್‌ಗೆ ಬ್ರಹ್ಮ ಜಿನಾಲಯ ಸ್ತಬ್ಧಚಿತ್ರ; ಗತ ವೈಭವ ಸಾರಲಿದೆ ಟ್ಯಾಬ್ಲೊ
SriLanka ನೌಕಾಪಡೆಯಿಂದ ತಮಿಳುನಾಡಿನ 17 ಮೀನುಗಾರರ ಬಂಧನ; ಬಿಡುಗಡೆಗೆ ಸ್ಟಾಲಿನ್ ಮನವಿ
Year Ender 2024: ಗೂಗಲ್ ನಲ್ಲಿ ಈ ವರ್ಷ ಅತೀ ಹೆಚ್ಚು ಹುಡುಕಲ್ಪಟ್ಟ ವಿಷಯ ಯಾವುದು ಗೊತ್ತಾ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.