ಮಂಗನ ಕಾಯಿಲೆ : 31 ಮಂದಿ ತಪಾಸಣೆ; ಎಲ್ಲವೂ ನೆಗೆಟಿವ್
Team Udayavani, Feb 14, 2019, 12:30 AM IST
ಉಡುಪಿ: ಜಿಲ್ಲೆಯಲ್ಲಿ ಬುಧವಾರ ಓರ್ವ ಸೇರಿದಂತೆ ಈವರೆಗೆ ಒಟ್ಟು 31 ಮಂದಿಯನ್ನು ಶಂಕಿತ ಮಂಗನ ಕಾಯಿಲೆ ಪರೀಕ್ಷೆಗೊಳಪಡಿಸಲಾಗಿದೆ. ಬುಧವಾರ ನಡೆಸಿರುವ ತಪಾಸಣೆಯ ಫಲಿತಾಂಶ ಬರಲು ಬಾಕಿ ಇದೆ. ಉಳಿದಂತೆ 30 ಮಂದಿಯಲ್ಲಿ ಕೂಡ ನೆಗೆಟಿವ್ ವರದಿ ಬಂದಿದೆ.
ಜ. 19ರ ಅನಂತರ ನೆಗೆಟಿವ್
ಈವರೆಗೆ ಜಿಲ್ಲೆಯಲ್ಲಿ ಪತ್ತೆಯಾದ ಮಂಗಗಳ ಶವಗಳ ಪೈಕಿ 59ನ್ನು ಪರೀಕ್ಷೆ ಮಾಡಲಾಗಿದ್ದು 52ರ ಫಲಿತಾಂಶ ದೊರೆತಿದೆ. 12 ಮಂಗಗಳ ಶವಗಳಲ್ಲಿ ಮಾತ್ರ ವೈರಸ್ ಪತ್ತೆಯಾಗಿದೆ. ಜ. 19ರ ಅನಂತರ ಪತ್ತೆಯಾದ ಯಾವುದೇ ಮಂಗನ ಶವದಲ್ಲಿ ಕೂಡ ಮಂಗನ ಕಾಯಿಲೆಯ ವೈರಸ್‌ಗಳು ಪತ್ತೆಯಾಗಿಲ್ಲ ಎಂದು ಇಲಾಖಾಧಿಕಾರಿಗಳು ತಿಳಿಸಿದ್ದಾರೆ.
5 ಶವ ಪತ್ತೆ
ಬುಧವಾರ ಸಿದ್ಧಾಪುರದ ಹೊಸಂಗಡಿ, ಹೆಬ್ರಿಯ ಮಂಡಾಡಿಜೆಡ್ಡು, ಬೈಲೂರು, ಉಪ್ಪೂರು ಮತ್ತು ಹೆಗ್ಗುಂಜೆಯಲ್ಲಿ ತಲಾ ಒಂದೊಂದು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 5 ಮಂಗಗಳ ಶವಗಳು ಪತ್ತೆಯಾಗಿವೆ. ಬುಧವಾರ ಚಾಂತಾರು, ಹೆಗ್ಗುಂಜೆ, ಶೀರೂರು, ನಾಲ್ಕೂರು ಮೊದಲಾದೆಡೆ ಮಂಗನ ಕಾಯಿಲೆ ಜಾಗೃತಿ ವಿಶೇಷ ಗ್ರಾಮಸಭೆ ಹಾಗೂ ಇತರ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಯಿತು.
ಕೆಎಂಸಿಯಲ್ಲಿ 30 ಮಂದಿಗೆ ಚಿಕಿತ್ಸೆ
ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಶಂಕಿತ ಮಂಗನ ಕಾಯಿಲೆ ಚಿಕಿತ್ಸೆಗೆ ದಾಖಲಾಗಿರುವ ಶಿವಮೊಗ್ಗದ ಸಾಗರ ಮತ್ತು ಆಸುಪಾಸಿನ ಸುಮಾರು 188 ಮಂದಿಯ ಪೈಕಿ 71 ಮಂದಿಗೆ ಮಂಗನ ಕಾಯಿಲೆ ಇರುವ ಬಗ್ಗೆ ಹಾಗೂ 124 ಮಂದಿಗೆ ಮಂಗನ ಕಾಯಿಲೆ ಇರದಿರುವ ಬಗ್ಗೆ ವೈದ್ಯಕೀಯ ವರದಿಗಳು ಬಂದಿವೆ. 30 ಮಂದಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೊನ್ನಾವರದ ರೋಗಿಯೊಬ್ಬರಲ್ಲಿ ಪೊಸಿಟಿವ್ ಕಂಡುಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್‌ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Kottigehara: ನಾಯಿ ದಾಳಿಯಿಂದ ಮಗುವಿಗೆ ಗಾಯ
IPL 2024: ಭಾರತ ಕ್ರಿಕೆಟ್ ನಾಯಕನಾಗುವ ಉದ್ದೇಶ ಪಂತ್ ಗಿದೆ: ಜಿಂದಾಲ್
Sambhal Mosque Survey: ಜಾಮಾ ಮಸೀದಿಯ ಸಮೀಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್
Gadget Review: iPhone 16: ಆಕರ್ಷಕ ವಿನ್ಯಾಸ, ಉತ್ತಮ ಕ್ಯಾಮರಾ, ವೇಗದ ಕಾರ್ಯಾಚರಣೆ
Sandalwood ಈ ವರ್ಷ 220+ ಸಿನಿಮಾ ತೆರೆಗೆ; ರಿಲೀಸ್ ಭರಾಟೆ ಬಲು ಜೋರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.